ಮಗು ಮಾಡಿಕೊಂಡ್ರೆ ಅವ್ರೆ ನನ್ನ ನೋಡ್ಕೋಬೇಕು, ನಾನು ಏನೂ ಮಾಡಲ್ಲ; ನಿವೇದಿತಾ ಗೌಡ ಹಳೆ ವಿಡಿಯೋ ವೈರಲ್
ನಿವಿ ಪದೇ ಪದೇ ಮಗು ಬೇಡ ಫ್ಯಾಮಿಲಿ ಪ್ಲ್ಯಾನಿಂಗ್ ಬೇಡ ಎನ್ನಲು ಕಾರಣವೇನು? ಗಿಚ್ಚಿ ಗಿಲಿಗಿಲಿ ವೇದಿಕೆಯಲ್ಲಿ ನಡೆದ ಸಂದರ್ಶನ ಈಗ ವೈರಲ್.....
ಬಿಗ್ ಬಾಸ್ ಬಾರ್ಬಿ ಡಾಲ್ ನಿವೇದಿತಾ ಗೌಡ ಮತ್ತು ಚಂದನ್ ಶೆಟ್ಟಿ ಜೂನ್ 7, 2024ರಂದು ಪರಸ್ಪರ ಒಪ್ಪಿಗೆ ಮೇಲೆ ಡಿವೋರ್ಸ್ ಪಡೆದುಕೊಂಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕುವ ಮೂಲಕ ಸಪರೇಟ್ ಆಗಿರುವ ವಿಚಾರವನ್ನು ತಿಳಿಸಿದ್ದಾರೆ. ಇದರ ಬೆನ್ನಲ್ಲೆ ಮಗು ಬೇಡವೇ ಬೇಡ ಎಂದು ನಿವಿ ಆಗಾಗ ಹೇಳಲು ಕಾರಣವೇನು? ಹಳೆ ವಿಡಿಯೋ ಈಗ ವೈರಲ್ ಆಗುತ್ತಿದೆ.
ಫ್ಯಾಮಿಲಿ ಪ್ಲ್ಯಾನಿಂಗ್ ಮತ್ತು ಮಗು ಬಗ್ಗೆ ನಟಿ ತಾರಾ ಅನುರಾಧ ಮತ್ತು ಸೃಜನ್ ಲೋಕೇಶ್ ಜೊತೆ ನಡೆದ ಸಂದರ್ಶನವಿದು.ನನ್ನ ಮಗುನೇ ಊಟ ಮಾಡಿಸಬೇಕು ಅಡುಗೆ ಮಾಡಬೇಕು. ಪಕ್ಕಾ ಹಾಗೆ ಮಾಡುತ್ತೀನಿ. ನನಗೆ ಮಗು ಹುಟ್ಟರೆ ಅದಕ್ಕೆ ಎಲ್ಲಾ ಹೇಳಿ ಕೊಡುತ್ತೀನಿ. ಅಡುಗೆ ಮಾಡಿ ಕೊಟ್ಟರೆ ನಾನು ಖುಷಿಯಾಗಿರುತ್ತೀನಿ' ಎಂದು ನಿವೇದಿತಾ ಗೌಡ ಹೇಳಿದ್ದಾರೆ. ತಕ್ಷಣವೇ ತಾರಾ ' ನಿನ್ನ ಮಗುವಿಗೆ ಅಡುಗೆ ಮಾಡುವುದು ನೀನು ಹೇಳಿಕೊಡಬೇಕು ಅಂದ್ರೆ ಮೊದಲು ನಿನಗೆ ಅಡುಗೆ ಮಾಡಲು ಬರಬೇಕು ಅಲ್ವಾ' ಎನ್ನುತ್ತಾರೆ. 'ಅಯ್ಯೋ ಮೇಡಂ ಈಗ ಅಡುಗೆ ಮಾಡುವುದು ಕಷ್ಟವಲ್ಲ ಯೂಟ್ಯೂಬ್ ಇದೆ ಅಲ್ವಾ' ಎಂದಿದ್ದಾರೆ ನಿವಿ.
ಇದ್ದಕ್ಕಿದ್ದಂತೆ ಚಂದನ್ ಜೊತೆಗಿನ ರೀಲ್ಸ್ ಡಿಲೀಟ್?; ಆಹಾ ಚಿಣಿಮಿಣಿ ಚಿಂತಾಮಣಿ ಎಂದು ನಿವಿ ಕಾಲೆಳೆದ ನೆಟ್ಟಿಗರು
ಶೋನಲ್ಲಿ ನಿವೇದಿತಾಗೆ ಕೈಗೆ ಒಂದು ಗೊಂಬೆ ಕೊಟ್ಟು ಅದಕ್ಕೆ ಹೆಸರಿಟ್ಟು ಹೇಗೆ ಸಮಾಧಾನ ಮತ್ತು ಪ್ರೀತಿ ಮಾಡುತ್ತಾರೆಂದು ತೋರಿಸಬೇಕು. ನಿವಿ ಕೈಗೆ ಒಂದು ಆಟದ ಗೊಂಬೆ ಕೊಡುತ್ತಾರೆ 'ಈ ಮಗುವಿಗೆ ನಾನು ಚಾನ್ವಿ ಎಂದು ಹೆಸರಿಡುವೆ. ಚಂದನ್ ಹೆಸರಿನಿಂದ ಚಾನ್ ನನ್ನ ಹೆಸರಿನಿಂದ ನಿವಿ..ಎರಡು ಸೇರಿಸಿ ಚಾನ್ವಿ ಎಂದು ಕರೆಯುವೆ'ಎಂದಿದ್ದಾರೆ. ಮಗುವನ್ನು ಸಮಾಧಾನ ಮಾಡುವಾಗ 'ಅಳ ಬೇಡ ಪಾಪ ಅಳಬೇಡ ಚಿನ್ನಿ ಪಾಪ..ಅಲ್ಲಿ ನೋಡು ಚಂದ ಮಾಮ ..ಊಟ ಮಾಡ್ತೀಯಾ? ಏನ್ ತಿನ್ನುತ್ತೀಯಾ? ಚಿಕನ್ ಬೇಕಾ ಫ್ರೆಂಡ್ ಫ್ರೈಸ್ ಬೇಕಾ ಗೋಬಿ ಮಂಚೂರಿ' ಎಂದು ನಿವೇದಿತಾ ಕೇಳುವಾಗ ಮಾತನ್ನು ಸೃಜನ್ ಅಲ್ಲಿಗೆ ನಿಲ್ಲಿಸಿ 'ನಿನ್ನ ಕೈಯಲ್ಲಿರುವುದು ಮಗುನಾ ನಾಯಿ ಮರಿ ನಾ?' ಎಂದಿದ್ದಾರೆ.