ಮರ್ಸಿಡೀಸ್ ಬೆಂಝ್ ಕಾರಿಗೆ ಭಾರತದಲ್ಲಿ ವಿಶೇಷ ಸ್ಥಾನವಿದೆ. ಐಷಾರಾಮಿ, ಆರಾಮದಾಯ ಕಾರು ಖರೀದಿಸುವವರ ಮೊದಲ ಆಯ್ಕೆ ಮರ್ಸಿಡೀಸ್ ಬೆಂಝ್. ಭಾರತದ ಅತೀ ದೊಡ್ಡ ಲಕ್ಸುರಿ ಕಾರು ಉತ್ಪಾದಕ ಕಂಪನಿ ಮರ್ಸಿಡೀಸ್ ಬೆಂಝ್ ಪ್ರತಿ ಭಾರಿ ಗ್ರಾಹಕರಿಗೆ ವಿಶೇಷ ಸೌಲಭ್ಯಗಳನ್ನು ಒದಗಿಸಿದೆ. ಈ ಮೂಲಕ ಗ್ರಾಹಕರಿಗೆ ತಮ್ಮ ಕನಸಿನ ಕಾರು ಖರೀದಿಯನ್ನು ಸುಲಭ ಹಾಗೂ ಸರಳೀಕೃತಗೊಳಿಸಿದೆ.  ಕೊರೋನಾ ವೈರಸ್ ಸಂದರ್ಭದಲ್ಲಿ ಆನ್‌ಲೈನ್ ಫ್ಲಾಟ್‌ಫಾರ್ಮ್ ಮೂಲಕ ಕಾರು ಖರೀದಿಗೆ ಮರ್ಸಿಡೀಸ್ ಆದ್ಯತೆ ನೀಡಿದೆ. ಇನ್ನು ಅನ್ಲಾಕ್ ವೇಳೆ ಗ್ರಾಹಕರು ಸುರಕ್ಷತೆಗೆ ಮೊದಲ ಆದ್ಯತೆ ನೀಡಿದೆ.  ಇದೀಗ ಹಬ್ಬದ ಪ್ರಯುಕ್ತ ಗ್ರಾಹಕರಿಗೆ ಮರ್ಸಿಡೀಸ್ ಬೆಂಝ್ ಮತ್ತೊಂದು ಕೊಡುಗೆ ನೀಡುತ್ತಿದೆ. ಇದೀಗ ಮರ್ಸಿಡೀಸ್ ಬೆಂಝ್ ಕಾರು ಖರೀದಿಯನ್ನು ಮತ್ತಷ್ಟು ಗ್ರಾಹಕರ ಸನಿಹಕ್ಕೆ ತಂದಿದೆ

ಭಾರತದಲ್ಲಿ ಬೆಂಜ್ ತಯಾರಿಕೆ

ಕೊರೋನಾ ವೈರಸ್ ವಕ್ಕರಿಸಿದ ಬಳಿಕ ಬಹುತೇಕರು ಮನೆಯಿಂದ ಕೆಲಸ ಮಾಡುತ್ತಿದ್ದಾರೆ. ಇನ್ನು ಕಚೇರಿಗೆ ತೆರಳುತ್ತಿದ್ದರೂ ನಾವು ಹೆಚ್ಚಿನ ಸಮಯ ಮನೆ ಹಾಗೂ ಕಾರಿನಲ್ಲಿ ಕಳೆಯುತ್ತೇವೆ. ಪ್ರಸ್ತುತ ಸಂದರ್ಭದಲ್ಲಿ ನಮ್ಮ ಖಾಸಗಿ ಕಾರಿನಲ್ಲಿ ತೆರಳುವುದು, ಪ್ರಯಾಣ ಹೆಚ್ಚು ಈ ಹಬ್ಬದ ಋತುವಿನಲ್ಲಿ ಹೊಸ ಕಾರು ಖರೀದಿಸುವ ಪ್ಲಾನ್ ನಿಮ್ಮದಾಗಿದ್ದರೆ, ಬೇರೆ ಆಲೋಚನೆ ಮಾಡುವ ಅಗತ್ಯವಿಲ್ಲ. ಮರ್ಸಿಡೀಸ್ ಬೆಂಝ್ ನಿಮ್ಮ ಎಲ್ಲಾ ಬೇಡಿಕೆಗೆ ತಕ್ಕಂತೆ ಹಾಗೂ ಅತ್ಯಂತ ಸುರಕ್ಷಿತ ಕಾರನ್ನು ಒದಗಿಸುತ್ತಿದೆ. ಬೆಂಝ್ ಕಾರಿನಲ್ಲಿನ ತಂತ್ರಜ್ಞಾನಕ್ಕೆ ಸರಿಸಾಟಿ ಇಲ್ಲ.
 

