ನವೋದ್ಯಮದಲ್ಲೂ ಭಾರತೀಯ ನಾರಿ ಸಕ್ಸಸ್; ದೇಶದ 8000 ಸ್ಟಾರ್ಟ್ ಅಪ್ ಗಳ ಮಾಲೀಕರು ಮಹಿಳೆಯರೇ!
ಭಾರತದಲ್ಲಿ ಮಹಿಳೆಯರ ಸಾರಥ್ಯದ 8000 ಸ್ಟಾರ್ಟ್ ಅಪ್ ಗಳಿದ್ದು,1,90,335 ಕೋಟಿ ರೂ.ಗಿಂತಲೂ ಅಧಿಕ ಬಂಡವಾಳ ಹೊಂದಿವೆ.
ನವದೆಹಲಿ (ಮಾ.8): ಭಾರತೀಯ ಮಹಿಳೆ ಇಂದು ಎಲ್ಲ ಕ್ಷೇತ್ರಗಳಲ್ಲೂ ತನ್ನ ಅಸ್ಥಿತ್ವವನ್ನು ಸಾಬೀತುಪಡಿಸಿದ್ದಾಳೆ. ಫೈಟರ್ ಪೈಲೆಟ್ ನಿಂದ ಹಿಡಿದು ಬಹುರಾಷ್ಟ್ರೀಯ ಕಂಪನಿಗಳ ಸಿಇಒ ಪಟ್ಟದ ತನಕ ಎಲ್ಲವೂ ತನ್ನಿಂದ ಸಾಧ್ಯ ಎಂಬುದನ್ನು ಸಾಧಿಸಿ ತೋರಿಸಿದ್ದಾಳೆ. ಹೀಗಿರುವಾಗ ಇತ್ತೀಚಿನ ದಿನಗಳಲ್ಲಿ ದೇಶದಲ್ಲಿ ಸ್ಟಾರ್ಟ್ ಅಪ್ ಗಳ ಸಂಖ್ಯೆ ಹೆಚ್ಚುತ್ತಿದೆ. ಉದ್ಯಮ ರಂಗದತ್ತ ಆಸಕ್ತಿ ತೋರುತ್ತಿರೋರ ಪ್ರಮಾಣ ವರ್ಷದಿಂದ ವರ್ಷಕ್ಕೆ ಏರಿಕೆಯಾಗುತ್ತಿದೆ. ಈ ಸ್ಟಾರ್ಟ್ ಅಪ್ ಜಗತ್ತಿನಲ್ಲಿ ಕೂಡ ಮಹಿಳೆ ತನ್ನ ಸಾಮರ್ಥ್ಯವನ್ನು ತೋರಿಸಲು ಪ್ರಾರಂಭಿಸಿದ್ದಾಳೆ. ಇದಕ್ಕೆ ಸಾಕ್ಷಿ ಎಂಬಂತೆ ಭಾರತದಲ್ಲಿ 8,000 ಸ್ಟಾರ್ಟ್ ಅಪ್ ಗಳ ಸ್ಥಾಪಕರು ಮಹಿಳೆಯರಾಗಿದ್ದಾರೆ. ಈ ಸ್ಟಾರ್ಟ್ ಅಪ್ ಗಳು ಈ ತನಕ 1,90,335 ಕೋಟಿ ರೂ.ಗಿಂತಲೂ ಅಧಿಕ ಮೊತ್ತದ ಸಂಚಿತ ನಿಧಿ ಹೊಂದಿವೆ ಎಂದು ವರದಿಯೊಂದು ತಿಳಿಸಿದೆ. ಇನ್ನು ಭಾರತದ ತಂತ್ರಜ್ಞಾನ ಕ್ಷೇತ್ರದಲ್ಲಿ ಮಹಿಳಾ ಉದ್ಯಮಿಗಳ ಸ್ಟಾರ್ಟ್ ಅಪ್ ಗಳ ಷೇರುಗಳು ಶೇ.18 ಅನ್ನು ಮೀರಿದೆ. ಫಂಡೆಂಡ್ ಕಂಪನಿಗಳಲ್ಲಿ ಮಹಿಳಾ ಉದ್ಯಮಿಗಳ ಪಾಲು ಶೇ.14ಕ್ಕಿಂತ ಹೆಚ್ಚಿದೆ ಎಂದು ಪ್ರಮುಖ ಮಾರುಕಟ್ಟೆ ಇಂಟೆಲಿಜೆನ್ಸ್ ಪ್ಲಾಟ್ ಫಾರ್ಮ್ ಟ್ರ್ಯಾಕ್ಸನ್ ವರದಿ ತಿಳಿಸಿದೆ.
