Youtubeನಲ್ಲಿ ಹಣ ಗಳಿಸೋದು ಅಂದು ಕೊಂಡಷ್ಟು ಈಸಿ ಅಲ್ಲ, ಹೀಗ್ ಮಾಡಿ ನೋಡಿ!

ಯಾವುದೇ ಕ್ಷೇತ್ರಕ್ಕೆ ಕಾಲಿಡಬೇಕು ಅಂದ್ರೆ ಆ ಫೀಲ್ಡ್ ಬಗ್ಗೆ ಒಂದಿಷ್ಟು ಜ್ಞಾನ ಬೇಕು. ಯುಟ್ಯೂಬ್ ವಿಷ್ಯದಲ್ಲೂ ಅಷ್ಟೆ. ನೀವು ಇಲ್ಲಿ ಗಳಿಕೆ ಮಾಡಲು ಬಯಸ್ತೀತಿ ಎಂದಾದ್ರೆ ಅಲ್ಲಿ ಯಾವ ವಿಡಿಯೋ ಹೆಚ್ಚು ಸರ್ಚ್ ಆಗುತ್ತೆ ಎಂಬುದನು ತಿಳಿದುಕೊಳ್ಳಿ.
 

What Types Of Topics Are Most Searched On Youtube roo

ಅದೇನೇ ಸಮಸ್ಯೆ ಇರಲಿ, ಅನಾರೋಗ್ಯವಿರಲಿ ಜನರು ಗೂಗಲ್ ಸರ್ಚ್ (Google Search for All Topics), ಚಾಟ್ ಜಿಪಿಟಿ ಮೊರೆ ಹೋಗ್ತಾರೆ. ಅದೇ ರೀತಿ ವಿಡಿಯೋ ವೀಕ್ಷಣೆ ಮಾಡ್ಬೇಕು ಎಂದಾಗ ಎಲ್ಲರ ಫೆವರೆಟ್ ಯುಟ್ಯೂಬ್. ಇದೊಂದು ಮಹಾ ಸಾಗರ. ಇಲ್ಲಿ ನಿಮಗೆ ಸಿಗದ ವಿಷ್ಯವೇ ಇಲ್ಲ. ಎಲ್ಲ ರೀತಿಯ ವಿಡಿಯೋಗಳನ್ನು ಇಲ್ಲಿ ಹಂಚಿಕೊಳ್ಳಲಾಗುತ್ತದೆ. ಜನರು ಗಂಟೆಗಟ್ಟಲೆ ಕುಳಿತು ಯುಟ್ಯೂಬ್ ವಿಡಿಯೋಗಳನ್ನು ನೋಡ್ತಾರೆ. ಯುಟ್ಯೂಬ್ ನಲ್ಲಿ ಚಾನೆಲ್ ತೆರೆದು ಪ್ರತಿ ದಿನ ಒಂದಿಷ್ಟು ವಿಡಿಯೋ ಅಪ್ಲೋಡ್ ಮಾಡುವ ಜನರಿದ್ದಾರೆ. ಈ ವಿಡಿಯೋ ಮೂಲಕ ಲಕ್ಷಾಂತರ ರೂಪಾಯಿ ಗಳಿಸುವವರೂ ಇದ್ದಾರೆ. ನೀವೂ ವಿಡಿಯೋ ಮೂಲಕ ಹಣ ಸಂಪಾದನೆ ಪ್ಲಾನ್ ನಲ್ಲಿದ್ದರೆ, ಮೊದಲು ಯುಟ್ಯೂಬ್ ಬಗ್ಗೆ ಸರಿಯಾಗಿ ತಿಳಿದುಕೊಳ್ಳಿ. ಯುಟ್ಯೂಬ್ ನಿಯಮದ ಜೊತೆ ಜನರಿ ಇದ್ರಲ್ಲಿ ಹೆಚ್ಚಾಗಿ ಯಾವ ವಿಡಿಯೋ ವೀಕ್ಷಣೆ ಮಾಡ್ತಾರೆ ಎಂಬುದನ್ನು ಅರಿತಿರಿ. ಆಗ ನಿಮಗೆ ವಿಡಿಯೋ ಮಾಡೋದು ಸುಲಭವಾಗುತ್ತದೆ, 

