Asianet Suvarna News Asianet Suvarna News
breaking news image

Youtube Earnings: ಯುಟ್ಯೂಬ್ ಗಳಿಕೆ ಶಾಶ್ವತವಲ್ಲವೇ ಅಲ್ಲ, ಈ ಕಾರಣಕ್ಕೂ ನಿಮ್ಮ ಖಾತೆ ಡಿಲೀಟ್ ಆಗ್ಬಹುದು

ಈಗ ಮಕ್ಕಳಿಂದ ಹಿಡಿದು ದೊಡ್ಡವರವರೆಗೆ ಮನೆಗೆರಡು ಮೂರರಂತೆ ಯುಟ್ಯೂಬ್ ಚಾನೆಲ್ ಇದೆ. ಕೆಲ ಚಾನಲ್ ವೀಕ್ಷಣೆ ಮಾಡೋರ ಸಂಖ್ಯೆ ಅತಿ ಹೆಚ್ಚಿದೆ. ನೀವು ಚಾನೆಲ್ ಮೂಲಕ ಹಣ ಗಳಿಕೆ ಮಾಡ್ತಿದ್ದರೆ ಇದನ್ನೇ ನಂಬಿ ಕೂರಬೇಡಿ. ಯಾಕೆಂದ್ರೆ ನೀವು ಮಾಡೋ ಸಣ್ಣ ತಪ್ಪು ದೊಡ್ಡ ನಷ್ಟಕ್ಕೆ ಕಾರಣವಾಗಬಹುದು. 
 

Youtube Can Delete Your Video Even After Millions Of Views Know What The Rules roo
Author
First Published Jun 8, 2024, 5:07 PM IST

ಕೋಟ್ಯಾಂತರ ಮಂದಿಯ ಫೆವರೆಟ್ ವಿಡಿಯೋ ಸ್ಟ್ರಿಮಿಂಗ್ ಯುಟ್ಯೂಬ್. ಇಲ್ಲಿ ವಿಡಿಯೋ ವೀಕ್ಷಣೆ ಮಾಡೋದು ಮಾತ್ರವಲ್ಲದೆ  ಜನರು ಪ್ರತಿ ದಿನ ಲಕ್ಷಾಂತರ ವಿಡಿಯೋವನ್ನು ಅಪ್ಲೋಡ್ ಮಾಡ್ತಾರೆ. ಯುಟ್ಯೂಬ್ ನಲ್ಲಿ ವಿಡಿಯೋ ಹಾಕಿ ತಿಂಗಳಿಗೆ ಸಾವಿರಾರು ರೂಪಾಯಿ ಸಂಪಾದನೆ ಮಾಡುವ ಜನರಿದ್ದಾರೆ. ಚಾನೆಲ್ ಗೆ ಹೆಚ್ಚು ಸಬ್ಸ್ಕ್ರೈಬ್ ಬರ್ತಿದ್ದಂತೆ, ಚಾನೆಲ್ ನಲ್ಲಿರುವ ವಿಡಿಯೋ ವೀಕ್ಷಣೆ ಹೆಚ್ಚಾಗ್ತಿದ್ದಂತೆ ಖಾತೆದಾರನಿಗೆ ಹಣ ಬರಲು ಶುರುವಾಗುತ್ತದೆ. ಆದ್ರೆ ಈ ಯುಟ್ಯೂಬ್ ಗಳಿಕೆ ಶಾಶ್ವತವಲ್ಲ ಎಂಬುದನ್ನು ನೀವು ತಿಳಿದಿರಿ. ಯುಟ್ಯೂಬ್ ನಿಮ್ಮ ಚಾನೆಲನ್ನು ಯಾವಾಗ ಬೇಕಾದ್ರೂ ಡಿಲೀಟ್ ಮಾಡ್ಬಹುದು. ನೀವು ಎಷ್ಟೇ ಸಬ್ಸ್ಕ್ರೈಬರ್ ಹೊಂದಿರಿ, ಎಷ್ಟೇ ಪ್ರಸಿದ್ಧಿ ಪಡೆದಿರಿ, ಆದ್ರೆ ನಿಮ್ಮ ಚಾನೆಲ್ ಯುಟ್ಯೂಬ್ ನಿಯಮವನ್ನು ಮೀರಿದ್ರೆ ಅದು ಡಿಲಿಟ್ ಆಗೋದು ನಿಶ್ಚಿತ. ಯುಟ್ಯೂಬ್ ಕೆಲವೊಂದು ನಿಯಮಗಳನ್ನು ಹೊಂದಿದ್ದು, ಅದಕ್ಕೆ ವಿರುದ್ಧವಾಗಿ ನಿಮ್ಮ ಕಂಟೆಂಟ್ ಇದ್ರೆ ಆಗ ಯುಟ್ಯೂಬ್ ಈ ಚಾನೆಲ್ ಡಿಲೀಟ್ ಮಾಡುತ್ತೆ. ಯುಟ್ಯೂಬ್ ಯಾವ ನಿಯಮಗಳ ಅಡಿಯಲ್ಲಿ ಚಾನೆಲ್ ಡಿಲೀಟ್ ಮಾಡುತ್ತೆ ಎನ್ನುವ ವಿವರ ಇಲ್ಲಿದೆ.

