Asianet Suvarna News Asianet Suvarna News

ಮೇಡ್ ಇನ್ ಇಂಡಿಯಾ ಮರ್ಸಿಡೀಸ್ ಬೆಂಝ್ AMG GLC 43 4MATIC ಕೂಪ್ ಬಿಡುಗಡೆ!

ಪ್ರಧಾನಿ ನರೇಂದ್ರ ಮೋದಿಯ ಆತ್ಮನಿರ್ಭರ್ ಭಾರತ್ ಪರಿಕಲ್ಪನೆಯಿಂದ ಇದೀಗ ಬಹುತೇಕ ಕಂಪನಿಗಳು ಭಾರತದಲ್ಲಿ ಉತ್ಪಾದನೆ ಆರಂಭಿಸಿದೆ. ಇದೀಗ ವಿಶ್ವದ ಐಷಾರಾಮಿ ಹಾಗೂ ದುಬಾರಿ ಕಾರು ತಯಾರಕ ಮರ್ಸಿಡೀಸ್ ಬೆಂಝ್ ಕಂಪನಿ, ಭಾರತದಲ್ಲಿ ನಿರ್ಮಿಸಿದ ಮರ್ಸಿಡೀಸ್ ಬೆಂಝ್ AMG GLC 43 4MATIC ಬಿಡುಗಡೆ ಮಾಡಿದೆ.

Made in India Mercedes Benz AMG GLC 43 4MATIC rolls out from pune Unit ckm
Author
Bengaluru, First Published Nov 3, 2020, 3:22 PM IST

ಪುಣೆ(ನ.03): ವಿಶ್ವದ ಲಕ್ಸುರಿ ಹಾಗೂ ದುಬಾರಿ ಕಾರು ತಯಾರಕ ಜರ್ಮನ್ ಮೂಲದ ಮರ್ಸೀಡಿಸ್ ಬೆಂಜ್ ಇದೀಗ ಭಾರತದಲ್ಲಿ ಉತ್ಪಾದನೆ ಆರಂಭಿಸಿದೆ. ಈ ಮೂಲಕ ಬೆಂಝ್ ಮತ್ತೊಂದು ಮೈಲಿಗಲ್ಲು ನಿರ್ಮಿಸಿದೆ.  ಸ್ಥಳೀಯವಾಗಿ ನಿರ್ಮಿಸಿದ ಮರ್ಸೀಡಿಸ್ ಬೆಂಝ್  AMG GLC 43 4MATIC ಕೂಪ್ ಕಾರು ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ.

ನವರಾತ್ರಿ, ದಸರಾ ಹಬ್ಬದಲ್ಲಿ ದಾಖಲೆ ಬರೆದ ಮರ್ಸಿಡೀಸ್ ಬೆಂಝ್!.

ಮರ್ಸಿಡಿಸ್ ಬೆಂಝ್ ಇಂಡಿಯಾ ನ್ಯೂ ಜನರೇಷನ್ ಕಾರುಗಳು (NGC), ಸೆಡಾನ್, SUV ಮತ್ತು  AMG ಕಾರುಗಳನ್ನು ಒಂದೇ ಸೌಲಭ್ಯದಡಿಯಲ್ಲಿ ಉತ್ಪಾದಿಸಲಿದೆ.ಪುಣೆಯಲ್ಲಿರುವ ಮರ್ಸಿಡಿಸ್ ಬೆಂಜ್ ಉತ್ಪಾದನಾ ಘಟಕದಲ್ಲಿ ಸ್ಥಳೀಯವಾಗಿ ಕಾರುಗಳು ನಿರ್ಮಾಣವಾಗಲಿದೆ. ವಾರ್ಷಿಕವಾಗಿ 20,000 ಕಾರುಗಳು ಉತ್ಪಾದಿಸುವ ಸಾಮರ್ಥ್ಯದ ಘಟಕ ಪುಣೆಯಲ್ಲಿ ಅಭಿವೃದ್ಧಿ ಮಾಡಲಾಗಿದೆ.

ಹಬ್ಬದ ಪ್ರಯುಕ್ತ Unlock with Mercedes-Benz ಅಭಿಯಾನ ಆರಂಭ!.

