ಜೆಪ್ಟೋದಲ್ಲಿ ಗ್ರಾಹಕರೊಬ್ಬರು ಹಾಲು ಮತ್ತು ಟೈಪ್-ಸಿ ಕೇಬಲ್ ಖರೀದಿಸಿ ಗೊಂದಲಕ್ಕೀಡಾಗಿದ್ದಾರೆ. ₹611.31 ರ ಒಟ್ಟು ಬೆಲೆಯ ವಸ್ತುಗಳಿಗೆ ₹145.29 ಬಿಲ್ ಬಂದಿದೆ. ರಿಯಾಯಿತಿ, ಪ್ರೋಮೋ ಕೋಡ್‌ಗಳು ಮತ್ತು ಶುಲ್ಕ ವಿನಾಯಿತಿಗಳ ಲೆಕ್ಕಾಚಾರ ಗ್ರಹಿಸಲಾಗದೆ, ಬಳಕೆದಾರರು ಆನ್‌ಲೈನ್‌ನಲ್ಲಿ ರಿಯಾಯಿತಿಗಳ ಬಗ್ಗೆ ಪ್ರಶ್ನಿಸಿದ್ದಾರೆ. ಈ ಪೋಸ್ಟ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಇತ್ತೀಚಿಗೆ ಜನರು ಆನ್ಲೈನ್ ಶಾಪಿಂಗ್ ಇಷ್ಟಪಡ್ತಾರೆ. ಅಂಗಡಿಗೆ ಹೋಗಿ ವಸ್ತುಗಳನ್ನು ಖರೀದಿ ಮಾಡಿ ಸಮಯ ವ್ಯರ್ಥ ಮಾಡುವ ಬದಲು ಕುಳಿತಲ್ಲಿಂದಲೇ ವಸ್ತುಗಳನ್ನು ಬುಕ್ ಮಾಡೋದು ಬೆಸ್ಟ್ ಎಂಬ ಅಭಿಪ್ರಾಯ ಅನೇಕರದ್ದು. ಬಟ್ಟೆ, ಮನೆ ವಸ್ತು ಮಾತ್ರವಲ್ಲ ಈಗ ತರಕಾರಿ, ಹಾಲು ಸೇರಿದಂತೆ ನಿತ್ಯದ ಅಗತ್ಯ ವಸ್ತುಗಳನ್ನು ನೀವು ಆನ್ಲೈನ್ ನಲ್ಲಿ ಬುಕ್ ಮಾಡ್ಬಹುದು. ಆನ್ಲೈನ್ ಶಾಪಿಂಗ್ ಕಂಪನಿಗಳು ಗ್ರಾಹಕರನ್ನು ಸೆಳೆಯಲು ಕೆಲ ಆಫರ್ ಗಳನ್ನು ಆಗಾಗ ನೀಡ್ತಿರುತ್ತವೆ. ಆಹಾರ ವಸ್ತುಗಳ ಮೇಲೆ ರಿಯಾಯಿತಿ ಜಾಹೀರಾತುಗಳನ್ನು ನಾವು ನೋಡ್ಬಹುದು. ರಿಯಾಯಿತಿ ನೋಡ್ತಿದ್ದಂತೆ ಅಗತ್ಯ ಇರ್ಲಿ ಬಿಡಲಿ, ವಸ್ತುಗಳನ್ನು ಖರೀದಿ ಮಾಡೋರ ಸಂಖ್ಯೆ ಹೆಚ್ಚಿರುತ್ತದೆ. ಆದ್ರೆ ರಿಯಾಯಿತಿ ಹೆಸರಲ್ಲಿ ಆನ್ಲೈನ್ ಶಾಪಿಂಗ್ ವೆಬ್ಸೈಟ್ ಗಳು ಮೋಸ ಮಾಡುತ್ವೆ ಎನ್ನುವ ಮಾತಿದೆ. ಈಗ ಒಂದು ಪೋಸ್ಟ್ ವೈರಲ್ ಆಗಿದೆ. ಅದ್ರಲ್ಲಿ ಬಳಕೆದಾರನೊಬ್ಬ ಜೆಪ್ಟೋ ನೀಡಿದ ಆಫರ್ ಬಗ್ಗೆ ವಿವರಿಸಿದ್ದಾನೆ. ಜೊತೆಗೆ ನನಗೆ ಲೆಕ್ಕಾಚಾರ ಅರ್ಥವಾಗ್ತಿಲ್ಲ, ದಯವಿಟ್ಟು ತಿಳಿಸಿ ಎಂದಿದ್ದಾನೆ. ಜೆಪ್ಟೋ ಬಳಕೆದಾರನ ರೆಡ್ಡಿಟ್ ಪೋಸ್ಟ್ ವೈರಲ್ ಆಗಿದೆ. ಈ ವ್ಯಕ್ತಿ ಖರೀದಿಯ ಮೇಲೆ ಭಾರಿ ರಿಯಾಯಿತಿ ಪಡೆದಿದ್ದಾನೆ. ಆದ್ರೆ ಅದೇ ಬಿಲ್ ಆತನನ್ನು ಕನ್ಫ್ಯೂಸ್ ಮಾಡಿದೆ. 

