3 in 1 Business Idea: ಬೇಸಿಗೆಯಲ್ಲಿ 3in1 ಬ್ಯುಸಿನೆಸ್ ಐಡಿಯಾ ನಿಮಗೆ ಲಕ್ಷಾಂತರ ರೂಪಾಯಿ ಸಂಪಾದಿಸಲು ಸಹಾಯ ಮಾಡುತ್ತದೆ. ಕಡಿಮೆ ಸಮಯದಲ್ಲಿ ಹೆಚ್ಚು ಲಾಭ ಗಳಿಸಬಹುದು.
Seasonal Business: ನೀವು ಯಾವುದಾದರೂ ಬ್ಯುಸಿನೆಸ್ ಮಾಡಬೇಕು ಅಂತ ಯೋಚನೆ ಮಾಡುತ್ತಿದ್ರೆ ನಿಮಗೊಂದು ಸುವರ್ಣವಕಾಶ ಬಂದಿದೆ. ಈ ವ್ಯವಹಾರದ ಅವಧಿ 3 ರಿಂದ 4 ತಿಂಗಳು ಮಾತ್ರ ಆಗಿರುತ್ತದೆ. ಆದ್ರೆ ಈ ಕಡಿಮೆ ಸಮಯದಲ್ಲಿ ಸ್ವಲ್ಪ ತಲೆ ಉಪಯೋಗಿಸಿದ್ರೆ ನೀವು ಲಕ್ಷ ಲಕ್ಷ ಹಣ ಉಳಿಸಿಕೊಳ್ಳಬಹುದು. ದಿನದಿಂದ ದಿನಕ್ಕೆ ಬೇಸಿಗೆ ತಾಪಮಾನ ಅಧಿಕವಾಗುತ್ತಿದ್ದು, ಜನರು ತುಂಪು ಪಾನೀಯಗಳತ್ತ ಮೊರೆ ಹೋಗುತ್ತಿದ್ದಾರೆ. ಇದರ ಜೊತೆಯಲ್ಲಿ ಕಲ್ಲಂಗಡಿ ಮತ್ತು ಎಳನೀರಿಗೂ ಬೇಡಿಕೆ ಅಧಿಕವಾಗುತ್ತಿದೆ. ಇಂದು ನಾವು ಹೇಳುವ ಬ್ಯುಸಿನೆಸ್ ಆರಂಭಿಸಿದ್ರೆ ಮೂರು ತಿಂಗಳಲ್ಲಿ ಅತ್ಯಧಿಕ ಹಣ ಉಳಿಸಬಹುದು. ಇದನ್ನು ಸೀಸನಲ್ ಬ್ಯುಸಿನೆಸ್ ಎಂದು ಕರೆಯಲಾಗುತ್ತದೆ. 20 ರಿಂದ 30 ಸಾವಿರ ರೂಪಾಯಿಯಲ್ಲಿ ಮೂರು ವ್ಯವಹಾರಗಳನ್ನು ಒಂದೇ ಸೂರಿನಡಿ ಆರಂಭಿಸಬಹುದು.
ಬೇಸಿಗೆ ಸೀಸನ್ ಮುಗಿದ ಬಳಿಕ ಈ ವ್ಯವಹಾರವನ್ನು ಕ್ಲೋಸ್ ಮಾಡಬಹುದು. ಬೇಸಿಗೆ ನಂತರ ಮಳೆಗಾಲಕ್ಕೆ ಸಂಬಂಧಿಸಿ ವ್ಯವಹಾರ ಆರಂಭಿಸಬಹುದು. ಮಳೆಗಾಲದ ಬಳಿಕ ಚಳಿಗಾಲಕ್ಕೆ ಬೇಕಾದ ವಸ್ತುಗಳ ಮಾರಾಟ ಮಾಡಬಹುದು. ಈಗ ಬೇಸಿಗೆಯಲ್ಲಿ ಒಂದೇ ಸೂರಿನಡಿ ಆರಂಭಿಸಬಹುದಾದ ಮೂರು ಬ್ಯುಸಿನೆಸ್‌ಗಳ ಮಾಹಿತಿ ಇಲ್ಲಿದೆ.
1.ತಂಪು ಪಾನೀಯ ಮಾರಾಟ
ತಂಪು ಪಾನೀಯ ಮಾರಾಟ ಮಾಡುವ ಮೂಲಕ ಬೇಸಿಗೆಯಲ್ಲಿ ಅತ್ಯಧಿಕ ಹಣ ಸಂಪಾದಿಸಬಹುದು. ಇಂದು ಎಲ್ಲಾ ವರ್ಗದ ಜನರು ವಿವಿಧ ಕಂಪನಿಗಳ ತಂಪು ಪಾನೀಯಗಳನ್ನು ಕುಡಿಯಲು ಹೆಚ್ಚು ಇಷ್ಟಪಡುತ್ತಾರೆ. ನೇರವಾಗಿ ಡೀಲರ್ ಮೂಲಕ ಖರೀದಿಸೋದರಿಂದ ನಿಮ್ಮ ಲಾಭದ ಪ್ರಮಾಣ ಹೆಚ್ಚಳವಾಗುತ್ತದೆ. ಕೆಲ ಕೂಲ್ ಡ್ರಿಂಕ್ಸ್ ಕಂಪನಿಗಳು ಜಾಹೀರಾತಿನ ರೂಪದಲ್ಲಿ ರೆಫ್ರಿಜಿರೇಟರ್ ಒದಗಿಸುತ್ತದೆ.
