ಬರೀ 10 ಸಾವಿರ ಬಂಡವಾಳದಿಂದ ಸನ್ ಫಾರ್ಮಾ ಪ್ರಾರಂಭಿಸಿದ್ದ ದಿಲೀಪ್ ಸಿಂಘ್ವಿ,ಇಂದು ದೇಶದ ಏಳನೇ ಸಿರಿವಂತ ಉದ್ಯಮಿ!

ಸನ್ ಫಾರ್ಮಾ ಇಂದು ಭಾರತದ ಪ್ರತಿಷ್ಠಿತ ಔಷಧ ಕಂಪನಿಗಳಲ್ಲೊಂದು. ಈ ಕಂಪನಿಯನ್ನು ಗುಜರಾತ್ ಮೂಲದ ಉದ್ಯಮಿ ದಿಲೀಪ್ ಸಾಂಘ್ವಿ ಕೇವಲ 10 ಸಾವಿರ ರೂ. ಬಂಡವಾಳದೊಂದಿಗೆ ಪ್ರಾರಂಭಿಸಿದ್ದರು. ಇಂದು ಈ ಕಂಪನಿ ಮಾರುಕಟ್ಟೆ ಮೌಲ್ಯ 2,40,000 ಕೋಟಿ ರೂ. ಇನ್ನು ದಿಲೀಪ್ ಸಾಂಘ್ವಿ ನಿವ್ವಳ ಆದಾಯ 1,500 ಕೋಟಿ ರೂ.ಗಿಂತಲೂ ಅಧಿಕ. 
 

Meet Dilip Shanghvi Indias 7th richest man Chairman of over Rs 240000 crore company  anu

Business Desk: ಗುಜರಾತಿ ಕುಟುಂಬದಲ್ಲಿ ಜನಿಸಿದ ದಿಲೀಪ್ ಸಾಂಘ್ವಿ ತನ್ನ ತಂದೆಯ ಔಷಧ ಡೀಲರ್ ಶಿಪ್ ಉದ್ಯಮಕ್ಕೆ ನೆರವು ನೀಡುವ ಮೂಲಕ ತನ್ನ ವೃತ್ತಿ ಪ್ರಾರಂಭಿಸಿದರು. ಆ ಮೂಲಕ ವಿವಿಧ ಔಷಧಗಳ ಬಗ್ಗೆ ಮಾಹಿತಿ ಪಡೆದುಕೊಂಡರು. 1982ರಲ್ಲಿ ತಮ್ಮ 27ನೇ ವಯಸ್ಸಿನಲ್ಲಿ ಸಾಂಘ್ವಿ, 10 ಸಾವಿರ ರೂ. ಬಂಡವಾಳದೊಂದಿಗೆ ವಾಪಿಯಲ್ಲಿ ತಮ್ಮ ಮೊದಲ ಔಷಧ ಉತ್ಪಾದನಾ ಘಟಕ ಪ್ರಾರಂಭಿಸಿದರು. ಈ ಸಂಸ್ಥೆಗೆ ಸನ್ ಫಾರ್ಮಾಸ್ಯುಟಿಕಲ್ಸ್ ಇಂಡ್ ಸ್ಟ್ರೀಸ್ ಎಂಬ ಹೆಸರಿಟ್ಟರು. ಇಂದು ಸನ್ ಫಾರ್ಮಾ ಸಂಸ್ಥೆ ಭಾರತದ ಜನಪ್ರಿಯ ಔಷಧ ಕಂಪನಿಗಳಲ್ಲೊಂದು.  ಈ ಕಂಪನಿ ಮಾರುಕಟ್ಟೆ ಬಂಡವಾಳ 2,40,000 ಕೋಟಿ ರೂ.ಗಿಂತಲೂ ಅಧಿಕವಿದ್ದು, ದಿಲೀಪ್ ಸಾಂಘ್ವಿ ಅವರು ಭಾರತದ ಏಳನೇ ಅತೀದೊಡ್ಡ ಶ್ರೀಮಂತ ಉದ್ಯಮಿ ಎಂದು ಗುರುತಿಸಿಕೊಂಡಿದ್ದಾರೆ. 2016ರಲ್ಲಿ ಇವರಿಗೆ ಭಾರತ ಸರ್ಕಾರ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಿದೆ ಕೂಡ. ಫೋರ್ಬ್ಸ್ ಮಾಹಿತಿ ಅನ್ವಯ ದಿಲೀಪ್ ಸಾಂಘ್ವಿ, ಭಾರತದ ಏಳನೇ ಶ್ರೀಮಂತ ವ್ಯಕ್ತಿಯಾಗಿದ್ದು, ಅವರ ನಿವ್ವಳ ಸಂಪತ್ತು 15.4 ಬಿಲಿಯನ್ ಅಮೆರಿಕನ್ ಡಾಲರ್ ಅಂದ್ರೆ 1,500 ಕೋಟಿ ರೂ.ಗಿಂತ ಹೆಚ್ಚು. ವಿಶ್ವದ ಶ್ರೀಮಂತರ ಪಟ್ಟಿಯಲ್ಲಿ ಸಾಂಘ್ವಿ 109 ನೇ ಸ್ಥಾನದಲ್ಲಿದ್ದಾರೆ. 

