Traffic Violation ಚಲಿಸುತ್ತಿರುವ ಕಾರಿನ ಮೇಲೆ ಯುವಕರ ಮೋಜು, 20 ಸಾವಿರ ರೂ ದಂಡ!
- ಹೆದ್ದಾರಿಯಲ್ಲಿ ವಾಹನದ ಮೇಲೆ ನಿಂತು ಯುವಕರ ಡ್ಯಾನ್ಸ್
- ಕುಡಿದ ಅಮಲಿನಲ್ಲಿ ಟ್ರಾಫಿಕ್ ನಿಯಮ ಉಲ್ಲಂಘಿಸಿದ ಆರೋಪ
- 20,000 ರೂಪಾಯಿ ದಂಡ ಹಾಕಿದ ಪೊಲೀಸ್
ಗಾಝಿಯಾಬಾದ್(ಏ.02): ರಾಷ್ಟ್ರೀಯ ಹೆದ್ದಾರಿಯಲ್ಲಿ ಚಲಿಸುತ್ತಿರುವ ವಾಹನದ ಮೇಲೆ ನಿಂತು ಡ್ಯಾನ್ಸ್, ಕಿರಚುತ್ತಾ, ಅರಚುತ್ತಾ ಭಯದ ವಾತಾವರಣ ಸೃಷ್ಟಿ, ಕುಡಿದ ಅಮಲಿನಲ್ಲಿ ಕಾರು ಡ್ರೈವಿಂಗ್...ಇದು ದೆಹಲಿ ಮೀರತ್ ಎಕ್ಸ್‌ಪ್ರೆಸ್‌ವೇನಲ್ಲಿ ಯುವಕರ ಗುಂಪು ಟ್ರಾಫಿಕ್ ನಿಯಮ ಉಲ್ಲಂಘಿಸಿದ ರೀತಿ. ಕುಡಿದ ಅಮಲಿನಲ್ಲಿ ಯುವಕರ ಗುಂಪು ಹಲವು ನಿಯಮ ಉಲ್ಲಂಘಿಸಿ ಇದೀಗ ತಲೆಮರೆಸಿಕೊಂಡಿದ್ದಾರೆ.
ಗಾಝಿಯಾಬಾದ್ ಸಮೀಪ ನಡೆದ ಈ ಘಟನೆ ಇದೀಗ ಸಾಮಾಜಿ ಜಾಲತಾಣದಲ್ಲಿ ವೈರಲ್ ಆಗಿದೆ. ಯುವಕರ ಮೋಜು ಮಸ್ತಿ ನಡೆಯುತ್ತಿರವ ದಾರಿಯಲ್ಲಿ ಸಾಗಿದ ವಾಹನ ಸವಾರರ ಈ ದೃಶ್ಯ ಸೆರೆ ಹಿಡಿದ್ದಾರೆ. ಟ್ವಿಟರ್ ಮೂಲಕ ಗಾಝಿಯಾಬಾದ್ ಪೊಲೀಸರಿಗೂ ಮಾಹಿತಿ ನೀಡಿದ್ದಾರೆ.
ಗಾಝಿಯಾಬಾದ್ ಯುವಕರ ಗುಂಪು ಕುಡಿದ ಅಮಲಿನಲ್ಲಿ ಚಲಿಸುತ್ತಿರುವ ಕಾರಿನ ಮೇಲೆ ನಿಂತು ಹುಚ್ಚಾಟ ಆಡುತ್ತಿದ್ದಾರೆ. ಗಾಝಿಯಾಬಾದ್ ಪೊಲೀಸರು ಈ ಯುವಕರನ್ನು ಲಾಕ್ಅಪ್ ಒಳಗೆ ಹಾಕಿ ಡ್ಯಾನ್ಸ್ ಮಾಡಿಸುತ್ತಾರೆ ಅನ್ನೋ ಭರವಸೆಯಲ್ಲಿ ಎಂದು ಟ್ವೀಟ್ ಮಾಡಲಾಗಿತ್ತು.
