Business Idea: ಉದ್ಯೋಗ ಸಿಗುತ್ತಿಲ್ಲವೇ? ಕಡಿಮೆ ಬಂಡವಾಳದಲ್ಲಿ ಬ್ಯುಸಿನೆಸ್ ಆರಂಭಿಸಿ ಪ್ರತಿದಿನ 2,000 ರೂ ಗಳಿಸಿ. ಜನದಟ್ಟಣೆಯ ಪ್ರದೇಶದಲ್ಲಿ ಅಂಗಡಿ ತೆರೆಯಿರಿ ಮತ್ತು ಗ್ರಾಹಕರ ಅಭಿರುಚಿಗೆ ತಕ್ಕಂತೆ ಆಹಾರವನ್ನು ಒದಗಿಸಿ.
ಒಂದು ಹಂತವದರೆಗೆ ಓದಿದ ಮೇಲೆ ಒಂದು ಕೆಲಸ ಮಾಡಬೇಕು ಅನ್ನೋದು ಎಲ್ಲರ ಕನಸು ಆಗಿರುತ್ತದೆ. ಸರ್ಕಾರಿ ಅಥವಾ ಖಾಸಗಿ ಕಂಪನಿಗಳಲ್ಲಿ 9 ಟು 5 ಜಾಬ್ ಸಿಗೋದು ಅಷ್ಟು ಸುಲಭದ ಮಾತಲ್ಲ. ಖಾಸಗಿ ಕಂಪನಿಯಲ್ಲಿ ಸಿಕ್ಕರೂ ಕೆಲಸದ ಭದ್ರತೆ ಇರಲ್ಲ. ಜನರು ಏನು ಅಂದುಕೊಳ್ಳುತ್ತಾರೆ ಅಂತ ಯೋಚಿಸುವ ಮುನ್ನ ನನ್ನ ಭವಿಷ್ಯ ಹೇಗಿರಬೇಕೆಂದು ಯೋಚಿಸಿ ಸ್ವಂತ ವ್ಯಾಪಾರ ಆರಂಭಿಸಿ. ಇಲ್ಲಿ ನೀವೇ ರಾಜ ಮತ್ತು ಕೆಲಸಗಾರರಾಗಿರುತ್ತೀರಿ. ನಂತರ ಹಂತ ಹಂತವಾಗಿ ವ್ಯಾಪಾರವನ್ನು ವಿಸ್ತರಿಸಿಕೊಳ್ಳುಬಹುದು. ನಿಮ್ಮೂರಿನಲ್ಲಿ ಅಥವಾ ಸಮೀಪದ ಪಟ್ಟಣದಲ್ಲಿ ಈ ವ್ಯವಹಾರವನ್ನು ಆರಂಭಿಸಿ ಕೈ ತುಂಬಾ ಹಣ ಸಂಪಾದಿಸಬಹುದು.
ಈ ವ್ಯವಹಾರ ಅತಿ ಕಡಿಮೆ ಬಂಡವಾಳದಿಂದ ಆರಂಭಿಸಬಹುದು. ಕನಿಷ್ಠ 50 ಸಾವಿರ ರೂಪಾಯಿ ಹಣ ಹೂಡಿಕೆ ಮಾಡಿ ಸ್ವಂತ ಬ್ಯುಸಿನೆಸ್ ಸ್ಟಾರ್ಟ್ ಮಾಡಬಹುದು. ಒಂದೆರಡು ವರ್ಷಗಳಲ್ಲಿಯೇ ಜನಪ್ರಿಯತೆಯೊಂದಿಗೆ ಆರ್ಥಿಕವಾಗಿ ಸದೃಢರಾಗುತ್ತಿರಿ. ಆದ್ರೆ ಈ ಬ್ಯುಸಿನೆಸ್ ಆರಂಭಿಸುವ ಮುನ್ನ ಏನು? ಎಲ್ಲಿ ಮತ್ತು ಹೇಗೆ ಎಂಬುದನ್ನು ತಿಳಿದುಕೊಂಡಿರಬೇಕು.
ಇಂದು ಸಂಜೆಯಾಗುತ್ತಲೇ ಏನಾದ್ರು ತಿನ್ನಬೇಕು ಅನ್ನೋ ಟ್ರೆಂಡ್ ಶುರುವಾಗಿದೆ. ಹಾಗಾಗಿ ಫಾಸ್ಟ್ ಫುಡ್ ಅಂಗಡಿಯನ್ನು ಕಡಿಮೆ ಬಂಡವಾಳದಲ್ಲಿ ಶುರು ಮಾಡಿ ಪ್ರತಿದಿನ 2 ರಿಂದ 3 ಸಾವಿರ ರೂಪಾಯಿ ಹಣ ಮಾಡಬಹುದು. ಬಸ್ ನಿಲ್ದಾಣ, ರೈಲ್ವೆ ನಿಲ್ದಾಣ, ಹೆದ್ದಾರಿ, ಮಾರುಕಟ್ಟೆ, ಕಾಲೇಜು, ಆಸ್ಪತ್ರೆ, ಸರ್ಕಾರಿ ಕಚೇರಿ, ಹಲವು ಮಾರ್ಗಗಳನ್ನು ಸಂಪರ್ಕಿಸುವ ರಸ್ತೆ ಸೇರಿದಂತೆ ಇಂತಹ ಜನದಟ್ಟಣೆಯ ಸ್ಥಳದಲ್ಲಿ ಫಾಸ್ಟ್ ಫುಡ್ ಅಂಗಡಿ ತೆರೆಯಬಹುದು.
