Asianet Suvarna News Asianet Suvarna News

ಡಾಲಿ ಧನಂಜಯ್ ಹೊಸ ಟೋಯೋಟಾ ವೆಲ್‌ಫೈರ್ ಕಾರಿನ ವಿಶೇಷತೆ ಏನು?

ಕನ್ನಡ ಚಿತ್ರರಂಗದಲ್ಲಿ ಒಂದರ ಮೇಲೊಂದರಂತೆ ಹಿಟ್ ಚಿತ್ರಗಳನ್ನು ನೀಡುತ್ತಿರುವ ಡಾಲಿ ಧನಂಜಯ್ ಇದೀಗ ಗುರುದೇವ್ ಹೊಯ್ಸಳ ಚಿತ್ರದ ಮೂಲಕ ಅಬ್ಬರ ಆರಂಭಿಸಿದ್ದಾರೆ. ಚಿತ್ರ ಯಶಸ್ಸಿನ ಬೆನ್ನಲ್ಲೇ ನಿರ್ಮಾಪಕರು 1.2 ಕೋಟಿ ರೂಪಾಯಿ ಬೆಲೆಯ ಟೋಯೋಟಾ ವೆಲ್‌ಫೈರ್ ಕಾರು ಉಡುಗೊರೆಯಾಗಿ ನೀಡಿದ್ದಾರೆ. ಈ ದುಬಾರಿ ಕಾರಿನ ವಿಶೇಷತೆ  ಏನು?

Gurudev hoysala producer gifted Toyota vellfire car to Actor daali dhananjay specification and safety details of vehicle ckm
Author
First Published Apr 1, 2023, 3:51 PM IST

ಬೆಂಗಳೂರು(ಏ.01): ಗುರುದೇವ್ ಹೊಯ್ಸಳ ಚಿತ್ರದ ಭರ್ಜರಿ ಯಶಸ್ಸು ನಟ ಡಾಲಿ ಧನಂಜಯ್ ಕರಿಯರ್ ಗ್ರಾಫ್ ಮತ್ತಷ್ಟು ಏರಿಸಿದೆ. ಖಡಕ್ ಪೊಲೀಸ್ ಅಧಿಕಾರಿಗಿಯಾಗಿ ಕಾಣಿಸಿಕೊಂಡಿರುವ ಡಾಲಿ ಧನಂಜಯ್ ಅಭಿಮಾನಿಗಳ ಮನ ಗೆದ್ದಿದ್ದಾರೆ. ಇಷ್ಟೇ ಅಲ್ಲ ಬಾಕ್ಸ್ಆಫೀಸ್‌ನಲ್ಲೂ ಉತ್ತಮ ಗಳಿಕೆ ಮಾಡುತ್ತಿದೆ. ಇತ್ತ ನಿರ್ಮಾಪಕರು ಫುಲ್ ಖುಷ್ ಆಗಿದ್ದಾರೆ. ಇದರ ಪರಿಣಾಮ ನಿರ್ಮಾಪಕರಾದ ಕಾರ್ತಿಕ್ ಗೌಡ ಹಾಗೂ ಯೋಗಿ ಜಿ ರಾಜ್ ಉಡುಗೊರೆಯೊಂದನ್ನು ಡಾಲಿಗೆ ನೀಡಿದ್ದಾರೆ 1.2 ಕೋಟಿ ರೂಪಾಯಿ ಬೆಲೆಯ ಯೋಯೋಟಾ ವೆಲ್‌ಫೈರ್ ಕಾರು ಉಡುಗೊರೆಯಾಗಿ ನೀಡಿದ್ದಾರೆ. ಈ ದುಬಾರಿ ಕಾರು ಹಲವು ಕಾರಣಗಳಿಂದ ಸೆಲೆಬ್ರೆಟಿಗಳಿಗೆ ಅಚ್ಚುಮೆಚ್ಚಿನ ಕಾರಾಗಿದೆ. 

