Asianet Suvarna News Asianet Suvarna News

Mercedes benz;3 ಗಂಟೆಯಲ್ಲಿ ಮರ್ಸಿಡಿಸ್ ಬೆಂಜ್ ಸರ್ವೀಸ್; ಬೆಂಗಳೂರಿನಲ್ಲಿ ಅತ್ಯಾಧುನಿಕ ವರ್ಕ್‌ಶಾಪ್!

  • ಬೆಂಗಳೂರಿನಲ್ಲಿ ತನ್ನ ಅಸ್ತಿತ್ವ ಬಲಪಡಿಸಿದ ಮರ್ಸಿಡಿಸ್-ಬೆಂಜ್
  • ಅತ್ಯಾಧುನಿಕ ಹೊಸ ವರ್ಕ್‌ಶಾಪ್ ಉದ್ಘಾಟನೆ
  •  3 ಗಂಟೆಗಳ ಒಳಗೆ ಮರ್ಸಿಡಿಸ್-ಬೆಂಜ್ ಸರ್ವೀಸ್ 
Mercedes Benz India launches New Workshop in Bengaluru to strengthened its service network ckm
Author
Bengaluru, First Published Nov 12, 2021, 3:15 PM IST
  • Facebook
  • Twitter
  • Whatsapp

ಬೆಂಗಳೂರು(ನ.12):  ಐಷಾರಾಮಿ ಕಾರು ತಯಾರಿಕೆಯ ಭಾರತದ ಅತಿದೊಡ್ಡ ಕಂಪನಿಯಾಗಿರುವ ಮರ್ಸಿಡಿಸ್-ಬೆಂಜ್(Mercedes Benz), ಗ್ರಾಹಕರ ಅನೂಕಲಕ್ಕಾಗಿ ಬೆಂಗಳೂರಿನಲ್ಲಿಂದು(Bengaluru) ಹೊಸ ವರ್ಕ್ ಶಾಪ್(WorkShop) ಸೆಂಟರ್ ತೆರೆದಿದೆ. ಎಂಎಆರ್ 2020’ (MAR 2020) ಆಧರಿಸಿದ ದಕ್ಷಿಣ ಭಾರತದ ಮಾರುಕಟ್ಟೆಯಲ್ಲಿನ ಮರ್ಸಿಡಿಸ್-ಬೆಂಜ್‌ನ ಮೊದಲ ಸೌಲಭ್ಯ ಇದಾಗಿದೆ.  ತ್ರೀ ಪಾಯಿಂಟೆಡ್ ಸ್ಟಾರ್ ಹೊಸ ಬ್ರ್ಯಾಂಡ್ ಪ್ರಸ್ತುತಿಯಾಗಿದೆ. ‘ಎಂಎಆರ್ 2020’ ಬ್ರ್ಯಾಂಡ್ ಪ್ರಸ್ತುತಿಯು ಪ್ರಾದೇಶಿಕ ವಿನ್ಯಾಸ, ನವೀನ ಸಲಹಾ ಪ್ರಕ್ರಿಯೆಗಳು ಮತ್ತು ಸರ್ವೀಸ್‌ನಲ್ಲಿ ಡಿಜಿಟಲೀಕರಣದ(Digital) ಪರಿಚಯ, ‘ಅತ್ಯುತ್ತಮ ಗ್ರಾಹಕ ಅನುಭವ' ಖಾತ್ರಿಪಡಿಸುವಿಕೆ ಒಳಗೊಂಡಿದೆ.ಬೆಂಗಳೂರಿನ ಹೊಸುರು ರಸ್ತೆಯಲ್ಲಿರುವ ಅಕ್ಷಯ್ ಮೋಟಾರ್ಸ್‌ನ ಅತ್ಯಾಧುನಿಕ ವರ್ಕ್‌ಶಾಪ್ ಸೌಲಭ್ಯ ಕೇಂದ್ರ ಇದೀಗ ಗ್ರಾಹಕರ ನೆರವಿಗೆ ಸದಾ ಸಿದ್ದವಾಗಿದೆ.  

ಈ ತಿಂಗಳು ಎಂಟು ಕಾರು ಲಾಂಚ್! ಆ ಕಾರುಗಳು ಯಾವವು?

