Asianet Suvarna News Asianet Suvarna News

ಉದ್ಯಮರಂಗದಲ್ಲಿ ಮಹಿಳೆಯರಿಗೆ ಉತ್ತೇಜನ ಅಗತ್ಯ: ಡಾ.ಶ್ರೀಧರ್ ಮಿಟ್ಟ

ಭಾರತದಲ್ಲಿ ಉದ್ಯಮಗಳನ್ನು ಯಶಸ್ವಿಯಾಗಿ ಕಟ್ಟಬೇಕೆಂದರೆ ಇದುವರೆಗೂ ಉದಾಸೀನಕ್ಕೆ ಈಡಾಗಿರುವ ಮಹಿಳೆಯರಿಗೆ ಹೆಚ್ಚು ಹೆಚ್ಚು ಉತ್ತೇಜನ ಕೊಡುವುದನ್ನು ಆದ್ಯತೆಯಾಗಿ ರೂಢಿಸಿಕೊಳ್ಳಬೇಕು.  ಎಂದು ನೆಕ್ಸ್ಟ್‌ವೆಲ್ತ್‌ ಆಂತ್ರಪ್ರೆನ್ಯೂರ್ಸ ಕಂಪನಿಯ ಸಂಸ್ಥಾಪಕ ಡಾ.ಶ್ರೀಧರ ಮಿಟ್ಟ ಹೇಳಿದ್ದಾರೆ.

Women need encouragement in business says Nextwealth director Dr. Sridhar Mitta in bengaluru tech summit gow
Author
First Published Nov 18, 2022, 6:21 PM IST

ಬೆಂಗಳೂರು (ನ.18): ಭಾರತದಲ್ಲಿ ಉದ್ಯಮಗಳನ್ನು ಯಶಸ್ವಿಯಾಗಿ ಕಟ್ಟಬೇಕೆಂದರೆ ಇದುವರೆಗೂ ಉದಾಸೀನಕ್ಕೆ ಈಡಾಗಿರುವ ಮಹಿಳೆಯರಿಗೆ ಹೆಚ್ಚು ಹೆಚ್ಚು ಉತ್ತೇಜನ ಕೊಡುವುದನ್ನು ಆದ್ಯತೆಯಾಗಿ ರೂಢಿಸಿಕೊಳ್ಳಬೇಕು. ಇದು ತನ್ನಿಂತಾನೇ ಸಾಮಾಜಿಕ ಬದಲಾವಣೆಯನ್ನೂ ತರುತ್ತದೆ ಎಂದು ನೆಕ್ಸ್ಟ್‌ವೆಲ್ತ್‌ ಆಂತ್ರಪ್ರೆನ್ಯೂರ್ಸ ಕಂಪನಿಯ ಸಂಸ್ಥಾಪಕ ಡಾ.ಶ್ರೀಧರ ಮಿಟ್ಟ ಹೇಳಿದ್ದಾರೆ. ಬೆಂಗಳೂರು ತಂತ್ರಜ್ಞಾನ ಸಮಾವೇಶದಲ್ಲಿ ಶುಕ್ರವಾರ ಅವರು 'ಭಾರತದಲ್ಲಿ ಯಶಸ್ವಿ ಉದ್ಯಮಗಳನ್ನು ಕಟ್ಟಲು ಅನುಸರಿಸಬೇಕಾದ ಮಂತ್ರಗಳು' ವಿಚಾರ ಗೋಷ್ಠಿಯಲ್ಲಿ ಮಾತನಾಡಿದರು.

ದೇಶದ ಜನಸಂಖ್ಯೆಯಲ್ಲಿ ಮಹಿಳೆಯರು ಅರ್ಧದಷ್ಟಿದ್ದಾರೆ. ಉದ್ಯೋಗಿಗಳ ನೇಮಕಾತಿ ಸಂದರ್ಭದಲ್ಲಿ ಇವರಿಗೆ ಹೆಚ್ಚು ಒತ್ತು ಕೊಡಬೇಕು. 21ನೇ ಶತಮಾನದಲ್ಲಾದರೂ ಇವರ ಪ್ರತಿಭೆಯನ್ನು ದೇಶದ ಆರ್ಥಿಕ ಬೆಳವಣಿಗೆಗೆ ನಿರ್ಣಾಯಕವಾಗಿ ಬಳಸಿಕೊಳ್ಳಬೇಕು ಎಂದು ಅವರು ಸಲಹೆ ನೀಡಿದರು.

