10 ಕೋಟಿ ಉತ್ಪಾದನಾ ಮೈಲಿಗಲ್ಲು ದಾಟಿದ ಹೀರೋ ಮೋಟೋಕಾರ್ಪ್!
ಹೀರೋ ಮೋಟಾರ್‌ಕಾರ್ಪ್ ಹೊಸ ಮೈಲಿಗಲ್ಲು ನಿರ್ಮಿಸಿದೆ. ಐತಿಹಾಸಿಕ 100 ದಶಲಕ್ಷ ಉತ್ಪಾದನಾ ಮೈಲಿಗಲ್ಲನ್ನು ಹೀರೋ ಮೋಟೋಕಾರ್ಪ್ ಮಾಡಿದೆ. ಈ ಕುರಿತ ಹೆಚ್ಚಿನ ವಿವರ ಇಲ್ಲಿದೆ.
ಬೆಂಗಳೂರು(ಜ.21): ವಿಶ್ವದ ಅತಿದೊಡ್ಡ ಮೋಟಾರ್‌ಸೈಕಲ್ ಹಾಗು ಸ್ಕೂಟರ್ ಉತ್ಪಾದಕ ಸಂಸ್ಥೆಯಾದ ಹೀರೋ ಮೋಟೋಕಾರ್ಪ್, ಉತ್ಪಾದನೆಯಲ್ಲಿ 10ಕೋಟಿ ಮೈಲ್ಲಿಗಲ್ಲನು ದಾಟಿದೆ. ಈ ಮೂಲಕ 10 ಕೋಟಿ ದ್ವಿಚಕ್ರ ವಾಹನ ಉತ್ಪಾದನೆ ಮಾಡಿದ ಭಾರತದ ಮೊದಲ ಆಟೋಮೊಬೈಲ್ ಕಂಪನಿ ಅನ್ನೋ ಹೆಗ್ಗಳಿಕೆಗೆ ಹೀರೋ ಪಾತ್ರವಾಗಿದೆ.
BS6 ಹೀರೋ Xtreme 200 ಬೈಕ್ ಬಿಡುಗಡೆ!..
ಹೀರೋ ಮೋಟೋಕಾರ್ಪ್, ವಿಶ್ವದ ಅತಿದೊಡ್ಡ ದ್ವಿಚಕ್ರ ವಾಹನ ತಯಾರಿಕಾ ಸಂಸ್ಥೆ ಎಂಬ ಪ್ರತಿಷ್ಠಿತ ಸ್ಥಾನವನ್ನು ಸತತವಾಗಿ ಉಳಿಸಿಕೊಂಡಿರುವ 20ನೆ ವರ್ಷವೂ ಆಗಿದೆ. ಹೀರೋ ಮೋಟೋಕಾರ್ಪ್‍ನ ಈ ಸಾಧನೆಯು, ಅತ್ಯಂತ ಕ್ಷಿಪ್ರವಾದ ಜಾಗತಿಕ 100 ದಶಲಕ್ಷದ ಕ್ರೋಢೀಕೃತ ಉತ್ಪಾದನಾ ಗುರಿಯಾಗಿದ್ದು, ಕಳೆದ ಕೇವಲ ಏಳು ತಿಂಗಳುಗಳಲ್ಲಿ ಕೊನೆಯ 50 ದಶಲಕ್ಷ ಯೂನಿಟ್‍ಗಳು ಹೊರಬಂದಿವೆ.
