ಕೇವಲ 30 ರೂ.ಗೆ ಝೊಮಾಟೊ ಗೋಲ್ಡ್ ಸದಸ್ಯತ್ವ, ಆರು ತಿಂಗಳು ಡೆಲಿವರಿ ಉಚಿತ

ಝೊಮಾಟೊ ತನ್ನ ಗ್ರಾಹಕರಿಗೆ ಖುಷಿ ಸುದ್ದಿಯೊಂದನ್ನು ನೀಡಿದೆ. ಅತೀ ಕಡಿಮೆ ಬೆಲೆಗೆ ಝೊಮಾಟೊ ಗೋಲ್ಡನ್ ಸದಸ್ಯತ್ವ ಪಡೆಯುವ ಅವಕಾಶ ನಿಮಗೆ ಸಿಗ್ತಿದೆ. ಅದ್ರ ಪೂರ್ತಿ ವಿವರ ಇಲ್ಲಿದೆ. 
 

zomato gold 6 month membership rs 30 roo

ತುಂಬಾ ಹಸಿವಾಗ್ತಿದೆ, ರುಚಿ ರುಚಿಯಾದದ್ದನ್ನು ತಿನ್ನಬೇಕು ಅನ್ನಿಸಿದಾಗ ಮೊದಲು ನೆನಪಾಗೋದು ಆನ್ಲೈನ್ ಫುಡ್ ಡೆಲೆವರಿ ಅಪ್ಲಿಕೇಷನ್ ಝೊಮಾಟೊ (Online Food Delivery App Zomato). ಇತ್ತೀಚಿನ ದಿನಗಳಲ್ಲಿ ಝೊಮಾಟೊ ಹಾಗೂ ಸ್ವಿಗ್ಗಿ ಮೂಲಕ ಆಹಾರ ಆರ್ಡರ್ ಮಾಡುವವರ ಸಂಖ್ಯೆ ಹೆಚ್ಚಿದೆ. ಮನೆಯಿಂದ ಹೊರಗೆ ಹೋಗೋಕೆ ಬೇಸರ ಎನ್ನುವವರಿಂದ ಹಿಡಿದು ಕಚೇರಿ ಕೆಲಸದಲ್ಲಿ ಬ್ಯೂಸಿ ಇರುವ ಪ್ರತಿಯೊಬ್ಬರೂ ಇದ್ರ ಮೊರೆ ಹೋಗ್ತಿದ್ದಾರೆ. ಈಗ ಝೊಮಾಟೊ ತನ್ನ ಗ್ರಾಹಕರಿಗೆ ಖುಷಿ ಸುದ್ದಿಯೊಂದನ್ನು ನೀಡಿದೆ. ನೀವು ಅತೀ ಕಡಿಮೆ ಬೆಲೆಯಲ್ಲಿ ಝೊಮಾಟೊ ಗೋಲ್ಡನ್ ಸದಸ್ಯತ್ವವನ್ನು ಪಡೆಯಬಹುದು. 