ಸದ್ಯ ಯುಟ್ಯೂಬ್ (Youtube) ಚಾಹತ್ ಫತೇಹ್ ಅಲಿ ಖಾನ್ ಹಾಡನ್ನು ಡಿಲೀಟ್ ಮಾಡಿದೆ.  ಚಾಹತ್ ಫತೇಹ್ ಅಲಿ ಖಾನ್ ಅವರ ಅಧಿಕೃತ ಯೂಟ್ಯೂಬ್ ಚಾನೆಲ್‌ನಿಂದ ಪೋಸ್ಟ್ ಮಾಡಿದ ಹಾಡಿನ ವಿಡಿಯೊ (Video) 25 ಮಿಲಿಯನ್‌ಗಿಂತಲೂ ಹೆಚ್ಚು ವೀಕ್ಷಣೆ ಪಡೆದಿತ್ತು. ಆದ್ರೆ ಯುಟ್ಯೂಬ್ ನಿಯಮಕ್ಕೆ ಇದು ವಿರುದ್ಧವಾಗಿದೆ ಎನ್ನುವ ಕಾರಣಕ್ಕೆ ಅದನ್ನು ಡಿಲೀಟ್ ಮಾಡಲಾಗಿದೆ.  ಚಾಹತ್ ಫತೇಹ್ ಅಲಿ ಖಾನ್ ಹಾಡು ಬಡೋ ಬಡಿ, ಯುಟ್ಯೂಬ್, ಇನ್ಸ್ಟಾಗ್ರಾಮ್, ಶಾರ್ಟ್ಸ್ ನಲ್ಲಿ ಪ್ರಸಿದ್ಧಿ ಪಡೆದಿತ್ತು. ಈ ಹಾಡನ್ನು 1973 ರಲ್ಲಿ  ಬನಾರಸಿ ಥಗ್ ಚಿತ್ರದಲ್ಲಿ ನೂರ್ ಜಹಾನ್ ಹಾಡಿದ್ದರು. ಎರಡೂ ಹಾಡುಗಳ ಸಾಹಿತ್ಯವು ಒಂದೇ ರೀತಿಯದ್ದಾಗಿದೆ. ಈ ಕಾರಣದಿಂದಾಗಿ ಚಾಹತ್ ಫತೇ ಅಲಿ ಖಾನ್ ಅವರ ಹಾಡನ್ನು ತೆಗೆದುಹಾಕಲಾಗಿದೆ. ವರದಿಗಳ ಪ್ರಕಾರ, ಮೂಲ ಸಂಯೋಜನೆಯ ಹಕ್ಕುಗಳನ್ನು ಹೊಂದಿರುವ ನೂರ್ ಜಹಾನ್ ಅವರ ತಂಡವು ಹಕ್ಕುಸ್ವಾಮ್ಯವನ್ನು ಪಡೆಯಬಹುದು.

ಮಗು ಮಾಡಿಕೊಂಡ್ರೆ ಅವ್ರೆ ನನ್ನ ನೋಡ್ಕೋಬೇಕು, ನಾನು ಏನೂ ಮಾಡಲ್ಲ; ನಿವೇದಿತಾ ಗೌಡ ಹಳೆ ವಿಡಿಯೋ ವೈರಲ್

