ಜೀರೋಧಾ ಕಂಪನಿಯ ಸಹಸಂಸ್ಥಾಪಕ ನಿಖಿಲ್‌ ಕಾಮತ್‌ ಅವರ ಬೆಂಗಳೂರಿನ ಬಾಡಿಗೆ ಅಪಾರ್ಟ್‌ಮೆಂಟ್‌ನ ಒಳಾಂಗಣ ವಿನ್ಯಾಸ ಸೋಶಿಯಲ್‌ ಮೀಡಿಯಾದಲ್ಲಿ ವ್ಯಾಪಕ ಚರ್ಚೆಯಾಗುತ್ತಿದೆ. ಇದೊಂದು ಕೆಟ್ಟ ಡಿಸೈನ್‌ ಎಂದು ಹೆಚ್ಚಿನವರು ಹೇಳಿದ್ದಾರೆ.

ಬೆಂಗಳೂರು (ಅ.24): ಜೀರೋಧಾ ಸಹ ಸಂಸ್ಥಾಪಕ ನಿಖಿಲ್‌ ಕಾಮತ್‌ ಇತ್ತೀಚೆಗೆ ತಮ್ಮ ಮೊದಲ ಅಪಾರ್ಟ್‌ಮೆಂಟ್‌ಅನ್ನು ಖರೀದಿ ಮಾಡಿದ್ದಾರೆ. ಈ ವೇಳೆ ಅವರು ಹಿಂದೆ ಆಡಿದ್ದ ಮಾತುಗಳನ್ನು ಟ್ರೋಲ್‌ ಮಾಡಲಾಗಿತ್ತು. ಈ ಹಿಂದೆ ಸ್ವಂತ ಮನೆಗಿಂತ ಬಾಡಿಗೆ ಮನೆಯಲ್ಲಿರೋದೆ ಒಳ್ಳೆಯದು ಎಂದು ಅವರು ಹೇಳಿದ್ದರು. ಆದರೆ, ತಮ್ಮ ಮಾತಿಗೆ ಯುಟರ್ನ್‌ ಹೊಡೆದಿದ್ದ ನಿಖಿಲ್‌ ಕಾಮತ್‌ ಹೊಸ ಅಪಾರ್ಟ್‌ಮೆಂಟ್‌ ಖರೀದಿ ಮಾಡಿದ್ದಯ ಚರ್ಚೆಗೆ ಗ್ರಾಸವಾಗಿತ್ತು. ಇದರ ನಡುವೆ ಅವರು ಈವರೆಗೂ ಇದ್ದ ಬೆಂಗಳೂರಿನ ಕಿಂಗ್‌ಫಿಶರ್‌ ಟವರ್‌ನ 7 ಸಾವಿರ ಚದರ ಅಡಿಯ ಫ್ಲ್ಯಾಟ್‌ನ ಫೋಟೋಗಳು ವೈರಲ್‌ ಆಗಿವೆ. ಇದನ್ನು ಡಿಸೈನ್‌ ಮಾಡಿದ ಸಂಸ್ಥೆ ವಾಸ್ತುಶಿಲ್ಪದ ಅದ್ಭುತ ಎಂದು ಇದನ್ನು ಕರೆದಿದ್ದರೂ, ಸೋಶಿಯಲ್‌ ಮೀಡಿಯಾ ಮಾತ್ರ ನಿಖಿಲ್‌ ಕಾಮತ್‌ ಮನೆಯ ಒಳಾಂಗಣ ವಿನ್ಯಾಸ ನೋಡಿ ಟ್ರೋಲ್‌ ಮಾಡಿದೆ. ಇದೊಂದು ಸೂಪರ್‌ ಅಗ್ಲಿಯಾಗಿರುವ ಡಿಸೈನ್‌ ಎಂದು ಕೆಣಕಿದೆ.

ಫೋನ್‌ಪೇ ಕಂಪನಿಯ ಅಧಿಕಾರಿಯೊಬ್ಬರು ಸೋಶಿಯಲ್‌ ಮೀಡಿಯಾದಲ್ಲಿ ನಿಖಿಲ್‌ ಕಾಮತ್‌ ಅವರ ಅಪಾರ್ಟ್‌ಮೆಂಟ್‌ನ ಫೋಟೋಗಳನ್ನು ಶೇರ್‌ ಮಾಡಿಕೊಂಡಿದ್ದರು. ನಿಖಿಲ್‌ ಕಾಮತ್‌ ಹೊಸದಾಗಿ ಖರೀದಿ ಮಾಡಿರುವ ಅಪಾರ್ಟ್‌ಮೆಂಟ್‌ ಇದಾಗಿದೆ ಎನ್ನುವ ಅರ್ಥದಲ್ಲಿ ಅದನ್ನು ಶೇರ್ ಮಾಡಿದ್ದರು. ಆದರೆ, ಅದು ಅವರು ಈಗಾಗಲೇ ಇದ್ದ ಬೆಂಗಳೂರಿನ ಕಿಂಗ್‌ಫಿಶರ್‌ ಟವರ್‌ನಲ್ಲಿದ್ದ ಬಾಡಿಗೆ ನಿವಾಸವಾಗಿತ್ತು.
ಫೋನ್‌ಪೇ ಸಂಸ್ಥೆಯ ಡಿಸೈನ್‌ ವಿಭಾಗದ ಮುಖ್ಯಸ್ಥ ರಾಹುಲ್‌ ಗೋನ್ಸಾಲ್ಸ್ವೆಸ್‌, ಕಾಮತ್‌ ಹೌಸ್‌ನ ಒಳಾಂಗಣ ವಿನ್ಯಾಸ ಅತ್ಯಂತ ವಿಡಂಬನಾತ್ಮಕವಾಗಿದೆ ಎಂದು ಬರೆದುಕೊಂಡಿದ್ದರು. ಇದನ್ನು ಸಾವಿರಾರು ಮಂದಿ ಸೋಶಿಯಲ್‌ ಮೀಡಿಯಾ ಯೂಸರ್‌ಗಳು ಒಪ್ಪಿದ್ದಾರೆ.

