Asianet Suvarna News Asianet Suvarna News

OMG! 2 ಗಂಟೆಯಲ್ಲಿ ಜೂಕರ್​ಬರ್ಗ್ ಕಳೆದುಕೊಂಡಿದ್ದೇಷ್ಟು?

ಫೇಸ್​ಬುಕ್ ಸಂಸ್ಥಾಪಕ ಮಾರ್ಕ್ ಜೂಕರ್​ಬರ್ಗ್ ಶಾಕ್‌ 

ಕೇವಲ 2 ಗಂಟೆಯಲ್ಲಿ ಲಕ್ಷಾಂತರ ಕೋಟಿ ನಷ್ಟ

ಷೇರು ಮಾರುಕಟ್ಟೆಯಲ್ಲಿ ಫೇಸ್​ಬುಕ್ ಮೌಲ್ಯ ಕುಸಿತ

ಫೇಸ್​ಬುಕ್​ ಷೇರುಗಳ ಬೆಲೆಯಲ್ಲಿ ಶೇ.20 ರಷ್ಟು ಕುಸಿತ

1 ಲಕ್ಷದ 16 ಸಾವಿರದ 64 ಕೋಟಿ ರೂ. ನಷ್ಟ

Zuckerberg Loses More Than $15 Billion in Record Facebook Fall
Author
Bengaluru, First Published Jul 27, 2018, 3:46 PM IST

ನ್ಯೂಯಾರ್ಕ್(ಜು.27): ಫೇಸ್​ಬುಕ್​ ಎಂಬ ಸೋಷಿಯಲ್ ಮಿಡಿಯಾದ ಡಾನ್ ಮಾರ್ಕ್ ಜೂಕರ್​ಬರ್ಗ್​ , ಕೇವಲ 2 ಗಂಟೆಗಳಲ್ಲಿ ಬರೋಬ್ಬರಿ 1 ಲಕ್ಷದ 16 ಸಾವಿರದ 64 ಕೋಟಿ ರೂ. ಕಳೆದುಕೊಂಡಿದ್ದಾರೆ.

ಹೌದು, ಇದು ಅಚ್ಚರಿಯಾದರೂ ಸತ್ಯ. ಫೇಸ್​ಬುಕ್​ ಅಮೆರಿಕದ ಷೇರು ಮಾರುಕಟ್ಟೆಯಲ್ಲಿ ಕೇವಲ 2 ಗಂಟೆಗಳಲ್ಲಿ ಭಾರೀ ಕುಸಿತ ಕಾಣುವ ಮೂಲಕ , ಜೂಕರ್​ಬರ್ಗ್ ಬರೋಬ್ಬರಿ 1 ಲಕ್ಷದ 16 ಸಾವಿರದ 64 ಕೋಟಿ ರೂ. ಕಳೆದುಕೊಂಡಿದ್ದಾರೆ.

ಜೂಕರ್​ಬರ್ಗ್ ಕಂಪನಿಯ ಎರಡನೇ ತ್ರೈಮಾಸಿಕದ ವರದಿಯನ್ನು ಇತ್ತೀಚೆಗಷ್ಟೇ ಬಿಡುಗಡೆ ಮಾಡಿದ್ದರು. ಈ ವರದಿಯಲ್ಲಿ ಕಂಪನಿ ಲಾಭಾಂಶದಲ್ಲಿ ಕಡಿಮೆಯಾಗಿರುವುದನ್ನು ಜೂಕರ್​ಬರ್ಗ್ ಪ್ರಸ್ತಪಾಸಿದ್ದರು. ಹೀಗಾಗಿ ನ್ಯೂಯಾರ್ಕ್​ ಷೇರುಮಾರುಕಟ್ಟೆಯಲ್ಲಿ ಫೇಸ್​ಬುಕ್​ ಷೇರುಗಳ ಬೆಲೆಯಲ್ಲಿ ಶೇ.20 ರಷ್ಟು ಕುಸಿತ ಕಂಡುಬಂದಿತು. 

ಫೇಸ್​ಬುಕ್​ ಕಂಟೆಂಟ್​ ಪಾಲಿಸಿ, ವ್ಯಕ್ತಿಗಳ ವೈಯಕ್ತಿಕ ಮಾಹಿತಿಯನ್ನ ಕಾಪಾಡುವಲ್ಲಿ ವಿಫಲತೆ, ಜಾಹೀರಾತು ನೀತಿಯಲ್ಲಿ ಬದಲಾವಣೆ ಮಾಡಿದ್ದರಿಂದ ಕಂಪನಿ ಬೆಳವಣಿಗೆ ಮೇಲೆ ಪರಿಣಾಮ ಬೀರಿದೆ. ಶ್ರೀಮಂತರ ಲಿಸ್ಟ್​ನಲ್ಲಿ ಕುಸಿತ ಕಂಡ ಜೂಕರ್​ಬರ್ಗ್​, ಬ್ಲೂಮ್​ ಬರ್ಗ್​ ಬಿಲೇನಿಯರ್​ ಇಂಡೆಕ್ಸ್​ನಲ್ಲಿ ಮೂರನೇ ಸ್ಥಾನದಿಂದ ಆರನೇ ಸ್ಥಾನಕ್ಕೆ ಕುಸಿತ ಕಂಡಿದ್ದಾರೆ.

70 ಬಿಲಿಯನ್​ ಡಾಲರ್​​ನಿಂದ ಕೆಳಗಿಳಿದು ಪಟ್ಟಿಯಲ್ಲಿ ಜೂಕರ್​ಬರ್ಗ್ ಕುಸಿತ ಕಂಡಿದ್ದಾರೆ.  ಕಂಪನಿಯ ಮುಖ್ಯ ಹಣಕಾಸು ಕಾರ್ಯನಿರ್ವಹಣಾಧಿಕಾರಿ ಡೆವಿಡ್​ ವಾರ್ನರ್​ ಎರಡನೇ ತ್ರೈವಾರ್ಷಿಕ ವರದಿಯನ್ನು ಮಂಡಿಸಿದ್ದರು. ಅಲ್ಲಿವರೆಗೂ ಏರುಮುಖವಾಗಿದ್ದ ಷೇರುಗಳ ಬೆಲೆಯಲ್ಲಿ ಇದ್ದಕ್ಕಿದ್ದಂತೆ ಶೇ 24 ರಷ್ಟು ಕುಸಿತ ಕಂಡು ಭಾರಿ ನಷ್ಟ ಅನುಭವಿಸಿದೆ. 

Follow Us:
Download App:
  • android
  • ios