ಯುಟ್ಯೂಬ್ ನಿಯಮ : ಹಕ್ಕುಸ್ವಾಮ್ಯ ಸಮಸ್ಯೆಯಿದ್ದಲ್ಲಿ ಯುಟ್ಯೂಬ್  ಯಾವುದೇ ವೀಡಿಯೊವನ್ನು ತೆಗೆದುಹಾಕಬಹುದು. ಇದರ ಹೊರತಾಗಿ  ನಿಮ್ಮ ವೀಡಿಯೊದಲ್ಲಿ ನೀವು ಯಾರೊಬ್ಬರ ಫೋಟೋ ಅಥವಾ ಯಾವುದೇ ಕ್ಲಿಪ್ ಅನ್ನು ಅವರ ಒಪ್ಪಿಗೆಯಿಲ್ಲದೆ ಬಳಸಿದ್ದರೆ, ಯುಟ್ಯೂಬ್ ಅದನ್ನು ತೆಗೆದುಹಾಕುತ್ತದೆ. ಯುಟ್ಯೂಬ್ ಯಾವುದೇ ಸಮಸ್ಯೆ ಕಂಡುಬಂದಲ್ಲಿ ವೀಡಿಯೊಗಳ ವಿರುದ್ಧ ಕ್ರಮ ತೆಗೆದುಕೊಳ್ಳಬಹುದು. ಯೂಟ್ಯೂಬ್ ಇತ್ತೀಚೆಗೆ ಭಾರತದ 22 ಲಕ್ಷಕ್ಕೂ ಹೆಚ್ಚು ವೀಡಿಯೊಗಳನ್ನು ತೆಗೆದುಹಾಕಿದೆ. ಲಕ್ಷಗಟ್ಟಲೆ ಚಾನೆಲ್ ಗಳನ್ನೂ ಬ್ಯಾನ್ ಮಾಡಿದೆ. ಯುಟ್ಯೂಬ್  ತನ್ನ ಮಾರ್ಗಸೂಚಿಗಳನ್ನು ಅನುಸರಿಸದ ಕಾರಣಕ್ಕಾಗಿ ಪ್ರಪಂಚದಾದ್ಯಂತ ಒಟ್ಟು 90,12,232 ವೀಡಿಯೊಗಳನ್ನು ಡಿಲೀಟ್ ಮಾಡಿದೆ.

ಹೆಚ್ಚು ವ್ಯೂವ್, ಲೈಕ್ಸ್‌ಗಾಗಿ ಹೆಲಿಕಾಪ್ಟರ್‌ನಲ್ಲಿ ಭಯಾನಕ ಸ್ಟಂಟ್- ಖ್ಯಾತ ಯುಟ್ಯೂಬರ್ ಅರೆಸ್ಟ್

ಯೂಟ್ಯೂಬ್ ಭಾರತದಿಂದ ಒಟ್ಟು 22,54,902 ವೀಡಿಯೊಗಳನ್ನು ತೆಗೆದುಹಾಕಿದೆ. ಈ ಪಟ್ಟಿಯಲ್ಲಿ ಸಿಂಗಾಪುರವು ಭಾರತದ ನಂತರ ಎರಡನೇ ಸ್ಥಾನದಲ್ಲಿದೆ. ಅಲ್ಲಿ 12,43,871 ವೀಡಿಯೊಗಳನ್ನು ಯೂಟ್ಯೂಬ್‌ನಿಂದ ಡಿಲೀಟ್ ಮಾಡಲಾಗಿದೆ. ಅಟೋಮೆಟಿಕ್ ಫ್ಲಾಗಿಂಗ್ ಮೂಲಕ ವಿಡಿಯೋವನ್ನು ಡಿಲೀಟ್ ಮಾಡಲಾಗಿದೆ. ಡಿಲೀಟ್ ಆದ ವಿಡಿಯೋದಲ್ಲಿ ಶೇಕಡಾ 1.25ರಷ್ಟು ವಿಡಿಯೋ ಮಾತ್ರ 10,000ರಕ್ಕಿಂತ ಹೆಚ್ಚು ವೀವ್ಸ್ ಹೊಂದಿತ್ತು. ಮಕ್ಕಳ ಸುರಕ್ಷತೆಯ ಕಾರಣದಿಂದ ಶೇಕಡಾ 32.4ರಷ್ಟು ವೀಡಿಯೊಗಳನ್ನು ತೆಗೆದುಹಾಕಲಾಗಿದೆ. ಇದಲ್ಲದೆ ಶೇಕಡಾ  7.5  ವೀಡಿಯೊಗಳು ಹಿಂಸಾತ್ಮಕ, ಅಶ್ಲೀಲ ವಿಷ್ಯವನ್ನು ಹೊಂದಿತ್ತು.  ನಗ್ನತೆ ಅಥವಾ ಲೈಂಗಿಕ ವಿಷಯ, ಕಿರುಕುಳ ಮತ್ತು  ಬೆದರಿಕೆ, ಹಿಂಸೆ ಸೇರಿದಂತೆ ಅಪಾಯಕಾರಿ ಅಂಶವಿರುವ ವಿಡಿಯೋಗಳನ್ನು ಯುಟ್ಯೂಬ್ ಡಿಲೀಟ್ ಮಾಡುತ್ತದೆ. 

Latest Videos
Follow Us:
Download App:
  • android
  • ios