ದೆಹಲಿ(ಜ.26): ಹೀರೋ ಮೋಟಾರ್ಸ್ ಭಾರತದಲ್ಲಿ ಅತ್ಯಂತ ಜನಪ್ರಿಯ ದ್ವಿಚಕ್ರ ವಾಹನ ಕಂಪನಿ. ಬೈಕ್, ಸ್ಕೂಟರ್ ಹಾಗೂ ಎಲೆಕ್ಟ್ರಿಕ್ ಸ್ಕೂಟರ್ ತಯಾರಿಕ ಕಂಪನಿ ಇದೀಗ ಕಾರು ಉತ್ಪಾದನೆಗೆ ಕಾಲಿಟ್ಟಿದೆ. ಹೌದು ಹೀರೋ ಮೋಟಾರ್ ಕಾರ್ಪ್ ಇದೀಗ ನೂತನ ಎಲೆಕ್ಟ್ರಿಕ್ ಕಾರು ಬಿಡುಗಡೆ ಮುಂದಾಗಿದೆ.

10 ಕೋಟಿ ಉತ್ಪಾದನಾ ಮೈಲಿಗಲ್ಲು ದಾಟಿದ ಹೀರೋ ಮೋಟೋಕಾರ್ಪ್!...

10 ಕೋಟಿ ದ್ವಿಚಕ್ರವಾಹನ ಉತ್ಪಾದಿಸೋ ಮೂಲಕ ದಾಖಲೆ ನಿರ್ಮಿಸಿರುವ ಹೀರೋ ಇದೀಗ ಹೊಚ್ಚ ಹೊಸ ಹಾಗೂ ಅತ್ಯಾಧುನಿಕ ತಂತ್ರಜ್ಞಾನದ ಎಲೆಕ್ಟ್ರಿಕ್ ಕಾರು ಬಿಡುಗಡೆ ಮಾಡುತ್ತಿದೆ. ಭವಿಷ್ಯದ ಸಾರಿಗೆಯತ್ತ ಗಮನಹರಿಸಿರುವ ಹೀರೋ ಮೋಟಾರ್ ಇದೀಗ ಇ ರಿಕ್ಷಾ ಹಾಗೂ ಎಲೆಕ್ಟ್ರಿಕ್ ಕಾರು ತಯಾರಿಕೆಗೆ ಮುಂದಾಗಿದೆ.

ಖಾಸಗಿ ಮಾಧ್ಯಮಕ್ಕೆ ನೀಡಿದ ಸಂದರ್ಶದಲ್ಲಿ ಹೀರೋ ಮೋಟಾರ್ ಕಾರ್ಪ್ ಸಿಇಔ ಹಾಗೂ ಚೇರ್ಮೆನ್ ಪವನ್ ಮುಂಜಾಲ್, ಎಲೆಕ್ಟ್ರಿಕ್ ಕಾರು ಬಿಡುಗಡೆ ಕುರಿತು ಸುಳಿವು ನೀಡಿದ್ದಾರೆ. ಮುಂದಿನ 5 ವರ್ಷಗಳಲ್ಲಿ ಹೀರೋ ಮೋಟಾರ್ ಕಾರ್ಪ್ ಹೊಚ್ಚ ಹೊಸ ವಾಹನ ಬಿಡುಗಡೆ ಮಾಡಲಿದೆ. ಪ್ರತಿ ವರ್ಷ ಹೊಸ ಹೊಸ ಮಾಡೆಲ್ ಹಾಗೂ ಭಾರತೀಯರ ಬೇಡಿಕೆಗೆ ಅನುಗುಣವಾಗಿ ವಾಹನಗಳು ಬಿಡುಗಡೆಯಾಗಲಿದೆ ಎಂದಿದ್ದಾರೆ.

ಎಲೆಕ್ಚ್ರಿಕ್ ಕಾರು ಉತ್ಪಾಜನೆದೆ ಹೀರೋ ಮುಂದಾಗಿದೆ ಅನ್ನೋ ವಿಚಾರವನ್ನು ಸ್ವತಃ ಪವನ್ ಮುಂಜಾಲ್ ಹೇಳಿದ್ದಾರೆ. ಹೀಗಾಗಿ ಶೀಘ್ರದಲ್ಲೇ ಹೀರೋ ಕಾರುಗಳು ರಸ್ತೆ ಮೇಲೆ ಓಡಾಡಲಿವೆ. ಈ ಕುರಿತ ಹೆಚ್ಚಿನ ಮಾಹಿತಿಯನ್ನು ಹೀರೋ ಬಹಿರಂಗ ಪಡಿಸಿಲ್ಲ.