Asianet Suvarna News Asianet Suvarna News

ಚೀನಾದ ವಿಶ್ವದ ಅತಿದೊಡ್ಡ ಐ ಫೋನ್‌ ಕಾರ್ಖಾನೇಲಿ ಕಾರ್ಮಿಕರ ಪ್ರತಿಭಟನೆ

ಸೂಕ್ತ ಕೋವಿಡ್‌ ಸುರಕ್ಷತಾ ಕ್ರಮಗಳಿಲ್ಲ ಎಂಬ ಕಾರಣಕ್ಕೆ ಕಳೆದು ತಿಂಗಳು ಸಾವಿರಾರು ಸಿಬ್ಬಂದಿ ಕಾರ್ಖಾನೆಯಿಂದ ಓಡಿಹೋಗಿದ್ದ ಘಟನೆಗೆ ಸಾಕ್ಷಿಯಾಗಿದ್ದ ಚೀನಾದಲ್ಲಿನ ವಿಶ್ವದ ಅತಿದೊಡ್ಡ ಐಫೋನ್‌ ಕಾರ್ಖಾನೆಯಲ್ಲಿ ಇದೀಗ ಮತ್ತೊಂದು ದೊಡ್ಡ ಹೋರಾಟ ಆರಂಭವಾಗಿದೆ.

workers protest at worlds largest iPhone factory in China  akb
Author
First Published Nov 24, 2022, 7:22 AM IST

ಬೀಜಿಂಗ್‌: ಸೂಕ್ತ ಕೋವಿಡ್‌ ಸುರಕ್ಷತಾ ಕ್ರಮಗಳಿಲ್ಲ ಎಂಬ ಕಾರಣಕ್ಕೆ ಕಳೆದು ತಿಂಗಳು ಸಾವಿರಾರು ಸಿಬ್ಬಂದಿ ಕಾರ್ಖಾನೆಯಿಂದ ಓಡಿಹೋಗಿದ್ದ ಘಟನೆಗೆ ಸಾಕ್ಷಿಯಾಗಿದ್ದ ಚೀನಾದಲ್ಲಿನ ವಿಶ್ವದ ಅತಿದೊಡ್ಡ ಐಫೋನ್‌ ಕಾರ್ಖಾನೆಯಲ್ಲಿ ಇದೀಗ ಮತ್ತೊಂದು ದೊಡ್ಡ ಹೋರಾಟ ಆರಂಭವಾಗಿದೆ. ಭಾರೀ ವೇತನದ ಆಫರ್‌ ನೀಡಿ, ಕೆಲಸಕ್ಕೆ ಸೇರಿದ ನಂತರ ನಿಯಮ ಬದಲಾಯಿಸಿ ವಂಚಿಸಲಾಗಿದೆ ಎಂದು ಸಾವಿರಾರು ಕಾರ್ಮಿಕರು ಮಂಗಳವಾರ ಝೆಂಗ್‌ಝೌನಲ್ಲಿರುವ ಐಫೋನ್‌ ಉತ್ಪಾದಿಸುವ ತೈವಾನ್‌ ಮೂಲದ ಫಾಕ್ಸ್‌ಕಾನ್‌ ಕಾರ್ಖಾನೆಯಲ್ಲಿ ಬೃಹತ್‌ ಪ್ರತಿಭಟನೆ ನಡೆಸಿದ್ದಾರೆ. ಈ ವೇಳೆ ಪ್ರತಿಭಟನಾಕಾರರು ಮತ್ತು ಪೊಲೀಸರ ನಡುವೆ ವಾಗ್ವಾದ ನಡೆದು, ಪ್ರತಿಭಟನಾಕಾರರ ಮೇಲೆ ಪೊಲೀಸರು ಹಲ್ಲೆಯನ್ನೂ ನಡೆಸಿದ್ದಾರೆ.

ಫಾಕ್ಸ್‌ಕಾನ್‌ ಕಂಪನಿ (Foxconn company) ಐಫೋನ್‌ ಕಾರ್ಖಾನೆ (iPhone factory) ಸೇರುವ ಹೊಸ ಕಾರ್ಮಿಕರಿಗೆ ತಿಂಗಳಿಗೆ ಅಂದಾಜು 1.50 ಲಕ್ಷ ರು. ವೇತನದ ಆಫರ್‌ ನೀಡಿತ್ತು. ಇದರಂತೆ ಸಾವಿರಾರು ಜನರು ಕೆಲಸಕ್ಕೆ ಸೇರಿಕೊಂಡಿದ್ದರು. ಆದರೆ ಕೆಲಸಕ್ಕೆ ಸೇರಿದ ಮೇಲೆ ಮೊದಲ 2 ತಿಂಗಳು ಕಡಿಮೆ ವೇತನಕ್ಕೆ ಕೆಲಸ ಮಾಡಿದ ಮೇಲೆ ಹೊಸ ವೇತನದ ಜಾರಿ ಮಾಡಲಾಗುವುದು ಎಂದು ನಿಯಮ ಬದಲಾಯಿಸಿದೆ. ಇದನ್ನು ವಿರೋಧಿಸಿ ಮಂಗಳವಾರ ಸಾವಿರಾರು ಕಾರ್ಮಿಕರು ಪ್ರತಿಭಟನೆ ನಡೆಸಿದ್ದಾರೆ. ದೇಶದಲ್ಲಿ ದಿನೇ ದಿನೇ ಭಾರೀ ಪ್ರಮಾಣದಲ್ಲಿ ಹೆಚ್ಚುತ್ತಿರುವ ಕೋವಿಡ್‌ ಪ್ರಕರಣ ನಿಗ್ರಹಿಸಲು ಸರ್ಕಾರ ಹರಸಾಹಸ ಪಡುತ್ತಿರುವಾಗಲೇ ನಡೆದ ಈ ಬೆಳವಣಿಗೆ ಸರ್ಕಾರಕ್ಕೆ ಸವಾಲಾಗಿ ಪರಿಣಮಿಸಿದೆ.

