Asianet Suvarna News Asianet Suvarna News

ಸ್ಟಾಕ್ ಕ್ಲೀಯರೆನ್ಸ್ ಆಫರ್, ಭರ್ಜರಿ ರಿಯಾಯಿತಿ ಘೋಷಿಸಿದ ಮಾರುತಿ ಸುಜುಕಿ!

ಹೊಸ ವರ್ಷಕ್ಕೆ ಕೌಂಟ್‌ಡೌನ್ ಆರಂಭಗೊಂಡಿದೆ. ಇದರ ಬೆನ್ನಲ್ಲೇ ಮಾರುತಿ ಸುಜುಕಿ ವರ್ಷಾಂತ್ಯದ ಆಫರ್ ಘೋಷಿಸಿದೆ. ಮಾರುತಿ ಅಲ್ಟೋ, ಸೆಲೆರಿಯೋ, ಸಿಯಾಜ್ ಸೇರಿದಂತೆ ಆಯ್ದ ಕಾರುಗಳ ಮೇಲೆ ಡಿಸ್ಕೌಂಟ್ ಆಫರ್ ಘೋಷಿಸಲಾಗಿದೆ. 
 

Alto to Ciaz Maruti Suzuki announces year end discount offers on selected model cars ckm
Author
First Published Dec 5, 2022, 9:46 PM IST

ನವದೆಹಲಿ(ಡಿ.05): ಹೊಸ ವರ್ಷ ಬರಮಾಡಿಕೊಳ್ಳಲು ಎಲ್ಲರು ತುದಿಗಾಲಲ್ಲಿ ನಿಂತಿದ್ದಾರೆ. ಇತ್ತ ಆಟೋಮೊಬೈಲ್ ಕಂಪನಿಗಳು ಹೊಸ ವರ್ಷಕ್ಕೆ ಆಫರ್ ಘೋಷಿಸಲು ಸಜ್ಜಾಗಿದೆ. ಆದರೆ ಮಾರುತಿ ಸುಜುಕಿ ಇದೀಗ ವರ್ಷಾಂತ್ಯದ ಆಫರ್ ಘೋಷಿಸಿದೆ. ಈ ಮೂಲಕ ಕಾರು ಮಾರಾಟದಲ್ಲಿ ದಾಖಲೆ ಬರೆಯಲು ಮುಂದಾಗಿದೆ. ಮಾರುತಿ ಸುಜುಕಿ ಆಯ್ದ ಕಾರುಗಳ ಮೇಲೆ ಡಿಸ್ಕೌಂಟ್ ಆಫರ್ ಘೋಷಿಸಲಾಗಿದೆ. ಈ ವರ್ಷವನ್ನು ಮಾರುತಿ ಸುಜುಕಿ ಉತ್ತಮವಾಗಿ ಆರಂಭಿಸಿತ್ತು. ಹೊಸ ಹೊಸ ಕಾರುಗಳ ಬಿಡುಗಡೆ, ಮಾರಾಟದಲ್ಲೂ ಚೇತರಿಕೆ ಕಾಣುವ ಮೂಲಕ ಉತ್ತಮವಾಗಿ ಸಾಗಿದೆ. ಹೀಗಾಗಿ ಈ ವರ್ಷಕ್ಕೆ ಅಷ್ಟೇ ಅತ್ಯುತ್ತಮವಾಗಿ ವಿದಾಯ ಹೇಳಲು ಮಾರುತಿ ಸಜ್ಜಾಗಿದೆ. ಇದಕ್ಕಾಗಿ ವರ್ಷಾಂತ್ಯದ ಸೇಲ್ಸ್ ಆಫರ್ ಘೋಷಿಸಿದೆ.