ಯುಟ್ಯೂಬ್ (YouTube) ನಲ್ಲಿ ಸರ್ಚ್ ಮಾಡಲಾದ ವಿಷಯಗಳು ನಿರ್ದಿಷ್ಟವಾಗಿ ಗ್ರಾಹಕರ ಆದ್ಯತೆಗಳು ಮತ್ತು ಆಸಕ್ತಿಗಳ ಮೇಲೆ ಅವಲಂಬಿತವಾಗಿದೆ. ಆದರೆ ಕೆಲವು ಟ್ರೆಂಡಿಂಗ್ (Trending) ಮತ್ತು ಜನಪ್ರಿಯ ವಿಷಯಗಳನ್ನು (Popular and Trending Topics) ಯಾವಾಗಲೂ ಹುಡುಕಲಾಗುತ್ತದೆ. ಯುಟ್ಯೂಬ್ ನಲ್ಲಿನ ಹುಡುಕಾಟಗಳಲ್ಲಿ ಹೆಚ್ಚು ಜನಪ್ರಿಯ (Popular) ವಾಗಬಹುದಾದ ಕೆಲವು ವಿಷಯಗಳು ಇಲ್ಲಿವೆ. ಇಂದು ನಾವು ನಿಮಗೆ ಯೂಟ್ಯೂಬ್‌ನಲ್ಲಿ ಹೆಚ್ಚು ಹುಡುಕುವ ಕೆಲವು ವಿಷಯಗಳ ಬಗ್ಗೆ  ಹೇಳ್ತೇವೆ.    

ಅನಂತ್ ರಾಧಿಕಾ ಕ್ರೂಸ್ ಪಾರ್ಟಿ ಫೋಟೋ ತೆಗೆದ ಸೆಲೆಬ್ರಿಟಿ ಫೋಟೋಗ್ರಾಫರ್ ಪಡೆದ ಶುಲ್ಕ ಇಷ್ಟಾ?

ಯುಟ್ಯೂಬ್ ನಲ್ಲಿ ಹೆಚ್ಚು ಹುಡುಕುವ ವಿಡಿಯೋಗಳು :
ಮೊದಲ ಸ್ಥಾನದಲ್ಲಿದೆ ಮ್ಯೂಜಿಕ್ :
ಸಂಗೀತ ಬಹುತೇಕ ಎಲ್ಲರಿಗೂ ಇಷ್ಟ. ಹಾಗಾಗಿಯೇ ಯುಟ್ಯೂಬ್ ನಲ್ಲೂ ಇದು ಮೊದಲ ಸ್ಥಾನದಲ್ಲಿದೆ. ಮ್ಯೂಜಿಕ್ ವಿಡಿಯೋಗಳನ್ನು ಬಳಕೆದಾರರು ಹೆಚ್ಚಾಗಿ ವೀಕ್ಷಣೆ ಮಾಡ್ತಾರೆ. ಹೊಸ ಹಾಗೂ ಹಳೆ ಹಾಡಿಗೆ ಈ ವೇದಿಕೆಯಲ್ಲಿ ಬೇಡಿಕೆ ಹೆಚ್ಚಿದೆ. 

ಎರಡನೇ ಸ್ಥಾನದಲ್ಲಿದೆ ಗೇಮಿಂಗ್ (Gaming) : ಇನ್ನು ಯುಟ್ಯೂಬ್ ನಲ್ಲಿ ಹೆಚ್ಚು ನೋಡುವ ವಿಡಿಯೋಗಳ ಪೈಕಿ ಎರಡನೇ ಸ್ಥಾನದಲ್ಲಿ ಗೇಮಿಂಗ್ ಸೇರಿದೆ. ಜನರು ಗೇಮ್‌ಪ್ಲೇ, ಟ್ಯುಟೋರಿಯಲ್‌ಗಳು ಮತ್ತು ಇ-ಸ್ಪೋರ್ಟ್ಸ್ ಈವೆಂಟ್‌ಗಳನ್ನು ವೀಕ್ಷಿಸಲು ಇಷ್ಟಪಡುತ್ತಾರೆ.

ಮೂರನೇ ಸ್ಥಾನದಲ್ಲಿ DIY : ಜನರು  ಕರಕುಶಲ ವಸ್ತುಗಳ ತಯಾರಿಕೆ, ರಿಪೇರಿ ಸೇರಿದಂತೆ ಡು ಇಟ್ ಯುವರ್ ಸೆಲ್ಫ್ ನಂತಹ ವಿಷ್ಯಗಳನ್ನು ಹೆಚ್ಚು ನೋಡ್ತಾರೆ.  

