Asianet Suvarna News Asianet Suvarna News

ಈಗ ಬ್ಯಾಂಕ್ ಬ್ಯಾಲೆನ್ಸ್ ಚೆಕ್ ಮಾಡೋದು ತುಂಬಾ ಸುಲಭ, ಆಧಾರ್ ಕಾರ್ಡ್ ಇದ್ರೆ ಸಾಕು, ಅದು ಹೇಗೆ?

ಬ್ಯಾಂಕ್ ಖಾತೆಯಲ್ಲಿ ಬ್ಯಾಲೆನ್ಸ್ ಎಷ್ಟಿದೆ ಎಂದು ಚೆಕ್ ಮಾಡಲು ಎಟಿಎಂ ಕೇಂದ್ರಗಳಿಗೆ ಅಥವಾ ಬ್ಯಾಂಕ್ ಶಾಖೆಗೆ ತೆರಳಬೇಕಾಗಿಲ್ಲ. ಬದಲಿಗೆ ಮನೆಯಲ್ಲೇ ಕುಳಿತು ಇಂಟರ್ನೆಟ್, ಸ್ಮಾರ್ಟ್ ಫೋನ್ ಯಾವುದರ ಅಗತ್ಯವೂ ಇಲ್ಲದೆ ಆಧಾರ್ ಕಾರ್ಡ್ ಸಂಖ್ಯೆ ಬಳಸಿ ಚೆಕ್ ಮಾಡಬಹುದು. ಅದು ಹೇಗೆ ಅಂತೀರಾ? ಇಲ್ಲಿದೆ ಮಾಹಿತಿ. 
 

You can check your bank balance with the help of your Aadhaar card here is step by step process
Author
First Published Nov 22, 2022, 4:17 PM IST

Business Desk: ಬ್ಯಾಂಕ್ ಖಾತೆಯಲ್ಲಿ ಎಷ್ಟು ಬ್ಯಾಲೆನ್ಸ್ ಇದೆ ಅನ್ನೋದನ್ನು ಚೆಕ್ ಮಾಡಲು ನಾನಾ ಮಾರ್ಗಗಳಿವೆ. ಈಗ ಆಧಾರ್ ಕಾರ್ಡ್ ನೆರವಿನಿಂದ ಕೂಡ ಬ್ಯಾಂಕ್ ಬ್ಯಾಲೆನ್ಸ್ ಚೆಕ್ ಮಾಡಬಹುದು. ಭಾರತದ ನಾಗರಿಕರಿಗೆ ಅಧಾರ್ ಕಾರ್ಡ್ ಅತ್ಯಂತ ಪ್ರಮುಖವಾದ ಗುರುತಿನ ದಾಖಲೆಯಾಗಿದೆ.  ವೈಯಕ್ತಿಕ ಮಾಹಿತಿಗಳು, ವಿಳಾಸ, ಫೋಟೋ ಸೇರಿದಂತೆ ಎಲ್ಲ ಮುಖ್ಯವಾದ ಮಾಹಿತಿಗಳನ್ನು ಆಧಾರ್ ಕಾರ್ಡ್ ಒಳಗೊಂಡಿದೆ. ಇನ್ನು ಬ್ಯಾಂಕ್ ಖಾತೆ, ವಾಹನ ಚಾಲನ ಪರವಾನಗಿ, ವಿಮೆ, ಪ್ಯಾನ್ ಕಾರ್ಡ್ ಸೇರಿದಂತೆ ಪ್ರಮುಖವಾದ ಎಲ್ಲ ದಾಖಲೆಗಳಿಗೂ ಆಧಾರ್ ಕಾರ್ಡ್ ಜೋಡಣೆ ಮಾಡಲಾಗಿದೆ. ಇನ್ನು ಬ್ಯಾಂಕ್ ಖಾತೆ ತೆರೆಯೋದ್ರಿಂದ ಹಿಡಿದು ಸರ್ಕಾರದ ವಿವಿಧ ಯೋಜನೆಗಳ ಪ್ರಯೋಜನ ಪಡೆಯುವ ತನಕ ಎಲ್ಲದಕ್ಕೂ ಆಧಾರ್ ಕಾರ್ಡ್ ಅಗತ್ಯ. ಈಗ ಆಧಾರ್ ಕಾರ್ಡ್ ಬಳಸಿ ಬ್ಯಾಂಕ್ ಖಾತೆಯಲ್ಲಿ ಎಷ್ಟು ಹಣವಿದೆ ಎಂದು ಕೂಡ ಚೆಕ್ ಮಾಡಬಹುದಾಗಿದೆ. ಅಂದ ಹಾಗೇ ಇದಕ್ಕೆ ಇಂಟರ್ನೆಟ್ ಸಂಪರ್ಕ ಬೇಕಾಗಿಲ್ಲ ಕೂಡ. ಈ ಸೌಲಭ್ಯ ಬಳಕೆದಾರರಸ್ನೇಹಿ ಮಾತ್ರವಲ್ಲ, ಸ್ಮಾರ್ಟ್ ಫೋನ್ ಅಥವಾ ಇಂಟರ್ನೆಟ್ ಸಂಪರ್ಕ ಇಲ್ಲದವರಿಗೂ ಕೂಡ ಪ್ರಯೋಜನಕಾರಿಯಾಗಿದೆ. ಆದರೆ, ಆಧಾರ್ ಕಾರ್ಡ್ ಬಳಸಿ ನಿಮ್ಮ ಬ್ಯಾಂಕ್ ಬ್ಯಾಲೆನ್ಸ್ ಚೆಕ್ ಮಾಡಲು ನಿಮ್ಮ ಬ್ಯಾಂಕ್ ಖಾತೆಗೆ ಆಧಾರ್ ಕಾರ್ಡ್ ಲಿಂಕ್ ಆಗಿರಬೇಕು. ಹಾಗಾದ್ರೆ ಆಧಾರ್ ಕಾರ್ಡ್ ಬಳಸಿ ಬ್ಯಾಂಕ್ ಬ್ಯಾಲೆನ್ಸ್ ಚೆಕ್ ಮಾಡೋದು ಹೇಗೆ? 