2.ಐಸ್ ಕ್ರೀಂ ಮಾರಾಟ
ಇಂದು ಮಾರುಕಟ್ಟೆಯಲ್ಲಿ ರೆಡಿಮೇಡ್ ಐಸ್‌ಕ್ರೀಂಗಳು ನಿಮಗೆ ಲಭ್ಯವಾಗುತ್ತವೆ. ಹಾಗಾಗಿ ಮೊದಲಿನಂತೆ ಐಸ್ ಕ್ರೀಂ ತಯಾರಿಸುವ ಅವಶ್ಯಕತೆ ಇರಲ್ಲ. ನಿಮ್ಮ ಮಳಿಗೆಯಿಂದ ಐಸ್ ಕ್ರೀಂ ಉತ್ಪನ್ನ ಅಧಿಕವಾಗಿ ಮಾರಾಟವಾಗುತ್ತಿದ್ರೆ, ಸರ್ವಿಸ್ ಚಾರ್ಜ್ ಪಡೆಯದೇ ನಿಮ್ಮಅಂಗಡಿಗೆ ಐಸ್ ಕ್ರೀಂ ಪೂರೈಕೆ ಮಾಡುತ್ತವೆ. ಹಾಗೆ ನಿಮ್ಮ ಮಳಿಗೆ ಮುಂಭಾಗ ಉಚಿತವಾಗಿ ಕಂಪನಿ ಉತ್ಪನ್ನದ ಕುರಿತ ಜಾಹೀರಾತಿನ ಪೋಸ್ಟರ್ ಅಂಟಿಸುತ್ತವೆ. ಇದರಿಂದ ಉಚಿತವಾಗಿ ನಿಮ್ಮ ಮಳಿಗೆಗೆ ಪ್ರಮೋಷನ್ ಸಿಗುತ್ತದೆ.
ಇದನ್ನೂ ಓದಿ: 5 ರಿಂದ 6 ರೂ.ಗೆ ಮಾರಾಟವಾಗೋ ಈ ಬ್ಯುಸಿನೆಸ್‌ನಿಂದ ತಿಂಗಳಿಗೆ ಸಂಪಾದಿಸಿ 40-50 ಸಾವಿರ ರೂಪಾಯಿ
3.ಹಣ್ಣು ಮತ್ತು ಎಳನೀರು ಮಾರಾಟ
ಇನ್ನು ಕೆಲವರು ದೇಹ ತಂಪಾಗಿಸಿಕೊಳ್ಳಲು ಹಣ್ಣು ಮತ್ತು ಎಳನೀರು ಮೊರೆ ಹೋಗುತ್ತಾರೆ. ತಂಪು ಪಾನೀಯ ಮತ್ತು ಐಸ್ ಕ್ರೀಂ ಮಾರಾಟ ಮಾಡೋದರ ಜೊತೆಗೆ ಸೀಸನ್ ಫ್ರೂಟ್ಸ್ ಮತ್ತು ಎಳನೀರು ಮಾರಾಟ ಮಾಡಬಹುದು. ಹಣ್ಣು ಮತ್ತು ಎಳನೀರು ಮಾರಾಟ ಸಹ ಹೆಚ್ಚಿನ ಲಾಭಾಂಶವನ್ನು ಹೊಂದಿರುತ್ತದೆ.
ಸ್ವಲ್ಪ ತಲೆ ಉಪಯೋಗಿಸಿ
ಈ ಮೂರು ವ್ಯವಹಾರಗಳನ್ನು ಒಂದೇ ಸೂರಿನಡಿಯಲ್ಲಿ ಆರಂಭಿಸಬಹುದು. ಜನಸಂದಣಿ ಹೆಚ್ಚಿರುವ ಪ್ರದೇಶದಲ್ಲಿ ಈ ವ್ಯವಹಾರ ಆರಂಭಿಸಬೇಕಾಗುತ್ತದೆ. ಹಾಗೆ ನಿಮ್ಮ ಉತ್ಪನ್ನಗಳ ಕುರಿತು ಸ್ಥಳೀಯವಾಗಿ ನೀವು ಪ್ರಚಾರ ನಡೆಸಬಹುದು. ಹಾಗೆ ಆರಂಭದಲ್ಲಿ ಕೆಲವು ಆಫರ್ ನೀಡುವ ಮೂಲಕ ಗ್ರಾಹಕರನ್ನು ಸೆಳೆಯುವ ಪ್ರಯತ್ನ ಮಾಡಬೇಕು. ಗ್ರಾಹಕರಿಗೆ ಅಂಗಡಿಯಲ್ಲಿ ಕುಳಿತುಕೊಳ್ಳಲು ವ್ಯವಸ್ಥೆ ಮಾಡಿಕೊಳ್ಳಿ.
ಇದನ್ನೂ ಓದಿ: ಈ 5 ಸಣ್ಣ ವ್ಯವಹಾರಗಳಿಂದಲೇ ತಿಂಗಳಿಗೆ ಗಳಿಸಬಹುದು 30-40 ಸಾವಿರ ರೂಪಾಯಿ, ಇಲ್ಲಿ ನೀವೇ ರಾಜ!
