Asianet Suvarna News Asianet Suvarna News

ವಿಶ್ವ ಶ್ರೀಮಂತರ ಪಟ್ಟಿ ಪ್ರಕಟ: ಅಂಬಾನಿ ನಂ.9, ಅದಾನಿಗೆ 24ನೇ ಸ್ಥಾನಕ್ಕೆ

ರಿಲಯನ್ಸ್‌ ಇಂಡಸ್ಟ್ರೀಸ್‌ನ ಮುಖ್ಯಸ್ಥ ಮುಕೇಶ್‌ ಅಂಬಾನಿ ಮತ್ತೊಮ್ಮೆ ಏಷ್ಯಾದ ನಂ.1 ಶ್ರೀಮಂತ ಎಂಬ ಪಟ್ಟವನ್ನು ಗಳಿಸಿಕೊಂಡಿದ್ದಾರೆ. ಫೋರ್ಬ್ಸ್‌ ಮ್ಯಾಗಜಿನ್‌ ಮಂಗಳವಾರ ಏಷ್ಯಾದ ಶ್ರೀಮಂತರ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, 6.83 ಲಕ್ಷ ಕೋಟಿ ರು. ಆಸ್ತಿಯೊಂದಿಗೆ ಮುಕೇಶ್‌ ಈ ಸ್ಥಾನಕ್ಕೇರಿದ್ದಾರೆ. 

World Richest people List Released Ambani got number 9 Adani 24th in list akb
Author
First Published Apr 5, 2023, 6:24 AM IST

ನವದೆಹಲಿ: ರಿಲಯನ್ಸ್‌ ಇಂಡಸ್ಟ್ರೀಸ್‌ನ ಮುಖ್ಯಸ್ಥ ಮುಕೇಶ್‌ ಅಂಬಾನಿ ಮತ್ತೊಮ್ಮೆ ಏಷ್ಯಾದ ನಂ.1 ಶ್ರೀಮಂತ ಎಂಬ ಪಟ್ಟವನ್ನು ಗಳಿಸಿಕೊಂಡಿದ್ದಾರೆ. ಫೋರ್ಬ್ಸ್‌ ಮ್ಯಾಗಜಿನ್‌ ಮಂಗಳವಾರ ಏಷ್ಯಾದ ಶ್ರೀಮಂತರ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, 6.83 ಲಕ್ಷ ಕೋಟಿ ರು. ಆಸ್ತಿಯೊಂದಿಗೆ ಮುಕೇಶ್‌ ಈ ಸ್ಥಾನಕ್ಕೇರಿದ್ದಾರೆ. 

ವಿಶ್ವದ ಶತಕೋಟ್ಯಧಿಪತಿಗಳ ಪಟ್ಟಿಯಲ್ಲಿ 9ನೇ ಸ್ಥಾನ ಪಡೆದುಕೊಂಡಿರುವ ಮುಕೇಶ್‌ ಭಾರತದ ನಂ.1 ಶ್ರೀಮಂತ ಎನಿಸಿಕೊಂಡಿದ್ದಾರೆ. ಜ.24ರಂದು ವಿಶ್ವದ ನಂ.1 ಶ್ರೀಮಂತ ಎನಿಸಿಕೊಂಡಿದ್ದ ಗೌತಮ್‌ ಅದಾನಿ (Gautam Adani) ಆಸ್ತಿ ಮೌಲ್ಯ ಹಿಂಡನ್‌ಬರ್ಗ್‌ ವರದಿಯ (Hindenburg report) ಬಳಿಕ ಭಾರಿ ಕುಸಿತ ಕಂಡಿದ್ದು, ಜಾಗತಿಕವಾಗಿ 24ನೇ ಸ್ಥಾನಕ್ಕೆ ಕುಸಿದಿದ್ದಾರೆ. ಆದರೂ 3.87 ಲಕ್ಷ ಕೋಟಿ ರು. ಮೌಲ್ಯದೊಂದಿಗೆ ಭಾರತೀಯರಲ್ಲಿ 2ನೇ ಸ್ಥಾನ ಪಡೆದುಕೊಂಡಿದ್ದಾರೆ. 2 ಲಕ್ಷ ಕೋಟಿ ರು. ಮೌಲ್ಯ ಹೊಂದಿರುವ ಶಿವನಾಡರ್‌ (Shiva nadar) ಭಾರತೀಯರ ಪಟ್ಟಿಯಲ್ಲಿ 3ನೇ ಸ್ಥಾನ ಹಾಗೂ 1.8 ಲಕ್ಷ ಕೋಟಿ ರು. ಮೌಲ್ಯದೊಂದಿಗೆ ಸೈರಸ್‌ ಪೂನಾವಾಲ (Cyrus Poonawala) 4ನೇ ಸ್ಥಾನದಲ್ಲಿದ್ದಾರೆ.

