ಅಮೆಜಾನ್ ಸ್ಥಾಪಕ ಜೆಫ್ ಬೆಜೋಸ್ ಮನೆ ಮಾರಾಟಕ್ಕಿದೆ, ಕೊಳ್ಳೋ ಯೋಚನೆ ಇದ್ದರೆ ಟ್ರೈ ಮಾಡಿ!
ಅಮೆಜಾನ್ ಸಂಸ್ಥಾಪಕ ಜೆಫ್ ಬೆಜೋಸ್, ಅಮೆಜಾನ್ ಶುರು ಮಾಡಿದ್ದು ಒಂದು ಬಾಡಿಗೆ ಮನೆಯಲ್ಲಿ. ಸಣ್ಣದಾಗಿ ಶುರು ಮಾಡಿದ್ದ ಅವರ ವ್ಯವಾಹರ ಈಗ ವಿಶ್ವದ ನಂಬರ್ ಒನ್ ಇ ಕಾಮರ್ಸ್ ಕಂಪನಿಯಾಗಿ ನಿಂತಿದೆ. ಅವರ ಹಳೆ ಮನೆ ಮಾರಾಟಕ್ಕಿದೆ. ಬೆಲೆ ಎಷ್ಟು ಗೊತ್ತಾ?
ವಿಶ್ವದ ಅತಿ ದೊಡ್ಡ ಇ – ಕಾರ್ಮಸ್ ಕಂಪನಿ ಅಮೆಜಾನ್. ಅಮೆಜಾನ್ ಸಂಸ್ಥಾಪಕ ಜೆಫ್ ಬೆಜೋಸ್. ಹೊಸ ಕನಸಿನೊಂದಿಗೆ ಒಂದು ವ್ಯವಹಾರ ಶುರು ಮಾಡಿದ್ದ ಜೆಫ್ ಬೆಜೋಸ್ ಈಗ ಶ್ರೀಮಂತ ವ್ಯಕ್ತಿಗಳಲ್ಲಿ ಒಬ್ಬರು. ಆದ್ರೆ ಹಿಂದೆ ಅವರು ಬಾಡಿಗೆ ಮನೆಯಲ್ಲಿದ್ದರು. ಆಗ ಅವರು ಅಮೆಜಾನ್ ಶುರು ಮಾಡಿದ್ದ ಮನೆ ಈಗ ಮಾರಾಟವಾಗ್ತಿದೆ. ಜೆಫ್ ಬೆಜೋಸ್ ಗ್ಯಾರೇಜ್ ನಲ್ಲಿ ಅಮೆಜಾನ್ ಕಂಪನಿ ಶುರು ಮಾಡಿದ್ದರು. ಅದು ಜೆಫ್ ಅವರ ಸ್ವಂತ ಮನೆ ಆಗಿರಲಿಲ್ಲ.
ಜೆಫ್ ಬೆಜೋಸ್ (Jeff Bezos) ಮತ್ತು ಅವರ ಪತ್ನಿ ಮ್ಯಾಕೆಂಜಿ ಸ್ಕಾಟ್ ಈ ಮನೆಯಲ್ಲಿ ವಾಸವಾಗಿದ್ದರು. 1990 ರ ದಶಕದ ಮಧ್ಯಭಾಗದಲ್ಲಿ ವಾಷಿಂಗ್ಟನ್‌ನ ಬೆಲ್ಲೆವ್ಯೂನ ಸಿಯಾಟಲ್ ಬಳಿ ಇರುವ ಈ ಮನೆಯಲ್ಲಿ ಬೆಜೋಸ್ ವಾಸವಾಗಿದ್ದರು. ಅವರು ಈ ಮನೆಯ ಗ್ಯಾರೇಜ್‌ನಲ್ಲಿ ಪುಸ್ತಕಗಳನ್ನು ಮಾರಾಟ ಮಾಡಲು ಶುರು ಮಾಡಿದ್ದರು. 1994 ರಲ್ಲಿ ಅಮೆಜಾನ್ (Amazon) ಆರಂಭವಾಗಿದ್ದು ಇಲ್ಲಿಂದಲೆ. ಅಮೆಜಾನ್‌ನ ಹಳೆಯ ಸೈನ್ ಬೋರ್ಡ್ ಈ ಮನೆಯಲ್ಲಿ ಇದೆ.
ಆರೋಗ್ಯ ವಿಮೆಗೆ ಸಂಬಂಧಿಸಿ ಮಹತ್ವದ ನಿಯಮ ಪ್ರಕಟ; ಎಲ್ಲ ಆಸ್ಪತ್ರೆಗಳಲ್ಲೂ ನಗದುರಹಿತ ದಾಖಲಾತಿಗೆ ಅವಕಾಶ
ಮನೆ ಬೆಲೆ ಎಷ್ಟು? : ಈಗ ಈ ಮನೆಯನ್ನು ರಿಯಲ್ ಎಸ್ಟೇಟ್ (Real Estate) ಕಂಪನಿ ಮಾರಾಟ ಮಾಡಲು ಮುಂದಾಗಿದೆ. ಅಮೆರಿಕಾದ ರಿಯಲ್ ಎಸ್ಟೇಟ್ ಕಂಪನಿ ಜಾನ್ ಎಲ್ ಸ್ಕಾಟ್ ನ ವೆಬ್ ಸೈಟ್ ನಲ್ಲಿ ನೀವು ಈ ಮನೆ ಬಗ್ಗೆ ಮಾಹಿತಿ ನೀಡಬಹುದು. ಈ ಮನೆ 1540 ಚದರ ಅಡಿಗಳಲ್ಲಿ ನಿರ್ಮಿಸಲಾಗಿದೆ. ಜಾನ್ ಎಲ್ ಸ್ಕಾಟ್ ಈ ಮನೆಯ ಬೆಲೆಯನ್ನು 2,280,000 ಡಾಲರ್ ಅಂದರೆ 18,95,15,538 ರೂಪಾಯಿಗೆ ಮಾರಾಟ ಮಾಡಲು ನಿರ್ಧರಿಸಿದೆ. ಈವರೆಗೆ ಯಾರೂ ಈ ಮನೆ ಖರೀದಿಗೆ ಆಸಕ್ತಿ ತೋರಿಲ್ಲ. ಈ ಹಿಂದೆ 2019 ರಲ್ಲೂ ಈ ಮನೆ ಮಾರಾಟಕ್ಕೆ ಪಟ್ಟಿ ಮಾಡಲಾಗಿತ್ತು. ನಂತರ ಅದರ ಬೆಲೆಯನ್ನು 1.5 ಮಿಲಿಯನ್ ಡಾಲರ್ ಗೆ ನಿಗದಿಪಡಿಸಲಾಗಿತ್ತು.
