ಕೊಚ್ಚಿ(ಮಾ.01):  ಮರ್ಸಿಡೀಸ್ ಬೆಂಝ್ ವಿ ಕ್ಲಾಸ್ ಕಾರಿಗೆ ಪ್ರತಿಸ್ಪರ್ಧಿಯಾಗಿ ಟೊಯೊಟಾ ವೆಲ್‌ಫೈರ್ ಕಾರು ಬಿಡುಗಡೆಯಾಗಿದೆ. ಕಾರಿನ ಬೆಲೆ 79.5 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ). ನಟಿ-ನಟಿಯರಿಗೆ, ಉದ್ಯಮಿಗಳಿಗೆ, ಸೆಲೆಬ್ರೆಟಿಗಳಿಗೆ ಇದು ಹೇಳಿ ಮಾಡಿಸಿದ ಕಾರು. ಇದೀಗ ಈ ಕಾರನ್ನು ನಟ ಮೋಹನ್‌ಲಾಲ್ ಖರೀದಿಸಿದ್ದಾರೆ.

ಇದನ್ನೂ  ಓದಿ: ಕಾರು ಬದಲಾಯಿಸಿದ ಮೋದಿ; ಹೊಸ ವಾಹನ ಮಾಡುತ್ತಿದೆ ಮೋಡಿ!... 

ಕೇರಳದ ಮೊದಲ ಟೊಯೊಟಾ ವೆಲ್‌ಫೈರ್ ವಾಹನ ಮೊಹನ್‌ಲಾಲ್ ಕೈಸೇರಿದೆ. ಲಕ್ಸುರಿ ವಾಹನ ಇದಾಗಿದ್ದು ಗರಿಷ್ಠ 7 ಸೀಟಿನ ಸಾಮರ್ಥ್ಯ ಹೊಂದಿದೆ. ಇಷ್ಟೇ ಅಲ್ಲ ಆಸನದ ವ್ಯವಸ್ಥೆ ಅಗತ್ಯಕ್ಕೆ ಅನುಗುಣವಾಗಿ ಬದಲಾಯಿಸಬಹುದು. 

ಇದನ್ನೂ  ಓದಿ:  BS6 ಎಂಜಿನ್ ಇನ್ನೋವಾ ಕ್ರಿಸ್ಟಾ ಬುಕಿಂಗ್ ಆರಂಭ!

ಹೆಚ್ಚು ಸ್ಥಳವಕಾಶ, ಆರಾಮದಾಯಕ ಪ್ರಯಾಣ ಹಾಗೂ ಆತ್ಯಾಧುನಿಕ ತಂತ್ರಜ್ಞಾನ ಹೊಂದಿರುವ ಟೊಯೊಟಾ ವೆಲ್‌ಪೈರ್ ನಟ ನಟಿಯರ ನೆಚ್ಚಿನ ಕಾರಾಗಿ ಬದಲಾಗುತ್ತಿದೆ.  ನೂತನ ವೆಲ್‌ಫೈರ್ ಕಾರು 2.5 ಲೀಟರ್ ಪೆಟ್ರೋಲ್ ಹೈಬ್ರಿಡ್ ಎಂಜಿನ್ ಹೊಂದಿದ್ದು, 179 hp ಮ್ಯಾಕ್ಸ್ ಪವರ್ ಹೊಂದಿದೆ. ಕಾರು CVT ಯನಿಟ್ ಹಾಗೂ  e-AWD  ಸಿಸ್ಟಮ್ ಹೊಂದಿದೆ.