ಸೇಡಿಗಾಗಿ ಎಕ್ಸ್ ಬಾಯ್‌ಫ್ರೆಂಡ್‌ಗೆ ಕ್ಯಾಶ್ ಆನ್ ಡೆಲಿವರಿ ಫುಡ್ ಆರ್ಡರ್ ಮಾಡಿದ ಅಂಕಿತಾ!
ಸಾಮಾಜಿಕ ಜಾಲತಾಣದಲ್ಲಿ ದಿನಕ್ಕೊಂದು ವಿಷ್ಯ ವೈರಲ್ ಆಗ್ತಿರುತ್ತದೆ. ಜೊಮಾಟೊ ಕೂಡ ಆಗಾಗ ಸುದ್ದಿ ಮಾಡ್ತಿರುತ್ತದೆ. ಈಗ ಜೊಮಾಟೊದ ಮತ್ತೊಂದು ಟ್ವಿಟ್ ವೈರಲ್ ಆಗಿದ್ದು ಜನರು ಬಿದ್ದು ಬಿದ್ದು ನಗ್ತಿದ್ದಾರೆ.
ಲವ್ ಬ್ರೇಕ್ ಅಪ್ ಆದವರು ಸೇಡು ತೀರಿಸಿಕೊಳ್ಳಲು ನಾನಾ ಉಪಾಯಗಳನ್ನು ಹುಡುಕ್ತಾರೆ. ಕೆಲವರು ಐಡಿಯಾ ತುಂಬಾ ವಿಚಿತ್ರವಾಗಿರುತ್ತದೆ. ಆನ್ಲೈನ್‌ನಲ್ಲಿ ಆಹಾರ ಡಿಲೇವರಿ ಮಾಡುವ ಕಂಪನಿ ಜೊಮಾಟೊ ಕೂಡ ಭಗ್ನ ಪ್ರೇಮಿ ಕಷ್ಟದಿಂದ ತೊಂದರೆಗೊಳಗಾಗಿದೆ. ಇಬ್ಬರ ಜಗಳದಲ್ಲಿ ಮೂರನೇಯವನಿಗೆ ಲಾಭ ಎನ್ನುವ ಬದಲು ಇಲ್ಲಿ ಮೂರನೇಯವನಿಗೆ ನಷ್ಟವಾಗ್ತಿದೆ. ಮಾಜಿ ಪ್ರೇಮಿಗಳ ಕಚ್ಚಾಟದಲ್ಲಿ ಜೊಮಾಟೊಗೆ ಪೇಮೆಂಟ್ ಆಗ್ತಿಲ್ಲ. ಅದು ಹೇಗೆ ಅಂತಾ ನೀವು ಕೇಳ್ಬಹುದು. ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ಜೊಮಾಟೊ ಟ್ವಿಟರ್ ಬಗ್ಗೆ ಮಾಹಿತಿ ನೀಡಿದ್ರೆ ನಿಮಗೆ ಅದು ಹೇಗೆ ಅನ್ನೋದು ಅರ್ಥವಾಗುತ್ತದೆ.
ಜೊಮಾಟೊ (Zomato) ಈಗಿನ ದಿನಗಳಲ್ಲಿ ಹೆಚ್ಚು ಸುದ್ದಿಯಲ್ಲಿದೆ. ಬರೀ ಆಹಾರ (Food) ವಿತರಣೆ ವಿಷ್ಯದಲ್ಲಿ ಮಾತ್ರವಲ್ಲ ಜೊಮಾಟೋ ಟ್ವಿಟರ್ ಮೂಲಕವೂ ಅನೇಕ ಆಸಕ್ತಿಕರ ವಿಷ್ಯಗಳನ್ನು ಹಂಚಿಕೊಳ್ಳುತ್ತದೆ. ಈಗ ಮತ್ತೊಂದು ವಿಷ್ಯವನ್ನು ಟ್ವಿಟರ್ (Twitter) ಮಾಡಿದ್ದು, ಬಳಕೆದಾರರು ಇದನ್ನೋದಿ ಬಿದ್ದು ಬಿದ್ದು ನಗ್ತಿದ್ದಾರೆ.