ಡಾಲಿ ಧನಂಜಯ್ ಕಪ್ಪು ಬಣ್ಣದ ಟೋಯೋಟಾ ವೆಲ್‌ಫೈರ್ ಕಾರು ಪಡೆದಿದ್ದಾರೆ.ಭಾರತದಲ್ಲಿ ಟೋಯೋಟಾ ವೆಲ್‌ಫೈರ್ ಕಾರು 2020ರಲ್ಲಿ ಬಿಡುಗಡೆಯಾಗಿದೆ. ಭಾರತದಲ್ಲಿ ಟೋಯೋಟಾ ವೆಲ್‌ಫೈರ್ ಕಾರು ಬಿಡುಗಡೆಯಾದ ಬೆನ್ನಲ್ಲೇ ಬುಕ್ ಮಾಡಿ ಎಲ್ಲರಿಗಿಂತ ಮೊದಲು ಕಾರು ಡೆಲಿವರಿ ಪಡೆದ ಹೆಗ್ಗಳಿಕೆಗೆ ಸೌತ್ ಸ್ಟಾರ್ ಮೋಹನ್ ಲಾಲ್‌ಗೆ ಸಲ್ಲಲಿದೆ. ಮೋಹನ್ ಲಾಲ್ ಮಾರ್ಚ್ 1, 2020ರಲ್ಲಿ ಟೋಯೋಟಾ ವೆಲ್‌ಫೈರ್ ಕಾರು ಡೆಲಿವರಿ ಪಡೆದಿದ್ದಾರೆ. 

ಪ್ರೇಮಂ ನಟ Nivin Pauly ಹೊಸ ಕಾರ್ ಹೆಂಗಿದೆ ಗೊತ್ತಾ?

ಸೆಲೆಬ್ರೆಟಿಗಳು ಟೋಯೋಟಾ ವೆಲ್‌‌ಫೈರ್ ಕಾರು ಹೆಚ್ಚು ಇಷ್ಟಪಡಲು ಕಾರಣವಿದೆ. ನಟ ನಟಿಯರು ಈ ಕಾರನ್ನು ಸಣ್ಣ ಕ್ಯಾರವ್ಯಾನ್ ಆಗಿ ಬಳಕೆ ಮಾಡುತ್ತಾರೆ. ಅತೀ ದೊಡ್ಡ ಸ್ಥಳವಕಾಶ ಹೊಂದಿದೆ. ಹೆಚ್ಚಿನ ಸೆಲೆಬ್ರೆಟಿಗಳು  ಕಾರು ಖರೀದಿಸಿ ಇಂಟಿರೀಯರ್ ಮಾಡಿಫಿಕೇಶನ್ ಮಾಡಿಸಿಕೊಳ್ಳುತ್ತಾರೆ. ತಮಗೆ ಬೇಕಾದ ರೀತಿಯಲ್ಲಿ ವಿನ್ಯಾಸ ಮಾಡಿಸುತ್ತಾರೆ. ಅಗತ್ಯಕ್ಕೆ ತಕ್ಕಂತೆ ಕಾರು ಮಾಡಿಫಿಕೇಶನ್ ಮಾಡಿ ಶೂಟಿಂಗ್ ವೇಳೆ ಖಾಸಗಿ ಕ್ಯಾರವ್ಯಾನ್ ಆಗಿ ಬಳಕೆ ಮಾಡುತ್ತಾರೆ. ಈ ಕಾರಿನಲ್ಲಿ ಯಾವುದೇ ಅಡೇ ತಡೆ ಇಲ್ಲದೆ ವಿಶ್ರಾಂತಿ ಪಡೆಯುವಷ್ಟು ಸ್ಥಳವಕಾಶವಿದೆ. 

ದೂರು ಪ್ರಯಾಣ ಮಾಡಲು ಟೋಯೋಟಾ ವೆಲ್‌ಫೈರ್ ಅತ್ಯುತ್ತಮ ಕಾರಾಗಿದೆ. ಪ್ರಯಾಣದ ನಡುವೆ ವಿಶ್ರಾಂತಿ ಪಡೆಯಲು ಸಾಧ್ಯವಿದೆ. ಏಷ್ಟು ದೂರ ಪ್ರಯಾಣಿಸಿದರೂ ಯಾವುದೇ ಆಯಾಸವಾಗಲ್ಲ. ಇದರ ಜೊತೆಗೆ ಗರಿಷ್ಠ ಸುರಕ್ಷತೆಯನ್ನು ಒದಗಿಸಲಿದೆ.  ಪವರ್ ಸ್ಲೈಡಿಂಗ್ ಡೂರ್, ಎರಡು  ಸನ್‌ರೂಫ್, 3 ಜೋನ್ ಕ್ಲೈಮೇಟ್ ಕಂಟ್ರೋಲ್, 10.2 ಇಂಚಿನ್ ಟಚ್‌ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಮ್, 360 ಡಿಗ್ರಿ ಕ್ಯಾಮೆರಾ ಸೇರಿದಂತೆ ಹಲವು ಫೀಚರ್ಸ್ ಹೊಂದಿದೆ.

