ಒಟ್ಟೊಟ್ಟಿಗೆ ಜೆಪ್ಟೋ ಸ್ವಿಗ್ಗಿ, ಬ್ಲಿಂಕಿಟ್‌ನಲ್ಲಿ ಆರ್ಡರ್ ಮಾಡಿದ ಯುವತಿ: ಫಸ್ಟ್ ಬಂದಿದ್ಯಾರು
ಹೈದರಾಬಾದ್‌ನಲ್ಲಿ ಮಹಿಳೆಯೊಬ್ಬರು ಬ್ಲಿಂಕಿಟ್, ಝೆಪ್ಟೊ ಮತ್ತು ಸ್ವಿಗ್ಗಿ ಇನ್ಸ್ಟಾಮಾರ್ಟ್‌ನಿಂದ ಏಕಕಾಲದಲ್ಲಿ ಆರ್ಡರ್‌ಗಳನ್ನು ಮಾಡುವ ಮೂಲಕ ಯಾವ ಡೆಲಿವರಿ ಆ್ಯಪ್ ವೇಗವಾಗಿ ತಲುಪಿಸುತ್ತದೆ ಎಂಬುದನ್ನು ಪರೀಕ್ಷಿಸಿದ್ದಾರೆ.
ಈಗ ಮಹಾನಗರಗಳಲ್ಲಿ ಆನ್‌ಲೈನ್ ಡೆಲಿವರಿ ಆಪ್‌ಗಳದ್ದೇ ಹವಾ. ನೀವು ಬಯಸಿದ್ದನ್ನು ಮನೆ ಬಾಗಿಲಿಗೆ ತಲುಪಿಸುವ ಈ ಆನ್‌ಲೈನ್ ಆಪ್‌ಗಳು ಕೇವಲ ಕೈ ಬೆರಳ ಒಂದು ಟಚ್‌ನ ಮೂಲಕ ನೀವು ಕುಳಿತಲ್ಲಿಗೆ ಎಲ್ಲವನ್ನೂ ತಲುಪಿಸಿ ಬಿಡುತ್ತವೆ. ಈಗ ಆನ್‌ಲೈನ್‌ನಲ್ಲಿ ಒಂದಾದ ಮೇಲೊಂದರಂತೆ ಹಲವು ಆನ್‌ಲೈನ್ ಫುಡ್ ಡೆಲಿವರು ಆಪ್‌ಗಳು ಇದ್ದು, ಜನರಿಗೆ ಸೇವೆ ಒದಗಿಸಲು ಪರಸ್ಪರ ಪೈಪೋಟಿ ನೀಡುತ್ತಿವೆ. ಜನರಿಗೆ ಈಗ ಹಲವು ಆಯ್ಕೆಗಳಿರುವುದರಿಂದಾಗಿ ವ್ಯವಹಾರ ವಿಶ್ವಸಾರ್ಹತೆ ಉಳಿಸಿಕೊಳ್ಳಲು ಆನ್‌ಲೈನ್ ಡೆಲಿವರಿ ಆಪ್‌ಗಳು ಪೈಪೋಟಿಗೆ ಬಿದ್ದಿದ್ದು, ಗ್ರಾಹಕರಿಗೆ ಹಲವು ಆಫರ್‌ಗಳನ್ನು ನೀಡುತ್ತಿವೆ. ಆರು ನಿಮಿಷ ಅಥವಾ 10 ನಿಮಿಷದಲ್ಲಿ ಅಥವಾ ಅರ್ಧ ಗಂಟೆಯಲ್ಲಿ ಸರಕುಗಳನ್ನು ಮನೆಗೆ ತಲುಪಿಸುವುದಾಗಿ ಭರವಸೆ ನೀಡುವ ಈ ಆಪ್‌ಗಳು ತಪ್ಪಿದಲ್ಲಿ ಹಣ ಮರಳಿಸುವ ಭರವಸೆ ನೀಡುತ್ತಿವೆ. ಹೀಗಿರುವಾಗ ಹೈದರಾಬಾದ್‌ನ ಮಹಿಳೆಯೊಬ್ಬರು ಯಾವ ಡೆಲಿವರಿ ಆಪ್ ಫಾಸ್ಟ್ ಆಗಿ ಡೆಲಿವರಿ ಮಾಡುತ್ತದೆ ಎಂಬುದನ್ನು ಪರೀಕ್ಷೆ ನಡೆಸಿದ್ದಾರೆ. ಇದಕ್ಕಾಗಿ ಅವರು ಎಲ್ಲಾ ಡೆಲಿವರಿ ಆಪ್‌ಗಳಲ್ಲಿ ಒಟ್ಟೊಟ್ಟಿಗೆ ಡೆಲಿವರಿ ಆರ್ಡರ್ ಮಾಡಿದ್ದಾರೆ.
