Top 5 SUV cars ಟಾಟಾ ಪಂಚ್ to ಮಹೀಂದ್ರ XUV700,ಈ ವರ್ಷ ಬಿಡುಗಡೆಯಾದ ಅತ್ಯುತ್ತಮ ಕಾರು!
- 2021ರಲ್ಲಿ ಭಾರತದಲ್ಲಿ ಬಿಡುಗಡೆಯಾಗಿ ಸಂಚಲನ ಮೂಡಿಸಿದ SUV ಕಾರು
- ಕೈಗೆಟುಕುವ ದರ, ಆಕರ್ಷಕ ವಿನ್ಯಾಸ, ಪರ್ಫಾಮೆನ್ಸ್ ಸೇರಿದಂತೆ ಬೆಸ್ಟ್ ಕಾರು ಪಟ್ಟಿ
- 2021ರ ಟಾಪ್ 5 SUV ಕಾರು ಪಟ್ಟಿ ಇಲ್ಲಿದೆ
ಬೆಂಗಳೂರು(ಡಿ.12) : ಪ್ರಸಕ್ತ ವರ್ಷಕ್ಕೆ(Year End 2021) ಗುಡ್ ಬೈ ಹೇಳಿ, ಹೊಸ ವರ್ಷ(New Year 2022) ಬರಮಾಡಿಕೊಳ್ಳಲು ಎಲ್ಲರೂ ಸಜ್ಜಾಗಿದ್ದಾರೆ. ಹೊಸ ವರ್ಷದಲ್ಲಿ ಹೊಸ ಕಾರುಗಳು ಬಿಡುಗಡೆಯಾಗುತ್ತಿದೆ. ಆದರೆ ಈ ವರ್ಷ ಅಂದರೆ 2021ರಲ್ಲಿ ಹಲವು ಕಾರುಗಳು(New cars) ಬಿಡುಗಡೆಯಾಗಿದೆ. ಕೆಲ ಕಾರುಗಳು ಭಾರತದ ಮಾರುಕಟ್ಟೆಯಲ್ಲಿ ಭಾರಿ ಸಂಚಲನ ಮೂಡಿಸಿದೆ. ಈ ವರ್ಷ ಬಿಡುಗಡೆಯಾಗಿ ಅತ್ಯುತ್ತಮ SUV ಕಾರು ಅನ್ನೋ ಹೆಗ್ಗಳಿಕೆಗೆ ಪಾತ್ರವಾದ 5 ಕಾರುಗಳ(2021 Top 5 cars) ವಿವರ ಇಲ್ಲಿದೆ.
ಮಹೀಂದ್ರ XUV700
ಬೆಲೆ: 12.49 ಲಕ್ಷ ರೂಪಾಯಿಂದ 20.99 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ)
ದೇಶದಲ್ಲಿ ಬಿಡುಗಡೆಯಾದ ಅತೀ ಕಡಿಮೆ ಬೆಲೆಯ 7 ಸೀಟರ್ ಕಾರು ಮಹೀಂದ್ರ XUV700. ಆ ಕಾರು ಅಡ್ವಾನ್ಸ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಮ್(ADAS) ಹೊಂದಿದೆ. ಮಹೀಂದ್ರ XUV700 ಕಾರು ಪೆಟ್ರೋಲ್ ಹಾಗೂ ಡೀಸೆಲ್ ವೇರಿಯೆಂಟ್‌ನಲ್ಲಿ ಲಭ್ಯವಿದೆ. 2.2 ಲೀಟರ್ ಡೀಸೆಲ್ ಎಂಜಿನ್ ಕಾರು 155PS ಹಾಗೂ185PS ಪವರ್ ನೀಡಿದರೆ, 2 ಲೀಟರ್ ಪೆಟ್ರೋಲ್ ಎಂಜಿನ್ ಕಾರು 200PS ಪವರ್ ಸಾಮರ್ಥ್ಯ ಹೊಂದಿದೆ.
Mahindra car offers:ಡಿಸೆಂಬರ್ ತಿಂಗಳಲ್ಲಿ ಭರ್ಜರಿ ಡಿಸ್ಕೌಂಟ್, ಗರಿಷ್ಠ 81,500 ರೂಪಾಯಿ ಉಳಿಸಿ!
