Asianet Suvarna News Asianet Suvarna News

ನಂಬರ್ ಅಂದ್ರೆ ನಾನು ಎನ್ನೋ ಆರ್ಯವರ್ಧನ್ ಖರೀದಿಸಿದ ಕೋಟಿ ಬೆಲೆ ಕಾರಿನ ನಂಬರ್ ಏನಿರಬಹುದು?

ನಾನು ಅಂದ್ರೆ ನಂಬರ್, ನಂಬರ್ ಅಂದ್ರೆ ನಾನು ಎನ್ನೋ ಸಂಖ್ಯಾಶಾಸ್ತ್ರಜ್ಞ ಆರ್ಯವರ್ಧನ್  ಖರೀದಿಸಿದ ಹೊಚ್ಚ ಹೊಸ ಕೋಟಿ ಕೋಟಿ ಬೆಲೆ ಕಾರಿನ ನಂಬರ್ ಏನಿರಬಹುದು?

Bigg Boss Fame Numerology astrologer Aryavardhan guruji buys Range rover special Edition says Report ckm
Author
First Published May 28, 2024, 12:38 PM IST

ಬೆಂಗಳೂರು(ಮೇ.28) ಸಂಖ್ಯಾಶಾಸ್ತ್ರಜ್ಞ ಆರ್ಯವರ್ಧನ್ ಗುರು ರಾಜ್ಯದಲ್ಲಿ ಭಾರಿ ಜನಪ್ರಿಯ. ನಾನು ಅಂದರೆ ನಂಬರ್, ನಂಬರ್ ಅಂದರೆ ನಾನು ಎಂದೇ ತಮ್ಮ ಸಂಖ್ಯಾಶಾಸ್ತ್ರ ಆರಂಭಿಸುವ ಆರ್ಯವರ್ಧನ್ ಬಿಗ್ ಬಾಸ್ ವೇದಿಕೆಯಲ್ಲಿ ಕಾಣಿಸಿಕೊಂಡು ತಮ್ಮ ಜನಪ್ರಿಯತೆ ಹೆಚ್ಚಿಸಿಕೊಂಡಿದ್ದಾರೆ. ಇದೀಗ ಆರ್ಯವರ್ಧನ್ ಹೊಚ್ಚ ಹೊಸ ಕಾರು ಖರೀದಿಸಿದ್ದಾರೆ. ದುಬಾರಿ ಬೆಲೆ ರೇಂಜ್ ರೋವರ್ ಕಾರನ್ನು ಆರ್ಯವರ್ಧನ್ ಖರೀದಿಸಿದ್ದಾರೆ ಅನ್ನೋ ಪೋಸ್ಟ್‌ಗಳು ಸಾಮಾಜಿಕ ಮಾಧ್ಯಗಳಲ್ಲಿ ಹರಿದಾಡುತ್ತಿದೆ.

ರೇಂಜ್ ರೋವರ್ ಸ್ಪೆಷಲ್ ಎಡಿಶನ್ ಕಾರು ಖರೀದಿಸಿದ್ದಾರೆ ಅನ್ನೋ ಮಾಹಿತಿಗಳು ಬಹಿರಂಗಾಗಿದೆ. ಹೊಸ ಕಾರಿನ ಬೆಲೆ ಸರಿಸುಮಾರು 2.5 ಕೋಟಿ ರೂಪಾಯಿ ಎಂದು ಹೇಳಲಾಗುತ್ತಿದೆ. ವಿಶೇಷ ಅಂದರೆ ನಂಬರ್ ಅಂದರೆ ನಾನು, ನಾನು ಎಂದರೆ ನಂಬರ್ ಎಂದು ಹೇಳಿ ಎಲ್ಲರಿಗೂ ಸಂಖ್ಯಾಶಾಸ್ತ್ರದ ಸೂಚನೆ ನೀಡಿವು ಆರ್ಯವರ್ಧನ್ ಹೊಸ ಕಾರಿನ ನಂಬರ್ ಏನು ಅನ್ನೋ ಕುತೂಹಲ ಇದೀಗ ಮನೆ ಮಾಡಿದೆ.

