ಜಾಹೀರಾತಿನಲ್ಲಿ ಹೇಳಿದ ಮೈಲೇಜ್ ಸಿಗುತ್ತಿಲ್ಲ, ಕೋರ್ಟ್ ಮೆಟ್ಟಿಲೇರಿದ ಗ್ರಾಹಕನಿಗೆ 3 ಲಕ್ಷ ಪರಿಹಾರ!
ಕಾರು ಖರೀದಿ ಉತ್ತೇಜಿಸಲು ಕಂಪನಿಗಳು ನಾನಾ ರೀತಿಯ ಜಾಹೀರಾತು ನೀಡುತ್ತದೆ. ಹೀಗೆ ಫೋರ್ಡ್ ಕಂಪನಿ ಜಾಹೀರಾತಿನಲ್ಲಿ ಒಂದು ಲೀಟರ್ ಇಂಧನಕ್ಕೆ 32 ಕಿಲೋಮೀಟರ್ ಮೈಲೇಜ್ ನೀಡಲಿದೆ ಎಂದು ಗ್ರಾಹಕರನ್ನು ಸೆಳೆದಿತ್ತು. ಆದರೆ ಸುಳ್ಳು ಜಾಹೀರಾತು ನೀಡಿ ಗ್ರಾಹಕರನ್ನು ಮೋಸ ಮಾಡಿದ್ದಾರೆ ಎಂದು ಕೋರ್ಟ್ ಮೆಟ್ಟಿಲೇರಿದ ಗ್ರಾಹಕನಿಗೆ 3 ಲಕ್ಷ ರೂಪಾಯಿ ಪರಿಹಾರ ನೀಡುವಂತೆ ಫೋರ್ಡ್ ಕಂಪನಿಗೆ ಕೋರ್ಟ್ ಸೂಚಿಸಿದೆ.
ತಿರುವನಂತಪುರಂ(ಡಿ.02): ಗ್ರಾಹಕರನ್ನು ಸೆಳೆಯಲು ಕಂಪನಿಗಳು ತಮ್ಮ ತಮ್ಮ ಉತ್ಪನ್ನಗಳ ಜಾಹೀರಾತನ್ನು ಅತ್ಯಂತ ಆಕರ್ಷಕವಾಗಿ ನೀಡುತ್ತದೆ. ಹಲವು ಉತ್ಪನ್ನಗಳು ಹಾಗೂ ಜಾಹೀರಾತಿಗೆ ಸಂಬಂಧವೇ ಇರುವುದಿಲ್ಲ. ಗ್ರಾಹಕರನ್ನು ಸೆಳೆಯಲು ಈ ರೀತಿಯ ಕಸರತ್ತು ಮಾಡಿರುತ್ತಾರೆ. ಹೀಗೆ ಫೋರ್ಡ್ ಆಟೋಮೊಬೈಲ್ ಕಂಪನಿ ಜಾಹೀರಾತಿನಲ್ಲಿ ಒಂದು ಲೀಟರ್ ಇಂಧನದಲ್ಲಿ 32 ಕಿಲೋಮೀಟರ್ ಮೈಲೇಜ್ ನೀಡಲಿದೆ ಎಂದಿತ್ತು. ಜಾಹೀರಾತು ನೋಡಿ ಕಾರು ಖರೀದಿಸಿದ ಗ್ರಾಹಕನಿಗೆ ತೀವ್ರ ನಿರಾಸೆಯಾಗಿದೆ. ಕಾರಣ ಕಾರು ಒಂದು ಲೀಟರ್ ಇಂಧನದಲ್ಲಿ ಕೇವಲ 19.6 ಕಿಲೋಮೀಟರ್ ಮಾತ್ರ ಮೈಲೇಜ್ ನೀಡಿದೆ. ಇದರಿಂದ ಆಕ್ರೋಶಗೊಂಡ ಗ್ರಾಹಕರ ನೇರವಾಗಿ ಗ್ರಾಹಕರ ನ್ಯಾಯಾಲಯದ ಮೆಟ್ಟಿಲೇರಿದ್ದಾನೆ. ಈ ಕುರಿತು ವಿಚಾರಣೆ ನಡೆಸಿದ ನ್ಯಾಯಾಲಯ, ಗ್ರಾಹಕರನಿಗೆ 3 ಲಕ್ಷ ರೂಪಾಯಿ ಪರಿಹಾರ ನೀಡಲು ಆದೇಶಿಸಿದೆ. ಈ ಘಟನೆ ನಡೆದಿರುವುದು ಕೇರಳದಲ್ಲಿ.
ಕೈರಳಿ ಫೋರ್ಡ್ ಡೀಲರ್ ಬಳಿಯಿಂದ ಗ್ರಾಹಕನೋರ್ವ ಫೋರ್ಡ್ ಕಾರು ಖರೀದಿಸಿದ್ದ. ಅತ್ಯಧಿಕ ಮೈಲೇಜ್ ಕಾರು ಅನ್ನೋ ಜಾಹೀರಾತು ನೋಡಿ ಕಾರು ಖರೀದಿಸಿದ ಗ್ರಾಹಕನಿಗೆ ನಿಗದಿತ ಮೈಲೇಜ್ ಸಿಗಲಿಲ್ಲ. ಈ ಕುರಿತು ಕೈರಳಿ ಫೋರ್ಡ್ ಡೀಲರ್ ಬಳಿಕ ಪರಿಶೀಲಿಸಲು ಹೇಳಿದ್ದಾರೆ. ಮೆಕಾನಿಕ್ ಪರಿಶೀಲಿಸಿ ಗರಿಷ್ಠ ಮೈಲೇಜ್ ನೀಡುತ್ತಿದೆ ಎಂದಿದ್ದಾರೆ. ಆದರೆ ಕಂಪನಿ 32 ಕಿಲೋಮೀಟರ್ ಮೈಲೇಜ್ ನೀಡುತ್ತದೆ ಎಂದು, 19 ಮೈಲೇಜ್ ನೀಡುತ್ತಿತ್ತು.