Hurun Global Rich List: ವಿಶ್ವದ ಅಗ್ರ 10 ಶ್ರೀಮಂತರಲ್ಲಿ ಅಂಬಾನಿ ಒಬ್ಬರೇ ಭಾರತೀಯ!

ಹರೂನ್‌ ಗ್ಲೋಬಲ್‌ ರಿಚ್‌ ಲಿಸ್ಟ್‌ 2023 ಪ್ರಕಾರ ವಿಶ್ವದ ಅಗ್ರ 10 ಶ್ರೀಮಂತರಲ್ಲಿ ರಿಲಯನ್ಸ್ ಇಂಡಸ್ಟ್ರೀಸ್‌ನ ಮುಖೇಶ್‌ ಅಂಬಾನಿ ಮಾತ್ರ ಏಕೈಕ ಭಾರತೀಯರಾಗಿದ್ದಾರೆ. ಅವರ ಒಟ್ಟು ಆದಾಯ 82 ಬಿಲಿಯನ್‌ ಯುಎಸ್‌ ಡಾಲರ್‌. ಇನ್ನು ಗೌತಮ್‌ ಅದಾನಿ ಈ ಪಟ್ಟಿಯಲ್ಲಿ ದೊಡ್ಡ ಮಟ್ಟದ ಕುಸಿದ ಕಂಡಿದ್ದು 23ನೇ ಸ್ಥಾನಕ್ಕೆ ತಲುಪಿಸಿದ್ದಾರೆ. ಇದನ್ನು ಸೈರಸ್‌ ಪೋನಾವಾಲಾ ಮತ್ತು ಶಿವ ನಾಡರ್‌ ಕುಟುಂಬ ಕ್ರಮವಾಗಿ ಈ ಪಟ್ಟಿಯಲ್ಲಿ 46 ಹಾಗೂ 50ನೇ ಸ್ಥಾನದಲ್ಲಿದೆ. ಇನ್ನು ಉದಯ್‌ ಕೋಟಕ್‌ ಈ ಪಟ್ಟಿಯಲ್ಲಿ 135ನೇ ಸ್ಥಾನದಲ್ಲಿದ್ದಾರೆ, ಈ ವರ್ಷದ ಭಾರತದ ಶತಕೋಟ್ಯಧಿಪತಿಗಳ ಪಟ್ಟಿಗೆ 15 ಮಂದಿ ಹೊಸದಾಗಿ ಸೇರ್ಪಡೆಯಾಗಿದ್ದಾರೆ. ಆದರೆ, 2023ರ ಹರೂನ್‌ ಗ್ಲೋಬಲ್‌ ರಿಚ್‌ ಲಿಸ್ಟ್‌ನಲ್ಲಿರುವ ಇರುವ ಶತಕೋಟ್ಯಧಿಪತಿಗಳ ಸಂಖ್ಯೆಯಲ್ಲಿ ಭಾರತ ಇಳಿಕೆ ಇಳಿಕೆ ಕಂಡಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ, ಈ ಬಾರಿ 28 ಮಂದಿ ಶತಕೋಟ್ಯಧಿಪತಿಗಳ ಪಟ್ಟಿಯಿಂದ ಹೊರಬಿದ್ದಿದ್ದಾರೆ. 187 ಬಿಲಿಯನೇರ್‌ಗಳೊಂದಿಗೆ ಭಾರತವು, ಚೀನಾ ಹಾಗೂ ಅಮೆರಿಕದ ನಂತರದ ಸ್ಥಾನದಲ್ಲಿದೆ.