ಟೆಕ್ನಾಲಜಿಯಲ್ಲಿ ಮರ್ಸಿಡಿಸ್ ಬೆಂಝ್ ಕಾರು ಅಗ್ರಸ್ಥಾನ ಪಡೆದುಕೊಂಡಿದೆ. EQ ಬೂಸ್ಟ್, ವೈಯರ್‌ಲೆಸ್ ಚಾರ್ಜಿಂಗ್, ಪಾರ್ಕಿಂಗ್ ಆಸಿಸ್ಟ್ ಹಾಗೂ 360 ಡಿಗ್ರಿ ಕ್ಯಾಮಾರ, NTG 6 MBUX ಹಾಗೂ ವಾಯ್ಸ್ ಅಸಿಸ್ಟ್ ಮತ್ತು ಹೊಚ್ಚ ಹೊಸ ಮರ್ಸಿಡೀಸ್ ಬೆಂಝ್ ಮಿ ಆ್ಯಪ್ ಫೀಚರ್ಸ್ ಹೊಂದಿದೆ.
ಮರ್ಸಿಡೀಸ್ ಬೆಂಝ್ ಗರಿಷ್ಠ ಸುರಕ್ಷತೆ ನೀಡಲಿದೆ. ಏರ್‌ಬ್ಯಾಗ್, ಆಫ್ ರೋಡ್ ABS(ಆ್ಯಂಟಿ ಲಾಕ್ ಬ್ರೇಕಿಂಗ್ ಸಿಸ್ಟಮ್),ಏರ್‌ಮ್ಯಾಟಿಕ್ ಸಸ್ಪೆನ್ಶನ್ ಹಾಗೂ ADS+ ಹೊಂದಿದೆ.

ಆಕರ್ಷಕ ಇಂಟೀರಿಯರ್ ಜೊತೆಗೆ ಐಷಾರಾಮಿ ಫೀಟರ್ಸ್ ಕೂಡ ಮರ್ಸಿಡೀಸ್ ಬೆಂಝ್ ನೀಡಲಿದೆ.  ಅತ್ಯಾಧುನಿಕ ಸರೌಂಡ್ ಸೌಂಡ್ ಸಿಸ್ಟಮ್, ಕಾರಿನ ಮುಂಭಾಗ ಮತ್ತು ಹಿಂಭಾಗದಲ್ಲಿ USB ಚಾರ್ಜಿಂಗ್ ಪೋರ್ಟ್‌ಗಳು ಮತ್ತು ಒನ್ ಟಚ್ ಫೋಲ್ಡಿಂಗ್ ಸೀಟ್ ಸೇರಿದಂತೆ ಕಾರಿನ ಒಳಾಂಗಣವನ್ನು ಆರಾಮದಾಯಕವಾಗಿಸಲು ಅತ್ಯುತ್ತಮ ಐಷಾರಾಮಿ ವೈಶಿಷ್ಟ್ಯಗಳನ್ನು ಬೆಂಝ್ ನೀಡುತ್ತಿದೆ.

ಉತ್ಕೃಷ್ಠ ಫೀಚರ್ಸ್ ಜೊತೆಗೆ ಮರ್ಸಿಡೀಸ್ ಬೆಂಝ್ ಗ್ರಾಹಕರಿಗೆ ಅಷ್ಟೇ ಉತ್ತಮ ಸೇವೆಯನ್ನು ನೀಡುತ್ತಿದೆ. ಮರ್ಸಿಡೀಸ್ ಬೆಂಝ್ ಕಾರು ಖರೀದಿಯ ಬಳಿಕವೂ ಗ್ರಾಹಕರ ಜೊತೆ ನಿಕಟ ಸಂಪರ್ಕದಲ್ಲಿರುವ ಬೆಂಝ್, ಪ್ರಯಾಣದ ವೇಳೆ ಕಾರು ಕೆಟ್ಟು ನಿಂತರೆ  ರೋಡ್ ಸೈಡ್ ಅಸ್ಸಿಸ್ಟೆನ್ಸ್, ದಿನದ 24 ಗಂಟೆಯೂ ಲಭ್ಯವಿರುವ SOS ತುರ್ತು ಬಟನ್ ಸೇವೆ ಕೂಡ ಲಭ್ಯವಿದೆ.