ಮಾರುತಿ ಸುಜುಕಿ ಅಲ್ಟೋ 800
ಮಾರುತಿ ಸುಜುಕಿ ಅಲ್ಟೋ 800 ಕಾರಿಗೆ ಗರಿಷ್ಠ 52,000 ರೂಪಾಯಿ ಡಿಸ್ಕೌಂಟ್ ಆಫರ್ ಘೋಷಿಸಲಾಗಿದೆ. ಇದರಲ್ಲಿ 30,000 ನಗದು ಡಿಸ್ಕೌಂಟ್, 15,000 ರೂಪಾಯಿ ಎಕ್ಸ್‌ಜೇಂಜ್ ಬೋನಸ್, 7,000 ರೂಪಾಯಿ ಕಾರ್ಪೋರೇಟ್ ಡಿಸ್ಕೌಂಟ್ ಒಳಗೊಂಡಿದೆ. 

 

40 ಕಿಮೀ ಮೈಲೇಜ್ ನೀಡಲಿವೆ ಮಾರುತಿಯ ಎರಡು ಫೇಸ್‌ಲಿಫ್ಟ್‌ ಕಾರು

ಮಾರುತಿ ಅಲ್ಟೋ ಕೆ10
ಮಾರುತಿ ಅಲ್ಟೋ ಕೆ10 ಕಾರಿಗೆ ಒಟ್ಟು 57,000 ರೂಪಾಯಿ ಡಿಸ್ಕೌಂಟ್ ಆಫರ್ ನೀಡಲಾಗಿದೆ. ಇದರಲ್ಲಿ 35,000 ರೂಪಾಯಿ ಕ್ಯಾಶ್ ಡಿಸ್ಕೌಂಟ್, 15,000 ರೂಪಾಯಿ ಎಕ್ಸ್‌ಚೇಂಜ್ ಬೋನಸ್ ಹಾಗೂ 7,000 ರೂಪಾಯಿ ಕಾರ್ಪೋರೇಟ್ ಬೋನಸ್ ಒಳಗೊಂಡಿದೆ.

ಮಾರುತಿ ಎಸ್ ಪ್ರೆಸ್ಸೋ
ಮಾರುತಿ ಎಸ್ ಪ್ರೆಸ್ಸೋ ಕಾರಿಗೆ ಒಟ್ಟು 65,000 ರೂಪಾಯಿ ಡಿಸ್ಕೌಂಟ್ ಘೋಷಿಸಲಾಗಿದೆ. ಇದರಲ್ಲಿ 45,000 ರೂಪಾಯಿ ಕ್ಯಾಶ್ ಡಿಸ್ಕೌಂಟ್, 15,000 ರೂಪಾಯಿ ಎಕ್ಸ್‌ಜೇಂಜ್ ಬೋನಸ್ ಹಾಗೂ 5,000 ರೂಪಾಯಿ ಕಾರ್ಪೋರೇಟ್ ಬೋನಸ್ ಒಳಗೊಂಡಿದೆ. ಎಸ್ ಪ್ರೆಸ್ಸೋ ಸಿಎನ್‌ಡಿ ವೇರಿಯೆಂಟ್ ಕಾರಿಗೆ ಒಟ್ಟು 75,000 ರೂಪಾಯಿ ಡಿಸ್ಕೌಂಟ್ ಆಫರ್ ನೀಡಲಾಗಿದೆ. 60,000 ರೂಪಾಯಿ ಕ್ಯಾಶ್ ಡಿಸ್ಕೌಂಟ್ ಹಾಗೂ 15,000 ರೂಪಾಯಿ ಎಕ್ಸ್‌ಜೇಂಜ್ ಬೋನಸ್ ಒಳಗೊಂಡಿದೆ.

34 ಕಿ.ಮೀ ಮೈಲೇಜ್, ಕೈಗೆಟುಕುವ ದರದಲ್ಲಿ ಮಾರುತಿ ಅಲ್ಟೋ ಕೆ10 CNG ಕಾರು ಬಿಡುಗಡೆ!

ಮಾರುತಿ ಸುಜುಕಿ ಸೆಲೆರಿಯೋ
ಸೆಲೆರಿಯೋ ಕಾರಿಗೆ ಒಟ್ಟು 39,000 ರೂಪಾಯಿ ಡಿಸ್ಕೌಂಟ್ ಆಫರ್ ನೀಡಲಾಗಿದೆ. 20,000 ರೂಪಾಯಿ ನಗದು ಡಿಸ್ಕೌಂಟ್ ಹಾಗೂ 15,000 ರೂಪಾಯಿ ಎಕ್ಸ್‌ಜೇಂಜ್ ಬೋನಸ್, 4,000 ರೂಪಾಯಿ ಕಾರ್ಪೋರೇಟ್ ಬೋನಸ್ ನೀಡಲಾಗಿದೆ. ಇನ್ನು ಸಿಎನ್‌ಜಿ ವರ್ಶನ್ ಸೆಲೆರಿಯೋ ಕಾರಿಗೆ ಒಟ್ಟು 75,000 ರೂಪಾಯಿ ಡಿಸ್ಕೌಂಟ್ ನೀಡಲಾಗಿದೆ. ಇದರಲ್ಲಿ 60,000 ರೂಪಾಯಿ ಕ್ಯಾಶ್ ಡಿಸ್ಕೌಂಟ್ ಒಳಗೊಂಡಿದೆ.

ಮಾರುತಿ ಸುಜುಕಿ ವ್ಯಾಗನಆರ್
ಮಾರುತಿ ಸುಜುಕಿ ವ್ಯಾಗನಆರ್ ಕಾರಿಗೆ ಒಟ್ಟು 57,000 ರೂಪಾಯಿ ಡಿಸ್ಕೌಂಟ್ ಘೋಷಿಸಲಾಗಿದೆ. 1.0 MT ವೇರಿಯೆಂಟ್ ಕಾರಿಗೆ 20,000 ರೂಪಾಯಿ ಕ್ಯಾಶ್ ಡಿಸ್ಕೌಂಟ್, 1.2 MT ವೇರಿಯೆಂಟ್ ಕಾರಿಗೆ 30,000 ಕ್ಯಾಶ್ ಡಿಸ್ಕೌಂಟ್ ಘೋಷಿಸಲಾಗಿದೆ.  ಸಿಎನ್‌ಜಿ ವರ್ಶನ್ ಕಾರಿಗೆ ಒಟ್ಟು 50,000 ರೂಪಾಯಿ ಡಿಸ್ಕೌಂಟ್ ಘೋಷಿಸಲಾಗಿದೆ.

ಮಾರುತಿ ಸುಜಕಿ ಡಿಸೈರ್ ಕಾರಿಗೆ ಒಟ್ಟು 25,000 ರೂಪಾಯಿ, ಸ್ವಿಫ್ಟ್ ಕಾರಿಗೆ ಒಟ್ಟು 35,000 ರೂಪಾಯಿ, ಸಿಯಾಜ್ ಕಾರಿಗೆ ಒಟ್ಟು 60,000 ರೂಪಾಯಿ, ಇಗ್ನಿಸ್ ಕಾರಿಗೆ ಒಟ್ಟು 55,000 ರೂಪಾಯಿ ಡಿಸ್ಕೌಂಟ್ ಘೋಷಿಸಲಾಗಿದೆ

ಸೂಚನೆ: ಪ್ರತಿ ಆಫರ್, ಡಿಸ್ಕೌಂಟ್, ಡೀಲರ್‌ನಿಂದ ಡೀಲರ್‌ಗೆ, ರಾಜ್ಯ, ನಗರಗಳಲ್ಲಿ ವ್ಯತ್ಯಾಸವಾಗಲಿದೆ. ಹತ್ತಿರದ ಡೀಲರ್ ಸಂಪರ್ಕಿಸಿ ಆಫರ್ ಖಚಿತಪಡಿಸಿಕೊಳ್ಳಿ.

Follow Us:
Download App:
  • android
  • ios