ಕೋವಿಡ್‌ ಪ್ರಕರಣಗಳ ಸಂಖ್ಯೆಯಲ್ಲಿ ಭಾರಿ ಏರಿಕೆ

ಇತ್ತ ದಕ್ಷಿಣ ಚೀನಾದ ಪ್ರಮುಖ ಪ್ರದೇಶವಾದ ಗುವಾಂಗ್‌ಝೌ (Guangzhou) ನಗರದಲ್ಲಿ ಕೋವಿಡ್‌ ಪ್ರಕರಣಗಳ ಸಂಖ್ಯೆಯಲ್ಲಿ ಭಾರಿ ಏರಿಕೆ ಕಂಡು ಬಂದ ಹಿನ್ನೆಲೆಯಲ್ಲಿ ಸೋಮವಾರದಿಂದ ಕಠಿಣ ಲಾಕ್‌ಡೌನ್‌ ಕ್ರಮಗಳನ್ನು ಹೇರಲಾಗಿದೆ. ನ.21 ರಂದು ಗುವಾಂಗ್‌ಝೌನಲ್ಲಿ 9085 ಸೇರಿದಂತೆ 27,095 ಕೋವಿಡ್‌ ಪ್ರಕರಣಗಳು ಚೀನಾದಲ್ಲಿ ವರದಿಯಾಗಿದ್ದವು. ಹೀಗಾಗಿ ಕೋವಿಡ್‌ ಹೆಚ್ಚಿರುವ ಗುವಾಂಗ್‌ಝೌನ ಬೈಯೂನ್‌ನಲ್ಲಿ ಸಾರ್ವಜನಿಕ ಸಾರಿಗೆಯನ್ನು ಸ್ಥಗಿತಗೊಳಿಸಲಾಗಿತ್ತು. ಜನರು ತಮ್ಮ ಮನೆಯಿಂದ ಹೊರ ಬರಲು ಕೂಡಾ ಕೋವಿಡ್‌ ನೆಗೆಟಿವ್‌ ವರದಿಯನ್ನು ತೋರಿಸಬೇಕಾದ ಅನಿವಾರ್ಯತೆ ಎದುರಾಗಿದೆ.

ಇದಲ್ಲದೇ ಬೀಜಿಂಗ್‌ನಲ್ಲಿ ನ.21ರಂದೇ 2 ಸಾವುಗಳು ವರದಿಯಾಗಿವೆ. ಈ ನಿಟ್ಟಿನಲ್ಲಿ ಶಾಲೆ, ವಿಶ್ವವಿದ್ಯಾಲಯಗಳನ್ನು ಮುಚ್ಚಲಾಗಿದ್ದು, ಸಾಮೂಹಿಕ ಕೋವಿಡ್‌ ಪರೀಕ್ಷೆ ನಡೆಸಲಾಗುತ್ತಿದೆ. ಶೂನ್ಯ ಕೋವಿಡ್‌ ನೀತಿಯ ಅನುಷ್ಠಾನ ನಡೆಸಿದರೂ ಚೀನಾ ಇನ್ನೂ ಕೋವಿಡ್‌ ಬಿಕ್ಕಟ್ಟನ್ನು ಎದುರಿಸುತ್ತಿರುವ ಜಗತ್ತಿನ ಪ್ರಮುಖ ದೇಶವಾಗಿದೆ. ಬಹುತೇಕ ದೇಶಗಳಲ್ಲಿ ಇಂತಹ ಕಠಿಣ ಲಾಕ್‌ಡೌನ್‌ ಹೇರದಿದ್ದರೂ ಕೋವಿಡ್‌ ಪ್ರಮಾಣ ಗಣನೀಯವಾಗಿ ತಗ್ಗಿದೆ.

ಚೀನಾದಲ್ಲಿ ಕೋವಿಡ್‌ ಅಬ್ಬರ: ಬೀಜಿಂಗ್‌ನಲ್ಲಿ ಸೆಮಿ ಲಾಕ್‌ಡೌನ್

ಅರುಣಾಚಲಕ್ಕೆ ಮೊದಲ ವಿಮಾನ ನಿಲ್ದಾಣ: ಹೇಗಿದೆ ಗೊತ್ತಾ ಡೋನ್ಯಿ ಪೋಲೋ ಏರ್‌ಫೋರ್ಟ್?

1.6 ಲಕ್ಷ ಕೋಟಿ Semiconductor ಹೂಡಿಕೆ ಗುಜರಾತ್‌ ಪಾಲು; ರೇಸ್‌ನಲ್ಲಿದ್ದ ಕರ್ನಾಟಕಕ್ಕೆ ಸೋಲು

ವಿದೇಶಾಂಗ ನೀತಿ ಹೆಸರಲ್ಲಿ ಭಯೋತ್ಪಾದನೆ ಬೆಂಬಲಿಸುವ ದೇಶಗಳಿಗೆ ತಕ್ಕ ಪಾಠ, ಪಾಕ್-ಚೀನಾಗೆ ಮೋದಿ ಎಚ್ಚರಿಕೆ!

 

Follow Us:
Download App:
  • android
  • ios