ನ್ಯಾನೋ ಕಾರಿನ ಪಾರ್ಕಿಂಗ್‌ಗೆ 91,000 ರೂ ದಂಡ; ಕೋರ್ಟ್ ಆದೇಶಕ್ಕೆ ಕಂಗಾಲಾದ ಒಡತಿ!
ಈ ಕುರಿತು ಫೋರ್ಡ್ ಕಂಪನಿಗೆ ದೂರು ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಇದರಿಂದ ಆಕ್ರೋಶಗೊಂಡ ಗ್ರಾಹಕ ನೇರವಾಗಿ ಕೇರಳ ಗ್ರಾಹಕರ ನ್ಯಾಯಾಲಕಕ್ಕೆ ದೂರು ನೀಡಿದ್ದಾನೆ. ಸುದೀರ್ಘ ವಿಚಾರಣೆ ನಡೆಸಿದ ಕೇರಳ ಗ್ರಾಹಕರ ನ್ಯಾಯಾಲಯ ಮಹತ್ವದ ಆದೇಶ ನೀಡಿತು. ಸುಳ್ಳು ಜಾಹೀರಾತು ನೀಡಿ ಗ್ರಾಹಕರನ್ನು ತಪ್ಪು ದಾರಿಗೆ ಎಳೆದ ಕಾರಣಕ್ಕೆ 1,50,000 ರೂಪಾಯಿ ಪರಿಹಾರ, ಗ್ರಾಹಕನಿಗೆ ಆದ ನಷ್ಟಕ್ಕೆ 1,50,000 ರೂಪಾಯಿ ಹಾಗೂ ಕೋರ್ಟ್ ದಾವೆ ಹೂಡಿದ ಖರ್ಚು ವೆಚ್ಚ 10,000 ರೂಪಾಯಿ ನೀಡಲು ಕೋರ್ಟ್ ಆದೇಶಿಸಿದೆ. ಗ್ರಾಹಕ ಒಟ್ಟು 3.10 ಲಕ್ಷ ರೂಪಾಯಿ ಪರಿಹಾರ ಮೊತ್ತ ಪಡೆದಿದ್ದಾನೆ.
ಸೋಫಾ ಮಾರಾಟದಲ್ಲಿ ಮೋಸ: 34,000ರು. ಪರಿಹಾರಕ್ಕೆ ಸೂಚನೆ
ಮೈಸೂರು ನಗರದ ಕಾಳಿದಾಸ ರಸ್ತೆಯ ಎಎನ್‌ಸಿಸಿ ಡೆಕೋರ್ ಫರ್ನಿಚರ್ ಶಾಪ್ ಕಳಪೆ ಗುಣಮಟ್ಟದ ಸೋಫಾಸೆಟ್ ನೀಡಿದ ಕಾರಣಕ್ಕೆ ಜಿಲ್ಲಾ ಗ್ರಾಹಕರ ನ್ಯಾಯಾಲಯವು 34 ಸಾವಿರ ಪರಿಹಾರ ನೀಡುವಂತೆ ಆದೇಶಿಸಿದೆ. ಸಾಫ್ಟ್‌ವೇರ್ ಎಂಜಿನಿಯರ್ ಎಚ್.ಡಿ. ಉಮಾಶಂಕರ್ ಅವರು ಸೋಫಾಸೆಟ್ ಖರೀದಿಸಿದ್ದರು. ಈ ವೇಳೆ ಉತ್ತಮ ಗುಣಮಟ್ಟದ ಸೋಫಾಸೆಟ್ ಎಂಬುದಾಗಿ ಭರವಸೆ ನೀಡಿ, ಅಸಲಿ ಬಿಲ್ ಮತ್ತು ವಾರೆಂಟಿ ಕಾರ್ಡ್ ನೀಡಿರಲಿಲ್ಲ. ಈ ಸಂಬಂಧ ಅಂಗಡಿಯವರು ಸರಿಯಾಗಿ ಸ್ಪಂದಿಸಿರಲಿಲ್ಲ. ಈ ಅನ್ಯಾಯದ ವಿರುದ್ಧ ನ್ಯಾಯಕ್ಕಾಗಿ ಮತ್ತು ನಷ್ಟಕ್ಕೋಸ್ಕರ ದೂರುದಾರ ಉಮಾಶಂಕರ್ ಅವರು ದಾವೆ ಹೂಡಿದ್ದರು. ನ್ಯಾಯವಾದಿ ವಿಶ್ವನಾಥ್ ದೇವಶ್ಯ ಅವರ ಮೂಲಕ ಜಿಲ್ಲಾ ಗ್ರಾಹಕರ ನ್ಯಾಯಾಲಯಕ್ಕೆ ದೂರು ಸಲ್ಲಿಸಿದ್ದರು. ವಿಚಾರಣೆ ಬಳಿಕ ನ್ಯಾಯಾಲಯ ಎದುರುದಾರರಿಗೆ 34 ಸಾವಿರ ಪರಿಹಾರ ಮತ್ತು ನ್ಯಾಯಾಲಯ ವೆಚ್ಚ 20 ಸಾವಿರವನ್ನು ಒಂದು ತಿಂಗಳ ಒಳಗಾಗಿ ನೀಡಬೇಕೆಂದು ಆದೇಶಿಸಿದ್ದಾರೆ.