ಕಾರು ಖರೀದಿಯ ಅಂತಿಮ ಹಂತದಲ್ಲಿ ಗ್ರಾಹಕರಿಗೆ ಪ್ರಮುಖವಾಗಿ ಬೇಕಾಗಿರುವುದು ಹಣಕಾಸು ಸೌಲಭ್ಯ. ಹಲವು ಬ್ಯಾಂಕ್‌ಗಳು ಗ್ರಾಹಕರಿಗೆ ಸಾಲ ಸೌಲಭ್ಯ ನೀಡಲಿದೆ. ಈ ಮೂಲಕ ಕನಸಿನ ಕಾರನ್ನು ತಮ್ಮದಾಗಿಸುವ ಅವಕಾಶವನ್ನು ನೀಡಿದೆ. ಆದರೆ ಮರ್ಸಿಡೀಸ್ ಬೆಂಝ್ ತನ್ನ ಗ್ರಾಹಕರಿಗೆ ಪ್ರಿ ಅಪ್ರೂವ್ಡ್ ಸಾಲ ಸೌಲಭ್ಯ ನೀಡುತ್ತಿದೆ. ಇದು ಮರ್ಸಿಡೀಸ್ ಬೆಂಝ್ ತನ್ನ ಗ್ರಾಹಕರ ಕಾರು ಖರೀದಿಯನ್ನು ಮತ್ತಷ್ಟು ಸುಲಭವಾಗಿಸಿದೆ.

  • ಹಣಕಾಸು ಸೌಲಭ್ಯದ ಮೂಲಕ ಮರ್ಸಿಡೀಸ್ ಬೆಂಝ್ ಕಾರು ಖರೀದಿಸಲು ಇಚ್ಚಿಸುವ ಗ್ರಾಹಕರು ಅನುಸರಿಸಬೇಕಾದ ಹಂತಗಳು ಸರಳವಾಗಿದೆ.
  • ಮರ್ಸಿಡೀಸ್ ಬೆಂಝ್ ಕಾರು ಖರೀದಿದಾರರು ಫಾರ್ಮ್ ಭರ್ತಿ ಮಾಡಬೇಕು. ಜೊತೆ OTP(ಒನ್ ಟೈಮ್ ಪಾಸ್‌ವರ್ಡ್) ದಾಖಲಿಸಿ ಸಲ್ಲಿಕೆ ಮಾಡಬೇಕು.
  • ಗ್ರಾಹಕರು ಭರ್ತಿ ಮಾಡಿದ ಅರ್ಜಿಯಲ್ಲಿನ ಮಾಹಿತಿಯನ್ನು ಕ್ರೆಡಿಟ್ ಬ್ಯೂರೋ ಆಧಾರದಲ್ಲಿ ಪರೀಶಿಲಿಸಲಾಗುತ್ತದೆ.
  • ನೀಡಿದ ದಾಖಲೆ ಹಾಗೂ ಅರ್ಜಿ ವಿವರದಲ್ಲಿನ ಮಾಹಿತಿಗಳ ಆಧಾರ ಸೂಕ್ತವಾಗಿದ್ದಲ್ಲಿ ಪೂರ್ವ-ಅನುಮೋದಿತ ಸಾಲ ಪ್ರಸ್ತಾಪ ಪಡೆಯಲು ಅರ್ಹರು ಎಂದು ಪರಿಗಣಿಸಿ ಪ್ರಿ ಅಪ್ರೋವ್ಡ್ ಲೋನ್ ನೀಡಲಾಗುತ್ತದೆ.
  • ಗ್ರಾಹಕನಿಗೆ ಸಾಲ ಸೌಲಭ್ಯದ ಎಲ್ಲಾ ನಿಯಮಗಳ ಕುರಿತ ಅರಿವು ಅಥವಾ ತೃಪ್ತಿ ಇದ್ದಲ್ಲಿ, ಪೂರ್ವ ಅನುಮೋದಿತ ಸಾಲ ಸುಲಭವಾಗಿ ಸಿಗಲಿದೆ.

