Asianet Suvarna News Asianet Suvarna News

Personal Finance: ಮಹಿಳೆ ಭವಿಷ್ಯ ಸುರಕ್ಷಿತವಾಗಿರಬೇಕೆಂದ್ರೆ ಈ ವಿಮೆ ಬೆಸ್ಟ್

ಉಳಿತಾಯ ಮಾಡೋದು ಪ್ರತಿಯೊಬ್ಬರಿಗೂ ಮುಖ್ಯ. ಸಣ್ಣ ವಯಸ್ಸಿನಲ್ಲಿಯೇ ವಿಮೆ ಖರೀದಿ ಮಾಡಿದ್ರೆ ಭವಿಷ್ಯದ ಬಗ್ಗೆ ಚಿಂತೆ ಕಡಿಮೆಯಾಗುತ್ತದೆ. ಕೆಲಸ, ಮದುವೆ, ಮಕ್ಕಳ ಜಂಜಾಟದಲ್ಲಿ ಬೀಳುವ ಮಹಿಳೆಯರು ತಮ್ಮ ಆರ್ಥಿಕ ಸುರಕ್ಷತೆ ಬಗ್ಗೆ ಅವಶ್ಯವಾಗಿ ಆಲೋಚನೆ ಮಾಡ್ಬೇಕು.  
 

Women Can Secure Future Through Insurance Post Office Also Gives This Facility
Author
First Published Jun 1, 2023, 2:41 PM IST

ಕೈನಲ್ಲಿ ಎಷ್ಟೇ ಹಣವಿದ್ರೂ ಸಾಲೋದಿಲ್ಲ ಎನ್ನುವ ಸ್ಥಿತಿ ಈಗಿದೆ. ಜವಾಬ್ದಾರಿಗಳು ಹೆಚ್ಚಾಗ್ತಿದ್ದಂತೆ ಖರ್ಚು ಹೆಚ್ಚಾಗುತ್ತದೆ. ಹಣ ಹೊಳೆಯಂತೆ ಹರಿದು ಹೋಗ್ತಿದ್ದರೆ ಚಿಂತೆಯಾಗೋದು ಸಹಜ. ಹೇಗಪ್ಪ ಮನೆ ನಿಭಾಯಿಸೋದು ಎನ್ನುವ ಚಿಂತೆಗೆ ಮಹಿಳೆಯರು ಬೀಳ್ತಾರೆ. ಮುಂದೆ ಕುಟುಂಬದ ಭವಿಷ್ಯವನ್ನು ಸುರಕ್ಷಿತವಾಗಿರಿಸಲು ಬಯಸುವ ಮಹಿಳೆಯರು ವಿಮೆ ಆಯ್ಕೆ ಮಾಡಿಕೊಳ್ಳುವುದು ಅತ್ಯುತ್ತಮ. ವಿಮಾ ಪಾಲಿಸಿ ನಿಮ್ಮ ಹಿತಾಸಕ್ತಿಗಳನ್ನು ರಕ್ಷಿಸುವುದಲ್ಲದೆ, ನಿಮ್ಮನ್ನು ಆರ್ಥಿಕವಾಗಿ ಸದೃಢಗೊಳಿಸುತ್ತದೆ.  

ಟರ್ಮ್ ಪ್ಲಾನ್ (Term Plan) ಕಡಿಮೆ ಪ್ರೀಮಿಯಂಗೆ ಹೆಚ್ಚಿನ ಕವರ್ ನೀಡುತ್ತದೆ. ಯೋಜನೆಯ ಅವಧಿಯಲ್ಲಿ ಪಾಲಿಸಿದಾರ ಮರಣ ಹೊಂದಿದ್ರೆ  ಸಂಪೂರ್ಣ ಕವರ್ ಪ್ರಯೋಜನ ಕುಟುಂಬಕ್ಕೆ ಲಭ್ಯವಿದೆ. ಈಗ ಅನೇಕ ವಿಮಾ (Insurance) ಕಂಪನಿಗಳು ತಲೆ ಎತ್ತಿವೆ. ಆದ್ರೆ ಜನರು ಸುರಕ್ಷಿತ ವಿಮೆಯನ್ನು ಹೆಚ್ಚು ಇಷ್ಟಪಡ್ತಾರೆ. ನೀವೂ ಸುರಕ್ಷಿತ ವಿಮೆ ಹುಡುಕಾಟದಲ್ಲಿದ್ರೆ ಅಂಚೆ ಕಚೇರಿ (Post Office) ಯ ವಿಮೆಯ ಲಾಭ ಪಡೆಯಬಹುದು. ನಾವಿಂದು ಅಂಚೆ ಕಚೇರಿಯ ಗ್ರಾಮ ಸುಮಂಗಲ್ ಎಂದು ಕರೆಯಲ್ಪಡುವ ಗ್ರಾಮೀಣ ಅಂಚೆ ಜೀವ ವಿಮಾ ಯೋಜನೆಯ ಬಗ್ಗೆ ಮಾಹಿತಿ ನೀಡ್ತೇವೆ. 