ಉದ್ಯಮ ಯಶಸ್ವಿಯಾಗಬೇಕಾದರೆ ಸರಿಯಾದ ವಿತರಣಾ ಜಾಲ, ಉದ್ಯಮಶೀಲ ವ್ಯಕ್ತಿಗಳೊಂದಿಗೆ ಸಂವಾದ, ಉದ್ಯೋಗ ಮತ್ತು ಉದ್ಯೋಗಿಗಳ ಸರಿಯಾದ ನಿಯೋಜನೆ ಮತ್ತು ಆಡಳಿತ ನಿರ್ವಹಣೆಯಲ್ಲಿ ಅಚ್ಚುಕಟ್ಟುತನಗಳು ಬಹಳ ಮುಖ್ಯವಾಗುತ್ತವೆ. ನವಭಾರತದ ನಿರ್ಮಾಣದಲ್ಲಿ ಇಂತಹ ಸಂಸ್ಕೃತಿ ಮೂಡಿಬರಬೇಕು ಎಂದು ಅವರು ಪ್ರತಿಪಾದಿಸಿದರು.

ದೇಶದಲ್ಲಿ ಬೃಹತ್‌ ಮಾರುಕಟ್ಟೆ, ನಾವೀನ್ಯತೆ ಮತ್ತು ಉದ್ಯಮಶೀಲತೆಗಳು ಮುಕ್ತವಾಗಿವೆ. ಕಾಲೇಜುಗಳಿಂದ ಹೊರಬರುವ ಪದವೀಧರ ಯುವಜನರಿಗೆ ನಾವು ಹೆಚ್ಚು ಉದ್ಯೋಗಗಳನ್ನು ಸೃಷ್ಟಿಸಲೇಬೇಕಾದ ಅನಿವಾರ್ಯತೆ ಇದೆ. ಜೊತೆಗೆ, ದೊಡ್ಡ ನಗರಗಳ ಬದಲು ಗ್ರಾಮಾಂತರ ಪ್ರದೇಶದಲ್ಲಿ ಇದನ್ನು ಸಾಧ್ಯವಾಗಿಸಬೇಕು.

BTS2022: 23 ವರ್ಷ ಪೂರೈಸಿದ ಟಿಸಿಎಸ್‌ ಪ್ರಾಯೋಜಿತ ಗ್ರಾಮೀಣ ಐಟಿ ರಸಪ್ರಶ್ನೆ ಸ್ಪರ್ಧೆ, ಕೇರಳದ ಶ್ರೀನಂದ್ ಪ್ರಥಮ

ಇದರಿಂದ ಆರ್ಥಿಕ ಪ್ರಗತಿಗೆ ಒಂದು ಪರಿಪೂರ್ಣತೆ ಒದಗಿ ಬರುತ್ತದೆ ಎಂದು ಅವರು ಅಂಕಿಅಂಶಗಳ ಸಮೇತ ಅಭಿಪ್ರಾಯಪಟ್ಟರು. ಉದ್ಯಮಿಗಳಾದ ಸಿ ಎಂ ಪಾಟೀಲ್‌, ಎಸ್‌.ಜಿ. ಅನಿಲ್‌ಕುಮಾರ್‍‌, ಜಿತೇಶ್‌ ಅರೋರಾ, ಪ್ರಣೀತ್‌ಕುಮಾರ್‍‌ ಮತ್ತು ರವಿ ಹಳದೀಪುರ್‍‌ ಕೂಡ ತಮ್ಮ ವಿಚಾರಗಳನ್ನು ಹಂಚಿಕೊಂಡರು.

Bengaluru Tech Summit: ಇನ್ಫೋಸಿಸ್‌, ಇಂಟೆಲ್‌ಗೆ 'ಕರ್ನಾಟಕ ಐಟಿ ರತ್ನ' ಪ್ರಶಸ್ತಿ ಪ್ರದಾನ 

ಅಮೆರಿಕ ಭಾರತದ ದೊಡ್ಡ ವ್ಯಾಪಾರಿ ಪಾಲುದಾರ: ರವಿನ್‌
‘ಅಮೆರಿಕವು ಭಾರತದ ಅತಿ ದೊಡ್ಡ ವ್ಯಾಪಾರ ಸಹಭಾಗಿಯಾಗಿದ್ದು, ಬೆಂಗಳೂರಿನಲ್ಲೇ 650ಕ್ಕೂ ಹೆಚ್ಚು ಯು.ಎಸ್‌. ಕಂಪನಿಗಳಿವೆ. ಎರಡೂ ದೇಶಗಳ ನಡುವಿನ ದ್ವಿಪಕ್ಷೀಯ ಸಂಬಂಧಗಳು ಹಾಗೂ ವ್ಯಾಪಾರ ಒಪ್ಪಂದಗಳು ಎರಡೂ ದೇಶಗಳು ಬೆಳೆಯಲು ಅನುಕೂಲ ಕಲ್ಪಿಸಲಿವೆ’ ಎಂದು ಚೆನ್ನೈನ ಯು.ಎಸ್‌. ಕಾನ್ಸುಲ್‌ ಜನರಲ್‌ ಜುಡಿತ್‌ ರವಿನ್‌ ಅಭಿಪ್ರಾಯಪಟ್ಟಿದ್ದಾರೆ.