100 ದಶಲಕ್ಷದ ಮಾರ್ಗಪಥ
1994 – ಮೊದಲ ದಶಲಕ್ಷ
2001 – ಐದು ದಶಲಕ್ಷ
2004 – 10 ದಶಲಕ್ಷ
2008 – 25 ದಶಲಕ್ಷ
2013 – 50 ದಶಲಕ್ಷ
2017 – 75 ದಶಲಕ್ಷ
2021 – 100 ದಶಲಕ್ಷ
ದೀರ್ಘಕಾಲ ಇರಬಲ್ಲ ಬೆಳವಣಿಗೆಯ ಮೇಲೆ ಗಮನ ಕೇಂದ್ರೀಕರಿಸಿರುವ ಹೀರೋಮೋಟೋಕಾರ್ಪ್, ಜಗತ್ತಿನಾದ್ಯಂತ ಸಮುದಾಯಗಳಿಗಾಗಿ ಮೌಲ್ಯ ನಿರ್ಮಾಣ ಮಾಡುತ್ತಿದ್ದು ತನ್ನ ಮಾರಾಟ, ಸಂಶೋಧನೆ ಹಾಗು ಅಭಿವೃದ್ಧಿ, ಮತ್ತು ಉತ್ಪಾದನಾ ಪರಿಸರವ್ಯವಸ್ಥೆಗಳೊಂದಿಗೆ ಆರ್ಥಿಕ ಸಂಪತ್ಕಾರನಾಗಿಯೂ ಕಾರ್ಯನಿರ್ವಹಿಸುತ್ತಿದೆ. ತಾನು ಕಾರ್ಯಾಚರಣೆ ನಡೆಸುವ ಸಮಾಜಗಳ ಪ್ರಗತಿಯೆಡೆಗೆ ಕೂಡ ಅದು ಕಾರ್ಯನಿರ್ವಹಿಸುತ್ತಿದೆ.
ಹಬ್ಬದ ಸಂಭ್ರಮ ಡಬಲ್ ; ಹೊಚ್ಚ ಹೊಸ ಹೀರೋ ಸ್ಪ್ಲೆಂಡರ್+ ಬ್ಲಾಕ್ ಮತ್ತು ಆಕ್ಸೆಂಟ್ ಲಾಂಚ್!.
ಈ ಸಂದರ್ಭದ ಗುರುತಾಗಿ, ಡಾ, ಪವನ್ ಮುಂಜಾಲ್ ಅವರು ದೆಹಲಿಯ ರಾಷ್ಟ್ರೀಯ ರಾಜಧಾನಿ ಪ್ರದೇಶ(ಎನ್‍ಸಿಆರ್)ನ ಬಳಿ ಇರುವ ಗುರುಗ್ರಾಮದಲ್ಲಿ ಸ್ಥಾಪಿತವಾಗಿರುವ ಸಂಸ್ಥೆಯ ಉತ್ಪಾದನಾ ಘಟಕದಲ್ಲಿ ಆರು ವಿಶೇಷ ಆಚರಣಾ ಆವೃತ್ತಿಯ ಮಾದರಿಗಳ ಅನಾವರಣ ಮಾಡಿದರು. ಈ ಆರು ಆಚರಣಾ ಆವೃತ್ತಿಯ ಮಾದರಿಗಳೆಂದರೆ- ಸ್ಪ್ಲೆಂಡರ್+ ಪ್ಯಾಶನ್ , ಗ್ಲಾಮರ್(ಮೋಟಾರುಸೈಕಲ್‍ಗಳು) ಹಾಗು ಡೆಸ್ಟಿನಿ 125, ಮಾಸ್ಟ್ರೋ ಎಡ್ಜ್ 110(ಸ್ಕೂಟರ್‍ಗಳು) ಅನಾವರಣ ಮಾಡಲಾಯಿತು. ಇವು 2021ರ ಫೆಬ್ರವರಿಯಿಂದ ಮಾರಾಟಕ್ಕೆ ಲಭ್ಯವಾಗಲಿವೆ.
ಗ್ರಾಹಕರು, ಡೀಲರುಗಳು, ವಿತರಕರು, ಹೂಡಿಕೆದಾರರು, ಸರಬರಾಜುದಾರರು, ಉದ್ಯೋಗಿಗಳು, ಗ್ರಾಹಕರು ಮತ್ತು ಮಾಧ್ಯಮದವರನ್ನು ಒಳಗೊಂಡ ಜಾಗತಿಕ ಶ್ರೋತೃವೃಂದವನ್ನು ಉದ್ದೇಶಿಸಿ ಮಾತನಾಡುತ್ತಾ, ಡಾ. ಮುಂಜಾಲ್ ಮುಂದಿನ ಐದು ವರ್ಷಗಳಿಗೆ ಹೀರೋ ಮೋಟೋಕಾರ್ಪ್‍ನ ಯೋಜನೆಗಳು ಮತ್ತು ದರ್ಶನಗಳನ್ನು ಸಂಕ್ಷಿಪ್ತವಾಗಿ ವಿವರಿಸಿದರು.
