*2022ರ ಮಾರುತಿ ಬೊಲೆನೋದ ವಿನ್ಯಾಸದ ಮಾಹಿತಿ ಬಹಿರಂಗ*ಹೊರಾಂಗಣದ ಮರುವಿನ್ಯಾಸ: ಆರು ಟ್ರಿಮ್‌ಗಳಲ್ಲಿ ಲಭ್ಯ

Auto Desk: 2022 ಮಾರುತಿ ಸುಜುಕಿ ಬೊಲೆನೋದ (Maruti Baleno) ಕೆಲ ಅಪರೂಪದ ಚಿತ್ರಗಳು ಬಹಿರಂಗಗೊಂಡಿದ್ದು, ಅಂತರ್ಜಾಲದಲ್ಲಿ ಸದ್ದು ಮಾಡುತ್ತಿದೆ. 
ಅದರ ಪ್ರೀಮಿಯಂ ಡೀಲರ್‌ಶಿಪ್ ಔಟ್‌ಲೆಟ್ ನೆಕ್ಸಾ ವೆಬ್‌ಸೈಟ್ (Nexa website) ಮೂಲಕ 3D ವರ್ಚುವಲ್ ಲುಕ್‌ನಲ್ಲಿ (3D virtual look) 2022 ರ ಮಾರುತಿ ಸುಜುಕಿ ಬೊಲೆನೊದ ಚಿತ್ರಗಳು ಸೋರಿಕೆಯಾಗಿದೆ. ಅದರ ಪ್ರಕಾರ, ಈ ಹ್ಯಾಚ್‌ಬ್ಯಾಕ್ನ (Hatchback) ವಿನ್ಯಾಸ ಹಾಗೂ ಇತರ ವೈಶಿಷ್ಟ್ಯಗಳ ಕುರಿತು ಕೆಲ ಮಾಹಿತಿಗಳು ಲಭ್ಯವಾಗಿವೆ.

Add Asianetnews Kannada as a Preferred SourcegooglePreferred

ಬೊಲೆನೋ ಮರುವಿನ್ಯಾಸಗೊಳಿಸಲಾದ ಮುಂಭಾಗದೊಂದಿಗೆ ಬರಲಿದೆ. ಫೇಸ್ ಲಿಫ್ಟ್ (Facelit) ಮಾದರಿಯಲ್ಲಿ ಎದುರಿನ ಗ್ರಿಲ್ ಅನ್ನು ವಿಸ್ತರಿಸಲಾಗಿದೆ. ಇದು ಹೊಸ ಎಲ್‌ಇಡಿ (LED) ಹೆಡ್‌ಲೈಟ್‌ಗಳು ಮತ್ತು ಸಿಗ್ನೇಚರ್ ಡಿಆರ್ಎಲ್(DRL), ಫಾಗ್‌ಲ್ಯಾಂಪ್ ಕೇಸಿಂಗ್ನ ಗಾತ್ರವನ್ನು ಹೆಚ್ಚಿಸಲು ಟ್ವೀಕ್‌ ಮಾಡಲಾದ ಬಂಪರ್‌ಗಳನ್ನು ಒಳಗೊಂಡಿದೆ. ಈ ಪ್ರೀಮಿಯಂ ಹ್ಯಾಚ್‌ಬ್ಯಾಕ್‌ ಆರು ಬಣ್ಣಗಳ ಪ್ಯಾಲೆಟ್‌ಗಳನ್ನು ಒಳಗೊಂಡಿದೆ: ನೀಲಿ, ಬಿಳಿ, ಕೆಂಪು, ಕೆನೆ, ಬೂಧು ಮತ್ತು ಸಿಲ್ವರ್‌ ಬಣ್ಣಗಳು. 

ಇದನ್ನೂ ಓದಿ: Auto PLI Scheme ಪ್ರೋತ್ಸಾಹ ಧನಕ್ಕೆ ಟಾಟಾ, ಮಹೀಂದ್ರಾ, ಹ್ಯುಂಡೈ ಆಯ್ಕೆ: ಮಾರುತಿ ಪಟ್ಟಿಯಿಂದ ಹೊರಗೆ!

