Asianet Suvarna News Asianet Suvarna News

Upcoming Car 5 ಲಕ್ಷ ರೂಗೆ ಬುಕ್ ಮಾಡಿ ಹೊಚ್ಚ ಹೊಸ Audi Q7 ಫೇಸ್‌ಲಿಫ್ಟ್ ಕಾರು!

  • ಹೆಚ್ಚುವರಿ ಫೀಚರ್ಸ್, ಹೊಸ ಟೆಕ್ನಾಲಜಿಯ ಆಡಿ ಕ್ಯೂ7 ಫೇಸ್‌ಲಿಫ್ಟ್ ಕಾರು
  • ಭಾರತದಲ್ಲಿ ನೂತನ ಕಾರಿನ ಬುಕಿಂಗ್ ಆರಂಭಿಸಿದ ಆಡಿ
  • ಪ್ರಿಮಿಂಯ ಪ್ಲಸ್ ಹಾಗೂ ಟೆಕ್ನಾಲಜಿ ವೇರಿಯೆಂಟ್‌ಗಳಲ್ಲಿ ಕಾರು ಲಭ್ಯ
     
Audi India annonuces  Q7 facelift SUV car dealerships Booking with Rs 5 lakh expected to launch soon ckm
Author
Bengaluru, First Published Jan 11, 2022, 4:12 PM IST

ನವದೆಹಲಿ(ಜ.11): ಭಾರತದಲ್ಲಿ ಆಡಿ ತನ್ನ ಹೊಚ್ಚ ಹೊಸ ಕ್ಯೂ7 ಫೇಸ್‌ಲಿಫ್ಟ್ ಕಾರು(Audi Q7 facelift) ಬಿಡುಗಡೆ ಮಾಡಲು ಸಜ್ಜಾಗಿದೆ. ಸದ್ಯ ಮಾರುಕಟ್ಟೆಯಲ್ಲಿರು ಕ್ಯೂ7 ಕಾರಿಗೂ ಹೊಸದಾಗಿ ಬಿಡುಗಡೆಯಾಗಲಿರುವ ಕ್ಯೂ7 ಫೇಸ್‌ಲಿಫ್ಟ್ ಕಾರಿಗೂ ಕೆಲ ವ್ಯತ್ಯಾಸಗಳಿವೆ. ಜೊತೆಗೆ ಹಲವು ಹೆಚ್ಚುವರಿ ಫೀಚರ್ಸ್ ನೂತನ ಕಾರಿನಲ್ಲಿದೆ. ಇದೀಗ ಹೊಸ ಕಾರಿನ ಡೀಲರ್‌ಶಿಪ್ ಬುಕಿಂಗ್(dealerships Booking) ಆರಂಭಗೊಂಡಿದೆ. ನೂತನ ಕಾರನ್ನು 5 ಲಕ್ಷ ರೂಪಾಯಿ ನೀಡಿ ಬುಕಿಂಗ್ ಮಾಡಿಕೊಳ್ಳಬಹುದು.

ಕಳೆದೆರಡು ವರ್ಷದಿಂದ ಭಾರತದ ಮಾರುಕಟ್ಟೆಯಲ್ಲಿ ಹೊಸ ಕಾರು ಬಿಡುಗಡೆ ಮಾಡದೆ ಸೈಲೆಂಟ್ ಆಗಿದ್ದ ಆಡಿ ಇದೀಗ 7 ಸೀಟರ್ SUV ಕಾರಿನ ಮೂಲಕ ಭರ್ಜರಿಯಾಗಿ ಕಮ್‌ಬ್ಯಾಕ್ ಮಾಡುತ್ತಿದೆ. ಭಾರತದಲ್ಲಿ Audi Q7 ಫೇಸ್‌ಲಿಫ್ಟ್ ಕಾರು ಎರಡು ವೇರಿಯೆಂಟ್‌ಗಳಲ್ಲಿ ಲಭ್ಯವಿದೆ. ಪ್ರಿಮಿಯಂ ಪ್ಲಸ್ ಹಾಗೂ ಟೆಕ್ನಾಲಜಿ ವೇರಿಯೆಂಟ್ ಶೀಘ್ರದಲ್ಲೇ ಬಿಡುಗಡೆಯಾಗಲಿದೆ.

5 ಲಕ್ಷ ರೂ ನೀಡಿ ಬುಕ್ ಮಾಡಿ Audi ಇ ಟ್ರಾನ್ ಎಲೆಕ್ಟ್ರಿಕ್ ಕಾರು !

ನೂತನ Audi Q7 ಫೇಸ್‌ಲಿಫ್ಟ್ ಕಾರಿನ ಬೆಲೆ ಈ ತಿಂಗಳ ಅಂತ್ಯದಲ್ಲಿ ಪ್ರಕಟಗೊಳ್ಳಲಿದೆ. ಸದ್ಯ ಬುಕಿಂಗ್ ಆರಂಭಿಸಿರುವ Audi Q7 ಫೇಸ್‌ಲಿಫ್ಟ್ ಕಾರಿಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ನೂತನ ಫೇಸ್‌ಲಿಫ್ಟ್ ಕಾರಿನಲ್ಲಿ ಕೆಲ ಬದಲಾವಣೆಗಳು, ಹೆಚ್ಚುವರಿ ಫೀಚರ್ಸ್ ಸೇರಿಸಲಾಗಿದೆ. ಆದರೆ ನೂತನ ಕಾರು ಕೇವಲ ಪೆಟ್ರೋಲ್ ವೇರಿಯೆಂಟ್‌ನಲ್ಲಿ ಮಾತ್ರ ಲಭ್ಯವಿದೆ.

ನೂತನ Audi Q7 ಫೇಸ್‌ಲಿಫ್ಟ್ ಕಾರು ಭಾರತದ ಔರಾಂಗಾಬಾದ್‌ನಲ್ಲಿರುವ ಸ್ಕೋಡಾ ಆಟೋ ವೋಕ್ಸ್‌ವ್ಯಾಗನ್ ಘಟಕದಲ್ಲಿ ಜೋಡಣೆ ಮಾಡಲಾಗಿದೆ. BS6 ಎಮಿಶನ್ ನಿಯಮದಿಂದ Audi Q7 ಕಾರು ಎಪ್ರಿಲ್ 2020ರಿಂದ ಸ್ಥಗಿತಗೊಳಿಸಲಾಗಿತ್ತು. ಇದೀಗ ಬಿಎಸ್6 ಎಂಜಿನ್‌ನೊಂದಿಗೆ Audi Q7 ಕಾರು ಬಿಡುಗಡೆಗೆ ಸಜ್ಜಾಗಿದೆ.

ಕೊರೋನಾ ಸಂಕಷ್ಟದಲ್ಲಿ ಸರ್ವೀಸ್, ಸ್ಟಾಂಡರ್ಡ್ ವಾರೆಂಟಿ ವಿಸ್ತರಿಸಿದ ಆಡಿ ಇಂಡಿಯಾ!

ಮ್ಯಾಟ್ರಿಕ್ LED ಹೆಡ್‌ಲೈಟ್ಸ್, 360 ಕ್ಯಾಮಾರ, ಆಟೋಮ್ಯಾಟಿಕ್ ಪಾರ್ಕಿಂಗ್, 4 ಜೋನ್ ಕ್ಲೈಮೇಟ್ ಕಂಟ್ರೋಲ್, ಪನೋರಮಿಕ್ ಸನ್‌ರೂಫ್ ಸೇರಿದಂತೆ ಹಲವು ಫೀಚರ್ಸ್ ಹಳೇ ಕಾರಿನಲ್ಲಿರುವಂತೆ ಹೊಸ ಕಾರಿನಲ್ಲೂ ಇರಲಿದೆ. ನೂತನ ಕಾರಿನಲ್ಲಿ ಹಲವು ಅಪ್‌ಡೇಟೆಡ್ ಫೀಚರ್ಸ್ ಕಾಣಬಹುದು. ಡ್ಯುಯೆಲ್  MMI ಸಿಸ್ಟಮ್, 10.1 ಇಂಚಿನ ಟಚ್‌ಸ್ಕ್ರೀನ್ ಇನ್ಭೋಟೈನ್ಮೆಂಟ್ ಸಿಸ್ಟಮ್, ಕ್ಲೈಮೇಟ್ ಕಂಟ್ರೋಲ್ ಸೇರಿದಂತೆ ಇತರ ಫೀಚರ್ಸ್ ನೆರವಿಗೆ ಕಳಬಾಗದಲ್ಲಿ 8 ಇಂಚಿನ ಟಚ್‌ಸ್ಕ್ರೀನ್ ಹೊಂದಿದೆ.

ನೂತ ಆಡಿ ಕ್ಯೂ7 ಫೇಸ್‌ಲಿಫ್ಟ್ ಕಾರು 3.0 ಲೀಟರ್, 4 ಸಿಲಿಂಡರ್,  V6 ಟರ್ಬೋ ಪೆಟ್ರೋಲ್ ಎಂಜಿನ್(55 TFSI) ಬಳಸುವ ಸಾಧ್ಯತೆ ಇದೆ. ಇದು  ಆಡಿ Q8 ಹಾಗೂ A8 ಕಾರಿನಲ್ಲಿ ಇದೇ ಎಂಜಿನ್ ಬಳಸಲಾಗಿದೆ. 8 ಸ್ಪೀಡ್ ಟಾರ್ಕ್ ಕನ್ವರ್ಟರ್ ಆಟೋಮ್ಯಾಟಿಕ್ ಟ್ರಾನ್ಸ್‌ಮಿಶನ್ ಸ್ಟಾಂಡರ್ಡ್ ಆಗಿದೆ. ಆಲ್ ವ್ಹೀಲ್ ಡ್ರೈವ್, ಆಡಾಪ್ಟೀವ್ ಸಸ್ಪೆನ್ಶನ್ ಸೇರಿದಂತೆ ಹಲವು ಬದಲಾವಣೆಗಲನ್ನು ನೂತನ ಫೇಸ್‌ಲಿಫ್ಟ್ ಕಾರಿನಲ್ಲಿ ಕಾಣಬಹುದು.

ಇದರ ಜೊತೆಗೆ ಅತ್ಯಾಧುನಿಕ ತಂತ್ರಜ್ಞಾನವನ್ನು ನೂತನ ಕಾರಿನಲ್ಲಿ ಬಳಸಲಾಗಿದೆ. ಡ್ರೈವಿಂಗ್ ವೇಳೆ ವರ್ಚುವಲ್ ಕಾಕ್‌ಪಿಟ್ ಅನುಭವ ಸಿಗಲಿದೆ. ಇದಕ್ಕೆ ಕಾರಣ ಅಪ್‌ಗ್ರೇಡೆಟ್ ಡಿಜಿಟಲ್ instrument ಕ್ಲಸ್ಟರ್ ಸೆಕೆಂಡ್ ಜನರೇಶನ್ ಆಡಿ ಕಾರಿನಲ್ಲಿ ಬಳಸಸಲಾಗುತ್ತಿದೆ.  

ನೂತನ Audi Q7 ಫೇಸ್‌ಲಿಫ್ಟ್ ಕಾರು ಭಾರತದಲ್ಲಿ ಮರ್ಸಿಡೀಸ್ ಬೆಂಜ್ GLE,  BMW X5 ಹಾಗೂ ವೋಲ್ವೋ XC90 ಕಾರಿಗೆ ಪ್ರತಿಸ್ಪರ್ಧಿಯಾಗಿದೆ. ಆಡಿ ಕ್ಯೂ7 ಫೇಸ್‌ಲಿಫ್ಟ್ ಕಾರು ಈಗಾಗಲೇ ವಿದೇಶಿ ಮಾರುಕಟ್ಟೆಗಳಲ್ಲಿ ಲಭ್ಯವಿದೆ. ಇದೀಗ ಭಾರತದ ಮಾರುಕಟ್ಟೆಯಲ್ಲೂ ಶೀಘ್ರದಲ್ಲೇ ಲಭ್ಯವಾಗಲಿದೆ.

Follow Us:
Download App:
  • android
  • ios