ಬುಧವಾರ ಬೆಂಗಳೂರು ತಂತ್ರಜ್ಞಾನ ಸಮಾವೇಶದಲ್ಲಿ (ಬಿಟಿಎಸ್‌) ಭಾಗವಹಿಸಿ ಮಾತನಾಡಿದ ಅವರು, ‘ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಎರಡೂ ದೇಶಗಳು ಒಟ್ಟಾಗಿ ಅಗಾಧವಾದ ಆವಿಷ್ಕಾರಗಳನ್ನು ಸೃಷ್ಟಿಸಬಹುದು’ ಎಂದು ಹೇಳಿದರು.

ಅಮೆರಿಕವು ಭಾರತದ ಅತಿ ದೊಡ್ಡ ವ್ಯಾಪಾರ ಸಹಭಾಗಿ. 2021ರಲ್ಲಿ ಉಭಯ ರಾಷ್ಟ್ರಗಳ ನಡುವೆ 160 ಬಿಲಿಯನ್‌ ಡಾಲರ್‌ ವ್ಯವಹಾರ ನಡೆದಿದೆ. ವಿದೇಶಿ ಬಂಡವಾಳ ಹೂಡಿಕೆಯಲ್ಲೂ ಅಮೆರಿಕ ಮುಂದಿದ್ದು, ಭಾರತದಲ್ಲಿ ಅತಿ ಹೆಚ್ಚು ಹೂಡಿಕೆ ಮಾಡಿದೆ. ಅಮೇಜಾನ್‌, ಗೂಗಲ್‌, ಮೈಕ್ರೋಸಾಫ್‌್ಟ, ಐಬಿಎಂ, ಸಿಸ್ಕೊ, ಇಂಟೆಲ್‌ ಸೇರಿದಂತೆ ಹತ್ತಾರು ಬಿಲಿಯನ್‌ ಡಾಲರ್‌ ಕಂಪನಿಗಳು ಭಾರತಕ್ಕೆ ಬಂದಿವೆ. 650 ಯುಎಸ್‌ ಕಂಪನಿಗಳು ಬೆಂಗಳೂರಿನಲ್ಲೇ ಇವೆ. ಅವೆಲ್ಲವೂ ತಂತ್ರಜ್ಞಾನ ಕ್ಷೇತ್ರಗಳಲ್ಲಿ ಮುಂಚೂಣಿಯಲ್ಲಿದ್ದು, ಅಭಿವೃದ್ಧಿಗೆ ಪೂರಕವಾಗಿ ಕೆಲಸ ಮಾಡುತ್ತಿವೆ ಎಂದು ಹೇಳಿದ್ದಾರೆ.

ಇನ್ನು ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಆಗಸ್ಟ್‌ನಲ್ಲಿ ಯು.ಎಸ್‌ ನ್ಯಾಷನಲ್‌ ಸೈನ್ಸ್‌ ಪೌಂಡೇಷನ್‌ ನಿರ್ದೇಶಕ ಡಾ. ಸೇತುರಾಮನ್‌ ಪಂಚನಾಥನ್‌ ಅವರು ಭಾರತಕ್ಕೆ ಭೇಟಿ ಹೊಸ ಘೋಷಣೆ ಮಾಡಿದ್ದರು. ಮೇ ತಿಂಗಳಲ್ಲಿ ಯುಎಸ್‌ ಅಧ್ಯಕ್ಷ ಜೋ ಬಿಡೆನ್‌ ಹಾಗೂ ನರೇಂದ್ರ ಮೋದಿ ಅವರ ನಡುವೆ ನಡೆದಿದ್ದ ಮಾತುಕತೆಯಲ್ಲಿ ಕ್ರಿಟಿಕಲ್‌ ಅಂಡ್‌ ಎಮರ್ಜಿಂಗ್‌ ಟೆಕ್ನಾಲಜಿಸ್‌ ವಿಭಾಗದಲ್ಲಿ ಸಹಭಾಗಿತ್ವ ಘೋಷಿಸಿದ್ದರು. ಈ ರೀತಿ ಹಲವು ಸಹಭಾಗಿತ್ವಗಳೊಂದಿಗೆ ಉಭಯ ರಾಷ್ಟ್ರಗಳ ನಡುವಿನ ವ್ಯಾವಹಾರಿಕ ಸಂಬಂಧಗಳು ವೃದ್ಧಿಸುತ್ತಿವೆ ಎಂದರು.

Follow Us:
Download App:
  • android
  • ios