ಹಲವಾರು ಮಾನದಂಡಗಳ ಗ್ರಾಹಕ(Customers) ಸೇವಾ ಉಪಕ್ರಮಗಳನ್ನು ಪರಿಚಯಿಸುವ ವಿಷಯದಲ್ಲಿ ಮರ್ಸಿಡಿಸ್-ಬೆಂಜ್ ಇಂಡಿಯಾಕ್ಕೆ 2021 ಒಂದು ಪ್ರಮುಖ ವರ್ಷವಾಗಿದೆ. ಹೊಸ ಪೀಳಿಗೆಯ ಕಾರುಗಳಿಗೆ ವಾಹನ ಉದ್ಯಮದಲ್ಲಿಯೇ ಅತ್ಯುತ್ತಮವಾಗಿರುವ 8 ವರ್ಷಗಳ ವಾರಂಟಿಯನ್ನು ಪರಿಚಯಿಸುವುದರಿಂದ ಹಿಡಿದು ಎಂಬಿ ವ್ಯಾಲ್ಯು ಸರ್ವೀಸ್ ಪರಿಚಯದವರೆಗೆ, ನಮ್ಮ ಗ್ರಾಹಕರಿಗೆ ಕಿರಿಕಿರಿ ಮುಕ್ತ ಮಾಲೀಕತ್ವದ ಅನುಭವವನ್ನು ಒದಗಿಸಲು ನಾವು ಪ್ರಯತ್ನಿಸುತ್ತಿದ್ದೇವೆ. ಈ ಹೊಸ ಸರ್ವೀಸ್ ಸೌಲಭ್ಯದ ಸೇರ್ಪಡೆಯು ಈ ಮಾರುಕಟ್ಟೆಯಲ್ಲಿನ ಎಲ್ಲಾ ಸರ್ವೀಸ್ ಅಗತ್ಯಗಳನ್ನು ಹೊಂದುವ ಮೂಲಕ ನಮ್ಮ ಗ್ರಾಹಕರಿಗೆ ಪೂರ್ಣ ಪ್ರಮಾಣದಲ್ಲಿ ನೆರವು ನೀಡಲಿದೆ ಎಂದು ಮರ್ಸಿಡಿಸ್-ಬೆಂಜ್ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ಮಾರ್ಟಿನ್ ಷ್ವೆಂಕ್ ಹೇಳಿದರು. 

ಭಾರತದಲ್ಲಿ 2021 ಮರ್ಸಿಡಿಸ್ ಜಿಎಲ್ಎ ಎಸ್‌ಯುವಿ ಲಾಂಚ್, ಆರಂಭಿಕ ಬೆಲೆ?