ನನ್ನನ್ನು ಸರಿಯಾಗಿ ನಡೆಸಿಕೊಂಡಿಲ್ಲ, ಒಂದು ವಾರ ಕೂಡಾಕಿದ್ರು: ಬಿಗ್ ಬಾಸ್ ವಿರುದ್ಧ ತಿರುಗಿ ಬಿದ್ದ ಆರ್ಯವರ್ಧನ್

ಸಂಖ್ಯಾಶಾಸ್ತ್ರಜ್ಞ ಆರ್ಯವರ್ಧನ್ ಹೊಸ ಕಾರಿನ ನಂಬರ್ ಪ್ಲೇಟ್ ಇನ್ನೂ ಬಂದಿಲ್ಲ. ಆದರೆ ನಂಬರ್ ಏನಿರಬಹುದು? ಎಲ್ಲರಿಗೂ ನಂಬರ್ ಹೇಳುವ ಆರ್ಯವರ್ಧನ್ ಕಾರಿನ ನಂಬರ್ ಕುತೂಹಲ ಜನರಲ್ಲಿ ಮಡುಗಟ್ಟಿದೆ. ಹಲವರು ಆರ್ಯವರ್ಧನ್ ಹುಟ್ಟು ಹಬ್ಬ, ಬಿಗ್ ಬಾಸ್ ಪ್ರವೇಶಿದ ದಿನ ಸೇರಿದಂತೆ ಕೆಲ ದಿನಾಂಕಗಳನ್ನು ಕೂಡಿ ಹಾಕಿ ನಂಬರ್ ಸೂಚಿಸಿದ್ದಾರೆ. 

ಆರ್ಯವರ್ಧನ್ ಖರೀದಿಸಿದ ಕಾರು ರೇಂಜ್ ರೋವರ್ ಎಸ್‌ವಿ ಕಾರ್ಮೆಲ್ ಎಡಿಶನ್. ಇದರ ಬೆಲೆ ಭಾರತದಲ್ಲಿ 2.3 ಕೋಟಿ ರೂಪಾಯಿಯಿಂದ 2.6 ಕೋಟಿ ರೂಪಾಯಿ(ಎಕ್ಸ್ ಶೋ ರೂಂ). ಅತ್ಯಾಕರ್ಷಕ ಬಳಿ ಬಣ್ಣದ ಕಾರು ಇದಾಗಿದೆ. 2023ರಲ್ಲಿ ಈ ಕಾರು ಅನಾವರಣಗೊಂಡಿದ್ದ ಈ ಕಾರು 2024ರಲ್ಲಿ ಬಿಡುಗಡೆಯಾಗಿದೆ. ಇದೀಗ ಭಾರಿ ಬೇಡಿಕೆಯ ಕಾರಾಗಿ ಹೊರಹೊಮ್ಮಿದೆ. ಐಷಾರಾಮಿ, ಆರಾಮದಾಯಕ ಪ್ರಯಾಣ ಹಾಗೂ ಗರಿಷ್ಠ ಸುರಕ್ಷತೆಯ ಕಾರು ಎಂದೇ ಗುರುತಿಸಿಕೊಂಡಿದೆ.

ಫಿಕ್ಸಿಂಗ್‌ ಎಂದ ಆರ್ಯವರ್ಧನ್‌ಗೆ ಉಗ್ರರೂಪ ತೋರಿದ್ದ ಸುದೀಪ್‌, ಮೋಸ ಮಾಡಿದ ವಿನಯ್‌ ವಿಚಾರದಲ್ಲಿ ಸುಮ್ಮನಾಗಿದ್ದೇಕೆ?

ಆಲ್ ವ್ಹೀಲ್ ಡ್ರೈವಿಂಗ್ ಹಾಗೂ ಉತ್ತಮ ಗ್ರೌಂಡ್ ಕ್ಲಿಯರೆನ್ಸ್ ಹೊಂದಿದ ಕಾರು ಇದಾಗಿದೆ. ಹೈಬ್ರಿಡ್ ವಿ8 ಪವರ್‌ಟ್ರೈನ್ ಸೇರಿದಂತೆ ಹಲವು ಟೆಕ್ ಹಾಗೂ ಎಂಜಿನ್ ವಿಶೇಷತೆಗಳನ್ನು ಈ ಕಾರು ಹೊಂದಿದೆ. ಈ ಕಾರಿನ ಸೀಟಿನಲ್ಲಿ ಕುಳಿತು ಮಸಾಜ್ ಮಾಡುವ ಸೌಲಭ್ಯವೂ ಇದೆ. ಮಸಾಜಿಂಗ್ ಸೀಟು, ಟ್ರೇ ಟೇಬಲ್, ಇನ್ನು ಪಾನೀಯಗಳನ್ನು ತಣ್ಣಗಿಡುವ ವ್ಯವಸ್ಥೆಯೂ ಇದೆ. 
 

Latest Videos
Follow Us:
Download App:
  • android
  • ios