ಇವುಗಳು ಸ್ವಲ್ಪಮಟ್ಟಿಗೆ ಮರುವಿನ್ಯಾಸಗೊಳಿಸಲಾದ 10-ಸ್ಪೋಕ್ ಅಲಾಯ್ ಚಕ್ರಗಳ ನೋಟ ಹೊಂದಿರಲಿವೆ. ಜೋಡಿ ಸ್ಲೀಕರ್, ಕೋನೀಯ ಎಲ್ಇಡಿ ಹೆಡ್‌ಲೈಟ್‌ಗಳು, ಹಿಂಭಾಗದಲ್ಲಿ, ಹೊಸ ಸ್ಪ್ಲಿಟ್-ಎಲ್ಇಡಿ ಟೈಲ್ ಲ್ಯಾಂಪ್‌ಗಳು ಹಾಗೂ ಮರುವಿನ್ಯಾಸಗೊಳಿಸಲಾದ ಬಂಪರ್‌ಗಳು ವಿನ್ಯಾಸವನ್ನು ಪೂರ್ತಿಗೊಳಿಸುತ್ತವೆ. ಪ್ರೀಮಿಯಂ ಹ್ಯಾಚ್‌ಬ್ಯಾಕ್ ಅನ್ನು ಯಾವುದೇ ಸನ್‌ರೂಫ್‌ನೊಂದಿಗೆ ನೀಡಲಾಗುವುದಿಲ್ಲ ಎಂದು ಚಿತ್ರ ತೋರಿಸುತ್ತದೆ.

ಒಳಭಾಗದಲ್ಲಿ ಮರುವಿನ್ಯಾಸಗೊಳಿಸಲಾದ ಡ್ಯಾಶ್‌ಬೋರ್ಡ್. ಆಂಡ್ರಾಯ್ಡ್ ಆಟೋ ಮತ್ತು ಆ್ಯಪಲ್ ಕಾರ್‌ಪ್ಲೇ ಜೊತೆಗೆ ದೊಡ್ಡ 9-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್‌ಗಳಿರಲಿವೆ. ಇದರ ಹೊಸ ಸೇರ್ಪಡೆಗಳಲ್ಲಿ 360-ಡಿಗ್ರಿ ಕ್ಯಾಮೆರಾ, ಅರ್ಕಾಮಿಸ್-ಟ್ಯೂನ್ಡ್ ಸೌಂಡ್ ಸಿಸ್ಟಮ್ ಮತ್ತು ವೈರ್‌ಲೆಸ್ ಫೋನ್ ಚಾರ್ಜರ್ ಸೇರಿವೆ. ಬಲೆನೊದಲ್ಲಿ ಸ್ವಿಫ್ಟ್‌ನಂತೆಯೇ ಸ್ಟೀರಿಂಗ್ ವ್ಹೀಲ್ ಒದಗಿಸಲಾಗುವುದು. ಇದರ ಡ್ಯಾಶ್‌ಬೋರ್ಡ್ ಅನ್ನು ಸಂಪೂರ್ಣವಾಗಿ ನವೀಕರಿಸಲಾಗಿದ್ದು, ಈಗ ಅದನ್ನು ಮೂರು-ಟೋನ್ ಫಿನಿಶ್‌ನಲ್ಲಿ ನೀಡುತ್ತದೆ: ಕಪ್ಪು, ಬೆಳ್ಳಿ ಮತ್ತು ನೇರಳೆ. ಇದರ ಕ್ಯಾಬಿನ್ ಕಪ್ಪು ಮತ್ತು ನೇರಳೆ ವಿನ್ಯಾಸವನ್ನು ಹೊಂದಿರುತ್ತದೆ.

ಆರು ಏರ್‌ಬ್ಯಾಗ್‌ಗಳು, ಇಬಿಡಿ (EBD) ಜೊತೆಗೆ ಎಬಿಎಸ್‌ (ABS), ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್, ಐಸೋಫಿಕ್ಸ್ ( ISOFIX) ಚೈಲ್ಡ್-ಸೀಟ್ ಮೌಂಟ್‌ಗಳು ಮತ್ತು ಹಿಂಭಾಗದ ಪಾರ್ಕಿಂಗ್ ಸೆನ್ಸಾರ್‌ನಂತಹ ಹೆಚ್ಚಿನ ಸುರಕ್ಷತಾ ಕ್ರಮಗಳನ್ನು ಒಳಗೊಂಡಿದೆ.