ತಮಾಷೆ ವಿಡಿಯೋ : ನೀವು ನಾಲ್ಕನೇ ಸ್ಥಾನದಲ್ಲಿ ತಮಾಷೆ ವಿಡಿಯೋಗಳನ್ನು ನೋಡ್ಬಹುದು. ಜನರು ಸ್ಟ್ಯಾಂಡ್‌ಅಪ್ ಕಾಮಿಡಿ ಮತ್ತು ಕಾಮಿಡಿ ಸ್ಕೆಚ್‌ಗಳನ್ನು ಹೆಚ್ಚಾಗಿ ವೀಕ್ಷಿಸ್ತಾರೆ. 

ವ್ಲಾಗ್ (Vlog) : ಇನ್ನು ಈ ವ್ಲಾಗ್ ಐದನೇ ಸ್ಥಾನದಲ್ಲಿದೆ. ಈಗಿನ ದಿನಗಳಲ್ಲಿ ಮಹಿಳೆಯರು, ಮಕ್ಕಳಲ್ಲಿ ಈ ವ್ಲಾಗ್ ಹೆಚ್ಚಾಗಿರೋದನ್ನು ನೀವು ನೋಡ್ಬಹುದು. ನಿತ್ಯ ಅವರು ಏನು ಕೆಲಸ ಮಾಡ್ತಾರೆ ಎಂಬುದನ್ನು ಈ ವ್ಲಾಗ್ ನಲ್ಲಿ ತೋರಿಸಲಾಗುತ್ತದೆ. 

PM Kisan Scheme: ಫಲಾನುಭವಿ ರೈತರಲ್ಲಿ ನೀವೂ ಇದ್ದೀರಾ? ಹೀಗ್ ಚೆಕ್ ಮಾಡ್ಬಹುದು!

ಈ ವಿಡಿಯೋಗಳ ವೀಕ್ಷಣೆ ಹೆಚ್ಚು : ಬರೀ ಮೇಲಿನ ವಿಡಿಯೋಗಳು ಮಾತ್ರವಲ್ಲ, ಜನರು ತಮ್ಮ ಅಗತ್ಯಕ್ಕೆ ತಕ್ಕಂತೆ ವೀಕ್ಷಣೆ ಬದಲಿಸ್ತಾರೆ. ಚಲನಚಿತ್ರ ವಿಮರ್ಶೆ (Movie Reviews), ಸಿನಿಮಾ ಟ್ರೇಲರ್‌ (Movie Trailer), ವೆಬ್ ಸರಣಿ (Web Series) ಸೇರಿದಂತೆ ಮನರಂಜನೆ ವಿಡಿಯೋ ವೀಕ್ಷಣೆ ಮಾಡುವವರ ಸಂಖ್ಯೆ ಕಡಿಮೆ ಏನಿಲ್ಲ. ಇದಲ್ಲದೆ ಈಗಿನ ದಿನಗಳಲ್ಲಿ ಶಿಕ್ಷಣಕ್ಕೆ ಸಂಬಂಧಿಸಿದ ವಿಷ್ಯವನ್ನು (Education Related Topics on Youtube) ಜನರು ಯುಟ್ಯೂಬ್ ನಲ್ಲಿ ಸರ್ಚ್ ಮಾಡ್ತಿದ್ದಾರೆ.  ಪರ್ಸನಲ್ ಡೆವಲಪ್ಮೆಂಟ್ (Personal development), ಕೃಷಿ (Agriculture), ಅಡುಗೆ (Cooking), ಟೆಕ್ನಾಲಜಿ (Technology) ಹಾಗೂ ಫ್ಯಾಷನ್ (Fashion), ಮಕ್ಕಳಿಗೆ ಸಂಬಂಧಿಸಿದ ಕಥೆ, ಟ್ರೆಂಡಿಂಗ್ ವಿಡಿಯೋ (Trending Video) ವೀಕ್ಷಣೆ ಮಾಡುವವರ ಸಂಖ್ಯೆ ಕೂಡ ಸಾಕಷ್ಟಿದೆ. 
 

Latest Videos
Follow Us:
Download App:
  • android
  • ios