ಮಹಿಳೆಯರ ನೇತೃತ್ವದ ಸ್ಟಾರ್ಟ್ ಅಪ್ ಗಳು ಭಾರತದ ಒಟ್ಟು ಟೆಕ್ ಫಂಡಿಂಗ್ ನಲ್ಲಿ ಶೇ.14.8 ಪಾಲು ಅಂದರೆ ಸುಮಾರು 155 ಬಿಲಿಯನ್ ಡಾಲರ್ ಹೊಂದಿವೆ. ಈ ತನಕ ಮಹಿಳೆಯರ ನೇತೃತ್ವದ ಸ್ಟಾರ್ಟ್ ಅಪ್ ಗಳ ಸಂಖ್ಯೆಯನ್ನು ಗಮನಿಸಿದರೆ ದೆಹಲಿ-ಎನ್ ಸಿಆರ್ ಪ್ರದೇಶಗಳು ಮುಂಚೂಣಿಯಲ್ಲಿವೆ. ಆ ನಂತರದ ಸ್ಥಾನಗಳಲ್ಲಿ ಬೆಂಗಳೂರು ಹಾಗೂ ಮುಂಬೈ ಇವೆ. ಮಹಿಳೆಯರು ನೇತೃತ್ವ ವಹಿಸಿರುವ 2,000ಕ್ಕೂ ಅಧಿಕ ಸ್ಟಾರ್ಟ್ ಅಪ್ ಗಳು ಈ ತನಕ ಫಂಡಿಂಗ್ ಸ್ವೀಕರಿಸಿವೆ. ಅಂದಾಜು 6,000 ಫಂಡ್ ಸ್ವೀಕರಿಸದ ಕಂಪನಿಗಳಿದ್ದು, ಇವುಗಳಲ್ಲಿ 590ರ ಆದಾಯ 30,000 ಡಾಲರ್ ಗಿಂತಲೂ ಹೆಚ್ಚಿದೆ ಎಂದು ವರದಿ ತಿಳಿಸಿದೆ.
Business : ಸಾಲ ಕ್ಷೇತ್ರದಲ್ಲೂ ಹೆಚ್ಚಾಗ್ತಿದೆ ಮಹಿಳೆ ಪಾಲು…. ಈ ಕ್ಷೇತ್ರದಲ್ಲಿ ಮೇಲುಗೈ
1.17 ಲಕ್ಷ ಸ್ಟಾರ್ಟಪ್‌ಗಳಿಗೆ ಮಾನ್ಯತೆ
ದೇಶದಲ್ಲಿ ಸ್ಟಾರ್ಟಪ್‌ಗಳಿಗೆ ಪ್ರೋತ್ಸಾಹ ನೀಡಲು ಕೇಂದ್ರ ಸರ್ಕಾರ ನಾನಾ ಯೋಜನೆಗಳನ್ನು ಹೊಂದಿದೆ. ಈವರೆಗೆ 1.17 ಲಕ್ಷ ಸ್ಟಾರ್ಟಪ್‌ಗಳಿಗೆ ಸರ್ಕಾರ ಮಾನ್ಯತೆ ನೀಡಿದೆ. ಅವುಗಳಲ್ಲಿ ಅರ್ಹ ಸ್ಟಾರ್ಟಪ್‌ಗಳಿಗೆ ಆದಾಯ ತೆರಿಗೆ ಕಡಿತ, ತೆರಿಗೆ ಸಂಬಂಧಿ ಪ್ರೋತ್ಸಾಹ ಮುಂತಾದ ಸೌಕರ್ಯಗಳನ್ನು ‘ಸ್ಟಾರ್ಟಪ್ ಇಂಡಿಯಾ’ಯೋಜನೆಯ ಮೂಲಕ ನೀಡುತ್ತಿದೆ. ಈ ಬಾರಿಯ ಬಜೆಟ್ ನಲ್ಲಿ ಕೂಡ
ಸ್ಟಾರ್ಟ್ ಅಪ್ ಗಳನ್ನು ಉತ್ತೇಜಿಸಲು ಈ ಹಿಂದೆ ಅವುಗಳಿಗೆ ನೀಡಿದ್ದ ತೆರಿಗೆ ರಿಯಾಯ್ತಿ ಹಾಗೂ ಪ್ರೋತ್ಸಾಹಕರ ಯೋಜನೆಗಳನ್ನು ಇನ್ನೂ ಒಂದು ವರ್ಷ ಮುಂದುವರೆಸಲಾಗುವುದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಪ್ರಕಟಿಸಿದ್ದಾರೆ.
