*ಮರ್ಸಿಡಿಸ್ ಬೆನ್ಸ್ ಕಾರುಗಳಲ್ಲಿ ಬೆಂಕಿ ಕಾಣಿಸಿಕೊಳ್ಳುವ ಸಂಭವ*ಬಿಡಿ ಭಾಗಗಳ ಕೊರತೆಯಿಂದ ಕಾರು ಹಿಂಪಡೆಯದ ಕಂಪನಿ*ಹಲವು ವೇರಿಯಂಟ್‌ಗಳಲ್ಲಿ ಸಮಸ್ಯೆ
Auto Desk: 2022ನೇ ಸಾಲಿನ ಹಲವಾರು ಹೊಸ ಕಾರುಗಳು ಮತ್ತು ಎಲೆಕ್ಟ್ರಿಕ್ ಕಾರುಗಳನ್ನು ಬಿಡುಗಡೆಗೊಳಿಸಿದ ಮರ್ಸಿಡಿಸ್-ಬೆನ್ಸ್ (mercedes benz) ಈಗ ಹೊಸದೊಂದು ಸಮಸ್ಯೆಗೆ ಗುರಿಯಾಗಿದೆ. ಐಷಾರಾಮಿ ಕಾರು ತಯಾರಕ ಕಂಪನಿ ಮರ್ಸಿಡಿಸ್-ಬೆನ್ಸ್‌ನ ಹಲವು ಕಾರುಗಳಲ್ಲಿ ತಾಂತ್ರಿಕ (technical) ದೋಷ ಕಂಡುಬಂದಿದೆ. ಈ ದೋಷಗಳಿಂದ ಕಾರಿನಲ್ಲಿ ಬೆಂಕಿ ಕಾಣಿಸಿಕೊಳ್ಳುವ ಸಂಭವವಿದೆ ಎಂದು ಖುದ್ದು ಕಂಪನಿಯೇ ಕಾರುಮಾಲೀಕರಿಗೆ ಎಚ್ಚರಿಕೆ ಸಂದೇಶ ರವಾನಿಸಿದೆ.
ಆದರೆ, ವಾಹನಗಳಲ್ಲಿ ತಾಂತ್ರಿಕ ದೋಷಗಳು ಪತ್ತೆಯಾದರೂ ಕೂಡ ಕಾರು ತಯಾರಕರು ವಾಹನಗಳನ್ನು ಹಿಂಪಡೆಯಲು ಮುಂದಾಗಿಲ್ಲ. ಏಕೆಂದರೆ, ಸಮಸ್ಯೆಪರಿಹರಿಸಲುಅಗತ್ಯವಿರುವಭಾಗಗಳುಲಭ್ಯವಿಲ್ಲದಕಾರಣಈಸಮಸ್ಯೆಯನ್ನುಪರಿಹರಿಸಲುತಕ್ಷಣಕ್ಕೆ ಸಾಧ್ಯವಿಲ್ಲ ಎಂದು ಜರ್ಮನ್ (German)ಐಷಾರಾಮಿಕಾರುತಯಾರಕರುಹೇಳಿದ್ದಾರೆ. ಮರ್ಸಿಡಿಸ್-ಬೆನ್ಸ್‌ನ ಕೂಲೆಂಟ್ ಪಂಪ್‌ನಲ್ಲಿ (coolant pump) ಸೋರಿಕೆ ಉಂಟಾಗುವ ಸಮಸ್ಯೆಯನ್ನು ಪತ್ತೆಹಚ್ಚಲಾಗಿದೆ. ಇದು ಕಂಪೋನೆಂಟ್‌ಗಳನ್ನು ಬಿಸಿ ಮಾಡಿ, ಅದರಿಂದ ಬೆಂಕಿ ಹತ್ತಿಕೊಳ್ಳಲು ಕಾರಣವಾಗಬಹುದು ಎಂದು ಕಂಪನಿ ಹೇಳಿದೆ.
ಇದನ್ನೂ ಓದಿ: Narendra Modi New Car: ಮರ್ಸಿಡೀಸ್ ಮೇಬ್ಯಾಕ್ ಎಸ್ 650ಗೆ 12 ಕೋಟಿ ಅಲ್ಲ, ಕೇವಲ 3 ಕೋಟಿ!