ಟಾಟಾ ಪಂಚ್
ಬೆಲೆ: 5.49 ಲಕ್ಷ ರೂಪಾಯಿಂದ 9.39 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ)
ಮೈಕ್ರೋ SUV ಕಾರು ಸೆಗ್ಮೆಂಟ್‌ನಲ್ಲಿ ಭಾರಿ ಸಂಚಲನ ಮೂಡಿಸಿದ ಟಾಟಾ ಪಂಚ್(Tata Punch) ಕೈಗೆಟುಕುವ ದರ ಕಾರು. 1.2 ಲೀಟರ್ ಪೆಟ್ರೋಲ್ ಎಂಜಿನ್ ಹೊಂದಿರುವ ಈ ಕಾರು, 86PS ಪವರ್ 113Nm ಪೀಕ್ ಟಾರ್ಕ್ ಉತ್ಪಾದಿಸಬಲ್ಲ ಸಾಮರ್ಥ್ಯ ಹೊಂದಿದೆ. 5 ಸ್ಪೀಡ್ ಮಾನ್ಯುಯೆಲ್ ಹಾಗೂ ಎಂಎಂಟಿ ಆಯ್ಕೆ ಕೂಡ ಇದರಲ್ಲಿದೆ. ಸಣ್ಣ SUV ಕಾರು ಮುಂಭಾಗದ ನೋಟದಲ್ಲಿ ಟಾಟಾ ಹ್ಯಾರಿಯರ್ ಲುಕ್ ಹೊಂದಿದೆ. ಆದರೆ ಪರ್ಫಾಮೆನ್ಸ್ ಉತ್ತಮವಾಗಿದೆ. ಟಾಟಾ ಪಂಚ್ ಕಾರು ಮಾರುಕಟ್ಟೆಲ್ಲಿರುವ ಮಾರುತಿ ಇಗ್ನಿಸ್, ನಿಸಾನ್ ಮ್ಯಾಗ್ನೈಟ್, ಮಹೀಂದ್ರ KUV100 ಕಾರುಗಳಿಗೆ ಪ್ರತಿಸ್ಪರ್ಧಿಯಾಗಿದೆ.
ಎಂಜಿ ಆ್ಯಸ್ಟರ್
ಬೆಲೆ: 9.78 ಲಕ್ಷ ರೂಪಾಯಿಯಿಂದ 17.38 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ)
ಆ್ಯಸ್ಟರ್ ಕಾರು ಎಂಜಿನ್ ದಕ್ಷತೆಯಲ್ಲಿ ಅತ್ಯುತ್ತವಾಗಿದೆ. 1.3 ಲೀಟರ್ ಟರ್ಬೋ ಪೆಟ್ರೋಲ್ ಎಂಜಿನ್ ಹೊಂದಿದೆ. 140PS ಪವರ್ ಹೊಂದಿದೆ. ಅಕ್ಟೋಬರ್ ತಿಂಗಳಲ್ಲಿ ಮಾರುಕಟ್ಟೆಗೆ ಬಿಡುಗಡೆಯಾದ ಆ್ಯಸ್ಟರ್ ಕಾರು ಅತ್ಯಾಧುನಿಕ ತಂತ್ರಜ್ಞಾನ ಒಳಗೊಂಡಿದೆ. ಎಂಜಿ ಮೋಟಾರು ಎಲ್ಲಾ ಕಾರುಗಳಲ್ಲಿರುವಂತೆ ಗರಿಷ್ಠ ಕಾರ್ ಕನೆಕ್ಟೆಡ್ ಫೀಚರ್ಸ್ ಈ ಕಾರಿನಲ್ಲಿದೆ. ಎಐ ವಾಯ್ಸ್ ಅಸಿಸ್ಟೆನ್ಸ್, ADAS ಟೆಕ್ನಾಲಜಿ ಹೊಂದಿದೆ. ಇಷ್ಟೇ ಅಲ್ಲ ಹಿಲ್ ಡಿಸೆಂಟ್ ಕಂಟ್ರೋಲ್ ಹಾಗೂ ಹಿಲ್ ಹೋಲ್ಟ್ ಅಸಿಸ್ಟ್ ಹೊಂದಿದೆ.
Discount on Honda India Cars: ಹೋಂಡಾ ಕಾರಿನ ಮೇಲೆ ವರ್ಷಾಂತ್ಯದ ಡಿಸ್ಕೌಂಟ್, ಗ್ರಾಹಕರಿಗೆ ಭರ್ಜರಿ ಆಫರ್!