ಜಗತ್ತಿನ ಅತೀ ಶ್ರೀಮಂತರು ಎಲಾನ್ ಮಸ್ಕ್, ಅಂಬಾನಿ ಅಲ್ವೇ ಅಲ್ಲ, ಶತಕೋಟಿ ಆಸ್ತಿಯ ಒಡತಿ ಈ ಮಹಿಳೆ!
ಸೇಡು ತೀರಿಸಿಕೊಳ್ಳಲು ಈ ದಾರಿ ಹಿಡಿದ ಮಾಜಿ ಪ್ರಿಯತಮೆ : ಆನ್ಲೈನ್ ಮೂಲಕ ನೀವು ಯಾವುದೇ ವಸ್ತುಗಳನ್ನು ಆರ್ಡರ್ ಮಾಡಿದ್ರೂ ನಿಮಗೆ ಕ್ಯಾಶ್ ಆನ್ ಡಿಲೆವರಿ ಆಯ್ಕೆ ಸಿಗುತ್ತದೆ. ಜೊಮಾಟೊದಲ್ಲಿ ಕೂಡ ಈ ಆಯ್ಕೆಯಿದೆ. ಭೋಪಾಲದ ಅಂಕಿತಾ, ಇದನ್ನೇ ಬಂಡವಾಳ ಮಾಡಿಕೊಂಡು, ಮಾಜಿ ಪ್ರೇಮಿಗೆ ಸತಾಯಿಸ್ತಿದ್ದಾಳೆ.
ಕ್ಯಾಶ್ ಆನ್ ಡಿಲೆವರಿ ನೀಡ್ತಿರುವ ಅಂಕಿತಾ : ಜೊಮಾಟೊದಲ್ಲಿ ಆಹಾರ ಬುಕ್ ಮಾಡುವ ಅಂಕಿತಾ ಅದನ್ನು ಮಾಜಿ ಬಾಯ್ ಪ್ರೆಂಡ್ ಅಡ್ರೆಸ್‌ಗೆ ಕಳಿಸುವಂತೆ ಹೇಳ್ತಾಳೆ. ಆದ್ರೆ ಆನ್ಲೈನ್‌ನಲ್ಲಿ ಪೇಮೆಂಟ್ ಮಾಡದೇ ಕ್ಯಾಶ್ ಆನ್ ಡಿಲೆವರಿ ಮಾಡ್ತಾಳೆ. ಕ್ಯಾಶ್ ಆನ್ ಡಿಲೆವರಿ ಅಂದ್ರೆ ಮನೆಗೆ ಆಹಾರ ಬಂದ್ಮೇಲೆ ನೀವು ಹಣ ನೀಡ್ಬೇಕು. ಇದು ನಿಮಗೆಲ್ಲ ಗೊತ್ತು. ತಾನು ಆರ್ಡರ್ ಮಾಡದೆ ಬಂದ ಆಹಾರಕ್ಕೆ ಕ್ಯಾಶ್ ನೀಡಲು ಇತ್ತ ಮಾಜಿ ಬಾಯ್ ಫ್ರೆಂಡ್ ನಿರಾಕರಿಸುತ್ತಿದ್ದಾನೆ. ಒಂದಲ್ಲ ಎರಡಲ್ಲ ಬರೋಬ್ಬರಿ ಮೂರು ಬಾರಿ ಹೀಗೆ ಆಗಿದೆ. ಜೊಮಾಟೊ ಡಿಲೆವರಿ ಬಾಯ್, ಅಂಕಿತಾ ಮಾಜಿ ಬಾಯ್ ಫ್ರೆಂಡ್ ಮನೆಗೆ ಹೋಗಿ ಆಹಾರ ನೀಡಿದ್ರೆ ಆಕೆ ಮಾಜಿ ಹಣ ನೀಡ್ತಿಲ್ಲ.