Traffic Violation ಎರಡು ಕೈಯಲ್ಲಿ ಎರಡು ಫೋನ್, ಬೈಕ್‌ನಲ್ಲಿ ಸಾಹಸಕ್ಕೆ ಬಿತ್ತು ದುಬಾರಿ ಫೈನ್!
33 ಸೆಕೆಂಡ್ ವಿಡಿಯೋದಲ್ಲಿ ಯುವಕರ ಸಾರ್ವಜನಿಕ ರಸ್ತೆಯಲ್ಲಿದ್ದೇವೆ ಅನ್ನೋ ಅರಿವೆ ಇಲ್ಲದೆ ವರ್ತಿಸಿದ್ದಾರೆ. ಎರ್ಟಿಗಾ ಕಾರಿನ ಮೇಲೆ ನಿಂತು ಡ್ಯಾನ್ಸ್ ಮಾಡುತ್ತಿದ್ದ ಇಬ್ಬರು ಯುವಕರು ತಕ್ಷಣ ಕೆಳಗಿಳಿದು ನೇರವವಾಗಿ ಡ್ರೈವಿಂಗ್ ಸೀಟ್‌ನಲ್ಲಿ ಕುಳಿತು ಡ್ರೈವ್ ಮಾಡಿದ್ದಾರೆ. ಈ ವಿಡಿಯೋದಲ್ಲಿ ಕಾರಿನ ನಂಬರ್ ಪ್ಲೇಟ್ ಕೂಡ ಸ್ಪಷ್ಟವಾಗಿ ಗೋಚರಿಸುತ್ತಿದೆ.
ವಿಡಿಯೋ ವೈರಲ್ ಆಗುತ್ತಿದ್ದಂತೆ ಗಾಝಿಯಾಬಾದ್ ಪೊಲೀಸರು ವಾಹನದ ಮಾಹಿತಿ ಪಡೆದು 20,000 ರೂಪಾಯಿ ದಂಡ ಹಾಕಿದ್ದಾರೆ. ಇ ಚಲನ್ ಮೂಲಕ ವಾಹನ ಮಾಲೀಕರಿಗೆ ದಂಡ ಹಾಕಿದ್ದಾರೆ. ಇನ್ನು ಹುಚ್ಚಾಟ ಮೆರೆದ ಯುವಕರ ಗುಂಪು ತಮ್ಮ ಪರಾರಿಯಾಗಿದೆ. ವಾಹನ ಮಾಲೀಕರು ನೀಡಿರುವ ವಿಳಾಸದಲ್ಲೂ ಯಾರೂ ಪತ್ತೆಯಾಗಿಲ್ಲ.
Drink and Drive ಅಪಘಾತ ಸಣ್ಣದಾದರೂ ಕುಡಿದು ವಾಹನ ಚಲಾಯಿಸಿದ್ದರೆ ಗಂಭೀರ ಪ್ರಕರಣ, ಸುಪ್ರೀಂ ಕೋರ್ಟ್!
30 ಸಾವಿರ ರು. ಮೇಲ್ಪಟ್ಟವಾಹನ ತೆರಿಗೆ ಕಟ್ಟಲು ಇನ್ನು 30 ದಿನ: ಮಸೂದೆ ಪಾಸ್
ಬಜೆಟ್‌ನಲ್ಲಿ ಘೋಷಣೆ ಮಾಡಿದಂತೆ 30 ಸಾವಿರ ರು.ಗಿಂತ ಹೆಚ್ಚು ತೆರಿಗೆ ಪಾವತಿಸುವ ವಾಹನ ಮಾಲೀಕರಿಗೆ ನೀಡಿದ 15 ದಿನಗಳ ಕಾಲಾವಕಾಶವನ್ನು 30 ದಿನಗಳವರೆಗೆ ವಿಸ್ತರಿಸುವ ಸಂಬಂಧ ಕರ್ನಾಟಕ ಮೋಟಾರು ವಾಹನಗಳ ತೆರಿಗೆ ನಿರ್ಧರಣೆ (ತಿದ್ದುಪಡಿ) ವಿಧೇಯಕವನ್ನು ವಿಧಾನಮಂಡಲದಲ್ಲಿ ಅಂಗೀಕರಿಸಲಾಯಿತು.
