ಭಾರತದ ಮಹಿಳೆಯರ ಬಳಿ ಇದೆ 24 ಸಾವಿರ ಟನ್‌ ಚಿನ್ನ, ಇದು ವಿಶ್ವದ ಶೇ. 11 ರಷ್ಟು ಎಂದ ವರ್ಲ್ಡ್‌ ಗೋಲ್ಡ್‌ ಕೌನ್ಸಿಲ್‌!

ಭಾರತೀಯ ಮಹಿಳೆಯರು ಸುಮಾರು 24,000 ಟನ್ ಚಿನ್ನವನ್ನು ಹೊಂದಿದ್ದಾರೆ, ಇದು ವಿಶ್ವದ ಒಟ್ಟು ಚಿನ್ನದ ಶೇ.11 ರಷ್ಟಿದೆ. ಈ ಪ್ರಮಾಣವು ಅಮೆರಿಕ, ಜರ್ಮನಿ, ಇಟಲಿ, ಫ್ರಾನ್ಸ್ ಮತ್ತು ರಷ್ಯಾಗಳ ಒಟ್ಟು ಚಿನ್ನದ ಮೀಸಲುಗಿಂತಲೂ ಹೆಚ್ಚಾಗಿದೆ.

World Gold Council says Indian women hold 24000 tons of gold san

ಬೆಂಗಳೂರು (ಡಿ.30): ಚಿನ್ನ ಎನ್ನುವುದು ಶ್ರೀಮಂತಿಕೆಯ ಸಂಕೇತ ಮಾತ್ರವಲ್ಲ. ಅದು ಭಾರತೀಯರ ಸಂಪ್ರದಾಯ, ಸಾಂಸ್ಕೃತಿಕ ಮೌಲ್ಯದಲ್ಲಿ ಸ್ಥಾನ ಪಡೆದುಕೊಂಡಿದೆ. ಅದರಲ್ಲೂ ಮಹಿಳೆಯರಿಗೆ ಚಿನ್ನದ ಆಭರಣದ ಮೇಲೆ ಅತ್ಯಂತ ಆಳವಾದ ಬಂಧ ಹೊಂದಿದ್ದಾರೆ. ಅದರಲ್ಲೂ ಮದುವೆ, ಹಬ್ಬಗಳ ಸಮಯದಲ್ಲಿ ಚಿನ್ನ ಎನ್ನುವುದು ಅತ್ಯಂತ ಪ್ರಮುಖ ಅಂಶ. ಅದು ವಧುವಿನ ಆಭರಣವೇ ಇರಲಿ, ಚಿನ್ನದ ಗಟ್ಟಿಗಳೇ ಇರಲಿ. ಚಿನ್ನದ ಗಿಫ್ಟ್‌ ಇಲ್ಲದೆ, ಭಾರತದ ಮದುವೆಗಳು ಕೊನೆಯಾಗೋದೇ ಇಲ್ಲ. ಇದೇ ಕಾರಣಕ್ಕಾಗಿ ಇಂದು ವಿಶ್ವದ ಯಾವುದೇ ದೇಶಕ್ಕಿಂತ ಹೆಚ್ಚಿನ ಗೋಲ್ಡ್‌ ರಿಸರ್ವ್‌ ಭಾರತದ ಮಹಿಳೆಯರ ಬಳಿ ಇದೆ. ಇದೇ ಕಾರಣಕ್ಕಾಗಿ ಚಿನ್ನದ ಮಾಲೀಕತ್ವದಲ್ಲಿ ಇಂದು ಭಾರತವೇ ಜಾಗತಿಕ ನಾಯಕ ಎನಿಸಿದೆ. ಅದರಲ್ಲೂ ಮನೆಯಲ್ಲಿರುವ ಚಿನ್ನಗಳಲ್ಲಿ. ವರ್ಲ್ಡ್‌ ಗೋಲ್ಡ್‌ ಕೌನ್ಸಿಲ್‌ ಇತ್ತೀಚೆಗೆ ತನ್ನ ವರದಿಯನ್ನು ಪ್ರಕಟ ಮಾಡಿದೆ. ಅದು ಹೇಳಿರುವ ಪ್ರಕಾರ ಭಾರತದ ಮಹಿಳೆಯಲ್ಲಿ ಕನಿಷ್ಠವೆಂದರೂ 24 ಸಾವಿರ ಟನ್‌ ಚಿನ್ನವಿದೆ ಎಂದು ಅಂದಾಜು ಮಾಡಿದೆ. ಇದು ಆಭರಣದ ಮಾದರಿಯಲ್ಲಿರುವ ಚಿನ್ನದ ಪೈಕಿ ವಿಶ್ವದ ಶೇ. 11ರಷ್ಟು ಎಂದು ಡಬ್ಲ್ಯುಜಿಸಿ ತಿಳಿಸಿದೆ.

