6 ತಿಂಗಳಲ್ಲಿ ಮಹೀಂದ್ರ ಥಾರ್ ದಾಖಲೆ; ಕೈಗೆಟುಕುವ ದರಲ್ಲಿ ಲಭ್ಯವಿರುವ 4X4 SUV!
ಮಹೀಂದ್ರ ಬಿಡುಗಡೆ ಮಾಡಿರುವ ಹೊಚ್ಚ ಹೊಸ ಥಾರ್ ಜೀಪ್ ಕೇವಲ 6 ತಿಂಗಳಲ್ಲಿ ದಾಖಲೆ ಬರೆದಿದೆ. ಕಳೆದ ವರ್ಷ ಮಾರುಕಟ್ಟೆ ಪ್ರವೇಶಿಸಿರುವ ನೂತನ ಥಾರ್ ಭಾರತದಲ್ಲಿ ಲಭ್ಯವಿರುವ ಅತೀ ಕಡಿಮೆ ಬೆಲೆಯ 4X4 SUV ಕಾರಾಗಿದೆ. ಈ ಕುರಿತ ಹೆಚ್ಚಿನ ವಿವರ ಇಲ್ಲಿದೆ.
ನವದೆಹಲಿ(ಏ.13): ಭಾರತದಲ್ಲಿ ಇದೀಗ ಹೆಚ್ಚಿನವರ ಮೊದಲ ಆಯ್ಕೆ ಮಹೀಂದ್ರ ಥಾರ್. ಇದಕ್ಕೆ ಹಲವು ಕಾರಣಗಳಿವೆ. ಇದೀಗ ಮಹೀಂದ್ರ ಥಾರ್ ಕಾರಿನ ವೈಟಿಂಗ್ ಅವಧಿ ಕೂಡ ಹೆಚ್ಚಾಗಿದೆ. ಇದಕ್ಕೆ ಕಾರಣ ಅತೀಯಾದ ಬೇಡಿಕೆ. ಇದೀಗ ಬಿಡುಗಡೆಯಾದ 6 ತಿಂಗಳಲ್ಲಿ 50,000 ಥಾರ್ ಬುಕಿಂಗ್ ಆಗಿದೆ. ಈ ಮೂಲಕ ಗರಿಷ್ಠ ಬುಕಿಂಗ್ ಆದ 4X4 SUV ಕಾರಾಗಿದೆ.
ದಿನಕ್ಕೆ 200ರಿಂದ 250 ಮಹೀಂದ್ರಾ ಥಾರ್ ಬುಕ್ಕಿಂಗ್!
ಭಾರತದಲ್ಲಿ ಲಭ್ಯವಿರುವ 4X4 SUV ಕಾರುಗಳ ಪೈಕಿ ಮಹೀಂದ್ರ ಥಾರ್ ಅತೀ ಕಡಿಮೆ ಬೆಲೆಯ ಕಾರಾಗಿದೆ. ಥಾರ್ ಬೇಡಿಕೆ ಹೆಚ್ಚಾಗಿರುವ ಕಾರಣ ನಾಸಿಕ್ ಘಟಕದಲ್ಲಿ ಉತ್ಪಾದನೆಯನ್ನೂ ಹೆಚ್ಚಿಸಲಾಗಿದೆ. ಆದರೂ ಬುಕ್ ಮಾಡಿದ ಗ್ರಾಹಕರಿಗೆ ಕಾರು ಡೆಲಿವರಿ ವಿಳಂಭವಾಗುತ್ತಿದೆ.
ಸೇಫ್ಟಿ ಕ್ರ್ಯಾಶ್ ಟೆಸ್ಟಿಂಗ್: ಮಹೀಂದ್ರಾ ಥಾರ್‌ಗೆ ಎಷ್ಟು ಸ್ಟಾರ್ ಗೊತ್ತಾ?
ಮಹೀಂದ್ರ ಥಾರ್ ಸುರಕ್ಷತೆಯಲ್ಲಿ 4 ಸ್ಟಾರ್ ರೇಟಿಂಗ್ ಪಡೆದಿದೆ. AX ಹಾಗೂ LX ಟ್ರಿಮ್ಸ್ ವೇರಿಯೆಂಟ್‌ಗಳಲ್ಲಿ ನೂತನ ಥಾರ್ ಕಾರು ಲಭ್ಯವಿದೆ. 2.0 ಲೀಟರ್ ಟರ್ಬೋ ಪೆಟ್ರೋಲ್ ಎಂಜಿನ್ 150 bhp ಪವರ್ ಹಾಗೂ 320 nm ಟಾರ್ಕ್ ಉತ್ಪಾದಿಸಬಲ್ಲ ಸಾಮರ್ಥ್ಯ ಹೊಂದಿದೆ. ಮ್ಯಾನ್ಯುಯೆಲ್ ಹಾಗೂ ಆಟೋಮ್ಯಾಟಿಕ್ ಟ್ರಾನ್ಸ್‌ಮಿಶನ್ ಆಯ್ಕೆಗಳಿವೆ.
2.2 ಲೀಟರ್ ಟರ್ಬೋ ಚಾರ್ಜ್ ಎಂಜಿನ್ 130 Bhp ಪವರ್ 320 Nm ಪೀಕ್ ಟಾರ್ಕ್ ಉತ್ಪಾದಿಸಬಲ್ಲ ಸಾಮರ್ಥ್ಯ ಹೊಂದಿದೆ. ಡೀಸೆವ್ ವೇರಿಯೆಂಟ್‌ನಲ್ಲೂ ಮ್ಯಾನ್ಯುಯೆಲ್ ಹಾಗೂ ಆಟೋಮ್ಯಾಟಿಕ್ ಟ್ರಾನ್ಸ್‌ಮಿಶನ್ ಆಯ್ಕೆಗಳಿವೆ.