ವಿಧಾನಸಭೆಯಲ್ಲಿ ಸಾರಿಗೆ ಸಚಿವ ಬಿ.ಶ್ರೀರಾಮುಲು ಮತ್ತು ವಿಧಾನ ಪರಿಷತ್‌ನಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ವಿಧೇಯಕವನ್ನು ಮಂಡಿಸಿ ಅನುಮೋದನೆ ಪಡೆದುಕೊಂಡರು. ಧ್ವನಿಮತದ ಮೂಲಕ ಉಭಯ ಸದನಗಳು ಅಂಗೀಕರಿಸಿದವು.30 ಸಾವಿರ ರು.ಗಿಂತ ಹೆಚ್ಚು ತೆರಿಗೆ ಪಾವತಿಸುವ ಮೋಟಾರು ವಾಹನಗಳ ಮಾಲೀಕರು ನಿಗದಿತ ಅವಧಿಯಲ್ಲಿ ತೆರಿಗೆ ಪಾವತಿಸಲು ಸಾಧ್ಯವಾಗದಿದ್ದರೆ ಈ ಮೊದಲು 15 ದಿನಗಳ ಕಾಲ ಹೆಚ್ಚುವರಿ ಕಾಲಾವಕಾಶ ನೀಡಲಾಗಿತ್ತು. ಖಾಸಗಿ ವಾಹನಗಳ ಮಾಲೀಕರ ಬೇಡಿಕೆಗಳಿಗೆ ಸ್ಪಂದಿಸಿದ ಸರ್ಕಾರವು ವಿಧೇಯಕಕ್ಕೆ ತಿದ್ದುಪಡಿ ಮಾಡಿ 30 ದಿನಗಳ ಕಾಲ ಹೆಚ್ಚುವರಿ ಸಮಯ ನೀಡಿದೆ. ಕೆಲವು ವಾಹನ ಮಾಲೀಕರು ಮೂರು ತಿಂಗಳು, ಆರು ತಿಂಗಳು ಅಥವಾ ವರ್ಷಕ್ಕೆ ಸಂದರ್ಭಾನುಸಾರ ಪಾವತಿಸುತ್ತಾರೆ. ಈ ವೇಳೆ ಕಾಲಾವಕಾಶವನ್ನು ಹೆಚ್ಚುವರಿಯಾಗಿ ಪಾವತಿಸಲು ಅನುಕೂಲ ಮಾಡಿಕೊಡಲಾಗಿದೆ. ಇದಲ್ಲದೇ, ಪ್ರತಿ ತಿಂಗಳು ತೆರಿಗೆ ಪಾವತಿ ಮಾಡಲು ಸಹ ಅವಕಾಶ ನೀಡಲಾಗಿದೆ. ವಾಹನಗಳು ಅಗತ್ಯವಿದ್ದಾಗ ರಸ್ತೆಗಿಳಿಸುವ ವೇಳೆ ತೆರಿಗೆ ಪಾವತಿಸಬಹುದು. ಇದರಿಂದ ಹೆಚ್ಚು ವಾಹನಗಳನ್ನು ಹೊಂದಿರುವ ಮಾಲೀಕರಿಗೆ ಅನುಕೂಲವಾಗಲಿದ್ದು, ಆರ್ಥಿಕ ಹೊರೆ ತಪ್ಪಿಸಿದಂತಾಗುತ್ತದೆ ಎಂದು ಹೇಳಲಾಗಿದೆ.