ಸ್ಟಾರ್ಟ್ ಅಪ್ ಗಳ ಸಂಖ್ಯೆಯಲ್ಲಿ ಭಾರತ ವಿಶ್ವದಲ್ಲೇ ನಾಲ್ಕನೇ ಸ್ಥಾನದಲ್ಲಿದೆ ಎಂದು ವರದಿಯೊಂದು ಹೇಳಿದೆ. ಭಾರತದ ಸ್ಟಾರ್ಟ್ ಅಪ್ ಗಳು 50 ಮಿಲಿಯನ್ ಡಾಲರ್ ವೆಂಚರ್ ಕ್ಯಾಪಿಟಲ್ (ವಿಸಿ) ಹೂಡಿಕೆ ಪಡೆದಿವೆ ಎಂದು ಇದು ತಿಳಿಸಿದೆ. ಕಳೆದ ವರ್ಷದ ಅಂತಿಮ ಭಾಗದಲ್ಲಿನ ಮಾಹಿತಿ ಅನ್ವಯ ಭಾರತದ 429 ಸ್ಟಾರ್ಟ್ ಅಪ್ ಗಳು 127 ಬಿಲಿಯನ್ ಡಾಲರ್ ವಿಸಿ ಹೂಡಿಕೆ ಜೊತೆಗೆ ಒಟ್ಟು 446 ಬಿಲಿಯನ್ ಡಾಲರ್ ಮೌಲ್ಯದ ಟೆಕ್ ಹೂಡಿಕೆಯನ್ನು ಕೂಡ ಪಡೆದಿವೆ.
ಮಹಿಳೆಯರ ದಿನದಂದೇ ನಾರಿಶಕ್ತಿಗೆ ಬಲ ತುಂಬಿದ ಪ್ರಧಾನಿ: ಎಲ್‌ಪಿಜಿ ದರ 100 ರೂ ಇಳಿಕೆ
ಅಮೆರಿಕ ಹೊರತುಪಡಿಸಿ ಇತರ ಬೃಹತ್ ರಾಷ್ಟ್ರಗಳಲ್ಲಿನ ಸ್ಟಾರ್ಟ್ ಅಪ್ ಗಳು ದೇಶೀಯ ಮಾರುಕಟ್ಟೆ ಮೇಲೆ ಹೆಚ್ಚಿನ ಗಮನ ಕೇಂದ್ರೀಕರಿಸುತ್ತವೆ. ಹೀಗಾಗಿ ದೇಶೀಯ ಮಾರುಕಟ್ಟೆ ಗಾತ್ರ ದೊಡ್ಡದಿರುವ ಸಮಯದಲ್ಲಿ ಜಾಗತಿಕ ಮಾರುಕಟ್ಟೆಗೆ ವಿಸ್ತರಿಸಲು ವಿಳಂಬ ಮಾಡೋದು ಉತ್ತಮವೇ ಆಗಿದೆ. ಭಾರತದ ವಿಷಯದಲ್ಲಿ ಕೂಡ ಇದು ಸ್ಪಷ್ಟವಾಗಿ ಕಾಣಿಸುತ್ತದೆ. ಭಾರತದಲ್ಲಿ ಬಿ2ಸಿ ಸ್ಟಾರ್ಟ್ ಅಪ್ ಗಳು ದೇಶದ ಹೊರಗಿನ ಮಾರುಕಟ್ಟೆಗೆ ಹೋಗದೆ ಯುನಿಕಾರ್ನ್ ಸ್ಟೇಟಸ್ ಪಡೆಯಬಹುದು ಹಾಗೂ ಬಿಲಿಯನ್ ಡಾಲರ್ ವ್ಯವಹಾರ ನಡೆಸಬಹುದು. 6 ಅಥವಾ ಅದಕ್ಕಿಂತ ಹೆಚ್ಚಿನ ಸ್ಥಳೀಯ ಸಂಪರ್ಕ ಸೂಚ್ಯಂಕ ಹೊಂದಿರುವ ಸ್ಟಾರ್ಟ್ ಅಪ್ ಗಳು ಸ್ಕೇಲ್ ಅಪ್ ಸ್ಥಾನಕ್ಕೆ ಬಡ್ತಿ ಹೊಂದಬಹುದಾಗಿದೆ.