ಕಡಿಮೆ ಬೆಲೆಗೆ ಝೊಮಾಟೋ ಗೋಲ್ಡನ್ ಸದಸ್ಯತ್ವ (Golden Membership) :  ಇ-ಕಾಮರ್ಸ್ ಕಂಪನಿ ಝೊಮಾಟೊ ಕೇವಲ 30 ರೂಪಾಯಿಗೆ ಝೊಮಾಟೊ ಗೋಲ್ಡ್ ಸದಸ್ಯತ್ವವನ್ನು ನೀಡುತ್ತಿದೆ. ಕಂಪನಿಯಿಂದ ಈ ಸದಸ್ಯತ್ವವನ್ನು ತೆಗೆದುಕೊಂಡ ನಂತ್ರ ಗ್ರಾಹಕರು 6 ತಿಂಗಳವರೆಗೆ ಉಚಿತ ಡೆಲಿವರಿ ಸೌಲಭ್ಯವನ್ನು ಪಡೆಯುತ್ತಾನೆ. ಮಾಹಿತಿಯ ಪ್ರಕಾರ, ಈ ಸದಸ್ಯತ್ವ ಪಡೆದ್ಮೇಲೆ ನೀವು ನಿಮ್ಮ ಮನೆ ಅಥವಾ ಕಚೇರಿಯಿಂದ 7 ಕಿಲೋಮೀಟರ್ ದೂರದಲ್ಲಿರುವ ಯಾವುದೇ ಹೋಟೆಲ್ ನಿಂದ ಆಹಾರ ಆರ್ಡರ್ ಮಾಡಿದ್ರೆ ನಿಮಗೆ ಝೊಮಾಟೊ ಉಚಿತ ಡೆಲಿವರಿ ನೀಡಲಿದೆ. ಆದ್ರೆ ಇಲ್ಲೊಂದು ಷರತ್ತಿದೆ. ನೀವು 200 ರೂಪಾಯಿಗಿಂತ ಹೆಚ್ಚಿನ ಆಹಾರವನ್ನು ಆರ್ಡರ್‌ ಮಾಡಬೇಕು. ಅದಕ್ಕಿಂತ ಕಡಿಮೆ ಬೆಲೆಯ ಆಹಾರ ಆರ್ಡರ್ ಮಾಡಿದ್ರೆ ಡೆಲಿವರಿ ಚಾರ್ಜ್ ನೀಡಬೇಕಾಗುತ್ತದೆ. 

ಬ್ರೇಕ್ ಅಪ್ ನಂತ್ರ ಗಳಿಕೆಗೆ ಹೊಸ ದಾರಿ ಹುಡುಕಿದ ಮಲೈಕಾ ಅರೋರಾ!

ಗ್ರಾಹಕರು ನೆನಪಿಡಬೇಕಾದ ಇನ್ನೊಂದು ವಿಷ್ಯವೇನೆಂದ್ರೆ ಝೊಮಾಟೊ ಡೆಲಿವರಿ ಹುಡುಗರನ್ನು ಬಳಸುವ ರೆಸ್ಟೋರೆಂಟ್‌ಗಳಲ್ಲಿ ಮಾತ್ರ ಈ ಆಫರ್ ಲಭ್ಯವಿರುತ್ತದೆ. ಇದು  ಮೂರು ಪ್ಲಸ್ ಮೂರು ಅಂದ್ರೆ ಝೊಮಾಟೊದ ಆರು ತಿಂಗಳ ಸದಸ್ಯತ್ವವಾಗಿದೆ. ಈ ಝೊಮಾಟೊ ಗೋಲ್ಡ್ ಸದಸ್ಯತ್ವದಲ್ಲಿ ಉಚಿತ ವಿತರಣೆಯೊಂದಿಗೆ ಇತರ ಸೌಲಭ್ಯಗಳನ್ನು ಕಂಪನಿ ತನ್ನ ಗ್ರಾಹಕರಿಗೆ ನೀಡ್ತಿದೆ. 

ನೀವು ಝೊಮಾಟೊದ ಹಳೆ ಗ್ರಾಹಕರಾಗಿದ್ದರೆ ನಿಮಗೆ ಗೋಲ್ಡನ್ ಸದಸ್ಯತ್ವ ಇನ್ನಷ್ಟು ಕಡಿಮೆ ಬೆಲೆಗೆ ಲಭ್ಯವಿದೆ. ಅಂದ್ರೆ ನೀವು ಕೇವಲ 20 ರೂಪಾಯಿಗೆ ಝೊಮಾಟೊ ಗೋಲ್ಡನ್ ಸದಸ್ಯತ್ವವನ್ನು ಪಡೆಯಬಹುದು. ಅದೇ ನೀವು ಹೊಸ ಗ್ರಾಹಕರಾಗಿದ್ದರೆ ನಿಮಗೆ ಗೋಲ್ಡನ್ ಸದಸ್ಯತ್ವದ ಬೆಲೆ 30 ರೂಪಾಯಿ. ಕಂಪನಿಯು ಜುಲೈ 2024 ರಲ್ಲಿ ತನ್ನ 16 ನೇ ವಾರ್ಷಿಕೋತ್ಸವದಂದು ಇದೇ ರೀತಿಯ ಸದಸ್ಯತ್ವ ಯೋಜನೆಯನ್ನು ಪ್ರಾರಂಭಿಸಿದೆ. 

