ಯುಗಾದಿಗೂ ಮುನ್ನವೇ ಥಾಮ್ಸನ್ 43 ಇಂಚಿನ QLED ಸ್ಮಾರ್ಟ್‌ಟಿವಿ ಮೇಲೆ ಭರ್ಜರಿ ಆಫರ್ ಘೋಷಿಸಲಾಗಿದೆ. ಈ ಟಿವಿ 40W ಸೌಂಡ್ ಔಟ್‌ಪುಟ್, HDR ಸಪೋರ್ಟ್, ಡಾಲ್ಬಿ ಆಡಿಯೋ ಮತ್ತು ಜಿಯೋ ಟೆಲಿಕಾಂನ ಕೊಡುಗೆಗಳೊಂದಿಗೆ ಲಭ್ಯವಿದೆ.

Thomsaon 43 QLED Smart TV: ಮನೆಗೆ ಸ್ಮಾರ್ಟ್‌ ಟಿವಿ ತರಲು ಪ್ಲಾನ್ ಮಾಡಿಕೊಂಡಿದ್ರೆ ನಿಮಗೊಂದು ಒಳ್ಳೆಯ ಸುದ್ದಿ. ಯುಗಾದಿಗೂ ಮುನ್ನವೇ ಸೂಪರ್ ಸ್ಮಾ ರ್ಟ್ ಟಿವಿ ಮೇಲೆ ಬಂಪರ್ ಆಫರ್ ಘೋಷಣೆ ಮಾಡಲಾಗಿದೆ. ಕಡಿಮೆ ಬೆಲೆಯಲ್ಲಿ 43 ಇಂಚಿನ ಬಿಗ್ ಸ್ಕ್ರೀನ್ ಟಿವಿ  ಸಿಗಲಿದೆ. ಭಾರತದಲ್ಲಿ ಥಾಮ್ಸನ್ ಬ್ರ್ಯಾಂಡ್ ಲೈಸನ್ಸ್ ಹೊಂದಿರುವ Super Plastronics Pvt Ltd (SPPL) ತನ್ನ ಸ್ಮಾರ್ಟ್ ಟಿವಿ Thomsaon 43 QLED ಕಂಪನಿ ಲಾಂಚ್ ಮಾಡಿದೆ. 43 ಇಂಚಿನ ಬಿಗ್ ಸ್ಕ್ರೀನ್ ಹೊಂದಿರುವ ಈ ಸ್ಮಾರ್ಟ್ ಟಿವಿ 40W ಸೌಂಡ್ ಔಟ್‌ಪುಟ್, HDR ಸಪೋರ್ಟ್, ಡಾಲ್ಬಿ ಆಡಿಯೋ, 8GB ಸ್ಟೋರೇಜ್ ಸೇರಿದಂತೆ ಹಲವು ಫೀಚರ್ಸ್‌ಗಳನ್ನು ಈ ಸ್ಮಾರ್ಟ್‌ಟಿವಿ ಹೊಂದಿದೆ. ಅತ್ಯಧಿಕ ಫೀಚರ್ಸ್ ಹೊಂದಿರುವ ಥಾಮ್ಸನ್ ಸ್ಮಾರ್ಟ್‌ಟಿವಿ ಬೆಲೆ ಎಷ್ಟು ಎಂಬುದರ ಮಾಹಿತಿ ಈ ಲೇಖನದಲ್ಲಿದೆ. 