ಈತಾಂತ್ರಿಕದೋಷದಿಂದಾಗಿಮರ್ಸಿಡಿಸ್ಬೆಂಜ್ಕಾರುಗಳ ವೇರಿಯಂಟ್‌ಗಳಾದ ಜಿಎಲ್‌ಇ (GLE), ಜಿಎಲ್‌ಎಸ್ (GLS), ಸಿ-ಕ್ಲಾಸ್ (C-Class), ಇ-ಕ್ಲಾಸ್ (E-Class), ಎಸ್-ಕ್ಲಾಸ್ (S-Class), ಇ-ಕ್ಲಾಸ್ ಕೂಪ್ (E-Class Coupe), ಇ-ಕ್ಲಾಸ್ ಕನ್ವರ್ಟಿಬಲ್ ( E-Class Convertible), ಜಿಎಲ್‌ಸಿ(GLC), ಸಿಎಲ್‌ಎಸ್(CLS) ಮತ್ತು ಜಿ-ಕ್ಲಾಸ್ (G-class)ಅನ್ನುಒಳಗೊಂಡಿವೆಎಂದುಕಂಪನಿ ದೃಢಪಡಿಸಿದೆ. 2017ರ ಜನವರಿಯಿಂದಮತ್ತುಅಕ್ಟೋಬರ್ 2021 ರನಡುವೆಉತ್ಪಾದಿಸಲಾಗಿರುವ ವಾಹನಗಳಲ್ಲಿ ಈ ಸಮಸ್ಯೆ ಕಾಣಿಸಿಕೊಂಡಿದೆ.
ವಾಹನತಯಾರಕರುಸಮಸ್ಯೆ ಕಾಣಿಸಿಕೊಂಡಿರುವ ವಾಹನಗಳಸಂಖ್ಯೆಯನ್ನುಬಹಿರಂಗಪಡಿಸದಿದ್ದರೂ, ಸುಮಾರು 8 ಲಕ್ಷ ವಾಹನಗಳ ಮೇಲೆ ಇದು ಪರಿಣಾಮಬೀರಿದೆ. ಅಲ್ಲದೆ, ಈ ಸಮಸ್ಯೆನಿರ್ದಿಷ್ಟವಾಹನಗಳಲ್ಲಿನತಾಂತ್ರಿಕದೋಷ ಕೇವಲಜರ್ಮನ್ಮಾರುಕಟ್ಟೆ ಸೀಮಿತವಾಗಿದೆಯೇ ಅಥವಾಜಾಗತಿಕವಾಗಿದೆಯೇ ಎಂಬುದು ದೃಢಪಟ್ಟಿಲ್ಲ.
ಇದನ್ನೂ ಓದಿ:Mercedes-AMG SL ಹೊಸ ಮಾದರಿಯೊಂದಿಗೆ ಗ್ರಾಹಕರಿಗೆ ವೈಯಕ್ತೀಕರಿಸಿದ ಲಗೇಜ್ ಬ್ಯಾಗ್ಗಳ ಕೊಡುಗೆ!
ಈ ವಾಹನಗಳಲ್ಲಿ ಕಾಣಿಸಿಕೊಂಡ ಲೋಪದೋಷಗಳನ್ನು ಸರಿಪಡಿಸುವ ಬಿಡಿ ಭಾಗಗಳನ್ನು ಪಡೆಯಲು ಕಂಪನಿ ಪ್ರಯತ್ನ ನಡೆಸುತ್ತಿದ್ದು, ಈ ವಾಹನಗಳು ಲಭ್ಯವಾಗುತ್ತಿದ್ದಂತೆಯೇ, ಎಲ್ಲಾ ಸಮಸ್ಯೆಗಳಿರುವ ವಾಹನಗಳನ್ನು ಹಿಂಪಡೆಯುವುದು, ದುರಸ್ತಿ ಕಾರ್ಯ ಕೈಗೊಳ್ಳುವುದಾಗಿ ಕಾರು ತಯಾರಕರು ತಿಳಿಸಿದ್ದಾರೆ. ಒಂದು ವರದಿಯ ಪ್ರಕಾರ, ಜನವರಿ ತಿಂಗಳ ವಾಹನಗಳಹಿಂಪಡೆಯುವಿಕೆಪ್ರಾರಂಭವಾಗುವನಿರೀಕ್ಷೆಯಿದೆ.