ಅಬ್ಬಬ್ಬಾ..55 ಕೋಟಿ ರೂ. ವೆಚ್ಚದಲ್ಲಿ ನಡೆದಿತ್ತು ಕೇರಳದ ಉದ್ಯಮಿಯ ಅದ್ಧೂರಿ ಮದುವೆ

ಹರೂನ್‌ ಗ್ಲೋಬಲ್‌ ರಿಚ್‌ ಲಿಸ್ಟ್‌ ಪ್ರಕಾರ, ;ಮುಖೇಶ್‌ ಅಂಬಾನಿ ಅವರ ರಿಲಯನ್ಸ್‌ ಇಂಡಸ್ಟ್ರೀಸ್‌ ಈ ಬಾರಿ ತನ್ನ ಆದಾಯದಲ್ಲಿ ಶೇ. 20ರಷ್ಟು ಕುಸಿತ ಕಂಡಿದೆ. ಇದರಿಂದಾಗಿ ಅಂಬಾನಿ ಅವರ ಆದಾಯ 82 ಬಿಲಿಯನ್‌ ಡಾಲರ್‌ ಆಗಿದೆ. ಹಾಗಿದ್ದರೂ, ಸತತ ಮೂರನೇ ವರ್ಷ ಏಷ್ಯಾದ ಶ್ರೀಮಂತ ವ್ಯಕ್ತಿ ಎನ್ನುವ ಗೌರವವನ್ನು ಅವರು ಉಳಿಸಿಕೊಂಡಿದ್ದಾರೆ' ಎಂದು ತಿಳಿಸಿದೆ. ಇನ್ನು ಗೌತಮ್‌ ಅದಾನಿ ಅವರ ಕುಟುಂಬದ ಆದಾಯದಲ್ಲಿ ಶೇ. 35ರಷ್ಟು ಇಳಿಕೆಯಾಗಿದೆ. 'ಏಷ್ಯಾದ 2ನೇ ಶ್ರೀಮಂತ ವ್ಯಕ್ತಿ ಎನ್ನುವ ಗೌರವವನ್ನು ಅದಾನಿ ಗ್ರೂಪ್‌ನ ಗೌತಮ್‌ ಅದಾನಿ, ವೈಎಸ್‌ಟಿಯ ಝೋಂಗ್‌ ಶಾನ್ಸನ್‌ ಅವರಿಗೆ ಬಿಟ್ಟುಕೊಟ್ಟಿದ್ದಾರೆ.  ಜನವರಿಯಲ್ಲಿ ಅಮೆರಿಕ ಮೂಲದ ಶಾರ್ಟ್‌ ಸೆಲ್ಲರ್‌ ಹಿಂಡೆನ್‌ಬರ್ಗ್‌ನ ವರದಿಯ ನಂತರ ಅದಾನಿ ತನ್ನ ಸಂಪತ್ತು ದೊಡ್ಡ ಮಟ್ಟದಲ್ಲಿ ಕುಸಿದ ಕಂಡಿದ್ದು, ಅವರ ಆದಾಯ ಗರಿಷ್ಠ ಮಟ್ಟದಿಂದ ಶೇ. 60ರಷ್ಟು ಕುಸಿತವಾಗಿದೆ. ಇದಕ್ಕೂ ಮುನ್ನ ಸಂಕ್ಷಿಪ್ತ ಅವಧಿಗೆ ಅದಾನಿ ವಿಶ್ವದ 2ನೇ ಶ್ರೀಮಂತ ವ್ಯಕ್ತಿ ಎನಿಸಿದ್ದರು ಎಂದು ವರದಿ ಹೇಳಿದೆ.

