ಪೋಸ್ಟ್‌ವೊಂದಕ್ಕೆ ಎರಡು ಕೋಟಿ ಗಳಿಸಿ ಎಲ್ಲವನ್ನೂ ದಾನ ಮಾಡಿದ ಯುಟ್ಯೂಬರ್!
ಗಳಿಸಿದ ಹಣವನ್ನೆಲ್ಲ ದಾನ ಮಾಡೋಕೆ ಧೈರ್ಯಬೇಕು. ಇದು ಎಲ್ಲರಿಂದ ಸಾಧ್ಯವೇ ಇಲ್ಲ. ಬಂದ ಹಣದಲ್ಲಿ ಸ್ವಲ್ಪ ದಾನ ಮಾಡಿ ಉಳಿದಿದ್ದನ್ನು ನಾವು ಇಟ್ಕೊಳ್ತೇವೆ. ಆದ್ರೆ ಈ ಕೋಟ್ಯಾಧಿಪತಿ ಸ್ವಲ್ಪ ಭಿನ್ನವಾಗಿದ್ದಾನೆ.
ಗಳಿಸಿದ್ರಲ್ಲಿ ಸ್ವಲ್ಪನಾದ್ರೂ ದಾನ ಮಾಡ್ಬೇಕು ಎನ್ನುವ ಮಾತಿದೆ. ದಾನ ಮಾಡಿದಷ್ಟು ನಿಮ್ಮ ಬೊಕ್ಕಸ ತುಂಬುತ್ತೆ ಎಂಬುದನ್ನು ಅನೇಕರು ನಂಬ್ತಾರೆ. ಕೈಬಿಚ್ಚಿ ದಾನ ಮಾಡುವವರ ಸಂಖ್ಯೆ ನಮ್ಮಲ್ಲೂ ಇದೆ. ಅದ್ರಲ್ಲಿ ಯುಟ್ಯೂಬರ್ ಮಿಸ್ಟರ್ ಬೀಸ್ಟ್ ದಾನ ಎಲ್ಲರ ಗಮನ ಸೆಳೆದಿದೆ. ಕೆಲ ದಿನಗಳ ಹಿಂದಷ್ಟೆ ವೇಟರ್ ಒಬ್ಬರಿಗೆ ಐಷಾರಾಮಿ ಕಾರನ್ನು ಉಡುಗೊರೆಯಾಗಿ ನೀಡಿದ್ದ ಮಿಸ್ಟರ್ ಬೀಸ್ಟ್ ಈಗ ಮತ್ತೊಮ್ಮೆ ಸುದ್ದಿಗೆ ಬಂದಿದ್ದಾರೆ. ಈಗ ಅವರು ನೀಡಿರೋದು ಕಡಿಮೆ ಹಣವಲ್ಲ. ಹತ್ತು ಜನ ಅಪರಿಚಿತರಿಗೆ ತಲಾ ಇಪ್ಪತ್ತು ಲಕ್ಷದಂತೆ ಹಣ ನೀಡಿದ್ದಾರೆ ಮಿಸ್ಟರ್ ಬೀಸ್ಟ್.