 ಇ-ಕಾಮರ್ಸ್ ಸೈಟ್ ಝೊಮಾಟೊ ತನ್ನ ಗ್ರಾಹಕರ ಸಂಖ್ಯೆಯನ್ನು ಹೆಚ್ಚಿಸಲು ಕಾಲಕಾಲಕ್ಕೆ ಹೊಸ ಹೊಸ ಯೋಜನೆಗಳನ್ನು ಜಾರಿಗೆ ತರ್ತಿರುತ್ತದೆ. ಈ ಕೊಡುಗೆ ಎಲ್ಲಾ ಝೊಮಾಟೊ ಅಪ್ಲಿಕೇಶನ್ ಬಳಸುವವರಿಗೆ ಲಭ್ಯವಿದೆ. ಮಾಹಿತಿಯ ಪ್ರಕಾರ, ನೀವು ಝೊಮಾಟೊ ಗೋಲ್ಡ್ ಸದಸ್ಯತ್ವ ಪಡೆದಿದ್ದರೆ, ನಿಮಗೆ ಝೊಮೊಟೊ ಪಾಲುದಾರಿಕೆ ಹೊಂದಿರುವ ರೆಸ್ಟೋರೆಂಟ್ಗಳಿಂದ ಶೇಕಡಾ 30ರಷ್ಟು ಹೆಚ್ಚುವರಿ ರಿಯಾಯಿತಿ ಕೂಡ ಸಿಗುತ್ತದೆ. ಯಾವ ನಗರ, ಪಟ್ಟಣದಲ್ಲಿ ಝೊಮೊಟೊ ಜೊತೆ ಹೋಟೆಲ್ ಗಳು ಒಪ್ಪಂದ ಮಾಡಿಕೊಂಡಿಲ್ಲವೋ ಆ ನಗರಗಳ ಗ್ರಾಹಕರಿಗೆ ಈ ಗೋಲ್ಡನ್ ಸದಸ್ಯತ್ವದ ಲಾಭ ಸಿಗುವುದಿಲ್ಲ ಎಂದು ಕಂಪನಿ ಹೇಳಿದೆ. ಕಂಪನಿಯೊಂದಿಗೆ ಈಗಾಗಲೇ  20000 ಕ್ಕೂ ಹೆಚ್ಚು ರೆಸ್ಟೋರೆಂಟ್‌ ಗಳು ಒಪ್ಪಂದ ಮಾಡಿಕೊಂಡಿವೆ. 

ದೋಸೆ ಮಾರಾಟಗಾರನ ತಿಂಗಳ ಗಳಿಕೆ 6 ಲಕ್ಷ! ತೆರಿಗೆ ವಿಚಾರದಲ್ಲಿ ನಡೆಯುತ್ತಿದೆ ಚರ್ಚೆ

ಝೊಮಾಟೊ ಗೋಲ್ಡನ್ ಸದಸ್ಯತ್ವ ಪಡೆಯಲು ಬಯಸುವ ಗ್ರಾಹಕರು ವಾಟ್ಸ್ ಅಪ್ ಮೂಲಕ ಸದಸ್ಯತ್ವ ಪಡೆಯಬಹುದು. ತನ್ನ ಗ್ರಾಹಕರಿಗೆ ಝೊಮಾಟೊ ವಾಟ್ಸ್ ಅಪ್ ಸಂದೇಶವನ್ನು ರವಾನೆ ಮಾಡಿದೆ. ಆ ಲಿಂಕ್ ಕ್ಲಿಕ್ ಮಾಡಿ ನೀವು ಆಫರ್ ಪಡೆಯಬಹುದು. ಇಲ್ಲವೆ ಝೊಮಾಟೊ ಅಧಿಕೃತ ವೆಬ್ಸೈಟ್ ಗೆ ಲಾಗಿನ್ ಆಗಿ ನೀವು ಸದಸ್ಯತ್ವ ಪಡೆಯಬಹುದು. 

Latest Videos
Follow Us:
Download App:
  • android
  • ios