ದಿಲೀಪ್ ಸಾಂಘ್ವಿ ಗುಜರಾತ್ ನ ಅಮ್ರೇಲಿ ಎಂಬ ಪುಟ್ಟ ಹಳ್ಳಿಯ ಜೈನ ಸಮುದಾಯದ ಕುಟುಂಬವೊಂದರಲ್ಲಿ 1955ರಲ್ಲಿ ಜನಿಸಿದರು. ಶಾಂತಿಲಾಲ್ ಸಿಂಘ್ವಿ ಹಾಗೂ ಕುಮುದ ಸಿಂಘ್ವಿ ಪುತ್ರರಾದ ದಿಲೀಪ್ ಸಾಂಘ್ವಿ ಕೋಲ್ಕತ್ತ ವಿಶ್ವವಿದ್ಯಾಲಯದಿಂದ ವಾಣಿಜ್ಯ ಶಾಸ್ತ್ರದಲ್ಲಿ ಪದವಿ ಪಡೆದಿದ್ದಾರೆ. ಇವರು ಜೆ.ಜೆ. ಅಜ್ಮೇರ ಹೈಸ್ಕೂಲ್ ಹಾಗೂ ಭವನಿಪುರ್ ಎಜುಕೇಷನ್ ಸೊಸೈಟಿ ಕಾಲೇಜಿನ ಹಳೆಯ ವಿದ್ಯಾರ್ಥಿ ಕೂಡ. 

ಉದ್ಯೋಗ ತೊರೆದು ಬರ್ಗರ್ ಕಂಪನಿ ಪ್ರಾರಂಭಿಸಿದ ಎಂಬಿಎ ಪದವೀಧರೆ;ಐದೇ ವರ್ಷದಲ್ಲಿ 40 ಕೋಟಿ ರೂ. ವಹಿವಾಟು

1982ರಲ್ಲಿ ವಾಪಿಯಲ್ಲಿ ಕೇವಲ 10,000ರೂ. ಬಂಡವಾಳದೊಂದಿಗೆದಿಲೀಪ್ ಸಾಂಘ್ವಿ ತಮ್ಮ 27ನೇ ವಯಸ್ಸಿನಲ್ಲಿ ವಾಪಿಯಲ್ಲಿ ಸನ್ ಫಾರ್ಮಾಸ್ಯುಟಿಕಲ್ಸ್ ಇಂಡ್ ಸ್ಟ್ರೀಸ್ ಪ್ರಾರಂಭಿಸಿದರು. ಉದ್ಯಮ ಪ್ರಾರಂಭಿಸಿದ ಮೊದಲ ವರ್ಷವೇ ದಿಲೀಪ್ ಲಾಭದ ರುಚಿ ಕಂಡಿದ್ದರು. ಮೊದಲ ವರ್ಷವೇ 7ಲಕ್ಷ ರೂ. ವಹಿವಾಟು ನಡೆಸಿದ್ದರು. ಸ್ವಂತ ಕಾರ್ಖಾನೆ ಹೊಂದುವ ಅಗತ್ಯ ಅವರಿಗೆ ಬಹುಬೇಗ ಅರ್ಥವಾಗಿತ್ತು. ಈ ಹಿನ್ನೆಲೆಯಲ್ಲಿ ಸಾಲ ಪಡೆದು ವಾಪಿಯಲ್ಲಿ ಉತ್ಪಾದನಾ ಘಟಕ ಪ್ರಾರಂಭಿಸಿದರು. 1990ನೇ ಸಾಲಿನಲ್ಲಿ ಈ ಕಂಪನಿ ಔಷಧ ವಲಯದಲ್ಲಿ ತನ್ನ ಛಾಪು ಮೂಡಿಸಿತ್ತು. 