Thomsaon 43 QLED ಸ್ಮಾರ್ಟ್‌ಟಿವಿ
ಈ ಸ್ಮಾ ರ್ಟ್‌ಟಿವಿ JioTele OS ಪಾರ್ಟನರ್‌ಶಿಪ್ ಹೊಂದಿರುವ ಕಾರಣ, ಗ್ರಾಹಕರಿಗೆ JioHotstar ಮತ್ತು jioSaavaನ ಮೂರು ತಿಂಗಳ ಉಚಿತ ಸಬ್‌ಸ್ಕ್ರಿಪ್ಷನ್ ಸಿಗಲಿದೆ. ಇದರ ಜೊತೆಯಲ್ಲಿ 1  ತಿಂಗಳ ಜಿಯೋ ಗೇಮ್ಸ್ ಉಚಿತವಾಗಿ ಸಿಗಲಿದೆ.  Thomsaon 43 QLED ಸ್ಮಾರ್ಟ್‌ಟಿವಿ ಖರೀದಿದಾರರಿಗೆ ಸ್ವಿಗ್ಗಿಯಿಂದ  499 ರೂಪಾಯಿ ಕೂಪನ್ ಸಿಗುತ್ತದೆ. ಗ್ರಾಹಕರು ಈ ಕೂಪನ್ ಬಳಸಿ 499 ರೂ.ವರೆಗೆ ಉಚಿತವಾಗಿ ಫುಡ್ ಆರ್ಡರ್ ಮಾಡಬಹುದು. ಈ ಕೂಪನ್ ಬಳಕೆ ಮಾಡಿದ ಗ್ರಾಹಕರಿಗೆ 150 ರೂ.ಯ ಡಿಸ್ಕೌಂಟ್‌ ಸಹ ಲಭ್ಯವಾಗುತ್ತದೆ. 

Thomsaon 43 QLED ಫೀಚರ್ಸ್
ಭಾರತದಲ್ಲಿ ಬಿಡುಗಡೆಯಾಗಿರುವ Thomsaon ಸ್ಮಾರ್ಟ್‌ಟಿವಿ 43 ಇಂಚು (3840*2160 ಪಿಕ್ಸೆಲ್) QLED ಡಿಸ್‌ಪ್ಲೇ ಪ್ಯಾನೆಲ್ ಒಳಗೊಂಡಿದೆ. ಈ ಡಿವೈಸ್ 1.1 ಬಿಲಿಯನ್ ಕಲರ್ಸ್, HDR Support ಮತ್ತು 450 ನಿಟ್ಸ್ ಬ್ರೈಟ್‌ನೆಸ್ ನಲ್ಲಿ ಲಭ್ಯವಿದೆ. ಈ ಸ್ಮಾರ್ಟ್‌ಟಿವಿ ಬೆಜಲ್ ಲೆಸ್ ಡಿಸೈನ್‌ನಲ್ಲಿ ಸಿಗಲಿದೆ. 

ಥಾಮ್ಸನ್ ಸ್ಮಾರ್ಟ್‌ಟಿವಿ Amlogic ಪ್ರೊಸೆಸರ್ ಹೊಂದಿದ್ದು ,40W ಸ್ಪೀಕರ್, ಡಾಲ್ಬಿ ಡಿಜಿಟಲ್ ಪ್ಲಸ್ ಮತ್ತು  DTS TruSurroundನಂತಹ ತಂತ್ರಜ್ಞಾನವನ್ನು ಸಹ ಒಳಗೊಂಡಿದೆ. ಟಿವಿ ಸ್ಟ್ಯಾಂಡರ್ಡ್, ಸ್ಪೋರ್ಟ್, ಮೂವಿ, ಮ್ಯೂಸಿಕ್ ಸೌಂಡ್ ಮೋಡ್‌ ಆಯ್ಕೆಗಳನ್ನು ಥಾಮ್ಸನ್ ಸ್ಮಾರ್ಟ್‌ ಟಿವಿ ಒಳಗೊಂಡಿದೆ.  JioTele OS ಪಾರ್ಟನರ್ ಶಿಪ್ ಹೊಂದಿರುವ ಕಾರಣ  400ಕ್ಕೂ ಅಧಿಕ ಲೈವ್ ಟಿವಿ ಚಾನೆಲ್‌ ಉಚಿತವಾಗಿ ವೀಕ್ಷಿಸಬಹುದು. 

