Year End 2021 ಈ ವರ್ಷ Googleನಲ್ಲಿ ಹೆಚ್ಚು ಹುಡುಕಾಡಿದ ಟಾಪ್ 5 ಕಾರು ಯಾವುದು?
- ಪ್ರಸಕ್ತ ವರ್ಷ ಹಲವು ಏರಿಳಿತ ಕಂಡಿದೆ ಭಾರತದ ಆಟೋ ಇಂಡಸ್ಟ್ರಿ
- ಸಣ್ಣ ಕಾರು ಹಾಗೂ ಬಜೆಟ್‌ಗೆ ಕಾರಿಗಾಗಿ ಹುಡುಕಾಡಿದ ಜನ
- ಗೂಗಲ್‌ನಲ್ಲಿ ಗರಿಷ್ಠ ಹುಡುಕಾಡಿದ ಕಾರಿನ ಪಟ್ಟಿ ಇಲ್ಲಿದೆ
ಬೆಂಗಳೂರು(ಡಿ.24): ಕೊರೋನಾ ಕಾರಣ 2021 ಭಾರತದ ಆಟೋಮೊಬೈಲ್(Automobile) ಕಂಪನಿಗಳಿಗೆ ಹೆಚ್ಚಿನ ಲಾಭ ತಂದುಕೊಟ್ಟಿಲ್ಲ. ನಿರೀಕ್ಷಿತ ಪ್ರಗತಿಯನ್ನು ಸಾಧಿಸಲು ಸಾಧ್ಯವಾಗಿಲ್ಲ. ಆದರೆ ಹಲವು ಸವಾಲುಗಳನ್ನು ಗೆದ್ದು ಮುನ್ನುಗ್ಗುತ್ತಿದೆ. 2021ರಲ್ಲಿ ಹಲವು ಕಾರುಗಳು(Cars) ಬಿಡುಗಡೆಯಾಗಿದೆ. ಕೆಲ ಕಾರುಗಳು ಮಾರಾಟದಲ್ಲೂ ದಾಖಲೆ ಬರೆದಿದೆ. ಆದರೆ ಗೂಗಲ್‌ನಲ್ಲಿ(Google Search) ಅತೀ ಹೆಚ್ಚು ಮದಿ ಹುಡುಕಾಡಿದ ಕಾರು ಯಾವುದು? ಈ ಕುರಿತ ಮಾಹಿತಿ ಇಲ್ಲಿದೆ.
2021ರಲ್ಲಿ ಗೂಗಲ್ ಸರ್ಚ್ ಮೂಲಕ ಗರಿಷ್ಠ ಮಂದಿ ಹುಡುಕಾಡಿದ ಕಾರು ಕಿಯಾ ಸೆಲ್ಟೋಸ್(Kia Seltos). ಕಿಯಾ ಸೆಲ್ಟೋಸ್ SUV ಕಾರು, ಕಾರಿನ ಬೆಲೆ, ಆನ್‌ರೋಡ್ ಬೆಲೆ, ಫೀಚರ್ಸ್ ಸೇರಿದಂತೆ ಹಲವು ಕಾರಣಗಳಿಗೆ ಜನರು ಗೂಗಲ್‌ನಲ್ಲಿ ಹುಡುಕಾಡಿದ್ದಾರೆ. ಸರಾಸರಿ ಅಂಕಿ ಅಂಶದ ಪ್ರಕಾರ ಪ್ರತಿ ತಿಂಗಳು 8 ಲಕ್ಷ ಮಂದಿ ಕಿಯಾ ಸೆಲ್ಟೋಸ್ ಕಾರಿನ ಮಾಹಿತಿ ಕುರಿತು ಗೂಗಲ್‌ನಲ್ಲಿ ಸರ್ಚ್ ಮಾಡಿದ್ದಾರೆ. ಆದರೆ SUV ಕಾರನ್ನು ಹೊರತುಪಡಿಸಿದರೆ ಇತರ ಸಣ್ಣ ಹ್ಯಾಚ್‌ಬ್ಯಾಕ್ ಹಾಗೂ ಸೆಡಾನ್ ಕಾರುಗಳ ಗರಿಷ್ಠ ಗೂಗಲ್ ಸರ್ಚ್ ವಿವರ ಇಲ್ಲಿವೆ.