ಬ್ಲಿಂಕಿಟ್, ಝೆಪ್ಟೊ, ಸ್ವಿಗ್ಗಿ ಇನ್ಸ್ಟಾಮಾರ್ಟ್‌ನಲ್ಲಿ ಅವರು ಒಟ್ಟೊಟ್ಟಿಗೆ ಫುಡ್ ಡೆಲಿವರಿ ಮಾಡಿದ್ದು, ಯಾವುದು ಮೊದಲು ತಲುಪಿದೆ ಎಂಬ ಬಗ್ಗೆ ಅವರು ತಮ್ಮ ಸೋಶಿಯಲ್ ಮೀಡಿಯಾ ಫೇಜ್‌ನಲ್ಲಿ ಮಾಹಿತಿ ನೀಡಿದ್ದಾರೆ. ಈ ಪೋಸ್ಟ್ ಈಗ ಸಖತ್ ವೈರಲ್ ಆಗಿದ್ದು, ಅನೇಕ ಬಳಕೆದಾರರು ಕಾಮೆಂಟ್ ಮಾಡಿದ್ದಾರೆ. ಹಾಗಿದ್ರೆ ಯಾವ ಆಪ್ ಅವರಿಗೆ ಮೊದಲು ಫುಡ್ ಪೂರೈಕೆ ಮಾಡಿದೆ ಅಂತ ನೋಡೋಣ..
ಅಂದಹಾಗೆ ಈ ರೀತಿ ಸೋಶಿಯಲ್ ಎಕ್ಸ್‌ಪರಿಮೆಂಟ್ ಮಾಡಿರುವುದು ಹೈದರಾಬಾದ್ ಕ್ಯಾಂಪಸ್‌ನ ಇಂಡಿಯನ್ ಸ್ಕೂಲ್ ಆಪ್ ಬ್ಯುಸಿನೆಸ್‌ನ ವಿದ್ಯಾರ್ಥಿನಿ ಸ್ನೇಹಾ. ಅವರು ತಮ್ಮ ಟ್ವಿಟ್ಟರ್‌ನಲ್ಲಿ ಪ್ರತಿ ಡೆಲಿವರಿ ತಲುಪಿದಾಗ ಅದರ ಫೋಟೋ ವೀಡಿಯೋ ಜೊತೆ ತಮ್ಮ ಈ ಎಕ್ಸ್‌ಪೆರಿಮೆಂಟ್‌ನ ಪ್ರಭಾವವನ್ನು ಹಂಚಿಕೊಂಡಿದ್ದಾರೆ. ಅವರು ತಮ್ಮ ಸ್ನೇಹಿತ ಆರ್ಯನ್ ಜೊತೆ ಸೇರಿ ಒಟ್ಟೊಟ್ಟಿಗೆ ಈ ಡೆಲಿವರಿ ಆಪ್‌ಗಳಲ್ಲಿ ಡೆಲಿವರಿ ಮಾಡಿದ್ದಾರೆ.
- ಸ್ವಿಗ್ಗಿ ಇನ್ಸ್ಟಾಮಾರ್ಟ್‌ನಲ್ಲಿ ಭರವಸೆ ನೀಡಿದ್ದ ಸಮಯ 21 ನಿಮಿಷ ಇದರಲ್ಲಿ ಸಿದ್ ಫಾರ್ಮ್‌ನ ಹಾಲು ಆರ್ಡರ್ ಮಾಡಲಾಗಿತ್ತು
- ಝೆಪ್ಟೊದಲ್ಲಿ ತಲುಪುವ ಭರವಸೆ ನೀಡಿದ್ದ ಸಮಯ 8 ನಿಮಿಷ ಇದರಲ್ಲಿ ಮಿಲ್ಕಿ ಮಿಸ್ಟ್ ಪನೀರ್ ಆರ್ಡರ್ ಮಾಡಲಾಗಿತ್ತು.
