ನೆಕ್ಸಾನ್ XZ+ S ಟ್ರಿಮ್ ವೇರಿಯೆಂಟ್ ಪರಿಚಯಿಸಿದ ಟಾಟಾ ಮೋಟಾರ್ಸ್!
ಕೊರೋನಾ ವೈರಸ್‌ನಿಂದ ಎಲ್ಲಾ ಆಟೋಮೊಬೈಲ್ ಕಂಪನಿಗಳು ಉತ್ಪಾದನೆ ಸ್ಥಗಿತಗೊಳಿಸಿದೆ. ಕೊರೋನಾ ವಿರುದ್ಧದ ಹೋರಾಟಕ್ಕೆ ಟಾಟಾ ಮೋಟಾರ್ಸ್ ಸಮೂಹ ಬರೋಬ್ಬರಿ 1500 ಕೋಟಿ ರೂಪಾಯಿ ನೀಡಿದೆ. ಕೊರೋನಾ ವೈರಸ್ ಲಾಕ್‌ಡೌನ್‌ಗೂ ಮೊದಲು ಟಾಟಾ ಮೋಟಾರ್ಸ್ ನೆಕ್ಸಾನ್ XZ+ S ಟ್ರಿಮ್ ವೇರಿಯೆಂಟ್ ಪರಿಚಯಿಸಿತ್ತು. ಇದರ ವಿಶೇಷತೆ ಬೆಲೆ ಹಾಗೂ ಇತರ ಮಾಹಿತಿ ಇಲ್ಲಿದೆ.
ಮುಂಬೈ(ಏ.03): ಟಾಟಾ ಮೋಟಾರ್ಸ್ ಇದೀಗ ದೇಶದ ಜನರ ಅಚ್ಚು ಮೆಚ್ಚಿನ ಕಂಪನಿಯಾಗಿದೆ. ಇದಕ್ಕೆ ಮೊದಲ ಕಾರಣ ಗರಿಷ್ಠ ಸುರಕ್ಷತೆಯ ಕಾರು. ಭರಾತದಲ್ಲಿ 5 ಸ್ಟಾರ್ ಸೇಫ್ಟಿ ಕಾರನ್ನು ನೀಡಿದ ಹೆಗ್ಗಳಿಕೆ ಟಾಟಾ ಮೋಟಾರ್ಸ್‌ಗಿದೆ. ಟಾಟಾ ಮೋಟಾರ್ಸ್ ಕಂಪನಿಯ ನೆಕ್ಸಾನ್ ಹಲವು ವೇರಿಯೆಂಟ್ ಲಭ್ಯವಿದೆ. ಇದರಲ್ಲಿ ಇತ್ತೀಚೆಗೆ ಪರಿಚಯಿಸಿದ ನೆಕ್ಸಾನ್ XZ+ S ಟ್ರಿಮ್ ವೇರಿಯೆಂಟ್ ಹಲವು ವಿಶೇಷತೆ ಹೊಂದಿದೆ.
ಭಾರತದ ವಾಹನ ಕಂಪನಿಗಳಿಗೆ ಪ್ರತಿ ದಿನ 1,000 ದಿಂದ 1,200 ಕೋಟಿ ರೂ. ನಷ್ಟ!..
ನೆಕ್ಸಾನ್ XZ+ S ಕಾರಿನ ಬೆಲೆ 10.10 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ). ಪೆಟ್ರೋಲ್ ಮ್ಯಾನ್ಯುಯೆಲ್ ಸಿಂಗ್ ಟೋನ್ ಫಾರ್ಮ್ಯಾಟ್ ಕಾರು BS6 ಎಂಜಿನ್ ಹೊಂದಿದೆ. ನೂತನ ಟ್ರಿಮ್ ವೇರಿಯೆಂಟ್ ಕಾರಿನಲ್ಲಿ ಸನ್‌ರೂಫ್ ಲಭ್ಯವಿದೆ. ಸಾಮಾನ್ಯವಾಗಿ ಟಾಪ್ ಮಾಡೆಲ್ ಕಾರಿನಲ್ಲಿ ಸನ್‌ರೂಫ್ ಆಯ್ಕೆ ನೀಡಿರುತ್ತಾರೆ. ಇದೀಗ ನ್ XZ+ S ಟ್ರಿಮ್ ವೇರಿಯೆಂಟ್ ಕಾರಿಗೂ ನೀಡಲಾಗಿದೆ.