1993ರಲ್ಲಿ ಕಂಪನಿ ತನ್ನ ಸಂಪೂರ್ಣ ಲಾಭವಾದ 4 ಕೋಟಿ ರೂ. ಅನ್ನು ಸಂಶೋಧನಾ ಕೇಂದ್ರದ ಸ್ಥಾಪನೆಗೆ ಹೂಡಿಕೆ ಮಾಡಿತು. ಅದರ ಮರು ವರ್ಷವೇ ಸಾರ್ವಜನಿಕರಿಗೆ ಷೇರು ಮಾರಾಟ ಮಾಡಲು ಷೇರು ಮಾರುಕಟ್ಟೆ ಪ್ರವೇಶಿಸಿತು. ಈ ಸಮಯದಲ್ಲಿ ಕಂಪನಿಯ ವಹಿವಾಟು 50ಕೋಟಿ ರೂ. ಹಾಗೂ 60 ಕೋಟಿ ರೂ. ನಡುವೆ ಇತ್ತು. ಇಂದು ಇದು 15,000 ಕೋಟಿ ರೂ. ದಾಟಿದೆ. ಸಾಂಘ್ವಿ ಅವರ ಸಾಧನೆ ಗುರುತಿಸಿ ಅನೇಕ ಪ್ರಶಸ್ತಿಗಳು ಹಾಗೂ ಗೌರವಗಳನ್ನು ನೀಡಲಾಗಿದೆ. ಸಾಂಘ್ವಿ ಅವರು ಸನ್ ಫಾರ್ಮ ಅಡ್ವಾನ್ಡ್ ರಿಸರ್ಚ್ ಕೋ ಸಿಎಂಡಿ ಹಾಗೂ ಶಾಂತಿಲಾಲ್ ಸಿಂಘ್ವಿ ಫೌಂಡೇಷನ್ ಮುಖ್ಯಸ್ಥರು ಕೂಡ ಆಗಿದ್ದಾರೆ.

ಯೂಟ್ಯೂಬ್ ಮೂಲಕವೇ ಕೋಟ್ಯಧೀಶೆಯಾದ ಪ್ರಾಜಕ್ತಾ ಕೋಲಿ; ಈಕೆ ತಿಂಗಳ ಆದಾಯ ಕೇಳಿದ್ರೆ ಶಾಕ್ ಆಗ್ತೀರಾ!

2021ರ ಮೇನಲ್ಲಿ ದಿಲೀಪ್ ಸಾಂಘ್ವಿ ಸ್ಪಾರ್ಕ್ (SPARC) ವ್ಯವಸ್ಥಾಪಕ ನಿರ್ದೇಶಕರ ಸ್ಥಾನದಿಂದ ಕೆಳಗಿಳಿದಿದ್ದಾರೆ. ಆದರೆ, ನಿರ್ದೇಶಕ ಹಾಗೂ ಚೇರ್ಮನ್ ಸ್ಥಾನದಲ್ಲಿ ಮುಂದುವರಿದಿದ್ದಾರೆ. ದಿಲೀಪ್ ಸಾಂಘ್ವಿ ವಿಭಾ ಸಾಂಘ್ವಿ ಅವರನ್ನು ವಿವಾಹವಾಗಿದ್ದು, ಅವರಿಗೆ ಅಲೋಕ್ ಎಂಬ ಮಗ ಹಾಗೂ ವಿಧಿ ಎಂಬ ಹೆಸರಿನ ಮಗಳಿದ್ದಾರೆ. ಇವರಿಬ್ಬರೂ ಸನ್ ಫಾರ್ಮಸ್ಯುಟಿಕಲ್ಸ್ ಗೆ ಕಾರ್ಯನಿರ್ವಹಿಸುತ್ತಿದ್ದಾರೆ. 

Latest Videos
Follow Us:
Download App:
  • android
  • ios