ಮರ್ಸಿಡಿಸ್-ಬೆಂಜ್ ಅಕ್ಷಯ್ ಮೋಟರ್ಸ್ ವರ್ಕ್‌ಶಾಪ್ ವೈಶಿಷ್ಟ್ಯಗಳು 
•    ಅಕ್ಷಯ್ ಮೋಟರ್ಸ್‌ನ ಈ ಮೂರನೇ ವರ್ಕ್‌ಶಾಪ್, ಮರ್ಸಿಡಿಸ್-ಬೆಂಜ್‌ನ ರಿಟೇಲ್ ವಹಿವಾಟಿನಲ್ಲಿ ಹೊಸ ಬ್ರ್ಯಾಂಡ್ ಪ್ರಸ್ತುತಿ ಆಧರಿಸಿದೆ. ವಿನ್ಯಾಸ, ವಾಸ್ತುಶಿಲ್ಪ, ಗ್ರಾಹಕ ಆಧಾರಿತ ಪ್ರಕ್ರಿಯೆಗಳು ಮತ್ತು ಡಿಜಿಟಲ್‌ನ ನಾಲ್ಕು ಮುಖ್ಯ ಆಧಾರ ಸ್ತಂಭಗಳ ಮೇಲೆ ಗಮನ ಕೇಂದ್ರೀಕರಿಸಿದೆ.
•    ಉದ್ಯಮದಲ್ಲಿಯೇ ಮೊದಲ ಬಾರಿಗೆ ಪರಿಚಯಿಸಿರುವ ‘ಸರ್ವೀಸ್ ಲಾಬಿ’ಯಲ್ಲಿ ಗ್ರಾಹಕರು ತಮ್ಮ ಕಾರ್ನೊಂದಿಗೆ ವರ್ಕ್ಶಾಪ್ ಆವರಣದ ಒಳಗೆ ನೇರವಾಗಿ ಆಗಮಿಸುತ್ತಾರೆ. ನಂತರದ ಯೋಜಿತ ಹಂತಗಳಿಗಾಗಿ ಸ್ಟಾರ್ ಸಹಾಯಕರು ಕಾರ್ ಅನ್ನು ತಮ್ಮ ಸುಪರ್ದಿಗೆ ತೆಗೆದುಕೊಳ್ಳುತ್ತಾರೆ.
•    ರೂ 4.5 ಕೋಟಿ ಮೊತ್ತದ ಹೂಡಿಕೆ | 20,000 ಚದರ ಅಡಿ ಪ್ರದೇಶದಲ್ಲಿ ವಿಶಾಲವಾಗಿ ಹರಡಿದೆ | ವೃತ್ತಿಪರ ತರಬೇತಿ ಪಡೆದ 50  ಸಿಬ್ಬಂದಿ | 11 ಬೇಗಳು (ಇದರಲ್ಲಿ 6 ಪ್ರೊಡಕ್ಟಿವ್) | ಪ್ರತಿ ವರ್ಷಕ್ಕೆ 4,500ಕ್ಕೂ ಹೆಚ್ಚು ಕಾರುಗಳನ್ನು ಸರ್ವಿಸ್ ಮಾಡುವ ಸೌಲಭ್ಯ
•    ಇಕ್ಯುಸಿ ಐಷಾರಾಮಿ ಇವಿ ಸೇರಿದಂತೆ ಮರ್ಸಿಡಿಸ್-ಬೆಂಜ್ನ ಪ್ರಯಾಣಿಕ ಕಾರುಗಳ ಎಲ್ಲಾ ಮಾದರಿಗಳಿಗೆ ಈ ವರ್ಕ್ಶಾಪ್ ಸೇವೆ ಒದಗಿಸಲಿದೆ.