AMG GLC 43 4MATIC ಮ್ಯಾಟಿಕ್ ಕೂಪೆ ಮೊಟ್ಟಮೊದಲ ಬಾರಿಗೆ ‘ಮೇಡ್ ಇನ್ ಇಂಡಿಯಾ’ ಬ್ರ್ಯಾಂಡ್ ಮೂಲಕ ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ.  ಸ್ಥಳೀಯವಾಗಿ ತಯಾರಿಸಿದ ಕಾರನ್ನು ಭಾರತದಲ್ಲಿ ಬಿಡುಗಡೆ ಮಾಡುವುದು ನಮ್ಮ ಮತ್ತೊಂದು ಸಾಧನೆಯಾಗಿದೆ. ಸ್ಥಳೀಯವಾಗಿ ಕಾರು ಉತ್ಪಾದನೆಯಿಂದ ಮರ್ಸೀಡಿಸ್ ಬೆಂಝ್ ಕಾರಿನ ಬ್ರ್ಯಾಂಡ್ ವಾಲ್ಯೂ ಹೆಚ್ಚಾಗಿದೆ.  ಭಾರತೀಯ ಮಾರುಕಟ್ಟೆಯ  ಕುರಿತು ಬೆಂಝ್‌ಗೆ ಇರುವ ಬಲವಾದ ಬದ್ಧತೆಯನ್ನು ಮತ್ತು ನಮ್ಮ ಗ್ರಾಹಕರಿಗೆ ಮೌಲ್ಯವನ್ನು ಸೃಷ್ಟಿಸುವ ನಮ್ಮ ನಿರಂತರ ಪ್ರಯತ್ನವನ್ನು ಪುನರುಚ್ಚರಿಸುತ್ತದೆ ಎಂದು ಮರ್ಸಿಡೀಸ್ ಬೆಂಝ್ ಇಂಡಿಯಾ ವ್ಯವಸ್ಥಾಪಕ ನಿರ್ದೇಶಕ ಮಾರ್ಟಿನ್ ಶ್ವೆಂಕ್ ಹೇಳಿದರು.

ನೂತನ AMG GLC 43 4MATIC ಕಾರು 3.0 ಲೀಟರ್ V6 ಬಿಟರ್ಬೋ ಎಂಜಿನ್ ಹೊಂದಿದೆ. 390 hp (287 kW) ಪವರ್ ಹೊಂದಿದೆ. 

AMG GLC 43 4MATIC ಮ್ಯಾಟಿಕ್ ಕೂಪೆ ಮರ್ಸಿಡಿಸ್ ME ಕನೆಕ್ಟ್ ಹೊಂದಿದ್ದು, ಇದು ಗ್ರಾಹಕರ ಸ್ಮಾರ್ಟ್ ಫೋನ್ / ಟ್ಯಾಬ್ಲೆಟ್‌ನಿಂದ ಕಾರಿನ ಬಹುತೇಕ ಕಾರ್ಯಗಳನ್ನು ನಿಯಂತ್ರಿಸಬಹುದಾಗಿದೆ.  ರಿಮೋಟ್ ಲಾಕ್ / ಅನ್ಲಾಕ್, ಕಾರ್ ಲೊಕೇಟರ್, ಸ್ಪೀಡ್ ಮಾನಿಟರ್, ತುರ್ತು E ಕಾಲ್ ಸೇರಿದಂತೆ ಹಲವು ವಿಶೇಷತೆಗಳುು ಈ ಕಾರಿನಲ್ಲಿದೆ.

AMG GLC 43 4MATIC ಕೂಪೆ ಕಾರು 5 ಡ್ರೈವಿಂಗ್ ಆಯ್ಕೆ ನೀಡಲಿದೆ. ಸ್ಲಿಪರಿ, ಕಂಫರ್ಟ್, ಸ್ಪೋರ್ಟ್, ಸ್ಪೋರ್ಟ್ಸ್ +  ಮತ್ತು ಇಂಡಿವಿಜುವಲ್ ಆಯ್ಕೆ ನೀಡುತ್ತಿದೆ. 
ಪ್ರತಿ ಡ್ರೈವಿಂಗ್ ಮೊಡ್ ಕೂಡ ಹಲವು ವಿಶೇಷತೆಗಳಿಂದ ಕೂಡಿದೆ.  ನೂತನ ಕಾರಿನ ಬೆಲೆ 76.70 ಲಕ್ಷ ರೂಪಾಯಿ(ಎಕ್ಸ್  ಶೋ ರೂಂ).

Follow Us:
Download App:
  • android
  • ios