ಯಾರು ಮಿಸ್ಟರ್ ಬೀಸ್ಟ್ (Mr. Beast) ? : ಮೊದಲು ಇದನ್ನು ತಿಳಿಯೋ ಅವಶ್ಯಕತೆ ಇದೆ. ಅನೇಕರಿಗೆ ಮಿಸ್ಟರ್ ಬೀಸ್ಟ್ ಬಗ್ಗೆ ಗೊತ್ತು. ಮಿಸ್ಟರ್ ಬೀಸ್ಟ್ ಅಮೆರಿಕಾ (America)ದ ಯುಟ್ಯೂಬರ್. ಅವರಿಗೆ ಈಗ ಕೇವಲ 25 ವರ್ಷ. ಚಿಕ್ಕ ವಯಸ್ಸಿನಲ್ಲೇ ಕೋಟ್ಯಾಂತರ ರೂಪಾಯಿ ಗಳಿಸ್ತಿದ್ದಾರೆ ಮಿಸ್ಟರ್ ಬೀಸ್ಟ್. ಮಿಸ್ಟರ್ ಬೀಸ್ಟ್ ಯುಟ್ಯೂಬ್ (Youtube) ಚಾನೆಲ್ ನಲ್ಲಿ 23 ಕೋಟಿ 40 ಲಕ್ಷ ಚಂದಾದಾರರಿದ್ದಾರೆ. ಭಾರತ (India) ಸೇರಿದಂತೆ ವಿಶ್ವದ ಬಹುತೇಕ ದೇಶಗಳ ಜನರು ಮಿಸ್ಟರ್ ಬೀಸ್ಟ್ ಫಾಲೋವರ್ಸ್ (Followers). ಅವರ ವಿಡಿಯೋ ಮಕ್ಕಳಿಂದ ಹಿಡಿದು ವೃದ್ಧರವರೆಗೆ ಎಲ್ಲರಿಗೂ ಇಷ್ಟವಾಗುತ್ತದೆ. ಮಿಸ್ಟರ್ ಬೀಸ್ಟ್ 4 ಯೂಟ್ಯೂಬ್ ಚಾನೆಲ್‌ಗಳನ್ನು ನಡೆಸುತ್ತಾರೆ. ಇನ್‌ಸ್ಟಾಗ್ರಾಮ್‌ನಲ್ಲಿ 4 ಕೋಟಿ 93 ಲಕ್ಷ ಫಾಲೋವರ್ಸ್ ಇದ್ದಾರೆ. ಅವರ ಸಂಪತ್ತು ಕೋಟಿಗಟ್ಟಲೆ ಇದೆ. ಫೋರ್ಬ್ಸ್ ವರದಿಯ ಪ್ರಕಾರ, ಮಿಸ್ಟರ್ ಬೀಸ್ಟ್ ಒಂದು ವರ್ಷದಲ್ಲಿ 54 ಮಿಲಿಯನ್ ಯುಎಸ್ ಡಾಲರ್ ಗಳಿಸಿದ್ದಾರೆ. ಎಕ್ಸ್ ಖಾತೆಯಲ್ಲೂ ಹೆಚ್ಚು ಫಾಲೋವರ್ಸ್ ಹೊಂದಿರುವ ಮಿಸ್ಟರ್ ಬೀಸ್ಟ್ ಗಳಿಕೆ ಕೋಟಿ ಲೆಕ್ಕದಲ್ಲಿದೆ.
ಅಮೆಜಾನ್ ಸ್ಥಾಪಕ ಜೆಫ್ ಬೆಜೋಸ್ ಮನೆ ಮಾರಾಟಕ್ಕಿದೆ, ಕೊಳ್ಳೋ ಯೋಚನೆ ಇದ್ದರೆ ಟ್ರೈ ಮಾಡಿ!
ಅಪರಿಚಿತರಿಗೆ ಹಣ ದಾನ : ಮಿಸ್ಟರ್ ಬೀಸ್ಟ್ ಕೆಲ ದಿನಗಳ ಹಿಂದೆ ಹಳೆ ವಿಡಿಯೋ ಒಂದನ್ನು ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದರು. ಆ ಫೋಸ್ಟ್ 2.79 ಕೋಟಿ ಗಳಿಸಿತ್ತು. ಈ ಹಣವನ್ನು ದಾನ ಮಾಡಿದ್ದಾರೆ ಮಿಸ್ಟರ್ ಬೀಸ್ಟ್. ಹತ್ತು ಜನರಿಗೆ ತಲಾ ಇಪ್ಪತ್ತು ಲಕ್ಷವನ್ನು ನೀಡಿದ್ದಾರೆ.
