Asianet Suvarna News Asianet Suvarna News

ಇಂದು World Savings Day: ಇಂದಿನ ಉಳಿತಾಯದಲ್ಲಿದೆ ನಾಳೆಯ ನೆಮ್ಮದಿ!

ಭಾರತದಲ್ಲಿ ವಿಶ್ವ ಉಳಿತಾಯ ದಿನ (World Savings Day)ವನ್ನು ಅಕ್ಟೋಬರ್ 30ರಂದು ಆಚರಿಸಲಾಗುತ್ತದೆ. ಸಾರ್ವಜನಿಕರಲ್ಲಿ ಉಳಿತಾಯದ ಕುರಿತು ಜಾಗೃತಿ ಮೂಡಿಸೋದು ಈ ದಿನದ ಉದ್ದೇಶ.

World Savings Day 2021: Things to know about this
Author
Bangalore, First Published Oct 30, 2021, 2:12 PM IST

ವಿಶ್ವ ಉಳಿತಾಯ ದಿನ (World Savings Day)ವನ್ನು ಭಾರತದಲ್ಲಿ ಅಕ್ಟೋಬರ್ 30ರಂದು ಆಚರಿಸಲಾಗುತ್ತದೆ.ಆದ್ರೆ ವಿಶ್ವಾದ್ಯಂತ ಇದನ್ನು ಅಕ್ಟೋಬರ್ 31ರಂದು ಆಚರಿಸುತ್ತಾರೆ. ಈ ದಿನವನ್ನು ವಿಶ್ವ ಮಿತವ್ಯಯ ದಿನ (World Thrift Day) ಎಂದು ಕೂಡ ಕರೆಯಲಾಗುತ್ತದೆ. ಉಳಿತಾಯದ (Savings) ಮಹತ್ವದ ಬಗ್ಗೆ ಜನರಲ್ಲಿ ಜಾಗೃತಿ (Awareness) ಮೂಡಿಸೋದು ಈ ದಿನದ ಮುಖ್ಯ ಉದ್ದೇಶ. ಇಂದಿನ ಉಳಿತಾಯ ನೆಮ್ಮದಿಯ ನಾಳೆಗೆ ಅಡಿಪಾಯ.ಇಂದಿನ ಜನರಲ್ಲಿ ಐಷಾರಾಮಿ ಬದುಕಿಗಾಗಿ (Luxurious Life) ದುಂದುವೆಚ್ಚ ಮಾಡೋ ಮನಸ್ಥಿತಿ ಹೆಚ್ಚಿದೆ.ಆದ್ರೆ ಇದು ಭವಿಷ್ಯದ ಅವರ ಆರ್ಥಿಕ ಸ್ಥಿತಿ ಮೇಲೆ ಗಂಭೀರ ಪರಿಣಾಮ ಬೀರಬಲ್ಲದು.ಅದ್ರಲ್ಲೂ ಕೊರೋನಾ ಕಾರಣದಿಂದ ಕಳೆದೆರಡು ವರ್ಷಗಳಿಂದ ಬಹುತೇಕರ ಆರ್ಥಿಕ ಸ್ಥಿತಿ ಹದಗೆಟ್ಟಿದೆ ಕೂಡ.ಅಲ್ಲದೆ, ವೈದ್ಯಕೀಯ ವೆಚ್ಚಗಳು ಹೆಚ್ಚಿರೋ ಜೊತೆ ಭವಿಷ್ಯದ ಕುರಿತು ಅನಿಶ್ಚಿತತೆ ಮನೆ ಮಾಡಿದೆ. ಈ ಹಿನ್ನೆಲೆಯಲ್ಲಿ ಹಿಂದಿಗಿಂತ ಇಂದು ಉಳಿತಾಯಕ್ಕೆ ಹೆಚ್ಚಿನ ಮಹತ್ವ ನೀಡಬೇಕಾದ ಅಗತ್ಯವಿದೆ.