ಏನಿದು ವೈರಲ್ ಪೋಸ್ಟ್? : ಪೋಸ್ಟ್ ಪ್ರಕಾರ ಜೆಪ್ಟೋದಲ್ಲಿ ವ್ಯಕ್ತಿ 112 ರೂಪಾಯಿ ಮೌಲ್ಯದ ಎರಡು 1 ಲೀಟರ್ ಅಮುಲ್ ತಾಜಾ ಟೋನ್ಡ್ ಫ್ರೆಶ್ ಮಿಲ್ಕ್ ಪ್ಯಾಕ್‌ ಖರೀದಿ ಮಾಡಿದ್ದಾನೆ. ಹಾಲಿನೊಂದಿಗೆ 499 ರೂಪಾಯಿ ಬೆಲೆಯ ಟೈಪ್ ಸಿ ಕೇಬಲ್ (60W) ಖರೀದಿಸಿದ್ದಾನೆ. ಇದಕ್ಕೆ 19 ರೂಪಾಯಿ ರಿಯಾಯಿತಿ ನೀಡಲಾಗಿದೆ. 

15 ನಿಮಿಷದಲ್ಲಿ ಫುಡ್ ಡೆಲಿವರಿಗೆ ಮುಂದಾದ Zomato, ಬೆಂಗಳೂರು ಟ್ರಾಫಿಕ್‌ನಲ್ಲಿ ಬರೋಕೆ 10ನಿ, ಫುಡ್ ರೆಡಿ ಹೇಗೆ? ಎಷ್ಟು ಸೇಫ್?

ಎರಡೂ ವಸ್ತುಗಳ ಒಟ್ಟು ಬೆಲೆ ಮತ್ತು ಜಿಎಸ್‌ಟಿ ಸೇರಿಸಿದ್ರೆ 611.31 ರೂಪಾಯಿ ಆಗುತ್ತೆ. ಆದ್ರೆ ರಿಯಾಯಿತಿಯ ನಂತರ ಅದ್ರ ಬೆಲೆಯನ್ನು 231.31 ರೂಪಾಯಿಗೆ ಇಳಿಸಲಾಗಿತ್ತು. ಪ್ರೋಮೋ ವೋಚರ್ ಹೆಸರಿನಲ್ಲಿ 100 ರೂಪಾಯಿ ಕಡಿತ ಮಾಡಲಾಗಿದೆ. ನಿರ್ವಹಣಾ ಶುಲ್ಕವನ್ನು 27.99 ರೂಪಾಯಿಯಿಂದ 11.99 ರೂಪಾಯಿಗೆ ಇಳಿಸಲಾಗಿದೆ. ಸಂಸ್ಕರಣಾ ಶುಲ್ಕ, ಮಳೆ ಶುಲ್ಕ ಮತ್ತು ವಿತರಣಾ ಶುಲ್ಕವಿಲ್ಲ. ಅದನ್ನು ಝೀರೋ ಮಾಡಲಾಗಿದೆ. ಎಲ್ಲ ವಸ್ತುಗಳು ಸೇರಿದ ಮೇಲೆ ಜೆಫ್ಟೋ 145.29 ರೂಪಾಯಿ ಬಿಲ್ ಹಾಕಿದೆ. 