ಪ್ಲೆಶರ್ ಪ್ಲಸ್ ಪ್ಲಾಟಿನಂ ಸ್ಕೂಟರ್ ಬಿಡುಗಡೆ ಮಾಡಿದ ಹೀರೋ
ಈ ಕಾಲಾವಧಿಯೊಳಗೆ ಸಂಸ್ಥೆಯು ತನ್ನ ನಾಯಕತ್ವ ಸ್ಥಾನವನ್ನು ಇನ್ನಷ್ಟು ಕ್ರೋಢೀಕರಿಸಿ, ತನ್ನ ಜಾಗತಿಕ ಹೆಜ್ಜೆಗುರುತುಗಳನ್ನು ವಿಸ್ತರಿಸಿ, ಕೌತುಕಮಯವಾದ ಮತ್ತು ತತ್ಸಂಬಂಧಿತ ಉತ್ಪನ್ನಗಳನ್ನು ಪರಿಚಯಿಸುವುದರ ಜೊತೆಗೆ ವಿನೂತನ ಉತ್ಪನ್ನ ಪರಿಕಲ್ಪನೆಗಳ ಕುರಿತೂ ಆಲೋಚಿಸಲಿದೆ.
ಮುಂದಿನ ಐದು ವರ್ಷಗಳ ಯೋಜನೆಯ ಭಾಗವಾಗಿ, ಹೀರೋ ಮೋಟೋಕಾರ್ಪ್ ಪ್ರತಿವರ್ಷ, ವೈವಿಧ್ಯಗಳು, ಹೊಸ ಮಾದರಿಗಳು ಮತ್ತು ನವೀಕೃತ ಆವೃತ್ತಿಗಳೂ ಒಳಗೊಂಡಂತೆ, 100ಕ್ಕಿಂತ ಹೆಚ್ಚಿನ ಉತ್ಪನ್ನಗಳನ್ನು ಪರಿಚಯಿಸಲಿದೆ.
ಹೀರೋ ಮೋಟೋಕಾರ್ಪ್, ಭಾರತದಾಚೆ ಇರುವ ತನ್ನ ಮಾರುಕಟ್ಟೆಗಳಿಗೂ ದೀರ್ಘ ಬೆಳವಣಿಗೆ ಗುರಿಗಳನ್ನು ಇರಿಸಿಕೊಂಡಿದೆ. ಈ ಮಾರುಕಟ್ಟೆಗಳಲ್ಲಿ ಅದು ತನ್ನ ಬೆಳವಣಿಗೆಯನ್ನು ಮುಂದುವರಿಸಲಿದ್ದು ಹೊಸ ಭೌಗೋಳಿಕ ಪ್ರದೇಶಗಳಲ್ಲಿ ಪ್ರಮುಖ ಮಾರುಕಟ್ಟೆಗಳನ್ನು ಕೂಡ ಪ್ರವೇಶಿಸಲಿದೆ.
ತನ್ನ ಹಸಿರು ಘಟಕಗಳು ಹಾಗು ಇಂಧನ ಸಾಮರ್ಥ್ಯವಿರುವ ಉತ್ಪನ್ನಗಳ ಮೂಲಕ ಹೀರೋ ಮೋಟೋಕಾರ್ಪ್, ತನ್ನ ಇಂಗಾಲಹೆಜ್ಜೆಗುರುತನ್ನು ತಗ್ಗಿಸುವುದನ್ನು ಮುಂದುವರಿಸುತ್ತದೆ. ತನ್ನ ಆಂತರಿಕ ಕಾರ್ಯಕ್ರಮಗಳ ಮೂಲಕ ಹಾಗು ವ್ಯಾಪಕ ಬಾಹ್ಯ ಪರಿಸರವ್ಯವಸ್ಥೆಗೆ ಬೆಂಬಲ ಒದಗಿಸುವ ಮೂಲಕ ಹೊಸ ಸಂಚಾರ ಪರಿಹಾರದ ಯೋಜನೆಗಳೆಡೆಗೆ ಕೂಡ ಅದು ಕಾರ್ಯನಿರ್ವಹಿಸಲಿದೆ.