ಒಂದು ವೇಳೆ ನಿಮ್ಮ ಆಧಾರ್ ಕಾರ್ಡ್  (Aadhaar card) ಬ್ಯಾಂಕ್ ಖಾತೆಗೆ (Bank account) ಜೋಡಣೆ ಆಗಿರದಿದ್ರೆ, ಮೊದಲು ಆ ಕೆಲಸ ಮಾಡಿ ಮುಗಿಸಿ. ಆ ಬಳಿಕ ಈ ಕೆಳಗಿನ ಹಂತಗಳನ್ನು ಅನುಸರಿಸಿ.
*ನಿಮ್ಮ ಬ್ಯಾಂಕ್ ಖಾತೆಗೆ ಆಧಾರ್ ಕಾರ್ಡ್ (Aadhaar card) ಲಿಂಕ್ ಆದ ಬಳಿಕ ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಯಿಂದ *99*99*1# ಡಯಲ್ ಮಾಡಿ.

ಇ ಕಾಮರ್ಸ್‌ಗೆ ಕೇಂದ್ರದ ಮೂಗುದಾರ: ಹಣ ಕೊಟ್ಟು ರಿವ್ಯೂ ಬರೆಸಿದರೆ ‘ಪೇಯ್ಡ್‌’ ನಮೂದು ಕಡ್ಡಾಯ

*ಅಟೋಮೇಟೆಡ್ ಕಾಲರ್ ಯುಐಡಿಎಐ (UIDAI) ನೀಡಿರುವ 12 ಅಂಕೆಗಳ ಆಧಾರ್ ಸಂಖ್ಯೆ ನಮೂದಿಸಲು ನಿಮ್ಮನ್ನು ಕೇಳುತ್ತದೆ.
*ದೃಢೀಕರಣಕ್ಕೆ ಮತ್ತೊಮ್ಮೆ ಆಧಾರ್ ಸಂಖ್ಯೆ ನಮೂದಿಸಿ.
*ಇದಾದ ಬಳಿಕ ನಿಮಗೆ ಯುಐಡಿಎಐಯಿಂದ ಫ್ಲಾಶ್ ಎಸ್ ಎಂಎಸ್ (SMS) ಬರುತ್ತದೆ. ಇದು ಬ್ಯಾಂಕ್ ಬ್ಯಾಲೆನ್ಸ್ (Bank balance) ತಿಳಿಸುತ್ತದೆ.