ಮಿಸ್ಟರ್ ಬೀಸ್ಟ್ ಚಾಲೆಂಜ್ ಏನಿತ್ತು ? : ವಿಶ್ವದ ಎಲ್ಲ ಭಾಗಗಳಲ್ಲಿ ನನ್ನ ಅನುಯಾಯಿಗಳು ಇರೋದು ನನಗೆ ಗೊತ್ತು. ಆದ್ರೆ ಚೀನಾದಲ್ಲಿ ಎಷ್ಟು ಜನರು ನನ್ನ ವಿಡಿಯೋ ನೋಡ್ತಾರೆ, ಅವರ ಅಭಿಪ್ರಾಯ ಏನು ಎಂಬುದನ್ನು ತಿಳಿಯಬೇಕು. ಈ ಪ್ರಯಾಣ ಮೋಜಿನಿಂದ ಕೂಡಿರಲಿದೆ. ನನ್ನ ವಿಡಿಯೋವನ್ನು ಲೈಕ್ ಮಾಡಿದ ಹಾಗೂ ಹಂಚಿಕೊಂಡ ಹತ್ತು ಫಾಲೋವರ್ಸ್ ಗೆ ನಾನು ಉಡುಗೊರೆ ನೀಡುತ್ತೇನೆ ಎಂದು ಮಿಸ್ಟರ್ ಬೀಸ್ಟ್ ವಿಡಿಯೋದಲ್ಲಿ ಹೇಳಿದ್ದರು. ತಲಾ 25 ಸಾವಿರ ಡಾಲರ್ ಅನ್ನು 72 ಗಂಟೆಯಲ್ಲಿ ನೀಡೋದಾಗಿ ಹೇಳಿದ್ದರು. ಈ ವಿಡಿಯೋವನ್ನು ಚೀನಾದ ಪ್ರಸಿದ್ಧ ಸಾಮಾಜಿಕ ಜಾಲತಾಣ ಬಿಲಿಬಿಲಿಯಲ್ಲಿ ಹಂಚಿಕೊಂಡಿದ್ದರು. ಇದಾದ್ಮೇಲೆ ಅವರ ವಿಡಿಯೋ ಹಂಚಿಕೊಳ್ಳಲು ಫಾಲೋವರ್ಸ್ ಆಸಕ್ತಿ ತೋರಿದ್ದರು. ಲಕ್ಷಾಂತರ ಮಂದಿ ಅವರ ವಿಡಿಯೋವನ್ನು ಹಂಚಿಕೊಂಡಿದ್ದಲ್ಲದೆ ತಮ್ಮ ಸ್ನೇಹಿತರಿಗೂ ತಿಳಿಸಿದ್ದರು. ಮಾತಿನಂದೆ, ವಿಡಿಯೋ ಪೋಸ್ಟ್ ಆದ 72 ಗಂಟೆಯೊಳಗೆ ಮಿಸ್ಟರ್ ಬೀಸ್ಟ್ ಹತ್ತು ಫಾಲೋವರ್ಸ್ (Followers) ಆಯ್ಕೆ ಮಾಡಿ ಅವರಿಗೆ ಹಣ ನೀಡಿದ್ದಾರೆ ಎನ್ನಲಾಗಿದೆ. ಆದ್ರೆ ಫಾಲೋವರ್ಸ್ ಹೆಸರನ್ನು ಎಲ್ಲಿಯೂ ಬಹಿರಂಗಪಡಿಸಿಲ್ಲ. ಈ ವಿಡಿಯೋವನ್ನು 35 ಲಕ್ಷಕ್ಕೂ ಹೆಚ್ಚು ಬಾರಿ ಮರುಪೋಸ್ಟ್ ಮಾಡಲಾಗಿದೆ ಮತ್ತು 21 ಲಕ್ಷಕ್ಕೂ ಹೆಚ್ಚು ಲೈಕ್ಸ್ (likes) ಸಿಕ್ಕಿದೆ.
ಒಗ್ಗಟ್ಟಾಗಿ 1600 ಕೋಟಿ ವ್ಯವಹಾರದ ಕಂಪೆನಿ ಸ್ಥಾಪಿಸಿದ ಭಾರತದ ಸಪ್ತ ನಾರಿಯರು