2030ರ ಹೊತ್ತಿಗೆ ಫಿಯೆಟ್‌ನಿಂದ ಸಂಪೂರ್ಣ ಎಲೆಕ್ಟ್ರಿಕ್ ವಾಹನಗಳ ಉತ್ಪಾದನೆ
ಫಿಯೆಟ್ ಕಂಪನಿಯು 2030ರ ಹೊತ್ತಿಗೆ ಸಂಪೂರ್ಣವಾಗಿ ಎಲೆಕ್ಟ್ರಿಕ್ ವಾಹನಗಳ್ನು ಉತ್ಪಾದಿಸಲಿದೆ. ಗ್ರಾಹಕರಿಗೆ ಕೈಗೆಟುಕುವ ದರದಲ್ಲಿ ಎಲೆಕ್ಟ್ರಿಕ್ ವಾಹನಗಳನ್ನು ಉತ್ಪಾದಿಸಿ ಮಾರಾಟ ಮಾಡುವ ಮಿಷನ್ ಅನ್ನು ಕಂಪನಿ ಹೊಂದಿದೆ ಎಂದು ಮುಖ್ಯ ಕಾರ್ಯ ನಿರ್ಹವಣಾ ಅಧಿಕಾರಿ ತಿಳಿಸಿದ್ದಾರೆ.
ಆಟೋಮೊಬೈಲ್ ಕ್ಷೇತ್ರದ ಬಹುತೇಕ ಕಂಪನಿಗಳು ಬದಲಾವಣೆಯ ಪರ್ವದಲ್ಲಿವೆ. ಸಾಂಪ್ರದಾಯಿಕ ಇಂಧನ ಆಧರಿತ ವಾಹನಗಳ ಉತ್ಪಾದನೆ ಬದಲಿಗೆ ಬ್ಯಾಟರಿ ಚಾಲಿತ ವಾಹನಗಳ ಉತ್ಪಾದನೆಯ ಯೋಜನೆಗಳನ್ನು ರೂಪಿಸಿಕೊಂಡಿವೆ. ಈಗಾಗಲೇ ಹಲವು ಕಂಪನಿಗಳು ಎಲೆಕ್ಟ್ರಿಕ್ ವಾಹನಗಳನ್ನು ಉತ್ಪಾದಿಸಿ ಮಾರಾಟ ಮಾಡುತ್ತಿವೆ. ಬಹುಶಃ ಇದು ಅನಿವಾರ್ಯವೂ ಹೌದು.
ಮುಂದಿನ ಕೆಲವೇ ವರ್ಷಗಳಲ್ಲಿ ಸಾಂಪ್ರದಾಯಿಕ ಇಂಧನ ಆಧರಿತ ವಾಹನಗಳು ಕಣ್ಮರೆಯಾಗಿ, ಎಲೆಕ್ಟ್ರಿಕ್ ವಾಹನಗಳೇ ರಾರಾಜಿಸಲಿವೆ. ಆಟೋ ವಲಯದ ಪ್ರಖ್ಯಾತ ಕಂಪನಿಯಾಗಿರುವ ಫಿಯೆಟ್ 2030ರ ಹೊತ್ತಿಗೆ ಸಂಪೂರ್ಣವಾಗಿ ಎಲೆಕ್ಟ್ರಿಕ್ ವಾಹನಗಳನ್ನೇ ಉತ್ಪಾದಿಸುವ ಗುರಿಯನ್ನು ಹಾಕಿಕೊಂಡಿದೆ.
ಇದು ಜಗತ್ತಿನ ಅತ್ಯಂತ ದುಬಾರಿ ಪಾರ್ಕಿಂಗ್ ಲಾಟ್. ಬೆಲೆ ಕೇಳಿದ್ರೆ ಬೆಚ್ಚಿ ಬೀಳ್ತೀರಿ..!
ಕಳೆದ ವರ್ಷವಷ್ಟೇ ಕಂಪನಿ ಎಲೆಕ್ಟ್ರಿಕ್ 500e ಬಿಡುಗಡೆ ಮಾಡಿದ ಬೆನ್ನಲ್ಲೇ ಅಬಾರ್ತ್ ಕಾರನ್ನು ವಿದ್ಯುದ್ದೀಕರಣಗೊಳಿಸುವ ಕೆಲಸ ಪ್ರಗತಿಯಲ್ಲಿಟ್ಟಿದೆ. ಫಿಯೆಟ್ ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಕಾರುಗಳನ್ನು ಎಲೆಕ್ಟ್ರಿಕ್ ಕಾರಗಳನ್ನಾಗಿ ಪರಿವರ್ತಿಸುವ ಯೋಜನೆ ಹಾಕಿಕೊಂಡಿದೆ. ಇಟಲಿ ಮೂಲದ ಫಿಯೆಟ್ 2030ರ ಹೊತ್ತಿಗೆಸಂಪೂರ್ಣವಾಗಿ ಎಲೆಕ್ಟ್ರಿಕಲ್ ವಾಹನಗಳ ಉತ್ಪಾದನೆಯನ್ನು ಖಚಿತಪಡಿಸಿದೆ.
