Successful YouTuber: ಇಬ್ಬರು ಪತ್ನಿಯರ ಮುದ್ದಿನ ಯುಟ್ಯೂಬರ್ ಆಸ್ತಿ ಬರೋಬ್ಬರಿ 200 ಕೋಟಿ!
ಓದಿದ್ರೆ ಒಳ್ಳೆ ಹೆಂಡತಿ ಸಿಕ್ತಾಳೆ ಅಂತ ಈತನ ತಾಯಿ ಹೇಳ್ತಿದ್ದಳಂತೆ. ಆದ್ರೆ ಮದುವೆ ಆದ್ಮೇಲೆ ಈತನ ಅದೃಷ್ಟ ಬದಲಾಗಿದ್ದು ಅನ್ನಿಸುತ್ತೆ. ಒಂದಲ್ಲ, ಎರಡು ಮದುವೆ ಆಗಿ ಈಗ ಕೋಟಿ ಲೆಕ್ಕದಲ್ಲಿ ಹಣ ಸಂಪಾದನೆ ಮಾಡ್ತಿದ್ದಾನೆ ಈತ.
ಒಬ್ಬ ಹೆಂಡ್ತಿ ಇದ್ರೆ ಸಂಸಾರ ಕಷ್ಟ… ಆದ್ರೆ ಈ ಯುಟ್ಯೂಬರ್ ಇಬ್ಬರು ಹೆಂಡತಿಯರ (Youtube With two Wives) ಮಧ್ಯೆ ಸುಖವಾಗಿದ್ದಾರೆ. ಬರೀ ಸುಖ ಮಾತ್ರವಲ್ಲ ಕೋಟ್ಯಾಂತರ ರೂಪಾಯಿ ಸಂಪಾದಿಸುತ್ತಿದ್ದಾರೆ. ಅಷ್ಟಕ್ಕೂ ಅವರು ಮತ್ತ್ಯಾರೂ ಅಲ್ಲ, ಯುಟ್ಯೂಬ್ ನಲ್ಲಿ ಚಿರಪರಿಚಿತ ಅರ್ಮಾನ್ ಮಲಿಕ್. ಒಂದು ರೀತಿಯಲ್ಲಿ ಇಬ್ಬರು ಪತ್ನಿಯರೇ ಅವರ ಪ್ಲಸ್ ಪಾಯಿಂಟ್. ಅವರ ಜೊತೆ ಯುಟ್ಯೂಬ್ ವಿಡಿಯೋ ಮಾಡುವ ಅರ್ಮಾನ್ ಮಲಿಕ್ ಗೆ ಹಣದ ಕೊರತೆ ಇಲ್ಲ. ಅರ್ಮಾನ್ ಮಲಿಕ್ ನಡೆದು ಬಂದ ದಾರಿ ಮಾತ್ರ ರೋಚಕವಾಗಿದೆ. ಮೊದಲು ಮೆಕ್ಯಾನಿಕ್ ಕೆಲಸ ಮಾಡ್ತಿದ್ದ ಅರ್ಮಾನ್ ಮಲಿಕ್ ಈಗ 10 ಫ್ಲಾಟ್ ಮಾಲೀಕ. ಅದರ ಶ್ರೇಯ ಯುಟ್ಯೂಬ್ ಗೆ ಸಲ್ಲುತ್ತದೆ. ಕೇವಲ ಎರಡುವರೆ ವರ್ಷದಲ್ಲಿ ಅರ್ಮಾನ್ ಮಲಿಕ್ ಇಷ್ಟೊಂದು ಶ್ರೀಮಂತರಾಗಿದ್ದಾರೆ.