ಬಲೆನೊ ಮುಂಬರುವ ದಿನಗಳಲ್ಲಿ ಮಾರುಕಟ್ಟೆಗೆ ಬರಲಿದ್ದು, ಅದರ ಆರಂಭಿಕ ಬೆಲೆ 6.5 ಲಕ್ಷ ರೂ. (ಎಕ್ಸ್ ಶೋ ರೂಂ) ಎಂದು ನಿರೀಕ್ಷಿಸಲಾಗುತ್ತಿದೆ. ಈ ಹ್ಯಾಚ್ ಬ್ಯಾಕ್‌ ಅನ್ನು ಆರು ಟ್ರಿಮ್‌ಗಳಲ್ಲಿ ನೀಡಲಾಗುತ್ತದೆ: ಸಿಗ್ಮಾ, ಡೆಲ್ಟಾ, ಝೀಟಾ, ಝೀಟಾ (O), ಆಲ್ಫಾ ಮತ್ತು ಆಲ್ಫಾ (O). 

ಇದನ್ನೂ ಓದಿ: Dream Car 83ರ ಹರೆಯದಲ್ಲಿ ಮೊದಲ ಕಾರು ಖರೀದಿಸಿದ ತಾತ, ಹೊಸ ವ್ಯಾಗನರ್ ಮೂಲಕ ಲಾಂಗ್ ಟ್ರಿಪ್ ಪ್ಲಾನ್!

ಇದು ಟಾಟಾ ಆಲ್ಟ್ರೋಜ್‌ (Tata Altroz), ಹ್ಯುಂಡೈ ಐ 20 ( Hyundai i20), ಹೊಂಡಾ ಜಾಸ್ (Honda Jazz) ಮತ್ತು ಮುಂಬರುವ ಫೇಸ್‌ಲಿಫ್ಟೆಡ್ ಟೊಯೋಟಾ ಗ್ಲಾನ್ಜಾಗೆ ಪೈಪೋಟಿ ನೀಡಲಿದೆ.ಮಾರುತಿ 2022ರಲ್ಲಿ ಹಲವು ಕಾರುಗಳನ್ನು ಬಿಡುಗಡೆಗೊಳಿಸಲಿದೆ. ಅದರಲ್ಲಿ ಒಂದು 2022 ಮಾರುತಿ ಬ್ರೆಝಾ. ಇದು ಆಲ್‌-ನ್ಯೂ ಕ್ಯಾಬಿನ್‌ನೊಂದಿಗೆ ಬರಲಿದೆ.

ಇದು ಪ್ರಸ್ತುತ ಮಾದರಿಗಿಂತ ಗಮನಾರ್ಹವಾಗಿ ಪ್ರೀಮಿಯಂ ಆಗಿರುತ್ತದೆ. ಇದು ಸಂಪೂರ್ಣವಾಗಿ ಪರಿಷ್ಕೃತ ಡ್ಯಾಶ್‌ಬೋರ್ಡ್, ಹೊಸ ಕನ್ಸೋಲ್ ಮತ್ತು ಇನ್‌ಸ್ಟ್ರುಮೆಂಟ್ ಕನ್ಸೋಲ್‌ನೊಂದಿಗೆ ಎಲ್ಲಾ-ಹೊಸ ಇಂಟೀರಿಯರ್ ಥೀಮ್‌ನೊಂದಿಗೆ ಬರುತ್ತದೆ.

ಜೊತೆಗೆ, ಎಕ್ಸ್‌ಎಲ್7 (XL7) ಮಾರುತಿ ಸುಜುಕಿಯ ಎಂಪಿವಿ (MPV) ಕಾರು. ಮಾರುತಿ ಸುಜುಕಿಯನ್ನು ರೂ.ಗಳಲ್ಲಿ ಬಿಡುಗಡೆ ಮಾಡುವ ನಿರೀಕ್ಷೆಯಿದೆ. ಭಾರತೀಯ ಆಟೋಮೊಬೈಲ್ ಮಾರುಕಟ್ಟೆಯಲ್ಲಿ ಇದರ ಬೆಲೆ 12 ರಿಂದ 13 ಲಕ್ಷ ರೂ.ಗಳವರೆಗೆ ಇರಲಿದೆ.