ಫಿಯೆಟ್ ಸಿಇಒ ಒಲಿವಿಯರ್ ಫ್ರಾಂಕೊಯಿಸ್ ಮತ್ತು ಆರ್ಟಿಟೆಕ್ಟ್ ಸ್ಟೆಫ್ಯಾನೋ ಬೊಯೆರಿ ಅವರ ನಡುವಿನ ಮಾತುಕತೆಯ ಬಳಿಕ ಕಂಪನಿಯ ಈ ಘೋಷಣೆ ಹೊರಬಿದ್ದಿದೆ. ಬೊಯೆರಿ ನೇತೃತ್ವದ ಕಂಪನಿಯು ನಗರ ಅರಣ್ಯೀಕರಣದ ಅನೇಕ ಪ್ರಾಜೆಕ್ಟ್‌ಗಳಲ್ಲಿ ತೊಡಗಿಸಿಕೊಂಡಿದೆ.
ಇಬ್ಬರ ಮಧ್ಯೆ ನಗರ ಸಾರಿಗೆ ಮತ್ತು ಸುಸ್ಥಿರ ಆರ್ಟಿಟೆಕ್ಟ್ ಬಗ್ಗೆ ಬಹುಶಃ ಹೆಚ್ಚಿನ ಮಾತುಕತೆ ನಡೆದಿರಬಹುದು ಎಂದು ಹೇಳಲಾಗುತ್ತಿದೆ. ಸಾಂಕ್ರಾಮಿಕ ಮುಂಚೆಯೇ 500ಇ ಲಾಂಚ್ ಮಾಡುವ ನಿರ್ಧಾರವನ್ನು ಕೈಗೊಳ್ಳಲಾಗಿತ್ತು ಎಂದು ಫ್ರಾಂಕೊಯಿಸ್ ತಿಳಿಸಿದ್ದಾರೆ.
ನಾವು ಐಕಾನಿಕ್ ಕಾರ್ 500 ಹೊಂದಿದ್ದೇವೆ. ಐಕಾನಿಕ್‌ಗೆ ಯಾವಾಗಲೂ ಅದರದ್ದೇ ಆದ ಕಾರಣಗಳಿರುತ್ತವೆ ಮತ್ತು ಇದಕ್ಕೆ 500ಇ ಕೂಡ ಹೊರತಲ್ಲ. 1950ರ ದಶಕದಲ್ಲಿ ಎಲ್ಲರಿಗೂ ಸಾರಿಗೆಯನ್ನು ಅದು ಮುಕ್ತಗೊಳಿಸಿತು. ಈಗಿನ ದಿನಗಳ ಹೊಸ ಪರಿಸ್ಥಿತಿಯಲ್ಲಿ ಅದು ಮತ್ತೊಂದು ಹೊಸ ಮಿಷನ್ ಅನ್ನು ಹೊಂದಿದೆ. ನಮ್ಮ ಮಿಷನ್ ಏನೆಂದರೆ, ಎಲ್ಲರಿಗೂ ಸುಸ್ಥಿರ ಸಾರಿಗೆಯನ್ನು ಕಲ್ಪಿಸುವುದೇ ಆಗಿದೆ. ಸಾಂಪ್ರದಾಯಿಕ ಎಂಜಿನ್ ಕಾರುಗಳ ಬೆಲೆಯಲ್ಲಿ ಎಲೆಕ್ಟ್ರಿಕ್ ಕಾರುಗಳನ್ನು ಮಾರುಕಟ್ಟೆಗೆ ಪರಿಚಯಿಸುವುದು ನಮ್ಮ ಕರ್ತವ್ಯ ಕೂಡ ಆಗಿದೆ. ದುಬಾರಿಯಾಗಿರುವ ಬ್ಯಾಟರಿ ದರ ಇಳಿಯುತ್ತಿದ್ದಂತೆ ನಮ್ಮ ಮಿಷನ್ ಪೂರ್ಣಗೊಳ್ಳಲಿದೆ ಎಂದು ಅವರು ತಿಳಿಸಿದ್ದಾರೆ.