ಭಾರತದ ಮಹಿಳೆಯರು ಹೊಂದಿರುವ ಚಿನ್ನದ ಬಗ್ಗೆ ಕೌನ್ಸಿಲ್‌ ಕೂಡ ಅಚ್ಚರಿ ವ್ಯಕ್ತಪಡಿಸಿದೆ. ಇನ್ನೂ ಅಚ್ಚರಿಯ ಸಂಗತಿ ಏನೆಂದರೆ, ಭಾರತದ ಮಹಿಳೆಯರು ಹೊಂದಿರುವ ಒಟ್ಟೂ ಚಿನ್ನ, ಪ್ರಸ್ತುತ ಜಗತ್ತಿನ ಐದು ದೇಶಗಳ ಚಿನ್ನದ ಮೀಸಲಿಗಿಂತ ಹೆಚ್ಚಾಗಿದೆ.

ಹೋಲಿಕೆ ಮಾಡುವುದಾದರೆ, ಅಮೆರಿಕ 8 ಸಾವಿರ ಟನ್‌ ಚಿನ್ನದ ದಾಸ್ತಾನು ಹೊಂದಿದ್ದರೆ, 2ನೇ ಸ್ಥಾನದಲ್ಲಿರುವ ಜರ್ಮನಿ ಬಳಿ 3300 ಟನ್‌ ಚಿನ್ನವಿದೆ. ಇಟಲಿ ಬಳಿ 2450 ಟನ್‌ ಚಿನ್ನವಿದ್ದರೆ, ಫ್ರಾನ್ಸ್‌ ದೇಶದ ಬಳಿ 2400 ಟನ್‌ ಹಾಗೂ ರಷ್ಯಾದ ಬಳಿ 1900 ಟನ್‌ ಚಿನ್ನದ ರಿಸರ್ವ್‌ ಇದೆ. ಈ ಐದೂ ದೇಶಗಳ ಚಿನ್ನದ ರಿಸರ್ವ್‌ಅನ್ನು ಒಟ್ಟುಗೂಡಿಸಿದರೂ ಸಹ, ಭಾರತದ ಮಹಿಳೆಯರ ಬಳಿ ಇರುವ ಚಿನ್ನಕ್ಕೆ ಸರಿಸಮವಾಗೋದಿಲ್ಲ ಎಂದು ತಿಳಿಸಿದೆ.

ಆಕ್ಸ್‌ಫರ್ಡ್‌ ಗೋಲ್ಡ್‌ ಗ್ರೂಪ್‌ ಪ್ರಕಾರ, ಭಾರತದ ಮನೆಗಳಲ್ಲಿ ಇರುವ ಚಿನ್ನದ ಪ್ರಮಾಣ ವಿಶ್ವದ ಶೇ. 11ರಷ್ಟಾಗಿದೆ. ಇದು ಅಮೆರಿಕ, ಅಂತಾರಾಷ್ಟ್ರೀಯ ಹಣಕಾಸು ನಿಧಿ, ಸ್ವಿಜರ್ಲೆಂಡ್‌ ಹಾಗೂ ಜರ್ಮನಿ ದೇಶದ ಬಳಿ ಇರುವ ಚಿನ್ನದ ಮೀಸಲು ಪ್ರಮಾಣಕ್ಕಿಂತ ಭಾರೀ ಪ್ರಮಾಣದಲ್ಲಿ ಹೆಚ್ಚಾಗಿದೆ ಎಂದಿದೆ.

ಇನ್ನು ಭಾರತದಲ್ಲಿ ಚಿನ್ನ ಹೊಂದಿರುವವರ ಪೈಕಿ ದಕ್ಷಿಣ ಭಾರತದ ಮಹಿಳೆಯರೇ ಲೀಡಿಂಗ್‌ನಲ್ಲಿದ್ದಾರೆ. ಭಾರತದ ಒಟ್ಟಾರೆ ಚಿನ್ನದಲ್ಲಿ ಶೇ. 40ರಷ್ಟು ಚಿನ್ನವನ್ನು ದಕ್ಷಿಣ ಭಾರತ ಹೊಂದಿದೆ. ತಮಿಳುನಾಡು ರಾಜ್ಯವೊಂದರಲ್ಲೇ ಶೇ. 28ರಷ್ಟು ಚಿನ್ನವಿದೆ.