ಈ ಅರ್ಜಿ ಭರ್ತಿ ಮಾಡಲು 30 ನಿಮಿಷಗಳು ಸಾಕು. ಇನ್ನು ಎಲ್ಲಾ ಮಾಹಿತಿಗಳನ್ನು ಸರಿಯಾಗಿ ದಾಖಲೆ ಸಲ್ಲಿಕೆ ಮಾಡಿದ ಅರ್ಜಿ ಪರಿಶೀಲಿಸಿ ಲೋನ್‌ಗೆ ಅನುಮೋದನೆ ಸಿಗಲು ಕೇವಲ 30 ನಿಮಿಷ ಸಾಕು. ಖರೀದಿದಾರರಿಗೆ ಒಟಿಪಿ ಪಾಸ್‌ವರ್ಡ್ ಲಭ್ಯವಾಗಲಿದೆ. ಈ ಪ್ರಕ್ರಿಯೆ ವೇಳೆ ಮತ್ತೊಂದು ಪ್ರಮುಖ ಅಂಶ ಗಮನಿಸಬೇಕು. ಮರ್ಸಿಡಿಸ್ ಬೆಂಜ್ ಕಾರು ಖರೀದಿಸಲು ಪೂರ್ವ ಅನುಮೋದಿತ ಸಾಲವನ್ನು ಪರಿಶೀಲಿಸುವುದು ನಿಮ್ಮ ವೈಯುಕ್ತಿಕ ಕ್ರೆಡಿಟ್ ಸ್ಕೋರ್ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ಆದ್ದರಿಂದ ನಿಮ್ಮ ಕ್ರೆಡಿಟ್  ಹಿಸ್ಟರಿಗೆ ಯಾವುದೇ  ಸಮಸ್ಯೆ ಇಲ್ಲದೆ ಮುಂದುವರಿಯಬಹುದು.

 

ಪ್ರಿ ಅಪ್ರೂವಲ್ ಪ್ರಯೋಜನಗಳು:
•    ಕನಸಿನ ಮರ್ಸಿಡೀಸ್ ಬೆಂಝ್ ಕಾರು ಹುಡುಕಾಟದಲ್ಲಿ ಯಾವುದೇ ಅಸ್ಪಷ್ಟತೆ ಇರುವುದಿಲ್ಲ
•    ಪೂರ್ವ ಅನುಮೋದಿತ ಪ್ರಸ್ತಾವ ಪಡೆದ ಕಾರು ಖರೀದಿಸುವ ಗ್ರಾಹಕ ವಿಶ್ವಾಸದಿಂದ ಖರೀದಿ ಮಾಡಬಹುದು
•    ಗ್ರಾಹಕನಿಗೆ ಮೊದಲೇ ಪಡೆದಿರುವ ನೀಡಿರುವ ಕಾರಣ ಖರೀದಿಯಲ್ಲಿ ಇತರ ಆಫರ್ ಲಭ್ಯವಿರುವುದಿಲ್ಲ
•    ಪರಿಶೀಲನೆ, ಮಾಹಿತಿ ಪಡೆಯುವ ಗ್ರಾಹಕನು ಖರೀದಿದಾರನಾಗಿ ಪರಿವರ್ತನೆ
ಅತೀ ವೇಗದ ಹಾಗೂ ಸರಳ ಸೂಪರ್‌ಸಾನಿಕ್ UX  ರೀತಿಯ ಅತ್ಯುತ್ತಮ ಗ್ರಾಹಕ ಸೇವೆ ಖರೀದಿದಾರರಿಗೆ ಸಿಗಲಿದೆ. ಈ ಮೂಲಕ ಯಾವುದೇ ಅಡಚಣೆ ಇಲ್ಲದ ಹಣಕಾಸು ಸೌಲಭ್ಯ, ಸುಲಭ ಹಾಗೂ ಸರಳೀಕೃತ ಖರೀದಿ ವಿಧಾನಗಳಿಂದ ಆರಾಮದಾಯಕ ಕನಸಿನ ಕಾರು ನಿಮ್ಮ ಮನೆ ಸೇರಿಕೊಳ್ಳಲಿದೆ

ಇನ್ನಷ್ಟು ತಿಳಿಯಲು ಇಲ್ಲಿ ಕ್ಲಿಕ್ ಮಾಡಿ: