MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
TRENDING :
Gowri Ganesha Habba Wishes
Ind vs Afg T20 Series
Bengaluru Metro Stations
Karnataka Power Crisis
Belagavi Cantonment Board
Today's Horoscope in Kannada
Satish Jarkiholi ED Complaint
BRICS Summit 2026
Agumbe Ghat Road Development
SSLC Toppers Reward
Bengaluru Tunnel Road Project
India-Russia Relations
Vijay Mallya
ED Investigation Satish Jarkiholi
Mangaluru Railway Zone
Devanahalli Land Dispute
Ganesh Festival Restrictions
  • Home
  • Automobile
  • Car News
  • Tata Cars: 10 ಲಕ್ಷದೊಳಗೆ, 360-ಡಿಗ್ರಿ ಕ್ಯಾಮೆರಾ ಇರುವ ಟಾಟಾದ ಈ 3 ಕಾರುಗಳು ನಿಮ್ಮ ಬಜೆಟ್‌ಗೆ ಬೆಸ್ಟ್

Tata Cars: 10 ಲಕ್ಷದೊಳಗೆ, 360-ಡಿಗ್ರಿ ಕ್ಯಾಮೆರಾ ಇರುವ ಟಾಟಾದ ಈ 3 ಕಾರುಗಳು ನಿಮ್ಮ ಬಜೆಟ್‌ಗೆ ಬೆಸ್ಟ್

10 ಲಕ್ಷ ರೂಪಾಯಿಗಿಂತ ಕಡಿಮೆ ಬೆಲೆಯಲ್ಲಿ 360-ಡಿಗ್ರಿ ಕ್ಯಾಮೆರಾ ಇರುವ ಟಾಟಾ ಕಾರು ಖರೀದಿಸಬೇಕಾ? ಹಾಗಿದ್ರೆ ಟಾಟಾ ಟಿಯಾಗೊ, ಪಂಚ್ ಮತ್ತು ಆಲ್ಟ್ರೋಝ್ ನಿಮ್ಮ ಬಜೆಟ್‌ಗೆ ಸರಿಹೊಂದುವ ಬೆಸ್ಟ್ ಮಾಡೆಲ್‌ಗಳು. ಈ ಕಾರುಗಳ ಬೇರೆ ಬೇರೆ ವೇರಿಯೆಂಟ್‌ಗಳು ಮತ್ತು ಅವುಗಳ ಆನ್-ರೋಡ್ ಬೆಲೆ ಮಾಹಿತಿ ಇಲ್ಲಿದೆ.

2 Min read
Author : Ravi Janekal
Published : Aug 16 2026, 11:47 AM IST
Share this Photo Gallery
  • FB
  • TW
  • Linkdin
  • Whatsapp
15
ಟಾಟಾ ಟಿಯಾಗೊ; ಅತಿ ಕಡಿಮೆ ಬೆಲೆಯಲ್ಲಿ 360 ಡಿಗ್ರಿ ಕ್ಯಾಮೆರಾ
Image Credit : Asianet News

ಟಾಟಾ ಟಿಯಾಗೊ; ಅತಿ ಕಡಿಮೆ ಬೆಲೆಯಲ್ಲಿ 360-ಡಿಗ್ರಿ ಕ್ಯಾಮೆರಾ

ಕೆಲವು ವರ್ಷಗಳ ಹಿಂದೆ 360-ಡಿಗ್ರಿ ಕ್ಯಾಮೆರಾ ಅಂದ್ರೆ ಅದು ದೊಡ್ಡ ದೊಡ್ಡ ಐಷಾರಾಮಿ ಕಾರುಗಳಲ್ಲಿ ಮಾತ್ರ ಇರ್ತಿತ್ತು. ಆಡಿ, ಮರ್ಸಿಡಿಸ್ ಬೆಂಝ್, BMW ಥರದ ಪ್ರೀಮಿಯಂ ಬ್ರಾಂಡ್‌ಗಳಲ್ಲಿ ಮಾತ್ರ ಈ ಫೀಚರ್ ಸಿಕ್ತಿತ್ತು. ಆದ್ರೆ ಈಗ ಕಾಲ ಬದಲಾಗಿದೆ. ಸಾಮಾನ್ಯ ಬಜೆಟ್ ಕಾರುಗಳಲ್ಲೂ ಈ ಸೌಲಭ್ಯ ಸಿಗುತ್ತಿದೆ. ನೀವು 10 ಲಕ್ಷ ರೂಪಾಯಿ ಬಜೆಟ್‌ನಲ್ಲಿ 360-ಡಿಗ್ರಿ ಕ್ಯಾಮೆರಾ ಇರೋ ಟಾಟಾ ಕಾರ್ ಹುಡುಕುತ್ತಿದ್ದರೆ, ನಿಮಗಾಗಿ ಮೂರು ಆಪ್ಷನ್‌ಗಳಿವೆ. ಟಿಯಾಗೊ, ಪಂಚ್ ಮತ್ತು ಆಲ್ಟ್ರೋಝ್ ಈ ಲಿಸ್ಟ್‌ನಲ್ಲಿವೆ.

ಈ ಲಿಸ್ಟ್‌ನಲ್ಲಿ ಟಾಟಾ ಟಿಯಾಗೊ (2026 ಮಾಡೆಲ್) ಅತಿ ಕಡಿಮೆ ಬೆಲೆಯ ಕಾರು. ಇದರಲ್ಲಿ ಕಂಪನಿಯಿಂದಲೇ 360-ಡಿಗ್ರಿ ಕ್ಯಾಮೆರಾ ಅಳವಡಿಸಲಾಗಿದೆ. ಕ್ರಿಯೇಟಿವ್ ವೇರಿಯೆಂಟ್‌ನಿಂದ ಈ ಫೀಚರ್ ಸಿಗುತ್ತೆ. ಇದರ ಪೆಟ್ರೋಲ್ ಮ್ಯಾನುವಲ್ ವೇರಿಯೆಂಟ್‌ಗೆ ₹8.24 ಲಕ್ಷ, ಪೆಟ್ರೋಲ್ ಆಟೋಮ್ಯಾಟಿಕ್ (AMT)ಗೆ ₹8.87 ಲಕ್ಷ, ಸಿಎನ್‌ಜಿ ಮ್ಯಾನುವಲ್‌ಗೆ ₹9.14 ಲಕ್ಷ ಮತ್ತು ಸಿಎನ್‌ಜಿ ಆಟೋಮ್ಯಾಟಿಕ್‌ಗೆ (AMT) ₹9.79 ಲಕ್ಷ ಆನ್-ರೋಡ್ ಬೆಲೆ ಇದೆ. ಹಾಗಾಗಿ, ಕಡಿಮೆ ಬಜೆಟ್‌ನಲ್ಲಿ 360-ಡಿಗ್ರಿ ಕ್ಯಾಮೆರಾ ಬೇಕು ಅನ್ನೋರಿಗೆ ಟಿಯಾಗೊ ಒಂದು ಒಳ್ಳೆ ಆಯ್ಕೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
25
ಟಾಟಾ ಪಂಚ್; ಎಸ್‌ಯುವಿ ಲುಕ್ ಜೊತೆಗೆ ಹೆಚ್ಚಿನ ಫೀಚರ್ಸ್
Image Credit : Asianet News

ಟಾಟಾ ಪಂಚ್; ಎಸ್‌ಯುವಿ ಲುಕ್ ಜೊತೆಗೆ ಹೆಚ್ಚಿನ ಫೀಚರ್ಸ್

ಟಾಟಾದ ಜನಪ್ರಿಯ ಕಾಂಪ್ಯಾಕ್ಟ್ ಎಸ್‌ಯುವಿ ಪಂಚ್‌ನಲ್ಲೂ 360-ಡಿಗ್ರಿ ಕ್ಯಾಮೆರಾ ಸೌಲಭ್ಯವಿದೆ. ಇದರ ಅಡ್ವೆಂಚರ್ ವೇರಿಯೆಂಟ್‌ನಿಂದ ಈ ಫೀಚರ್ ಸಿಗುತ್ತೆ. ಪೆಟ್ರೋಲ್ ಮ್ಯಾನುವಲ್ ವೇರಿಯೆಂಟ್‌ಗೆ ₹9.04 ಲಕ್ಷ, ಪೆಟ್ರೋಲ್ ಆಟೋಮ್ಯಾಟಿಕ್‌ಗೆ (AMT) ₹9.72 ಲಕ್ಷ, ಸಿಎನ್‌ಜಿ ಮ್ಯಾನುವಲ್‌ಗೆ ₹9.97 ಲಕ್ಷ ಮತ್ತು ಟರ್ಬೊ ಪೆಟ್ರೋಲ್ 6-ಸ್ಪೀಡ್ ಮ್ಯಾನುವಲ್‌ಗೆ ₹9.88 ಲಕ್ಷ ಆನ್-ರೋಡ್ ಬೆಲೆ ಇದೆ. ಆದರೆ, ಸಿಎನ್‌ಜಿ ಆಟೋಮ್ಯಾಟಿಕ್ (AMT) ವೇರಿಯೆಂಟ್ ಬೆಲೆ ₹10.59 ಲಕ್ಷ ಆಗಿರೋದ್ರಿಂದ, ಅದು 10 ಲಕ್ಷದ ಬಜೆಟ್ ದಾಟುತ್ತೆ.

Related Articles

Related image1
ಟಾಟಾ ಗ್ರೂಪ್‌ನ ನಿಜವಾದ ಮಾಲೀಕರು ಯಾರು? ಲಕ್ಷಾಂತರ ಕೋಟಿ ಲಾಭದ ಹಣ ಎಲ್ಲಿಗೆ ಹೋಗುತ್ತೆ...
Related image2
Jamshedpur FC : ಕೇವಲ 100 ರು.ಗೆ ಫುಟ್ಬಾಲ್‌ ತಂಡ ಮಾರಿದ ಟಾಟಾ!
35
ಟಾಟಾ ಆಲ್ಟ್ರೋಝ್; ಪೆಟ್ರೋಲ್ ಮ್ಯಾನುವಲ್ ಮಾತ್ರ 10 ಲಕ್ಷದೊಳಗೆ
Image Credit : Asianet News

ಟಾಟಾ ಆಲ್ಟ್ರೋಝ್; ಪೆಟ್ರೋಲ್ ಮ್ಯಾನುವಲ್ ಮಾತ್ರ 10 ಲಕ್ಷದೊಳಗೆ

360-ಡಿಗ್ರಿ ಕ್ಯಾಮೆರಾ ಫೀಚರ್ ಇರುವ ಮತ್ತೊಂದು ಟಾಟಾ ಮಾಡೆಲ್ ಅಂದ್ರೆ ಅದು ಆಲ್ಟ್ರೋಝ್. ಇದರ ಕ್ರಿಯೇಟಿವ್ ವೇರಿಯೆಂಟ್‌ನಲ್ಲಿ ಈ ಸೌಲಭ್ಯ ಲಭ್ಯ. ಪೆಟ್ರೋಲ್ ಮ್ಯಾನುವಲ್ ವೇರಿಯೆಂಟ್‌ನ ಆನ್-ರೋಡ್ ಬೆಲೆ ₹9.48 ಲಕ್ಷ. ಹಾಗಾಗಿ ಇದು 10 ಲಕ್ಷದ ಬಜೆಟ್‌ನಲ್ಲಿದೆ. ಆದರೆ, ಪೆಟ್ರೋಲ್ ಆಟೋಮ್ಯಾಟಿಕ್ (AMT) ಬೆಲೆ ₹10.11 ಲಕ್ಷ, ಸಿಎನ್‌ಜಿ ಮ್ಯಾನುವಲ್ ಬೆಲೆ ₹10.35 ಲಕ್ಷ ಮತ್ತು ಸಿಎನ್‌ಜಿ ಆಟೋಮ್ಯಾಟಿಕ್ (AMT) ಬೆಲೆ ₹10.96 ಲಕ್ಷ. ಇವೆಲ್ಲವೂ ಬಜೆಟ್ ಮೀರುತ್ತವೆ. ಒಂದು ವೇಳೆ ನಿಮಗೆ ಡೀಸೆಲ್ ಎಂಜಿನ್ ಜೊತೆಗೆ 360-ಡಿಗ್ರಿ ಕ್ಯಾಮೆರಾ ಬೇಕಿದ್ದರೆ, ಕ್ರಿಯೇಟಿವ್ ಎಸ್ ಡೀಸೆಲ್ ಮ್ಯಾನುವಲ್ ವೇರಿಯೆಂಟ್ ಆಯ್ಕೆ ಮಾಡ್ಬೇಕು. ಇದರ ಆನ್-ರೋಡ್ ಬೆಲೆ ಸುಮಾರು ₹11.34 ಲಕ್ಷ ಆಗುತ್ತೆ. ಇಲ್ಲಿ ನೀಡಿರುವ ಎಲ್ಲಾ ಬೆಲೆಗಳು ಮುಂಬೈನ ಆನ್-ರೋಡ್ ದರಗಳಾಗಿವೆ.

45
ಸಫಾರಿ ಇವಿ ಕೂಡ ಬರ್ತಿದೆ; ಇದರಲ್ಲಿ 540-ಡಿಗ್ರಿ ಕ್ಯಾಮೆರಾ ಇರಬಹುದಾ?
Image Credit : Asianet News

ಸಫಾರಿ ಇವಿ ಕೂಡ ಬರ್ತಿದೆ; ಇದರಲ್ಲಿ 540-ಡಿಗ್ರಿ ಕ್ಯಾಮೆರಾ ಇರಬಹುದಾ?

ಟಾಟಾ ಶೀಘ್ರದಲ್ಲೇ ಸಫಾರಿ ಇವಿ ಬಿಡುಗಡೆ ಮಾಡಲಿದೆ. ಇದರಲ್ಲಿ ಇನ್ನಷ್ಟು ಅಡ್ವಾನ್ಸ್ಡ್ ಕ್ಯಾಮೆರಾ ಸಿಸ್ಟಮ್‌ಗಳು ಇರಬಹುದು ಅಂತ ನಿರೀಕ್ಷಿಸಲಾಗಿದೆ. ದೀಪಾವಳಿ ಹತ್ತಿರ ಈ ಎಲೆಕ್ಟ್ರಿಕ್ ಎಸ್‌ಯುವಿ ಮಾರುಕಟ್ಟೆಗೆ ಬರುವ ಸಾಧ್ಯತೆ ಇದೆ. ಕಂಪನಿಯ Acti.ev Plus ಪ್ಲಾಟ್‌ಫಾರ್ಮ್ ಆಧಾರದ ಮೇಲೆ ಇದನ್ನು ನಿರ್ಮಿಸಲಾಗುತ್ತಿದೆ.

55
ಟಾಟಾದ ಹೊಸ Tidal ಎಲೆಕ್ಟ್ರಿಕಲ್ ಕಾರು
Image Credit : Asianet News

ಟಾಟಾದ ಹೊಸ Tidal ಎಲೆಕ್ಟ್ರಿಕಲ್ ಕಾರು

ಜೊತೆಗೆ, ಟಾಟಾದ ಹೊಸ Tidal ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ ಆರ್ಕಿಟೆಕ್ಚರ್ ಕೂಡ ಇದರಲ್ಲಿ ಇರಲಿದೆ. ಈ ಸಿಸ್ಟಮ್ 540-ಡಿಗ್ರಿ ಕ್ಯಾಮೆರಾ, ಓವರ್-ದಿ-ಏರ್ (OTA) ಅಪ್‌ಡೇಟ್‌ಗಳು, ಅಡ್ವಾನ್ಸ್ಡ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಮ್ (ADAS) ಮತ್ತು ಹಲವು ಕನೆಕ್ಟೆಡ್ ಕಾರ್ ಫೀಚರ್‌ಗಳನ್ನು ಸಪೋರ್ಟ್ ಮಾಡಲಿದೆ. ಹ್ಯಾರಿಯರ್ ಇವಿಯಲ್ಲಿರುವಂತಹ ಪವರ್‌ಟ್ರೇನ್ ಅನ್ನೇ ಸಫಾರಿ ಇವಿಯಲ್ಲೂ ನಿರೀಕ್ಷಿಸಲಾಗಿದೆ. ಹ್ಯಾರಿಯರ್ ಇವಿಯಲ್ಲಿ 65 kWh ಮತ್ತು 75 kWh ಬ್ಯಾಟರಿ ಆಯ್ಕೆಗಳಿವೆ. ಹಾಗಾಗಿ ಸಫಾರಿ ಇವಿಯಲ್ಲೂ ದೊಡ್ಡ ಬ್ಯಾಟರಿ ಪ್ಯಾಕ್ ಮತ್ತು ಉತ್ತಮ ಡ್ರೈವಿಂಗ್ ರೇಂಜ್ ಸಿಗುವ ಸಾಧ್ಯತೆ ಇದೆ.

About the Author

RJ
Ravi Janekal
ಪ್ರಸ್ತುತ, ಏಷಿಯಾನೆಟ್ ಸುವರ್ಣನ್ಯೂಸ್‌ನಲ್ಲಿ ಉಪ ಸಂಪಾದಕ. ಪತ್ರಿಕೋದ್ಯಮದಲ್ಲಿ 8 ವರ್ಷಗಳ ಅನುಭವ. ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಲ್ಲಿ ನ್ಯೂಸ್ ಮಾನಿಟರಿಂಗ್ ಆಗಿ ಹಲವು ವರ್ಷಗಳ ಸೇವೆ, ಕೊರೊನಾ ವಾರಿಯರ್ಸ್ ಅವಾರ್ಡ್, ಮೂಲತಃ ರಾಯಚೂರು ಜಿಲ್ಲೆಯ ಜಾನೇಕಲ್ ಗ್ರಾಮದವರಾದ ಇವರು ಓದು, ಬರೆವಣಿಗೆ ಮತ್ತು ಸಾಹಿತ್ಯಾಸಕ್ತರು.
ಕಾರುಗಳು
ಟಾಟಾ ಮೋಟಾರ್ಸ್
ಆಟೋಮೊಬೈಲ್

Latest Videos
Recommended Stories
Recommended image1
ಬೆಂಗಳೂರಲ್ಲಿ ಹೆಕ್ಟರ್ ಟೋಮಾಹಾಕ್ ಇವಿ ಲಾಂಚ್, ಕೈಗೆಟುಕುವ ಬೆಲೆಯಲ್ಲಿ ಭಾರತದ ಮೊದಲ PHEV ಕಾರು
Recommended image2
BMW ಖರೀದಿ ಖುಷಿಯಲ್ಲಿದ್ದ ಮಾಲೀಕನಿಗೆ ಬಿಗ್ ಶಾಕ್: ಲಕ್ಷ ಲಕ್ಷ ಹಣ ಕೊಡದಿದ್ದರೆ ಜಾಗ ಖಾಲಿ ಮಾಡಲ್ಲ ಅಂದ್ರು!
Recommended image3
ಫಿಯಟ್ ಕಾರನ್ನು ಕತ್ತರಿಸಿ 'ಪೇಪರ್' ನಂತೆ ಮಾಡಿದ ಕಿಲಾಡಿ! ವಿಶ್ವ ದಾಖಲೆ ಬರೆದ 'ಫ್ಲಾಟ್ ಫಿಯಟ್' ಕಾರಿನ ಕಥೆ!
Related Stories
Recommended image1
ಟಾಟಾ ಗ್ರೂಪ್‌ನ ನಿಜವಾದ ಮಾಲೀಕರು ಯಾರು? ಲಕ್ಷಾಂತರ ಕೋಟಿ ಲಾಭದ ಹಣ ಎಲ್ಲಿಗೆ ಹೋಗುತ್ತೆ...
Recommended image2
Jamshedpur FC : ಕೇವಲ 100 ರು.ಗೆ ಫುಟ್ಬಾಲ್‌ ತಂಡ ಮಾರಿದ ಟಾಟಾ!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved