ಟೋಯೋಟಾ ಫಾರ್ಚುನರ್ ಕಾರು ಭಾರತದಲ್ಲಿ ಅತೀ ಜನಪ್ರಿಯ ಕಾರು. ಇದೀಗ ಫಾರ್ಚುನರ್ ಕಾರಿಗೆ ಠಕ್ಕರ್ ನೀಡಲು ಹೊಸ ಕಿಯಾ ಸೊರೆಂಟೋ ಹೈಬ್ರಿಡ್ ಕಾರು ಬಿಡುಗಡೆಯಾಗುತ್ತಿದೆ. ಈಗಾಗಲೇ ಬುಕಿಂಗ್ ಆರಂಭಗೊಂಡಿದೆ.

ಬೆಂಗಳೂರು (ಆ.03) ಕಾರುಗಳ ನಡುವೆ ಪೈಪೋಟಿ ತೀವ್ರಗೊಳ್ಳುತ್ತಿದೆ. ಭಾರತದಲ್ಲಿ ಜನಪ್ರಿಯ ಟೊಯೋಟಾ ಫಾರ್ಚನರ್ ಕಾರಿಗೆ ಪ್ರತಿಸ್ಪರ್ಧಿಯಾಗಿ ಕಿಯಾ ಸೊರೆಂಟೋ ಹೈಬ್ರಿಡ್ ಕಾರು ಬಿಡುಗಡೆ ಮಾಡುತ್ತಿದೆ. ಕಾರಿನ ಟೀಸರ್ ಬಿಡುಗಡೆ ಮಾಡಲಾಗಿದೆ. ವಿಶೇಷ ಅಂದರೆ ಪ್ರೀ ಬುಕಿಂಗ್ ಕೂಡ ಆರಂಭಗೊಂಡಿದೆ. ಕಿಯಾ ಮೋಟಾರ್ ಭಾರತದಲ್ಲಿ ಬಿಡುಗಡೆ ಮಾಡುತ್ತಿರುವ ಸ್ಟ್ರಾಂಗ್ ಹೈಬ್ರಿಡ್ ಮೊದಲ ಕಾರು ಇದಾಗಿದೆ. ನೇರವಾಗಿ ಟೋಯೋಟಾ ಫಾರ್ಚುನರ್ ಕಾರಿಗೆ ಪ್ರತಿಸ್ಪರ್ಧಿಯಾಗಿದೆ.

ಫಾರ್ಚುನರ್ ಕಾರಿಗೆ ಶುರುವಾಯ್ತು ನಡುಕ

ಆನ್‌ಲೈನ್ ಹಾಗೂ ಅಧಿಕೃತ ಶೋರೂಂಗಳ ಮೂಲಕ ನೂತನ ಸೊರೆಂಟೋ ಕಾರು ಪ್ರೀ ಬುಕ್ ಮಾಡಿಕೊಳ್ಳಬಹುದು. ಭಾರತದಲ್ಲಿ ಫಾರ್ಚುನರ್ ಕಾರಿಗೆ ಪ್ರತಿಸ್ಪರ್ಧಿಯಾಗಿ ಕೆಲ ಕಾರುಗಳಿದ್ದರೂ ಜನಪ್ರಿಯತೆ ಕಡಿಮೆಯಾಗಿಲ್ಲ. ಆದರೆ ಈ ಬಾರಿ ಕಿಯಾ ಸೊರೆಂಟೋ ಹೈಬ್ರಿಡ್ ಕಾರಿನಿಂದ ಫಾರ್ಚುನರ್ ಕಾರಿಗೆ ನಡುಕ ಶುರುವಾಗಿದೆ. ಜೊತೆಗೆ ಸ್ಟ್ರಾಂಗ್ ಹೈಬ್ರಿಡ್ ಕಾರು ಇದಾಗಿದ್ದು, ನಿರ್ವಹಣೆ, ಮೈಲೇಜ್ ಮತ್ತೊಂದು ಆಕರ್ಷಣೆಯಾಗಿದೆ.

ಟೂ-ಟೈರ್ ಎಲ್‌ಇಡಿ ಲೈಟಿಂಗ್ ಸಿಗ್ನೇಚರ್, ಅಗಲ ಬಾನೆಟ್ ಹಾಗೂ ಎತ್ತರವಾದ ಎಸ್‌ಯುವಿ ಶೈಲಿ ಹೊಂದಿದೆ. ಹೀಗಾಗಿ ರಸ್ತೆಯಲ್ಲಿ ಮಸ್ಕುಲರ್ ಫಾರ್ಚುನರ್ ಕಾರಿಗೆ ತೀವ್ರ ಪೈಪೋಟಿ ನೀಡಲಿದೆ. ಆಕರ್ಷಕ ವಿನ್ಯಾಸದ ಹೊಸ ಸೊರೆಂಟೋ ಕಾರು ಇದೀಗ ಸೋಶಿಯಲ್ ಮೀಡಿಯಾದಲ್ಲಿ ಭಾರಿ ಸದ್ದು ಮಾಡುತ್ತಿದೆ. 12.3-ಇಂಚಿನ ಡ್ಯುಯಲ್ ಡಿಸ್‌ಪ್ಲೆ, ಪನೋರಮಿಕ್ ಸನ್‌ರೂಫ್, ವೆಂಟಿಲೇಟೆಡ್ ಸೀಟ್, ಅಡಾಸ್ ಲೆವೆಲ್ 2 ಟೆಕ್, ಆಲ್ ವ್ಹೀಲ್ ಡ್ರೈವ್ ಸೇರಿದಂತೆ ಹಲವು ಫೀಚರ್ಸ್ ಈಕಾರಿನಲ್ಲಿದೆ.

ಸೊರೆಂಟೋ ಪರ್ಫಾಮೆನ್ಸ್

ಫಾರ್ಚುನರ್ ಕಾರು ಹೈವೆ, ಹಳ್ಳಿ ರಸ್ತೆ, ದುರ್ಗಮ ರಸ್ತೆಗಳು, ಆಫ್ ರೋಡ್‌ಗಳಲ್ಲೂ ಸೈ ಎನಿಸಿಕೊಂಡಿದೆ. ಇದೀಗ ಕಿಯಾ ಸೊರೆಂಟೋ ಕಾರಿನ ಪರ್ಫಾಮೆನ್ಸ್ ತೀವ್ರ ಕುತೂಹಲ ಕೆರಳಿಸಿದೆ. ಜಾಗತಿಕ ಮಾರುಕಟ್ಟೆಯಲ್ಲಿ ಲಭ್ಯವಿರುವ ಸೊರೆಂಟೋ ಕಾರು 1.6 ಲೀಟರ್ ಟರ್ಬೋ ಪೆಟ್ರೋಲ್ ಹೈಬ್ರಿಡ್ ಎಂಜಿನ್ ಹೊಂದಿದೆ. ಸ್ಟ್ರಾಂಗ್ ಹೈಬ್ರಿಡ್ ಕಾರಾಗಿರುವ ಕಾರಣ ಎಲೆಕ್ಟ್ರಿಕ್ ಮೋಟಾರ್ ಜೊತೆ ಸೇರಿ 230 ಹೆಚ್‌ಪಿ ಪವರ್ ಹೊಂದಿದೆ.

ಭಾರತದಲ್ಲಿ ಕಿಯಾ ಸೊರೆಂಟೋ ಕಾರಿನ ಬೆಲೆ ಅಂದಾಜು 30 ರಿಂದ 30 ಲಕ್ಷ ರೂಪಾಯಿ ಒಳಗಿರಲಿದೆ. ಆಗಸ್ಟ್ ತಿಂಗಳ ಅಂತ್ಯ ಅಥವಾ ಸೆಪ್ಟೆಂಬರ್ ಆರಂಭದಲ್ಲಿ ನೂತನ ಕಾರು ಭಾರತದಲ್ಲಿ ಬಿಡುಗಡೆಯಾಗಲಿದೆ.