13,000 ಕನ್ನಡಿಗರಿಗೆ ಉದ್ಯೋಗ ನೀಡಲಿದೆ ಫಾಕ್ಸ್‌ಕಾನ್ ಸಂಸ್ಥೆ: 5,000 ಕೋಟಿ ರೂ. ಹೂಡಿಕೆಗೆ ಒಪ್ಪಂದ
ಬೇಸತ್ತ ಜೊಮಾಟೊದಿಂದ ಟ್ವೀಟ್ : ಒಂದಲ್ಲ ಎರಡಲ್ಲ ಮೂರು ಬಾರಿ ಇದೇ ಘಟನೆ ಮರುಕಳಿಸಿದ ಕಾರಣ ಜೊಮಾಟೊ ಬೇಸತ್ತಿದೆ. ಜೊಮಾಟೊ ಅಂಕಿತಾಗೆ ನೇರವಾಗಿ ಟ್ವೀಟ್ ಮಾಡಿದೆ. ಕ್ಯಾಶ್ ಆನ್ ಡಿಲೆವರಿ ಮೂಲಕ ಆಹಾರ ಕಳಿಸೋದನ್ನು ನಿಲ್ಲಿಸುವಂತೆ ಅಂಕಿತಾಗೆ ಜೊಮಾಟೊ ವಿನಂತಿ ಮಾಡಿದೆ. ಅಂಕಿತಾ ದಯವಿಟ್ಟು ನಿಮ್ಮ ಮಾಜಿ ಗೆಳೆಯನಿಗೆ ಕ್ಯಾಶ್ ಆನ್ ಡೆಲಿವರಿ ಮೂಲಕ ಆಹಾರವನ್ನು ಕಳುಹಿಸುವುದನ್ನು ನಿಲ್ಲಿಸಿ. ಇದು ಮೂರನೇ ಬಾರಿ ಅವರು ಆಹಾರ ಆರ್ಡರ್‌ಗಳಿಗೆ ಪಾವತಿಸಲು ನಿರಾಕರಿಸಿದ್ದಾರೆ ಎಂದು ಜೊಮಾಟೋ ಟ್ವೀಟ್ ಮಾಡಿದೆ.
ಜೊಮಾಟೊ ಈ ಟ್ವಿಟ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಬಳಕೆದಾರರು ಇದನ್ನು ತಮಾಷೆಯಾಗಿ ತೆಗೆದುಕೊಂಡಿದ್ದಾರೆ. ಇದು ಜೊಮಾಟೊದ ಕಾಲ್ಪನಿಕ ಕಥೆ ಎಂದು ಕೆಲವರು ಹೇಳಿದ್ದಾರೆ. ಅಂಕಿತಾಗೆ ಕ್ಯಾಶ್ ಆನ್ ಡೆಲಿವರಿಯಲ್ಲಿ ಆಹಾರವನ್ನು ಕಳುಹಿಸಬೇಕು ಇನ್ನೊಬ್ಬ ಬಳಕೆದಾರ ತಮಾಷೆ ಮಾಡಿದ್ದಾನೆ. ಇಲ್ಲಿಯವರೆಗೆ ಜೊಮಾಟೊದ ಈ ಟ್ವೀಟ್ನ್ನು 2 ಲಕ್ಷ 30 ಸಾವಿರಕ್ಕೂ ಹೆಚ್ಚು ಬಾರಿ ವೀಕ್ಷಣೆ ಮಾಡಲಾಗಿದೆ. ಕೆಲವು ದಿನಗಳ ಹಿಂದೆ ಯಾರೋ ಸ್ವಿಗ್ಗಿ ಮೂಲಕ ನನಗೆ ಆಹಾರವನ್ನು ಕಳುಹಿಸಿದ್ದರು. ಕ್ಯಾಶ್ ಆನ್ ಡಿಲೆವರಿ ವಿಧಾನದಲ್ಲೇ ಕಳುಹಿಸಿದ್ದರು ಎಂದು ಇನ್ನೊಬ್ಬ ಬಳಕೆದಾರ ಕಮೆಂಟ್ ಮಾಡಿದ್ದಾನೆ.