ಟಾಕ್ ಶೋದಲ್ಲಿ ಪಾಲ್ಗೊಂಡಿದ್ದ ಅರ್ಮಾನ್ ಮಲಿಕ್ (Armaan Malik), ತಮ್ಮ ಗಳಿಕೆ, ಪತ್ನಿಯರ ಬಗ್ಗೆ ಸಾಕಷ್ಟು ವಿಷ್ಯಗಳನ್ನು ಹಂಚಿಕೊಂಡಿದ್ದಾರೆ. ಅರ್ಮಾನ್ ಮಲ್ಲಿಕ್ ಇಬ್ಬರು ಪತ್ನಿಯರ ಹೆಸರು ಕೃತಿಕಾ ಮತ್ತು ಪಾಯಲ್. ಎಂಟನೇ ತರಗತಿಯನ್ನು ಫೇಲ್ ಆಗಿದ್ದ ಅರ್ಮಾನ್ ಮಲಿಕ್ ಜೀವನ ಸುಲಭವಾಗಿರಲಿಲ್ಲ. ಜೀವನ ನಿರ್ವಹಣೆಗೆ ಮೆಕ್ಯಾನಿಕ್ (Mechanic) ಕೆಲಸ ಮಾಡಲು ಅರ್ಮಾನ್ ಮಲ್ಲಿಕ್ ಶುರು ಮಾಡಿದ್ರು. ಅವರ ತಾಯಿಗೆ ಮಗನ ಭವಿಷ್ಯದ ಬಗ್ಗೆ ಚಿಂತೆಯಿತ್ತು. ಆದ್ರೆ ಯುಟ್ಯೂಬ್ ಅವರ ಭವಿಷ್ಯ ಬದಲಿಸಿತು.
YOUTUBEನಲ್ಲಿ ಹಣ ಗಳಿಸೋದು ಅಂದು ಕೊಂಡಷ್ಟು ಈಸಿ ಅಲ್ಲ, ಹೀಗ್ ಮಾಡಿ ನೋಡಿ!
ಪತ್ನಿ ಕೃತಿಕಾ ಹಾಗೂ ಪಾಯಲ್ ಜೊತೆ ಅರ್ಮಾನ್ ಮಲ್ಲಿಕ್ ಅನೇಕ ವಿಡಿಯೋಗಳನ್ನು ಮಾಡ್ತಿರುತ್ತಾರೆ. ಮಲ್ಲಿಕ್ ಅವರ ಜೀವನ, ಅವರ ಕುಟುಂಬದ ಬಗ್ಗೆ ತಿಳಿಯಲು ನೆಟ್ಟಿಗರು ಕುತೂಹಲದಿಂದ ಕಾಯ್ತಿರುತ್ತಾರೆ. ಅರ್ಮಾನ್ ಮಲ್ಲಿಕ್ ಧರ್ಮದ ಬಗ್ಗೆ ಹಾಗೂ ಅವರ ಎರಡು ಪತ್ನಿಯರ ಬಗ್ಗೆಯೂ ಈ ಹಿಂದೆ ಸಾಕಷ್ಟು ಪ್ರಶ್ನೆಗಳನ್ನು ಜನರು ಕೇಳಿದ್ದರು.
ಅರ್ಮಾನ್ ಮಲಿಕ್ ಗೆ ಒಟ್ಟೂ 4 ಮಕ್ಕಳು. ಪಾಯಲ್ ಮೂರು ಮಕ್ಕಳಿಗೆ ತಾಯಿಯಾದ್ರೆ ಕೃತಿಕಾ ಒಂದು ಮಗುವಿಗೆ ಜನ್ಮ ನೀಡಿದ್ದಾರೆ. ಅಪಾರ್ಟ್ಮೆಂಟಿನಲ್ಲಿ 10 ಮನೆಗಳನ್ನು ಅರ್ಮಾನ್ ಖರೀದಿ ಮಾಡಿದ್ದಾರೆ. ನಾಲ್ಕರಲ್ಲಿ ಇವರ ಸಂಸಾರವಿರುತ್ತೆ. ಉಳಿದ ಫ್ಲಾಟ್ ನಲ್ಲಿ ಅರ್ಮಾನ್, ತನ್ನ ಕೆಲಸಗಾರರಿಗೆ ಉಳಿದುಕೊಳ್ಳುವ ವ್ಯವಸ್ಥೆ ಮಾಡಿದ್ದಾರೆ. ಅರ್ಮಾನ್ ಬಳಿ, ಆರು ಸಂಪಾದಕರು, ಎರಡು ಚಾಲಕರು, ನಾಲ್ಕು ಪಿಎಸ್ಯು ಹಾಗೂ ಆರು ಕೆಲಸಗಾರರಿದ್ದಾರೆ. ಸುಸಜ್ಜಿತ ಸ್ಟುಡಿಯೋವನ್ನು ಅರ್ಮಾನ್ ಹೊಂದಿದ್ದಾರೆ. ಅವರ ಈ ಯಶಸ್ಸಿಗೆ ಸಮರ್ಪಣೆ ಕಾರಣವಾಗಿದೆ.