ಹಬ್ಬದ ಖರ್ಚಿಗೆ ಕಡಿವಾಣ ಹಾಕೋದು ಹೇಗೆ? ಇಲ್ಲಿದೆ ಟಿಪ್ಸ್

ಮೊದಲ ಆಚರಣೆ ಎಲ್ಲಿ?
ಇಟಲಿಯ (Italy) ಮಿಲನ್ನಲ್ಲಿ1924ರಲ್ಲಿ ಪ್ರಥಮ ಅಂತಾರಾಷ್ಟ್ರೀಯ ಉಳಿತಾಯ ಬ್ಯಾಂಕ್ ಕಾಂಗ್ರೆಸ್ (World Society of Savings Banks) ನಡೆಯುತ್ತಿದ್ದ ಸಂದರ್ಭದಲ್ಲಿ ಮೊದಲ ಬಾರಿಗೆ ವಿಶ್ವ ಉಳಿತಾಯ ದಿನವನ್ನುಆಚರಿಸಲಾಯಿತು. ಇಟಲಿಯ ಪ್ರಾಧ್ಯಾಪಕ Filippo Ravizza ಅಕ್ಟೋಬರ್ 31ಅನ್ನು ಅಂತಾರಾಷ್ಟ್ರೀಯ ಉಳಿತಾಯ ದಿನವೆಂದು ಘೋಷಿಸಿದ್ದರು.ಹೆಚ್ಚೆಚ್ಚು ಉಳಿತಾಯ ಮಾಡುವಂತೆ ಜನರನ್ನು ಪ್ರೋತ್ಸಾಹಿಸೋದು ಹಾಗೂ ಬ್ಯಾಂಕ್ಗಳ ಕುರಿತು ಸಾರ್ವಜನಿಕರಲ್ಲಿ ವಿಶ್ವಾಸ ಮೂಡಿಸೋ ಉದ್ದೇಶದಿಂದ ಈ ದಿನಕ್ಕೆ ಚಾಲನೆ ನೀಡಲಾಗಿತ್ತು. ಅಲ್ಲದೆ,ಆ ಸಮಯದಲ್ಲಿಉಳಿತಾಯದ ಕುರಿತು ಇಂಥದೊಂದು ಜಾಗೃತಿ ಮೂಡಿಸೋ ಅಗತ್ಯ ಕೂಡವಿತ್ತು. ಏಕೆಂದರೆ ಈ ಸಮಯದಲ್ಲಿ ಪ್ರಥಮ ವಿಶ್ವ ಯುದ್ಧದ (World war I) ಪರಿಣಾಮವಾಗಿ ಜನರ ಉಳಿತಾಯ ತುಂಬಾ ತಳಮಟ್ಟದಲ್ಲಿತ್ತು. 

ಇಪಿಎಫ್‌ಗೆ ಹೊಂದಿದವರಿಗೆ ಕೇಂದ್ರದಿಂದ ಗುಡ್ ನ್ಯೂಸ್

ಭಾರತದಲ್ಲಿ ಅಕ್ಟೋಬರ್ 30ರಂದು ಏಕೆ?
ಭಾರತದಲ್ಲಿ ವಿಶ್ವ ಉಳಿತಾಯ ದಿನವನ್ನು ಒಂದು ದಿನ ಮುಂಚಿತವಾಗಿ ಅಂದ್ರೆ ಅಕ್ಟೋಬರ್ 30 ರಂದು ಆಚರಿಸಲು ಒಂದು ಕಾರಣವಿದೆ.1984ರ ಅಕ್ಟೋಬರ್ 31ರಂದು ಭಾರತದ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರ ಹತ್ಯೆಯಾಗಿತ್ತು. ಈ ಹಿನ್ನೆಲೆಯಲ್ಲಿ ಅದೇ ದಿನ ಈ ಆಚರಣೆ ಬೇಡ ಎಂಬ ಕಾರಣಕ್ಕೆ ಒಂದು ದಿನ ಮುಂಚಿತವಾಗಿ ಆಚರಿಸೋ ಸಂಪ್ರದಾಯ ಬೆಳೆದು ಬಂದಿದೆ. 