ಟಾಟಾ ಸಫಾರಿ
ಬೆಲೆ: 14.99 ಲಕ್ಷ ರೂಪಾಯಿಯಿಂದ 23.19 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ)
5 ಸ್ಟಾರ್ ಸೇಫ್ಟಿಯೊಂದಿಗೆ ಮಾರುಕಟ್ಟೆಗೆ ಎಂಟ್ರಿಕೊಟ್ಟ ಟಾಟಾ ಸಫಾರಿ ಕಾರು, 7 ಸೀಟರ್ ಸಾಮರ್ಥ್ಯ ಹೊಂದಿದೆ. ಐಕಾನಿಕ್ ಸಫಾರಿ ಹೆಸರಿನಲ್ಲಿ ಬಿಡುಗಡೆಯಾದ ಈ ಕಾರು ಅತ್ಯಂತ ಆಕರ್ಷಕ ವಿನ್ಯಾಸ ಹೊಂದಿದೆ. 2 ಲೀಟರ್ ಟರ್ಬೋ ಡೀಸೆಲ್ ಎಂಜಿನ್ ಹೊಂದಿರುವ ಸಫಾರಿ 170PS ಪವರ್ ಹೊಂದಿದೆ. 6 ಸ್ಪೀಡ್ ಮ್ಯಾನ್ಯುಯೆಲ್ ಹಾಗೂ ಟಾರ್ಕ್ ಕನ್ವರ್ಟರ್ ಆಟೋಮ್ಯಾಟಿಕ್ ಆಯ್ಕೆ ಹೊಂದಿದೆ. ಇದರಲ್ಲಿ ಸಫಾರಿ ಗೋಲ್ಡ್ ಲಿಮಿಟೆಡ್ ಎಡಿಶನ್ ಕಾರು ಮತ್ತಷ್ಟು ಆಕರ್ಷಕವಾಗಿದೆ. ಗೋಲ್ಡ್ ಎಡಿಶನ್ ಕಾರಿನಲ್ಲಿ ವೆಂಟಿಲೇಟೆಡ್ ಸೀಟ್ ಹಾಗೂ ವಯರ್‌ಲೆಸ್ ಚಾರ್ಜರ್ ಹೊಂದಿದೆ.
ಹ್ಯುಂಡೈ ಅಲ್ಕಝರ್
ಬೆಲೆ: 16.30 ಲಕ್ಷ ರೂಪಾಯಿಯಿಂದ 20.14 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ)
ಹ್ಯುಂಡೈ ಕ್ರೇಟಾ 5 ಸೀಟರ್ ಕಾರಾಗಿದ್ದರೆ, ಹ್ಯುಂಡೈ ಅಲ್ಕಝರ್ 7 ಸೀಟರ್ ಕಾರು. ಭಾರತದಲ್ಲಿ ಕ್ರೆಟಾ ಕಾರು ಮಾಡಿರುವ ಮೋಡಿ ಅಷ್ಟಿಷ್ಟಲ್ಲ. ಹೀಗಾಗಿ ಕ್ರೆಟಾ ಮಾದರಿಯಲ್ಲೇ 7 ಸೀಟರ್ ಕಾರನ್ನು ಹ್ಯುಂಡೈ ಬಿಡುಗಡೆ ಮಾಡಿದೆ. 2 ಲೀಟರ್ ಪೆಟ್ರೋಲ್ ಎಂಜಿನ್ ಹೊಂದಿರುವ ಅಲ್ಕಝರ್ ಕಾರು 159PS/191Nm ಪವರ್ ಹಾಗೂ ಟಾರ್ಕ್ ಉತ್ಪಾದಿಸಬಲ್ಲ ಸಾಮರ್ಥ್ಯ ಹೊಂದಿದೆ.
ಇವು ಈ ವರ್ಷ ಬಿಡುಗಡೆಯಾದ ಟಾಪ್ 5 ಕಾರುಗಳಾಗಿದೆ. ಇದರ ಜೊತೆಗೆ ಇನ್ನೂ ಕೆಲ ಕಾರುಗಳು ಅತ್ಯುತ್ತಮ ಕಾರುಗಳಾಗಿ ಗುರುತಿಸಿಕೊಂಡಿದ. ಇದರಲ್ಲಿ 10.79 ರಿಂದ 17.99 ಲಕ್ಷ ರೂಪಾಯಿ (ಎಕ್ಸ್ ಶೋ ರೂಂ) ಬೆಲೆಯ ಸ್ಕೋಡಾ ಕುಶಾಕ್, 10.54 ರಿಂದ 17.54 ಲಕ್ಷ ರೂಪಾಯಿ ಬೆಲೆ ವೋಕ್ಸ್‌ವ್ಯಾಹನ್ ಟೈಗೂನ್, 32.80 ರಿಂದ 32.80 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ) ಬೆಲೆಯ ಸಿಟ್ರೋನ್ ಸಿ5 ಏರ್‌ಕ್ರಾಸ್ ಕಾರು, 2.43 ಕೋಟಿ ರೂಪಾಯಿ(ಎಕ್ಸ್ ಶೋ ರೂಂ) ಬೆಲೆಯ ಮರ್ಸಿಡಿಸ್ ಬೆಂಝ್ ಮೇಬ್ಯಾಚ್ GLS ಕಾರುಗಳು ಅತ್ಯುತ್ತಮ SUV ಕಾರುಗಳಾಗಿ ಗುರುತಿಸಿಕೊಂಡಿದೆ.