ಅರ್ಮಾನ್ ಮಲಿಕ್ ಗಳಿಕೆ: ಸಂದರ್ಶನದಲ್ಲಿ ಅರ್ಮಾನ್ ಮಲಿಕ್ ತಮ್ಮ ಗಳಿಕೆ ಬಗ್ಗೆಯೂ ಹೇಳಿದ್ದಾರೆ. ಅರ್ಮಾನ್ ಬಳಿ 200 ಕೋಟಿ ಆಸ್ತಿ ಇದೆ. ಅರ್ಮಾನ್ ಮಲಿಕ್, ಯುಟ್ಯೂಬ್ ಹಾಗೂ ಸಾಮಾಜಿಕ ಜಾಲತಾಣದ ಮೂಲಕ ಹಣ ಗಳಿಸ್ತಾರೆ. ಅವರು ತಿಂಗಳಿಗೆ ಸುಮಾರು 3 ರಿಂದ ನಾಲ್ಕು ಲಕ್ಷ ರೂಪಾಯಿ ಸಂಪಾದನೆ ಮಾಡ್ತಾರೆ. ಐಷಾರಾಮಿ ಮನೆ ಹೊಂದಿರುವ ಅರ್ಮಾನ್, ಜಿಮ್ ಮಾಲೀಕರೂ ಹೌದು. ಅಲ್ಲದೆ ಮ್ಯೂಜಿಕ್ ಅಲ್ಮಂ ಬಿಡುಗಡೆ ಮಾಡಿ ಅದ್ರ ಮೂಲಕವೂ ಅವರು ಹಣ ಸಂಪಾದನೆ ಮಾಡ್ತಾರೆ.
ಅನಂತ್ ರಾಧಿಕಾ ಕ್ರೂಸ್ ಪಾರ್ಟಿ ಫೋಟೋ ತೆಗೆದ ಸೆಲೆಬ್ರಿಟಿ ಫೋಟೋಗ್ರಾಫರ್ ಪಡೆದ ಶುಲ್ಕ ಇಷ್ಟಾ?
ಅರ್ಮಾನ್ ಮಲಿಕ್ ಪತ್ನಿಯರ ಸಂಪಾದನೆ ಎಷ್ಟು?: ಅರ್ಮಾನ್ ಮಲಿಕ್ ಪತ್ನಿಯರ ಗಳಿಕೆ ಪ್ರತ್ಯೇಕವಾಗಿದೆ. ಅವರು ಕಂಟೆಂಟ್ ಕ್ರಿಯೇಟರ್ಸ್ ಆಗಿದ್ದು, ಯುಟ್ಯೂಬ್, ಸಾಮಾಜಿಕ ಜಾಲತಾಣದಲ್ಲಿ ಹಣ ಸಂಪಾದನೆ ಮಾಡ್ತಾರೆ. ಇನ್ಸ್ಟಾಗ್ರಾಮ್ ನಲ್ಲಿ ಫಾಲೋವರ್ಸ್ ಸಂಖ್ಯೆ ಹೆಚ್ಚಿದ್ದು, ಇಬ್ಬರ ಗಳಿಕೆ ತಿಂಗಳಿಗೆ ಸುಮಾರು 1.5 ಲಕ್ಷದಿಂದ 2 ಲಕ್ಷವಿದೆ.