ಮಾರುತಿ ಸುಜುಕಿ ಡಿಸೈರ್:
ಸೆಡಾನ್ ಕಾರುಗಳ ಪೈಕಿ ಗರಿಷ್ಠ ಮಾರಾಟ ದಾಖಲೆ ಹೊಂದಿರುವ ಕಾರು ಮಾರುತಿ ಸುಜುಕಿ ಡಿಸೈರ್(Maruti Suzuki Dzire). ಗರಿಷ್ಠ ಮಾರಾಟವಾಗಿರುವ ಡಿಸೈರ್ ಕಾರು ಗೂಗಲ್ ಸರ್ಚ್‌ನಲ್ಲಿ ಅಗ್ರಸ್ಥಾನದಲ್ಲಿದೆ. 2021ರಲ್ಲಿ ಅತೀ ಹೆಚ್ಚು ಮಂದಿ ಹುಡುಕಾಡಿದ ಸೆಡಾನ್ ಕಾರು ಡಿಸೈರ್. ಪ್ರತಿ ತಿಂಗಳು ಸರಾಸರಿ 4.5 ಲಕ್ಷ ಮಂದಿ ಮಾರುತಿ ಡಿಸೈರ್ ಕಾರಿನ ಕುರಿತು ಈ ವರ್ಷ ಗೂಗಲ್‌ನಲ್ಲಿ ಹುಡುಕಾಡಿದ್ದಾರೆ. 1.2 ಲೀಟರ್ ಪೆಟ್ರೋಲ್ ಎಂಜಿನ್ ಹೊಂದಿರುವ ಕಾರು ಮಾನ್ಯುಯೆಲ್ ಟ್ರಾನ್ಸ್‌ಮಿಶನ್ ಹಾಗೂ ಆಟೋಮ್ಯಾಟಿರ್ ಆಯ್ಕೆ ಲಭ್ಯವಿದೆ.
ಟಾಟಾ ಅಲ್ಟ್ರೋಜ್:
5 ಸ್ಟಾರ್ ಸೇಫ್ಟಿಂಗ್ ರೇಟಿಂಗ್ ಪಡೆದಿರುವ ಟಾಟಾ ಕಾರು ಅಲ್ಟೋಜ್(Tata Altroz) ಗರಿಷ್ಠ ಗೂಗಲ್ ಸರ್ಚ್‌ನಲ್ಲಿ ಸ್ಥಾನ ಪಡೆದಿದೆ. ಟಾಟಾ ಅಲ್ಟ್ರೋಜ್ ಪ್ರತಿ ತಿಂಗಳು ಸರಾಸರಿ 4.4 ಲಕ್ಷ ಮಂದಿ ಪ್ರತಿ ತಿಂಗಳು ಗೂಗಲ್‌ನಲ್ಲಿ ಹುಡುಕಾಡಿದ್ದಾರೆ. 1.2 ಲೀಟರ್ ಪೆಟ್ರೋಲ್ ಎಂಜಿನ್ ಹೊಂದಿರುವ ಅಲ್ಟ್ರೋಜ್ ಮಾರುತಿ ಬಲೆನೋ ಹಾಗೂ ಹ್ಯುಂಡೈ ಟಿ20 ಕಾರಿಗೆ ಪ್ರತಿಸ್ಪರ್ಧಿಯಾಗಿದೆ.
Year End 2021 ಕೈಗೆಟುಕುವ ದರದಲ್ಲಿ ಬಿಡುಗಡೆಯಾದ ಟಾಪ್ 5 ಕಾರು!