ಇದನ್ನೂ ಓದಿ: ನಿಮ್ಮ ಬಜೆಟ್‌ನಲ್ಲಿ ಬರುತ್ತೆ 108MP ಕ್ಯಾಮೆರಾ, 24GB RAM ಹೊಂದಿರುವ 5G ಸ್ಮಾರ್ಟ್‌ಫೋನ್

ಟಿವಿ ಕನೆಕ್ಟಿವಿಟಿ 
ಟಿವಿ ಕನೆಕ್ಟಿವಿಗಾಗಿ  ಬ್ಲೂಟೂತ್ 5.0, ವೈ-ಫೈ  802.11  ಎಸಿ, 3HDMI ಪೋರ್ಟ್, 2  ಯುಎಸ್‌ಬಿ ಪೋರ್ಟ್ ಫೀಚರ್ಸ್ ಹೊಂದಿದೆ. ಹಾಗೆ ಟಿವಿ ವಾಯ್ಸ್ ಅಸಿಸ್ಟೆಂಟ್ ಸಪೋರ್ಟ್ ಮಾಡುತ್ತದೆ. ಇದರ ಜೊತೆಯಲ್ಲಿ ವಾಯ್ಸ್ ರಿಮೋಟ್ ಸಹ ಗ್ರಾಹಕರಿಗೆ ನೀಡಲಾಗುತ್ತದೆ. ಇದೇ ರಿಮೋರ್ಟ್‌ನಲ್ಲಿ ನಿಮಗೆ Netflix, Jio Cinema, Jio Hoststar ಮತ್ತು Youtube ಬಟನ್ ನೀಡಲಾಗಿದೆ 

ಬೆಲೆ ಎಷ್ಟು? 
ಥಾಮ್ಸನ್ಸ ಸ್ಮಾರ್ಟ್‌ಟಿವಿ ಗ್ರಾಹಕರಿಗೆ 18,999 ರೂಪಾಯಿಯಲ್ಲಿ ಸಿಗಲಿದೆ. ಈ ಸ್ಮಾರ್ಟ್‌ಟಿವಿಯನ್ನು ಫ್ಲಿಪ್‌ಕಾರ್ಟ್‌ ಮೂಲಕ ಖರೀದಿಸಬಹುದು. ಈ ಸ್ಮಾರ್ಟ್‌ಟಿವಿ ಮೂಲಬೆಲೆ 32,999 ರೂ.ಗಳಾಗಿದ್ದು, ಸದ್ಯ ಖರೀದಿದಾರರಿಗೆ ಶೇ.42ರಷ್ಟು ರಿಯಾಯ್ತಿ ಸಿಗುತ್ತಿದೆ. ಆಕ್ಸಿಸ್ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಬಳಕೆ ಮೇಲೆ ಶೇ.5ರಷ್ಟು ಡಿಸ್ಕೌಂಟ್ ಲಭ್ಯವಾಗಲಿದೆ. ಎಸ್‌ಬಿಐ ಕಾರ್ಡ್ ಬಳಕೆ ಮೇಲೆ ಶೇ.10ರವರೆಗೆ ಆಫರ್ ನೀಡಲಾಗಿದೆ. ಇದೆಲ್ಲದರ ಜೊತೆ ಫ್ಲಿಪ್‌ಕಾರ್ಟ್ ಕ್ಯಾಶ್‌ಬ್ಯಾಕ್ ಆಫರ್ ನೀಡುತ್ತಿದೆ. 

ಇದನ್ನೂ ಓದಿ: Realmeಯಿಂದ ಸ್ಟೈಲಿಶ್ ಫೋನ್ ಬಿಡುಗಡೆ; 128GB ಸ್ಟೋರೇಜ್, 5600mAh ಬ್ಯಾಟರಿಯ ಸ್ಮಾರ್ಟ್‌ಫೋನ್