ಹಳೆಯ ಮನೆ ಇದು : ರಿಯಲ್ ಎಸ್ಟೇಟ್ ನೀಡಿದ ಮಾಹಿತಿ ಪ್ರಕಾರ, ಈ ಮನೆ ತುಂಬಾ ಹಳೆಯದು. ಈ ಮನೆಯನ್ನು 1954 ರಲ್ಲಿ ನಿರ್ಮಿಸಲಾಗಿದೆ. 2001 ರಲ್ಲಿ ಈ ಮನೆಯನ್ನು ದುರಸ್ತಿ ಮಾಡಲಾಗಿದೆ ಎಂದು ವೆಬ್ ಸೈಟ್ ನಲ್ಲಿ ಹೇಳಲಾಗಿದೆ. ಜೆಫ್ ಬೆಜೋಸ್ ವಾಸವಾಗಿದ್ದ ಈ ಮನೆಯ ನೆಲಕ್ಕೆ ಗ್ರಾನೈಟ್ ಮತ್ತು ಮೇಪಲ್ ಹಾಕಲಾಗಿದೆ. ಮನೆಯ ಸುತ್ತಲೂ ತೋಟವಿದೆ. ಮನೆಯ ಹಿಂಭಾಗದಲ್ಲಿ ಪಾರ್ಟಿ ಡೆಕ್ ಮತ್ತು ಹಾಟ್ ಟಬ್ ಕೂಡ ಇದೆ.
ಜೆಫ್ ಬೆಜೋಸ್ ನಿವ್ವಳ ಮೌಲ್ಯ ಎಷ್ಟು? : ಜೆಫ್ ಬೆಜೋಸ್ ಈಗ ಅಮೆಜಾನ್ ಸಿಇಓ ಹುದ್ದೆಯಿಂದ ಕೆಳಗಿಳಿದಿದ್ದಾರೆ. 2021 ರಲ್ಲೇ ಅಮೆಜಾನ್‌ನ ಕಾರ್ಯನಿರ್ವಾಹಕ ಅಧ್ಯಕ್ಷರಾಗಲು ಸಿಇಒ ಹುದ್ದೆಯಿಂದ ಇಳಿದಿದ್ದರು. ಈಗ ಜೆಫ್ ಬೆಜೋಸ್ ಅಮೆಜಾನ್ ನ ಶೇಕಡಾ ಹತ್ತರಷ್ಟು ಷೇರನ್ನು ಹೊಂದಿದ್ದಾರೆ. ಸದ್ಯ ಜೆಫ್ ಬೆಜೋಸ್, ರಾಕೆಟ್ ಡೆವಲಪಿಂಗ್ ಏರೋಸ್ಪೇಸ್ ಕಂಪನಿ ಬ್ಲೂ ಒರಿಜಿನ್‌ನ ಮತ್ತು ವಾಷಿಂಗ್ಟನ್ ಪೋಸ್ಟ್ ಮಾಲೀಕರಾಗಿದ್ದಾರೆ. ಜೆಫ್ ಬೆಜೋಸ್ ನಿವ್ವಳ ಮೌಲ್ಯ 179 ಬಿಲಿಯನ್ ಡಾಲರ್ ಆಗಿದೆ.
Union Budget 2024:ಈ ಬಾರಿಯ ಬಜೆಟ್ ನಲ್ಲಿಆದಾಯ ತೆರಿಗೆಗೆ ಸಂಬಂಧಿಸಿ ಏನು ನಿರೀಕ್ಷಿಸಬಹುದು?
ಜೆಫ್ ಬೆಜೋಸ್ ವೈವಾಹಿಕ ಜೀವನ : ಜೆಫ್ ಬೆಜೋಸ್ ಪತ್ನಿ ಮ್ಯಾಕೆಂಜಿ ಸ್ಕಾಟ್ ರಿಂದ ಬೇರೆಯಾಗಿದ್ದಾರೆ. ಅವರು 2019 ರಲ್ಲಿ ವಿಚ್ಛೇದನ ಪಡೆದರು. 25 ವರ್ಷಗಳ ವೈವಾಹಿಕ ಜೀವನದ ನಂತ್ರ ಬೇರೆಯಾದ ಜೆಫ್ ಬೆಜೋಸ್, ತಮ್ಮ ಪತ್ನಿಗೆ ಶೇಕಡಾ 16ರಷ್ಟು ಅಮೆಜಾನ್ ಪಾಲನ್ನು ನೀಡಿದ್ದಾರೆ.