ಒತ್ತಡವೋ, ಒತ್ತಾಯವೋ? ವಿಶ್ವ ಬ್ಯಾಂಕ್ ಅಧ್ಯಕ್ಷರ ದಿಢೀರ್ ರಾಜೀನಾಮೆ!

https://static.asianetnews.com/images/authors/56bf5dcb-7868-50e0-b2d0-38391a34809d.jpg
First Published 8, Jan 2019, 11:31 AM IST
World Bank President Kim Resigned
Highlights

ವಿಶ್ವ ಬ್ಯಾಂಕ್ ಅಧ್ಯಕ್ಷರ ಏಕಾಏಕಿ ರಾಜೀನಾಮೆ| ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಕೊಟ್ಟ ಜಿಮ್ ಯಾಂಗ್ ಕಿಮ್|  ಅವಧಿಗೂ ಮುನ್ನವೇ ರಾಜೀನಾಮೆಗೆ ಮುಂದಾದ ಜಿಮ್ ಯಾಂಗ್| ಬಡತನ ನಿರ್ಮೂಲನೆಗಾಗಿ ಶ್ರವಹಿಸಿದ್ದಾಗಿ ಜಿಮ್ ಯಾಂಗ್ ಹೇಳಿಕೆ| ಕ್ರಿಸ್ಟಲಿನಾ ಜಾರ್ಜಿವಾ ಮುಂದಿನ ವಿಶ್ವ ಬ್ಯಾಂಕ್ ಮಧ್ಯಂತರ ಅಧ್ಯಕ್ಷ

ವಾಷಿಂಗ್ಟನ್(ಜ.08): ಅಚ್ಚರಿ ಬೆಳವಣಿಗೆಯಲ್ಲಿ ವಿಶ್ವ ಬ್ಯಾಂಕ್ ಅಧ್ಯಕ್ಷ ಜಿಮ್ ಯಾಂಗ್ ಕಿಮ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

ಎರಡನೇ ಅವಧಿಗೆ ವಿಶ್ವ ಬ್ಯಾಂಕ್ ಅಧ್ಯಕ್ಷರಾಗಿ ಆಯ್ಕೆಯಾಗಿದ್ದ ಕಿಮ್ ಅವರ ಅವಧಿ 2022ಕ್ಕೆ ಅಂತ್ಯಗೊಳ್ಳಲಿದೆ. ಆದರೆ ಅವಧಿಗೂ ಮುನ್ನವೇ ಫೆಬ್ರವರಿ 1ರಿಂದ ಜಾರಿಗೆ ಬರುವಂತೆ ಇಂದು ರಾಜೀನಾಮೆ ನೀಡಿದ್ದಾರೆ.

ವಿಶ್ವ ಬ್ಯಾಂಕ್ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದು ಮಹತ್ವದ ಗೌರವವಾಗಿದೆ. ನನ್ನ ಅವಧಿಯಲ್ಲಿ ತೀವ್ರವಾದ ಬಡತನವನ್ನು ಅಂತ್ಯಗೊಳಿಸಲು ಯತ್ನಿಸಿದ್ದೇನೆ ಎಂದು ಕಿಮ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಶ್ವ ಬ್ಯಾಂಕ್ ಸಿಇಒ ಕ್ರಿಸ್ಟಲಿನಾ ಜಾರ್ಜಿವಾ ಅವರು ಫೆಬ್ರವರಿ 1ರಂದು ಮಧ್ಯಂತರ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ.

loader