'ನಿಖಿಲ್‌ ಕಾಮತ್‌ ಅವರ ಮನೆಯ ವಿಚಾರದ ಚರ್ಚೆಯ ನಡುವೆ, ಅವರ ಮನೆಯ ಒಳಾಂಗಣ ವಿನ್ಯಾಸ ಅತ್ಯಂತ ವಿಡಂಬನಾತ್ಮಕವಾಗಿದೆ. ಸರ್‌ ನೀವು ಇನ್ನೂ ಉತ್ತಮ ಒಳಾಂಗಣ ವಿನ್ಯಾಸಕಾರರನ್ನು ಅಥವಾ ಆರ್ಕಿಟೆಕ್ಟರ್‌ಅನ್ನು ಬಳಸಿಕೊಳ್ಳಬಹುದಿತ್ತು' ಎಂದು ಅವರು ಬರೆದುಕೊಂಡಿದ್ದಾರೆ. ಅದರೊಂದಿಗೆ ಅವರ ಮನೆಯ ಒಳಗಿನ ಕೆಲವು ಚಿತ್ರಗಳನ್ನು ಹಂಚಿಕೊಂಡಿದ್ದಾರೆ. 7 ಸಾವಿರ ಚದರಅಡಿಯ ಮನೆಯ ಒಳಾಂಗಣದ ಕೆಲವು ಚಿತ್ರಗಳು ಇದರಲ್ಲಿದೆ. ಆದರೆ, ಇದರಲ್ಲಿನ ಐಷಾರಾಮಿ ಒಳಾಂಗಣವನ್ನು ಯಾರೂ ಕೂಡ ಮೆಚ್ಚಿಲ್ಲ.

ಅನೇಕ ಎಕ್ಸ್‌ ಯೂಸರ್‌ಗಳು 38 ವರ್ಷದ ಕೋಟ್ಯಧಿಪತಿಯ ಮನೆಯ ಒಳಾಂಗಣ ವಿನ್ಯಾಸದ ಸೂಕ್ಷ್ಮತೆಯನ್ನೇ ಪ್ರಶ್ನೆ ಮಾಡಿದ್ದಾರೆ. ಎಷ್ಟೇ ಸಂಪತ್ತು ಇರಬಹುದು, ಆದರೆ, ಅಭಿರುಚಿ ಅನ್ನೋದೇ ಬೇರೆ ಎನ್ನುವ ಕಾಮೆಂಟ್‌ಗಳು ಬಂದಿವೆ.

'ಬಾಡಿಗೆ ಮನೆಯೇ ಬೆಸ್ಟ್‌..' ಎಂದಿದ್ದ ನಿಖಿಲ್‌ ಕಾಮತ್‌ ಯು-ಟರ್ನ್‌, ಸ್ವಂತ ಮನೆ ಖರೀದಿ ಮಾಡಿದ ಜೀರೋದಾ ಮಾಲೀಕ

'ಇದರಲ್ಲಿ ತುಂಬಾ ಕುಂದುಗಳು ಕಾಣುತ್ತಿವೆ. ದುಡ್ಡಿದ್ದ ಮಾತ್ರಕ್ಕೆ ನಿಮಗೆ ಅಭಿರುಚಿಗಳು ಇರಲೇಬೇಕು ಎಂದರ್ಥವಲ್ಲ. ಹಣ ಯಾವತ್ತೂ ಅಭಿರುಚಿಯನ್ನು ಕೊಂಡುಕೊಳ್ಳು ಸಾದ್ಯವಿಲ್ಲ' ಎನ್ನುವ ಕಾಮೆಂಟ್‌ಳು ಈ ಪೋಸ್ಟ್‌ಗೆ ಬಂದಿದೆ. ಇವರ ಮನೆಯ ಒಳಾಂಗಣ ವಿನ್ಯಾಸ ಅತ್ಯಂತ ಕೊಳಗಾಗಿದೆ ಎಂದು ಮತ್ತೊಬ್ಬರು ಬರೆದಿದ್ದಾರೆ. ಮನೆಯ ಒಂದು ಭಾಗ ಪಿಂಟ್ರೆಸ್ಟ್‌ನ ಮೂಡ್‌ಬೋರ್ಡ್‌ ರೀತಿ ಕಾಣುತ್ತಿದ್ದರೆ, ಇನ್ನೊಂದು ಭಾಗವಾಗಿ ನೇರವಾಗಿ ವೀವರ್ಕ್‌ ಆಫೀಸ್‌ ರೀತಿ ಕಾಣುತ್ತಿದೆ ಎಂದು ವ್ಯಂಗ್ಯವಾಡಿದ್ದಾರೆ.

ಕೇವಲ 250 ರೂಪಾಯಿಗೆ ಕೆಲಸ ಮಾಡ್ತಿದ್ದ ಹುಡುಗ 25 ಸಾವಿರ ಕೋಟಿಗೆ ಒಡೆಯನಾಗಿದ್ದು ಹೇಗೆ?

Scroll to load tweet…