2020-21ರ ವರ್ಲ್ಡ್‌ ಗೋಲ್ಡ್‌ ಕೌನ್ಸಿಲ್‌ ಅಧ್ಯಯನದ ಪ್ರಕಾರ,  ಭಾರತದ ಮನೆಗಳು 21 ಸಾವಿರದಿಂದ 23 ಸಾವಿರ ಟನ್‌ಗಳವರೆಗೆ ಚಿನ್ನ ಹೊಂದಿರಬಹುದು ಎಂದಿತ್ತು. 2023ರ ವೇಳೆಗೆ ಇದರ ಪ್ರಮಾಣ 24 ಸಾವಿರಿಂದ 25 ಸಾವಿರ ಟನ್‌ಗಳವರೆಗೆ ಹೋಗಬಹುದು ಎಂದು ತಿಳಿಸಿತ್ತು. 25 ಸಾವಿರ ಟನ್‌ಗಳಿಗಿಂದ ಅಧಿಕ ಚಿನ್ನದ ಮೀಸಲು ಎನ್ನುವುದು ದೇಶದ ಸಂಪತ್ತಿನಲ್ಲಿ ಬಹುದೊಡ್ಡ ಪಾಲು ಎನ್ನಬಹುದಾಗಿದೆ. ಭಾರತದ ಆರ್ಥಿಕತೆಗೆ ಈ ಚಿನ್ನದ ಮೀಸಲು ಕೂಡ ಅಪಾರ ಕೊಡುಗೆ ನೀಡಿದೆ. ದೇಶದ ಜಿಡಿಪಿಯ ಶೇ. 40ರಷ್ಟನ್ನು ಇದು ಕವರ್‌ ಮಾಡುತ್ತದೆ.

ಅವಳು ಗೆಳತಿಯಲ್ಲ.. ಆದ್ರೂ ರಸಗುಲ್ಲಾ, ಮೈಸೂರ್ ಪಾಕ್ ಅಂತಾ ಮೊಬೈಲ್‌ನಲ್ಲಿ ಸೇವ್‌ ಮಾಡಿಕೊಂಡಳಲ್ಲ!

ಏನಿದೆ ನಿಯಮ: ಭಾರತದ ಆದಾಯ ತೆರಿಗೆ ಇಲಾಖೆಯ ನಿಯಮದ ಪ್ರಕಾರ, ವಿವಾಹಿತ ಮಹಿಳೆ ತನ್ನ ಬಳಿ 500 ಗ್ರಾಂ ಅಂದರೆ ಅರ್ಧಕೆಜಿ ಚಿನ್ನವನ್ನು ಹೊಂದಿರಲು ಅವಕಾಶವಿದೆ. ಇನ್ನೂ ಅವಿವಾಹಿತ ಮಹಿಳೆ 250 ಗ್ರಾಂ ಚಿನ್ನವನ್ನು ತನ್ನ ಬಳಿ ಹೊಂದಿರಬಹುದು. ಆದರೆ, ಭಾರತದಲ್ಲಿ ಪುರುಷರು ಕೇವಲ 100 ಗ್ರಾಂ ಚಿನ್ನವನ್ನು ಮಾತ್ರವೇ ಹೊಂದಬಹುದು. ಇದು ಭಾರತೀಯ ಸಂಸ್ಕೃತಿಯಲ್ಲಿ ಚಿನ್ನವು ವಹಿಸುವ ಮಹತ್ವದ ಪಾತ್ರವನ್ನು ಪ್ರತಿಬಿಂಬಿಸುತ್ತದೆ ಮತ್ತು ಸಂಪತ್ತಿನ ಸಂಕೇತವಾಗಿ ಮತ್ತು ಭವಿಷ್ಯದ ಸುರಕ್ಷತೆಯಾಗಿ ಚಿನ್ನದ ಮಹಿಳೆಯರ ಮಾಲೀಕತ್ವದ ಮೇಲೆ ಇರಿಸಲಾದ ಗಣನೀಯ ಮೌಲ್ಯವನ್ನು ಪ್ರತಿಬಿಂಬಿಸುತ್ತದೆ.

 

 

2024ರಲ್ಲಿ ಅತಿ ಹೆಚ್ಚು ಚಿನ್ನ ರಿಸರ್ವ್ ಮಾಡಿರುವ ಟಾಪ್ 10 ದೇಶಗಳಿವು; 2 ಸ್ಥಾನ ಮುಂದೆ ಜಿಗಿದ ಭಾರತ!

Latest Videos
Follow Us:
Download App:
  • android
  • ios