ನೀವು ಅಂಗಡಿ ಆರಂಭಿಸುವ ಪ್ರದೇಶದ ಜನರ ಮನಸ್ಥಿತಿ ಮತ್ತು ಆರ್ಥಿಕ ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸಬೇಕು. ಗ್ರಾಮೀಣ ಭಾಗದಲ್ಲಿ ಹೋಗಿ ಪಿಜ್ಜಾ, ಬರ್ಗರ್ ಶಾಪ್ ತೆರೆದ್ರೆ ನಿಮ್ಮ ಶಾಪ್‌ಗೆ ಒಬ್ಬ ಗ್ರಾಹಕರು ಬರಲ್ಲ. ಆರಂಭದಲ್ಲಿ ಬಂದರೂ ನಂತರ ಗ್ರಾಹಕರ ಸಂಖ್ಯೆ ಕಡಿಮೆಯಾಗುತ್ತದೆ. ಇಂತಹ ಪ್ರದೇಶದಲ್ಲಿ ಸಣ್ಣದಾಗಿ ಬಜ್ಜಿ-ಬೋಂಡಾ ಆರಂಭಿಸಬೇಕು. ಗ್ರಾಹಕರ ಸಂಖ್ಯೆ ಹೆಚ್ಚಾಗುತ್ತಿದ್ದಂತೆ ಒಂದೊಂದೇ ಉತ್ಪನ್ನವನ್ನು ಪರಿಚಯಿಸುತ್ತಾ ಹೋಗಬೇಕು. ಗ್ರಾಹಕರು ಇಷ್ಟಪಟ್ಟಲ್ಲಿ ಹೀಗೆ ನಿಮ್ಮ ವ್ಯಾಪಾರವನ್ನು ವಿಸ್ತರಿಸಬಹುದು.
ಇದನ್ನೂ ಓದಿ: ಯುಗಾದಿಗೂ ಮುನ್ನವೇ ಬಂಪರ್ ಆಫರ್; ಕಡಿಮೆ ಬೆಲೆಯಲ್ಲಿ 43 ಇಂಚಿನ ಬಿಗ್ ಸ್ಕ್ರೀನ್ ಡಿಜಿಟಲ್ ಸ್ಮಾರ್ಟ್ ಟಿವಿ
ಇಂದು ಬಜ್ಜಿ-ಬೋಂಡಾ ಮಾರಾಟ ಮಾಡಿ ಸಾವಿರಾರು ರೂಪಾಯಿ ಹಣ ಸಂಪಾದಿಸುವ ವ್ಯಾಪಾರಿಗಳಿದ್ದಾರೆ. ಆದ್ರೆ ಒಂದೇ ದಿನ ನಿಮಗೆ 2 ಸಾವಿರ ರೂ.ಗಳಷ್ಟು ಆದಾಯ ಸಿಗಲ್ಲ. ಅಂಗಡಿ ಮತ್ತು ಆಹಾರ ಉತ್ಪನ್ನದ ಬಗ್ಗೆ ಜನರಿಂದಲೇ ಪ್ರಚಾರ ದೊರೆತಾಗ ನಿಮ್ಮಆದಾಯದ ಪ್ರಮಾಣ ಏರಿಕೆಯಾಗುತ್ತದೆ. ಇಂದು ಸ್ವಚ್ಛತೆ ಇರೋ ಪ್ರದೇಶದಲ್ಲಿ ಆಹಾರ ಸೇವಿಸಲು ಇಷ್ಟಪಡುತ್ತಾರೆ. ಹಾಗಾಗಿ ಸ್ವಚ್ಛತೆ ಕಾಪಾಡಿಕೊಳ್ಳಬೇಕು. ಇದರಿಂದ ಗ್ರಾಹಕರ ಸಂಖ್ಯೆ ಹೆಚ್ಚಾಗುತ್ತದೆ. ಜನರು ಸ್ಥಳೀಯವಾಗಿ ಇಷ್ಟಪಡುವ ತಿಂಡಿ ಮಾರಾಟ ಮಾಡಿದ್ರೆ ಲಾಭದ ಪ್ರಮಾಣ ಹೆಚ್ಚಾಗುತ್ತದೆ.
Disclaimer: ಯಾವುದೇ ವ್ಯವಹಾರವು ಮಾರುಕಟ್ಟೆಯ ಅಪಾಯವನ್ನು ಒಳಗೊಂಡಿರುತ್ತವೆ. ಇದು ಅಂತರ್ಜಾಲದಲ್ಲಿ ಲಭ್ಯವಿರುವ ಮಾಹಿತಿಯನ್ನು ಆಧರಿಸಿದೆ. ಇದನ್ನು ಏಷ್ಯಾನೆಟ್ ಸುವರ್ಣ ನ್ಯೂಸ್ ದೃಢೀಕರಿಸುವದಿಲ್ಲ. ಬಳಕೆದಾರರು ಇವನ್ನು ಕೇವಲ ಮಾಹಿತಿಯನ್ನಾಗಿ ಮಾತ್ರ ಪರಿಗಣಿಸಬೇಕಾಗಿ ವಿನಂತಿ.
ಇದನ್ನೂ ಓದಿ: 3 in 1 ಬ್ಯುಸಿನೆಸ್ ಐಡಿಯಾ; ಸ್ವಲ್ಪ ತಲೆ ಉಪಯೋಗಿಸಿದ್ರೆ ಮೂರೇ ತಿಂಗಳಲ್ಲಿ ಲಕ್ಷ ಲಕ್ಷ ಸಂಪಾದಿಸೋ ಸೂಪರ್ ವ್ಯವಹಾರ