ಒಟ್ಟೊಟ್ಟಿಗೆ ಜೆಪ್ಟೋ ಸ್ವಿಗ್ಗಿ, ಬ್ಲಿಂಕಿಟ್‌ನಲ್ಲಿ ಆರ್ಡರ್‌ ಮಾಡಿದ ಯುವತಿ: ಫಸ್ಟ್ ಬಂದಿದ್ಯಾರು

ಇದೆಲ್ಲವನ್ನು ಬರೆದ ವ್ಯಕ್ತಿ, ನನಗೆ ಈ ಬಿಲ್ ಹೇಗೆ ಇಷ್ಟು ಬಂತು ಅನ್ನೋದೇ ಅರ್ಥವಾಗ್ತಿಲ್ಲ ಎಂದಿದ್ದಾನೆ. ಬಳಕೆದಾರರು ದಿನಸಿ ವಸ್ತುಗಳ ಲೆಕ್ಕಾಚಾರ ಶುರು ಮಾಡಿದ್ದಾರೆ. ಗ್ರಾಹಕರಿಗೆ ನಾವು ಸಿಕ್ಕಾಪಟ್ಟೆ ರಿಯಾಯಿತಿ ನೀಡ್ತಿದ್ದೇವೆ ಎಂದು ತೋರಿಸುವ ಪ್ರಯತ್ನವನ್ನು ಕಂಪನಿಗಳು ಮಾಡ್ತಿವೆ. ವಾಸ್ತವವಾಗಿ ಅವರು ಏನೂ ಮಾಡ್ತಿಲ್ಲ ಎಂದು ಬಳಕೆದಾರರೊಬ್ಬರು ಬರೆದಿದ್ದಾರೆ. ಮಳೆ ಶುಲ್ಕ ಹಾಸ್ಯಾಸ್ಪದ ಎಂದು ಬರೆದಿದ್ದಾರೆ. ಆಕ್ಸಿಜನ್, ಫ್ರಿಜ್, ಐಸ್ ಗೆ ಕಂಪನಿ ಯಾವುದೇ ಶುಲ್ಕ ವಿಧಿಸಿಲ್ಲ ಎಂಬುದೇ ವಿಶೇಷ ಎಂದು ಮತ್ತೊಬ್ಬರು ಬರೆದಿದ್ದಾರೆ. ಮತ್ತೆ ಅನೇಕರು ಲೆಕ್ಕ ಪರಿಹರಿಸುವ ಪ್ರಯತ್ನ ಮಾಡಿದ್ದಾರೆ. ಸನ್ ಲೈಟ್ ಗೆ ಬಿಲ್ ವಿಧಿಸುವ ಸಾಧ್ಯತೆಯನ್ನು ಅಲ್ಲಗಳೆಯಲು ಸಾಧ್ಯವಿಲ್ಲ ಎಂದು ಮತ್ತೊಬ್ಬ ಬಳಕೆದಾರರು ಬರೆದಿದ್ದಾರೆ. ಸಿ ಕೇಬಲ್ ಬೆಲೆ ಜೆಫ್ಟೋದಲ್ಲಿ 19 ರೂಪಾಯಿ ಅಲ್ಲ, 199 ರೂಪಾಯಿ. ನಿಮಗೆ ಹೇಗೆ 19 ರೂಪಾಯಿಗೆ ಸಿಕ್ಕಿದೆ ಎಂಬ ಪ್ರಶ್ನೆ ಕೆಲವರದ್ದು. ಆನ್ಲೈನ್ ಕಂಪನಿ ಬಿಲ್ ವೈರಲ್ ಆಗೋದು ಇದೇ ಮೊದಲಲ್ಲ.