ಗೌತಮ್ ಅದಾನಿ ಕಳೆದ ವರ್ಷದಿಂದ ಪ್ರತಿ ವಾರ 3,000 ಕೋಟಿ ರೂಪಾಯಿಗಿಂತಲೂ ಹೆಚ್ಚಿನ ಹಣವನ್ನು ಕಳೆದುಕೊಳ್ಳುತ್ತಿದ್ದಾರೆ. ಹಾಗಂತ ಕುಸಿತ ಕಂಡವರ ಲಿಸ್ಟ್‌ನಲ್ಲಿ ಅದಾನಿ ಅಗ್ರಸ್ಥಾನದಲ್ಲಿಲ್ಲ. ಇದರಲ್ಲಿ ಜೆಫ್‌ ಬೆಜೋಸ್‌ ಅಗ್ರಸ್ಥಾನದಲ್ಲಿದ್ದರೆ, ಎಲಾನ್‌ ಮಸ್ಕ್‌, ಸರ್ಗೆ ಬಿರ್ನ್‌, ಲ್ಯಾರಿ ಪೇಜ್‌ ಮತ್ತು ಮೆಕೆಂಜಿ ಸ್ಕಾಟ್‌ನ ನಂತರದ ಸ್ಥಾನದಲ್ಲಿ ಗೌತಮ್‌ ಅದಾನಿ ಹಾಗೂ ಮುಖೇಶ್‌ ಅಂಬಾನಿ ಇದ್ದಾರೆ. ಅಮೇರಿಕಾದಲ್ಲಿ 691 ಮತ್ತು ಭಾರತದಲ್ಲಿ 187 ಬಿಲಿಯನೇರ್‌ಗಳಿದ್ದಾರೆ. ಟಾಪ್ 100 ರಲ್ಲಿ ಕೇವಲ 5 ಭಾರತೀಯ ಬಿಲಿಯನೇರ್‌ಗಳಿದ್ದಾರೆ. ಭಾರತವು ವಿಶ್ವದ ಅತ್ಯಂತ ಶ್ರೀಮಂತ ವಾಯುಯಾನ ಬಿಲಿಯನೇರ್‌ಗಳಿಗೆ ನೆಲೆಯಾಗಿದೆ. ಕ್ರಮವಾಗಿ $3.6 ಬಿಲಿಯನ್ ಮತ್ತು $3.3 ಬಿಲಿಯನ್ ಸಂಪತ್ತನ್ನು ಹೊಂದಿರುವ ರಾಕೇಶ್ ಗಂಗ್ವಾಲ್ ಮತ್ತು ರಾಹುಲ್ ಭಾಟಿಯಾ ಮತ್ತು "ಇಂಡಿಗೋ" ಏರ್‌ಲೈನ್ಸ್‌ನ ಕುಟುಂಬವು ಅತ್ಯಂತ ಶ್ರೀಮಂತ ವಾಯುಯಾನ ಬಿಲಿಯನೇರ್‌ಗಳಾಗಿದ್ದಾರೆ.

ಬರೀ 10 ಸಾವಿರ ಬಂಡವಾಳದಿಂದ ಸನ್ ಫಾರ್ಮಾ ಪ್ರಾರಂಭಿಸಿದ್ದ ದಿಲೀಪ್ ಸಿಂಘ್ವಿ,ಇಂದು ದೇಶದ ಏಳನೇ ಸಿರಿವಂತ ಉದ್ಯಮಿ!

 

Follow Us:
Download App:
  • android
  • ios