•    ಅಕ್ಷಯ್ ಮೋಟರ್ಸ್'ನ ಈ ಹೊಸ ವರ್ಕ್ಶಾಪ್, ರಿಟೇಲ್ನಲ್ಲಿ ಮರ್ಸಿಡಿಸ್-ಬೆಂಜ್ನ ಹೊಸ ಬ್ರ್ಯಾಂಡ್ ಪ್ರಸ್ತುತಿಯಾಗಿರುವ ‘ಎಂಎಆರ್ 2020’ ಆಧರಿಸಿದೆ
•    ‘ಎಂಎಆರ್ 2020’ರ ಪ್ರಮುಖ ಗಮನವು ವಿನ್ಯಾಸ, ವಾಸ್ತುಶಿಲ್ಪ, ಗ್ರಾಹಕ ಆಧಾರಿತ ಪ್ರಕ್ರಿಯೆಗಳು ಮತ್ತು ಡಿಜಿಟಲ್ ವರ್ಧನೆ ಒಳಗೊಂಡÀ ನಾಲ್ಕು ಸ್ತಂಭಗಳ ಮೇಲೆ ಕೇಂದ್ರೀಕೃತವಾಗಿದೆ
•    ಉದ್ಯಮದಲ್ಲಿಯೇ ಮೊದಲ ಬಾರಿಗೆ ಪರಿಚಯಿಸಿರುವ ‘ಸರ್ವೀಸ್ ಲಾಬಿ’ಯಲ್ಲಿ ಗ್ರಾಹಕರು ತಮ್ಮ ಕಾರ್ನೊಂದಿಗೆ ವರ್ಕ್ಶಾಪ್ ಆವರಣದ ಒಳಗೆ ನೇರವಾಗಿ ಆಗಮಿಸುತ್ತಾರೆ. ನಂತರದ ಯೋಜಿತ ಹಂತಗಳಿಗಾಗಿ ಸ್ಟಾರ್ ಸಹಾಯಕರು ಕಾರ್ ಅನ್ನು ತಮ್ಮ ಸುಪರ್ದಿಗೆ ತೆಗೆದುಕೊಳ್ಳುತ್ತಾರೆ.
•    ರೂ 4.5 ಕೋಟಿ ಮೊತ್ತದ ಹೂಡಿಕೆ | 20,000 ಚದರ ಅಡಿ ಪ್ರದೇಶದಲ್ಲಿ ವಿಶಾಲವಾಗಿ ಹರಡಿದೆ | ವೃತ್ತಿಪರ ತರಬೇತಿ ಪಡೆದ 50  ಸಿಬ್ಬಂದಿ | 11 ಬೇಗಳು (ಇದರಲ್ಲಿ 6 ಪ್ರೊಡಕ್ಟಿವ್) | ಪ್ರತಿ ವರ್ಷಕ್ಕೆ 4,500ಕ್ಕೂ ಹೆಚ್ಚು ಕಾರುಗಳನ್ನು ಸರ್ವಿಸ್ ಮಾಡುವ ಸೌಲಭ್ಯ
•    ಇಕ್ಯುಸಿ ಐಷಾರಾಮಿ ಇವಿ ಸೇರಿದಂತೆ ಮರ್ಸಿಡಿಸ್-ಬೆಂಜ್ನ ಪ್ರಯಾಣಿಕ ಕಾರುಗಳ ಎಲ್ಲಾ ಮಾದರಿಗಳಿಗೆ ಈ ವರ್ಕ್ಶಾಪ್ ಸೇವೆ ಒದಗಿಸಲಿದೆ.
•    ಪ್ರೀಮಿಯಂ ಎಕ್ಸ್ಪ್ರೆಸ್ ಪ್ರೈಮ್ 2.0: ಅಕ್ಷಯ ಮೋಟರ್ಸ್ನ ಈ ವರ್ಕ್ಶಾಪ್ನಲ್ಲಿ ಮರ್ಸಿಡಿಸ್-ಬೆಂಜ್ ಪಿಇಪಿ ಸೇವೆಯನ್ನು ಮರುಪ್ರಾರಂಭಿಸುತ್ತಿದೆ. ಇದರೊಂದಿಗೆ, ಗ್ರಾಹಕರು ತಮ್ಮ ಕಾರುಗಳಿಗೆ 3 ಗಂಟೆಗಳಲ್ಲಿ ಸರ್ವಿಸ್ ಪಡೆಯಬಹುದು*
•    ಇದು ಬೆಂಗಳೂರಿನಲ್ಲಿ ಮರ್ಸಿಡಿಸ್-ಬೆಂಜ್ನ 4ನೇ  ವರ್ಕ್ಶಾಪ್ ಆಗಿದೆ. ಮರ್ಸಿಡಿಸ್-ಬೆಂಜ್ ಈಗ ಭಾರತದಾದ್ಯಂತ 47 ನಗರಗಳಲ್ಲಿ 100 ಗ್ರಾಹಕ-ಟಚ್ ಪಾಯಿಂಟ್ಗಳನ್ನು ಹೊಂದಿದೆ

ಮರ್ಸಿಡಿಸ್-ಬೆಂಜ್ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ಮಾರ್ಟಿನ್ ಷ್ವೆಂಕ್, ಮರ್ಸಿಡಿಸ್-ಬೆಂಜ್ ಇಂಡಿಯಾದ ಗ್ರಾಹಕ ಸೇವೆಗಳು ಮತ್ತು ಕಾರ್ಪೊರೇಟ್ ವ್ಯವಹಾರಗಳ ಉಪಾಧ್ಯಕ್ಷ ಶೇಖರ್ ಭಿಡೆ, ಅಕ್ಷಯ ಮೋಟರ್ಸ್ನ ವ್ಯವಸ್ಥಾಪಕ ನಿರ್ದೇಶಕ ಡಾ. ಎಂ. ಪಿ. ಶ್ಯಾಮ್ ಶೆಟ್ಟಿ ಅವರ ಉಪಸ್ಥಿತಿಯಲ್ಲಿ ಬೆಂಗಳೂರಿನಲ್ಲಿ ಅಕ್ಷಯ ಮೋಟರ್ಸ್ನ ಈ ಹೊಸ ಸರ್ವೀಸ್ ಕೇಂದ್ರವನ್ನು  ಉದ್ಘಾಟಿಸಲಾಯಿತು.  
 

Follow Us:
Download App:
  • android
  • ios