ಇದೇ ವೇಳೆ, ಫಿಯೆಟ್ ಕಂಪನಿಯು ಹಂತ ಹಂತವಾಗಿ, ನಿಧಾನವಾಗಿ 2025ರಿಂದ 2030ರ ಹೊತ್ತಿಗೆ ಎಲ್ಲ ವಾಹನಗಳನ್ನು ಎಲೆಕ್ಟ್ರಿಕ್ ವಾಹನಗಳನ್ನಾಗಿಸಲಾಗುವುದು ಎಂದೂ ಅವರು ಹೇಳಿದ್ದರೆ.
ಇರಾಕ್‌ನಲ್ಲಿ ಶೋರೂಮ್ ತೆರೆದ ಟಿವಿಎಸ್ ಮೋಟಾರ್
ಟುರಿನ್‌ನಲ್ಲಿ ಈ ಹಿಂದೆ ಇದ್ದ ಲಿಂಗೊಟ್ಟೊ ಕಾರ್ಖಾನೆಯ ಚಾವಣಿಯ ಮೇಲಿರುವ ಟ್ರ್ಯಾಕ್ ಅನ್ನು ಕಂಪನಿಯು ಯುರೋಪಿನ ಅತಿದೊಡ್ಡ ನೇತಾಡುವ ಉದ್ಯಾನ(Hanging Garden)ವನಗಳಾಗಿ ಪರಿವರ್ತಿಸಲಾಗುವುದು ಮತ್ತು ಇದಕ್ಕಾಗಿ 28,000ಕ್ಕೂ ಹೆಚ್ಚು ಸಸ್ಯಗಳನ್ನು ಬೇಕಾಗಬಹುದು ಎಂದು ಫ್ರಾಂಕೋಯಿಸ್ ತಿಳಿಸಿದ್ದಾರೆ.
ಎಲ್ಲರಿಗೂ ಕೈಗೆಟುಕುವ ಎಲೆಕ್ಟ್ರಿಕ್ ಕಾರುಗಳ ಉತ್ಪಾದನೆಯ ಗುರಿಯನ್ನು ಹೊಂದಿರುವ ಫಿಯೆಟ್ ಕಂಪನಿಯ ಮೊದಲ ಎಲೆಕ್ಟ್ರಿಕ್ ಕಾರ್-500ಇ. ಈ ಕಾರನ್ನು ಎಲೆಕ್ಟ್ರಿಕ್ ವೆಹಿಕಲ್ ವಿಭಾಗದಲ್ಲಿ ನಿರ್ಮಾಣ ಮಾಡಲಾಗಿದೆ. ಇಟಲಿಯ ಟುರಿನ್‌ನಲ್ಲಿ ಈ ಕಾರಿನ ಉತ್ಪಾದನೆಯನ್ನು ಕೈಗೊಳ್ಳಲಾಗಿದೆ. ಈ 500ಇ ಕಾರಿನಲ್ಲಿ 42 ಕೆಡಬ್ಲೂಎಚ್ ಸಾಮರ್ಥ್ಯದ ಬ್ಯಾಟರಿಯನ್ನು ಅಳವಡಿಸಲಾಗಿದೆ. ಬ್ಯಾಟರಿ ಮೂಲಕ ಸಿಂಗಲ್ ಎಲೆಕ್ಟ್ರಿಕ್ ಮೋಟರ್ ಅಂದಾಜು 118 ಎಚ್‌ಪಿ ಶಕ್ತಿ ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ.
ಫಿಯೆಟ್ ಇಟಲಿ ಮೂಲದ ಜಗತ್ತಿನ ಪ್ರಮುಖ ಕಾರು ಉತ್ಪಾದನಾ ಕಂಪನಿಯಾಗಿದೆ. ಫಿಯೆಟ್ ಕಂಪನಿಯು ಇಟಲಿಯೆಲ್ಲಿ 1899ರಲ್ಲಿ ಆರಂಭವಾಯಿತು. ಸುದೀರ್ಘ ಇತಿಹಾಸವನ್ನು ಹೊಂದಿರುವ ಫಿಯೆಟ್ ಕಂಪನಿಯು ಆಟೋಮೊಬೈಲ್ ಕ್ಷೇತ್ರದಲ್ಲಿ ಬಹುದೊಡ್ಡ ಹೆಸರನ್ನು ಹೊಂದಿದೆ.
ರೆನೋ ಟ್ರೈಬರ್ ಎಷ್ಟು ಸುರಕ್ಷಿತ? ಗ್ಲೋಬಲ್ ಎನ್‌ಸಿಎಪಿ ಎಷ್ಟು ಸೇಫ್ಟಿ ರೇಟಿಂಗ್ ನೀಡಿದೆ?