ಆಧಾರ್ ಸಂಖ್ಯೆ ಬಳಸಿ ಬ್ಯಾಂಕ್ ಖಾತೆ ಬ್ಯಾಲೆನ್ಸ್ ಚೆಕ್ ಮಾಡೋದು ತುಂಬಾ ಸರಳ ವಿಧಾನವಾಗಿದ್ದು, ಯಾವುದೇ ಸ್ಥಳದಲ್ಲಿ ಬೇಕಾದ್ರೂ ಮಾಡಬಹುದಾಗಿದೆ. ಅಲ್ಲದೆ, ಖಾತೆಯಲ್ಲಿರುವ ಬ್ಯಾಲೆನ್ಸ್ ಚೆಕ್ ಮಾಡಲು ಎಟಿಎಂ ಕಾರ್ಡ್ (ATM card) ಹಿಡಿದುಕೊಂಡು ಹೋಗಬೇಕಾದ ಅಥವಾ ಬ್ಯಾಂಕಿಗೆ ಹೋಗಬೇಕಾದ ಅಗತ್ಯವಿಲ್ಲ. ಅದರಲ್ಲೂ ಹಿರಿಯ ನಾಗರಿಕರಿಗೆ (Senior Citizen) ಹಾಗೂ ವಿಕಲಚೇತನರಿಗೆ ಈ ಯೋಜನೆಯಿಂದ ಸಾಕಷ್ಟು ಅನುಕೂಲವಾಗಲಿದೆ. ಬ್ಯಾಲೆನ್ಸ್ ಚೆಕ್ (Balance cheque) ಮಾಡಲು ಬ್ಯಾಂಕ್ ಖಾತೆಗೆ ಅಥವಾ ಎಟಿಎಂ ಕೇಂದ್ರಗಳಿಗೆ (ATM centers) ತೆರಳಿ ಸರದಿ ಸಾಲಿನಲ್ಲಿ ನಿಲ್ಲುವ ತಲೆನೋವು ತಪ್ಪಲಿದೆ. ಮನೆಯಲ್ಲೇ ಕುಳಿತು ಮೊಬೈಲ್ ಮೂಲಕವೇ ಬ್ಯಾಂಕ್ ಬ್ಯಾಲೆನ್ಸ್ ಚೆಕ್ ಮಾಡಬಹುದು. ಹಾಗೆಯೇ ಇಂಟರ್ನೆಟ್ (Internet) ಸಂಪರ್ಕದ ಅಗತ್ಯ ಕೂಡ ಇಲ್ಲ. ಈ ಸೌಲಭ್ಯ ಗ್ರಾಮೀಣ ಭಾಗದ ಜನರಿಗೆ ಹೆಚ್ಚು ಉಪಯೋಗವಾಗಲಿದೆ. 

2023ರ ಮಾರ್ಚ್ ಒಳಗೆ ಈ ಕೆಲಸ ಮಾಡದಿದ್ರೆ ನಿಮ್ಮ ಪ್ಯಾನ್ ಕಾರ್ಡ್ ನಿಷ್ಕ್ರಿಯ

ಯುಐಡಿಎಐ (UIDAI) ಕೂಡ ಆಧಾರ್ ಬಳಸಿ ಮಾಡಬಹುದಾದ ಅನೇಕ ಸೇವೆಗಳನ್ನು (Services) ಪರಿಚಯಿಸಲಿದೆ. ಇದರಲ್ಲಿ ಹಣ ವರ್ಗಾವಣೆ ಹಾಗೂ ಆಧಾರ್ ಗೆ ಮೊಬೈಲ್ ಸಂಖ್ಯೆ ಜೋಡಣೆ ಮಾಡುವ ಸೇವೆಯನ್ನು ಮನೆ ಬಾಗಿಲಿಗೆ ಒದಗಿಸುವುದು ಕೂಡ ಸೇರಿದೆ. 

Follow Us:
Download App:
  • android
  • ios