ನೂತನ XZ+ S ಟ್ರಿಮ್ ಕಾರಿನ 8 ಸಬ್‌ಟ್ರಿಮ್ ವೇರಿಯೆಂಟ್ ಹಾಗೂ ಡ್ಯುಯೆಲ್ ಟೋನ್ ಕಲರ್ ಆಯ್ಕೆ ನೀಡಲಾಗಿದೆ.
XZ+ S ಪೆಟ್ರೋಲ್ ಮ್ಯಾನ್ಯುಯಲ್ = ಬೆಲೆ 10.10 ಲಕ್ಷ ರೂಪಾಯಿ (ಎಕ್ಸ್ ಶೋ ರೂಂ)
XZ+ S ಪೆಟ್ರೋಲ್ ಮ್ಯಾನ್ಯುಯಲ್ ಡ್ಯುಯೆಲ್ ಟೋನ್ = ಬೆಲೆ 10.30 ಲಕ್ಷ ರೂಪಾಯಿ (ಎಕ್ಸ್ ಶೋ ರೂಂ)
XZ+ S ಪೆಟ್ರೋಲ್ ಆಟೋಮ್ಯಾಟಿಕ್ = ಬೆಲೆ 10.70 ಲಕ್ಷ ರೂಪಾಯಿ (ಎಕ್ಸ್ ಶೋ ರೂಂ)
XZ+ S ಪೆಟ್ರೋಲ್ ಆಟೋಮ್ಯಾಟಿಕ್ ಡ್ಯುಯೆಲ್ ಟೋನ್ = ಬೆಲೆ 10.90 ಲಕ್ಷ ರೂಪಾಯಿ (ಎಕ್ಸ್ ಶೋ ರೂಂ)
XZ+ S ಡೀಸೆಲ್ ಮ್ಯಾನ್ಯುಯೆಲ್= ಬೆಲೆ 11.60 ಲಕ್ಷ ರೂಪಾಯಿ (ಎಕ್ಸ್ ಶೋ ರೂಂ)
XZ+ S ಡೀಸೆಲ್ ಮ್ಯಾನ್ಯುಯೆಲ್ ಮ್ಯಾನ್ಯುಯಲ್ ಡ್ಯುಯೆಲ್ ಟೋನ್ = ಬೆಲೆ 11.80 ಲಕ್ಷ ರೂಪಾಯಿ (ಎಕ್ಸ್ ಶೋ ರೂಂ)
XZ+ S ಡೀಸೆಲ್ ಆಟೋಮ್ಯಾಟಿಕ್ = ಬೆಲೆ 12.20 ಲಕ್ಷ ರೂಪಾಯಿ (ಎಕ್ಸ್ ಶೋ ರೂಂ)
XZ+ S ಡೀಸೆಲ್ ಆಟೋಮ್ಯಾಟಿಕ್ ಡ್ಯುಯೆಲ್ ಟೋನ್ = ಬೆಲೆ 12.40 ಲಕ್ಷ ರೂಪಾಯಿ (ಎಕ್ಸ್ ಶೋ ರೂಂ)
ಲೆದರ್ ಕವರ್ ಸ್ಟೀರಿಂಗ್ ವೀಲ್ಹ್ ಹಾಗೂ ಗೇರ್ ನಾಬ್, TPMS(ಟೈಯರ್ ಮೆಶರ್ ಮಾನಿಟರ್ ಸಿಸ್ಟಮ್), ಸನ್‌ರೂಫ್, ಆಟೋಮ್ಯಾಟಿಕ್ ಹೆಡ್‌ಲ್ಯಾಂಪ್ಸ್, ಆಟೋಮ್ಯಾಟಿಕ್ ವೈಪರ್ ಹಾಗೂ ಕ್ರ್ಯೂಸ್ ಕಂಟ್ರೋಲ್ ಫೀಚರ್ಸ್ ಈ ವೇರಿಯೆಂಟ್‌ನಲ್ಲಿದೆ.