ಡಾಲಿ ದನಂಜಯ್ ಉಡುಗೊರೆಯಾಗಿ ಪಡೆದ ವೆಲ್‌ಫೈರ್ ಕಾರಿನ ಬೆಲೆ ಸರಿಸುಮಾರು 1.2 ಕೋಟಿ ರೂಪಾಯಿ. ಶೋ ರೂಂ ಬೆಲೆ ಸರಿಸುಮಾರು 97 ಲಕ್ಷ ರೂಪಾಯಿ. ಇನ್ನು ರಿಜಿಸ್ಟ್ರೇಶನ್ ಬೆಲೆ 19.40 ಲಕ್ಷ ರೂಪಾಯಿ, ವಿಮೆ ಸರಿಸುಮಾರು 3 ಲಕ್ಷ ರೂಪಾಯಿ, ಇತರ ಬೆಲೆ 1 ಲಕ್ಷ ರೂಪಾಯಿ ಸೇರಿದಂತೆ 1.2ಕೋಟಿ ರೂಪಾಯಿ ಆನ್‌ರೋಡ್ ಬೆಲೆಯಾಗಲಿದೆ.

 

ನಟ ಮೋಹನ್‌ಲಾಲ್ ಕೈಸೇರಿತು ಮೊದಲ ಟೊಯೊಟಾ ವೆಲ್‌ಫೈರ್ ಕಾರು!

ವೆಲ್‌ಫೈರ್ ಕಾರು ಮರ್ಸಿಡಿಸ್ ಬೆಂಜ್ ವಿ ಕ್ಲಾಸ್ ಕಾರಿಗೆ ಪ್ರತಿಸ್ಪರ್ಧಿಯಾಗಿದೆ.ಬೆಂಜ್ ವಿ ಕ್ಲಾಸ್ ಕಾರಿನ ಆನ್ ರೋಡ್ ಬೆಲೆ ಸರಿಸುಮಾರು 1.7 ಕೋಟಿ ರೂಪಾಯಿ. ವಿ ಕ್ಲಾಸ್ ಕಾರು ಪೆಟ್ರೋಲ್ ಹಾಗೂ ಡೀಸೆಲ್ ವೆರಿಯೆಂಟ್ ಆಯ್ಕೆ ಲಭ್ಯವಿದೆ. ಆದರೆ ವೆಲ್‌ಫೈರ್ ಕಾರು ಪೆಟ್ರೋಲ್ ಹೈಬ್ರಿಡ್ ಆಯ್ಕೆ ಮಾತ್ರ ಲಭ್ಯವಿದೆ. ಇದರ ಪರಿಣಾಮ ಮೈಲೇಜ್‌ನಲ್ಲೂ ಗಣನೀಯ ಕೊಡುಗೆ ನೀಡುತ್ತದೆ. ವೆಲ್‌ಫೈರ್ ಒಂದು ಲೀಟರ್ ಪೆಟ್ರೋಲ್‌ಗೆ 16 ಕಿ.ಮೀ ಮೈಲೇಜ್ ನೀಡಲಿದೆ.  

ABS ಹಾಗೂ EBD ಬ್ರೇಕಿಂಗ್ ಸಿಸ್ಟಮ್, 9 ಏರ್‌ಬ್ಯಾಗ್, ESP ಸೇರಿದಂತೆ ಅತ್ಯಾಧುನಿಕ ತಂತ್ರಜ್ಞಾನದ ಸೇಫ್ಟಿ ಫೀಚರ್ಸ್ ಈ ಕಾರಿನಲ್ಲಿದೆ. 2.5 ಲೀಟರ್ ಪೆಟ್ರೋಲ್ ಹೈಬ್ರಿಡ್ ಎಂಜಿನ್ ಹೊಂದಿರುವ ವೆಲ್‌ಪೈರ್ ಆಲ್ ವ್ಹೀಲ್ ಡ್ರೈವಿಂಗ್ ಅನುಭವ ನೀಡಲಿದೆ.

Follow Us:
Download App:
  • android
  • ios