World Savings Day 2021: Things to know about this

ಈ ದಿನದ ಉದ್ದೇಶಗಳೇನು?
ಉಳಿತಾಯ ಅಥವಾ ಮಿತವ್ಯಯ ಎನ್ನೋದು ಹಣವನ್ನು ಜಾಣತನದಿಂದ ಖರ್ಚು ಮಾಡೋದು ಹೇಗೆ ಎಂಬುದನ್ನು ಸೂಚಿಸುತ್ತವೆ. ಉಳಿತಾಯವನ್ನು ಪ್ರೋತ್ಸಾಹಿಸೋದು ಈ ದಿನದ ಮುಖ್ಯ ಉದ್ದೇಶ. ವಿವಿಧ ರಾಷ್ಟ್ರಗಳು ಈ ದಿನದಂದು ಜನರಲ್ಲಿ ಉಳಿತಾಯದ ಬಗ್ಗೆ ಜಾಗೃತಿ ಮೂಡಿಸೋ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತವೆ. ಉತ್ತಮ ಉಳಿತಾಯ ಯೋಜನೆಗಳನ್ನು ಈ ಸಂದರ್ಭದಲ್ಲಿ ಘೋಷಿಸಲಾಗುತ್ತದೆ ಕೂಡ. ಒಂದು ರಾಷ್ಟ್ರದ ಬಲಿಷ್ಠ ಆರ್ಥಿಕತೆಗೆ ಉಳಿತಾಯ ಕೂಡ ಅಗತ್ಯ. ಈ ಹಿನ್ನೆಲೆಯಲ್ಲಿ ವಿವಿಧ ರಾಷ್ಟ್ರಗಳು ವಿಶ್ವ ಉಳಿತಾಯ ದಿನವನ್ನು ಈ ಕುರಿತು ಜಾಗೃತಿ ಮೂಡಿಸಲು ಬಳಸಿಕೊಳ್ಳುತ್ತಿವೆ. ʼಉಳಿತಾಯದ ಮಹತ್ವ ಅರಿತುಕೊಳ್ಳೋದುʼ 2021ರ ವಿಶ್ವ ಉಳಿತಾಯ ದಿನದ ಧ್ಯೇಯ. 

Google Pay, Paytm and PhonePe ಬ್ಲಾಕ್ ಮಾಡೋದು ಹೇಗೆ?

ಉಳಿತಾಯದ ಬಗ್ಗೆ ಯೋಚಿಸೋ ಸಮಯ
ಇತ್ತೀಚಿನ ದಿನಗಳಲ್ಲಿ ಕೊರೋನಾ ಪ್ರತಿಯೊಬ್ಬರಿಗೂ ಉಳಿತಾಯದ ಪಾಠವನ್ನು ಮನದಟ್ಟು ಮಾಡಿಸಿದೆ. ಪ್ರೀತಿಪಾತ್ರರ ಉಳಿವು ಹಾಗೂ ಸುರಕ್ಷತೆಗಾಗಿ ಉಳಿತಾಯ ಮಾಡೋದು ಅತ್ಯಗತ್ಯ ಎಂಬುದನ್ನು ಮನಗಾಣುತ್ತ ವಿಶ್ವ ಉಳಿತಾಯ ದಿನವನ್ನು ಇಂದು ನಾವೆಲ್ಲರೂ ಆಚರಿಸೋಣ. ಹನಿ ಹನಿ ಕೂಡಿ ಹಳ್ಳ ಎಂಬ ಮಾತನ್ನು ಸ್ಮರಿಸುತ್ತ ನೆಮ್ಮದಿಯ ನಾಳೆಗಾಗಿ ಇಂದಿನಿಂದಲೇ ಉಳಿತಾಯದ ಶಪಥ ಕೈಗೊಳ್ಳೋಣ. Happy World Savings Day.


 

Follow Us:
Download App:
  • android
  • ios