ಕಂಪನಿ ಈಗಾಗಲೇ ಸಮಸ್ಯೆಗಳಿದೆ ಎನ್ನಲಾದ ವಾಹನ ಮಾಲೀಕರಿಗೆ ಪತ್ರ ಬರೆದಿದ್ದು, ತಾಂತ್ರಿಕ ದೋಷದ ಬಗ್ಗೆ ಎಚ್ಚರಿಕೆ ನೀಡಿದ್ದಾರೆ. ಚಾಲಕರು ಈ ಕಾರುಗಳನ್ನು ಎಚ್ಚರಿಕೆಯಿಂದ ಚಲಾಯಿಸಬೇಕು ಮತ್ತು ಆದಷ್ಟು ಕಡಿಮೆ ಬಳಕೆ ಮಾಡಬೇಕು ಎಂದು ಮನವಿ ಮಾಡಿದ್ದಾರೆ. ಅಲ್ಲದೆ, ಕಂಪನಿಯಿಂದ ಪತ್ರ ದೊರೆತಿರುವ ವಾಹನ ಮಾಲೀಕರು ತಕ್ಷಣವೇ ಹತ್ತಿರದ ಮರ್ಸಿಡೀಸ್-ಬೆನ್ಸ್ ಡೀಲರ್‌ಗಳನ್ನು ಸಂಪರ್ಕಿಸಬೇಕು ಎಂದು ಕಂಪನಿ ತಿಳಿಸಿದೆ.ಕೋವಿಡ್-19 ಸಾಂಕ್ರಾಮಿಕದಿಂದ ಜಾಗತಿಕ ಪೂರೈಕೆ ಸರಣಿ ಅಸ್ತವ್ಯಸ್ತಗೊಂಡಿರುವ ಹಿನ್ನೆಲೆಯಲ್ಲಿ ವಾಹನಗಳನ್ನು ಹಿಂಪಡೆಯುವ ಪ್ರಕ್ರಿಯೆ ವಿಳಂಬವಾಗುತ್ತಿದೆ.
ಇದನ್ನೂ ಓದಿ:Mercedes benz;3 ಗಂಟೆಯಲ್ಲಿ ಮರ್ಸಿಡಿಸ್ ಬೆಂಜ್ ಸರ್ವೀಸ್; ಬೆಂಗಳೂರಿನಲ್ಲಿ ಅತ್ಯಾಧುನಿಕ ವರ್ಕ್‌ಶಾಪ್!
ಐಷಾರಾಮಿ ಕಾರುಗಳು ತಾಂತ್ರಿಕ ದೋಷದಿಂದ ಮಾಲೀಕರಿಗೆ ವಿತರಣೆ ಮಾಡಿದ ವಾಹನಗಳನ್ನು ಹಿಂಪಡೆಯುತ್ತಿರುವುದು ಇದೇ ಮೊದಲೇನಲ್ಲ. ವಿಶ್ವದ ಅತ್ಯಂತ ಐಷಾರಾಮಿ ಎಲೆಕ್ಟ್ರಿಕ್ ಕಾರು ಎಂದೇ ಜನಪ್ರಿಯವಾಗಿರುವ ಟೆಸ್ಲಾ ಕೂಡ ಹಲವಾರು ದೋಷಗಳಿಂದ ಸುಮಾರು 4 ಲಕ್ಷಕ್ಕೂ ಹೆಚ್ಚು ಕಾರುಗಳನ್ನು ಹಿಂಪಡೆದಿದೆ. ಅದರ ಹಲವು ದೋಷಗಳು ಹಾಗೂ ಸುರಕ್ಷತಾ ಲೋಪಗಳ ಕುರಿತು ಅಮೆರಿಕದ ರಸ್ತೆ ಸಾರಿಗೆ ಇಲಾಖೆ ತನಿಖೆ ಕೈಗೊಂಡಿದೆ. ಇತ್ತೀಚೆಗೆ ಹ್ಯುಂಡೈ ಐಯಾನಿಕ್ ಕಾರುಗಳನ್ನು ಕೂಡ ಸುರಕ್ಷತಾ ಕಾರಣಕ್ಕಾಗಿ ಹಿಂಪಡೆಯುತ್ತಿರುವುದಾಗಿ ಕಂಪನಿ ಪ್ರಕಟಣೆಯಲ್ಲಿ ತಿಳಿಸಿತ್ತು.