- ಹಾಗೆಯೇ ಬ್ಲಿಂಕಿಟ್ ತಲುಪುವ ಭರವಸೆ ನೀಡಿದ್ದ ಸಮಯ 13 ನಿಮಿಷ ಇದರಲ್ಲಿ ಸೂಪರ್ ಯು & ಹೋಲ್ ಟ್ರುತ್ ಪ್ರೊಟೀನ್ ಬಾರ್ ಅರ್ಡರ್ ಮಾಡಲಾಗಿತ್ತು.
ಆದರೆ ಯುವತಿ ಮಾಡಿದ ಈ ಪ್ರಯೋಗದಲ್ಲಿ ಬ್ಲಿಂಕಿಟ್ ಶೋ ಸ್ಟೀಲರ್ ಆಗಿದೆ. ಹಾಗೆಯೇ ಸ್ವಿಗ್ಗಿ ಇನ್ಸ್ಟಾಮಾರ್ಟ್ 2ನೇ ಸ್ಥಾನವನ್ನು ತಲುಪಿದರೆ ಝೆಪ್ಟೊ ಅದರ 8 ನಿಮಿಷದ ಭರವಸೆಯ ಹೊರತಾಗಿಯೂ ಬರೋಬರಿ 30 ನಿಮಿಷಗಳನ್ನು ತೆಗೆದುಕೊಳ್ಳುವ ಮೂಲಕ ಕೊನೆಗೆ ತಲುಪಿದೆ. ಆದರೆ ಝೆಪ್ಟೊ ಡೆಲಿವರಿ ಬಾಯ್ ಜೊತೆ ಯುವತಿ ಸ್ನೇಹಾ ಮಾತುಕತೆ ನಡೆಸಿದ್ದು, ಅವರಿರುವ ಕ್ಯಾಂಪಸ್‌ಗಿಂತ ಶಾಪ್ ಬಹಳ ದೂರ ಇರುವುದರಿಂದ ವಿಳಂಬ ಆಯ್ತು ಎಂದು ಹೇಳಿಕೊಂಡಿದ್ದಾರೆ ಎಂದು ಸ್ನೇಹ ವಿವರಿಸಿದ್ದಾರೆ.
ಸ್ನೇಹ ಅವರ ಪೋಸ್ಟ್‌ಗಳಿಗೆ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಪ್ರತಿಕ್ರಿಯೆಗಳು ಬಂದಿವೆ. ಅನೇಕರು ತಮ್ಮ ಅನುಭವಗಳನ್ನು ಹಂಚಕೊಂಡಿದ್ದಾರೆ. ನಾನು ದೆಹಲಿಯಲ್ಲಿದ್ದಾಗ ಶಾಪ್ ಹತ್ತೇ ನಿಮಿಷ ದೂರ ಇದ್ದರೂ ಮ್ಯಾಪ್ ತಪ್ಪಾಗಿದ್ದ ಕಾರಣ 20 ನಿಮಿಷ ಲೇಟಾಗಿ ಡೆಲಿವರಿಯಾಗಿತ್ತು ಎಂದು ಒಬ್ಬರು ತಮ್ಮ ಅನುಭವ ಹೇಳಿಕೊಂಡಿದ್ದಾರೆ. ಹಾಗೆಯೇ ಕೆಲವರು ಭರವಸೆ ನೀಡಿದ ಸಮಯಕ್ಕಿಂತ ಮೊದಲೇ ಪೂರೈಸುವ ಮೂಲಕ ಒಳ್ಳೆಯ ಅನುಭವ ನೀಡಿವೆ ಎಂದು ಆಪ್‌ಗಳನ್ನು ಹೊಗಳಿದ್ದಾರೆ.