ಹೋಂಡಾ ಸಿಟಿ:
ಭಾರತದಲ್ಲಿ ಹೋಂಡಾ ಸಿಟಿ(Honda City) ಅತ್ಯುತ್ತಮ ದಾಖಲೆ ಹೊಂದಿದೆ. ಬಿಡುಗಡೆಯಾದ ಬಳಿಕ ಹಲವು ಬದಲಾವಣೆ, ಅಪ್‌ಗ್ರೇಡ್ ಕಂಡಿರುವ ಹೋಂಡಾ ಸಿಟಿ ಕಾರು 2021ರ ಗೂಗಲ್ ಸರ್ಚ್‌ನಲ್ಲೂ ಸ್ಥಾನ ಪಡೆದಿದೆ. 2021ರಲ್ಲಿ ಪ್ರತಿ ತಿಂಗಳು ಸರಾಸರಿ 3.6 ಲಕ್ಷ ಮಂದಿ ಹೋಂಡಾ ಸಿಟಿ ಕುರಿತು ಸರ್ಜ್ ಮಾಡಿದ್ದಾರೆ. 2020ರಲ್ಲಿ ಹೋಂಡಾ ಸಿಟಿ 7ನೇ ಜನರೇಶನ್ ಕಾರನ್ನು ಭಾರತದಲ್ಲಿ ಬಿಡುಗಡೆ ಮಾಡಲಾಗಿದೆ. ಈ ಕಾರು ಕೆಲ ಪ್ರಶಸ್ತಿಗಳನ್ನು ಗೆದ್ದುಕೊಂಡಿದೆ. ಪೆಟ್ರೋಲ್ ಹಾಗೂ ಡೀಸೆಲ್ ವೇರಿಯೆಂಟ್‌ನಲ್ಲಿ ಕಾರು ಲಭ್ಯವಿದೆ.
ಟಾಟಾ ಟಿಯಾಗೋ:
2021ರಲ್ಲಿ ಟಾಪ್ 5 ಗೂಗಲ್ ಸರ್ಚ್ ಕಾರುಗಳ ಪೈಕಿ ಟಾಟಾ ಟಿಯಾಗೋ(Tata Tiago) ಸ್ಥಾನ ಪಡೆದಿದೆ. 4 ಸ್ಟಾರ್ ಸೇಫ್ಟಿ ರೇಟಿಂಗ್, ಕೈಗೆಟುಕುವ ದರ ಸೇರಿದಂತೆ ಹಲವು ವಿಶೇಷತೆಗಳಿಂದ ಟಿಯಾಗೋ ಮಾರಾಟದಲ್ಲು ಉತ್ತಮ ಸ್ಪಂದನೆ ವ್ಯಕ್ತವಾಗಿತ್ತು. 2021ರ ಗೂಗಲ್ ಸರ್ಚ್‌ನಲ್ಲಿ ಪ್ರತಿ ತಿಂಗಳು 3.4 ಲಕ್ಷ ಮಂದಿ ಟಿಯಾಗೋ ಕಾರನ್ನು ಹುಡುಕಾಡಿದ್ದಾರೆ.
ಮಾರುತಿ ಅಲ್ಟೋ 800:
ಸಣ್ಣ ಕಾರು, ಕಡಿಮೆ ದರ, ಗರಿಷ್ಠ ಮೈಲೇಜ್ ವಿಚಾರದಲ್ಲಿ ಮಾರುತಿ ಅಲ್ಟೋ 800(Maruti Suzuki Alto 800) ಈಗಲೂ ಟಾಪ್. ಹೀಗಾಗಿ ಹಲವರ, ಮಧ್ಯಮ ವರ್ಗ ಕುಟುಂಬಗಳ ಮೊದಲ ಆಯ್ಕೆ ಮಾರುತಿ ಅಲ್ಟೋ 800 ಕಾರು. 2021ರ ಗೂಗಲ್ ಸರ್ಚ್‌ನಲ್ಲಿ ಅಲ್ಟೋ ಪ್ರತಿ ತಿಂಗಳು ಸರಾಸರಿ 3 ಲಕ್ಷ ಸರ್ಚ್ ಕಂಡಿದೆ. 800 cc ಪೆಟ್ರೋಲ್ ಎಂಜಿನ್ ಕಾರು ಹಲುವ ಬದಲಾವಣೆ ಕಂಡಿದೆ. ಈಗಲೂ ಮಾರಾಟದಲ್ಲಿ ಅಗ್ರಜನಾಗಿ ಮುಂದುವರಿದಿದೆ. ಹೊಸ ವರ್ಷದಲ್ಲಿ ನ್ಯೂ ಜನರೇಶ್ ಅಲ್ಟೋ ಕಾರು ಬಿಡುಗಡೆ ಮಾಡಲು ಮಾರುತಿ ಸಜ್ಜಾಗಿದೆ.