Personal Finance: ಯಾವುದೇ ಕೆಲಸವಿಲ್ಲವೆಂದ್ರೂ ಕ್ರೆಡಿಟ್ ಕಾರ್ಡ್ ಪಡೆಯೋದು ಹೇಗೆ?

ಗ್ರಾಮ ಸುಮಂಗಲ್ ವಿಮಾ ಯೋಜನೆ : ಅಂಚೆ ಕಚೇರಿ ಕಾಲ ಕಾಲಕ್ಕೆ ಜನರಿಗೆ ಅನುಕೂಲವಾಗುವ ಯೋಜನೆಗಳನ್ನು ಜಾರಿಗೆ ತರುತ್ತದೆ. ಅನೇಕ ಮಹಿಳೆಯರು ಅಂಚೆ ಕಚೇರಿಯಲ್ಲಿ ಉಳಿತಾಯ ಖಾತೆ ತೆರೆಯುತ್ತಾರೆ. ಅಂಚೆ ಕಚೇರಿಯಲ್ಲೂ ವಿಮಾ ಸೌಲಭ್ಯವಿದೆ ಎಂಬುದು ಕೆಲವರಿಗೆ ತಿಳಿದಿಲ್ಲ. ಅಂಚೆ ಕಚೇರಿಯಲ್ಲಿ ಗ್ರಾಮೀಣ ಪ್ರದೇಶದ ಜನರು ಮಾತ್ರ ಗ್ರಾಮ ಸುಮಂಗಲ್ ಯೋಜನೆಯಲ್ಲಿ ಹೂಡಿಕೆ ಮಾಡಬಹುದು. ಇದರಲ್ಲಿ ಮಹಿಳೆಯರೂ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಸಮಾಜದ ದುರ್ಬಲ ವರ್ಗದವರೂ ಈ ಯೋಜನೆಯಲ್ಲಿ ಹೂಡಿಕೆ ಮಾಡಬಹುದು. ಈ ಯೋಜನೆಯ ವಿಶೇಷವೆಂದರೆ ನಿಮ್ಮ ಹಣವು ಇದರಲ್ಲಿ ಸಂಪೂರ್ಣವಾಗಿ ಸುರಕ್ಷಿತವಾಗಿರುತ್ತದೆ. 

ಗ್ರಾಮ ಸುಮಂಗಲ್ ಯೋಜನೆಯು ಹಣವನ್ನು ಹಿಂತಿರುಗಿಸುವ ಯೋಜನೆಯಾಗಿದೆ. ಇದರಲ್ಲಿ  ಕಾಲಕಾಲಕ್ಕೆ ಆದಾಯವನ್ನು ಪಡೆಯಬಹುದು. ಆಗಾಗ ಹಣದ ಅಗತ್ಯವಿರುತ್ತದೆ ಎನ್ನುವ ಮಹಿಳೆಯರು ಇದ್ರಲ್ಲಿ ಹೂಡಿಕೆ ಮಾಡಬಹುದು. ಪಾಲಿಸಿದಾರನು ಪಾಲಿಸಿಯ ಮುಕ್ತಾಯದ ಮೊದಲು ಮರಣಹೊಂದಿದರೆ, ನಾಮಿನಿಯು ವಿಮಾ ಮೊತ್ತದ ಪ್ರಯೋಜನವನ್ನು ಪಡೆಯುತ್ತಾನೆ. ಈ ಯೋಜನೆಯನ್ನು ನೀವು 19 ರಿಂದ 40 ವರ್ಷ ವಯಸ್ಸಿನವರೆಗೆ ಖರೀದಿಸಬಹುದು. ಈ ಯೋಜನೆಯಲ್ಲಿ ನೀವು 15ರಿಂದ 20 ವರ್ಷಗಳ ಕಾಲ ಹೂಡಿಕೆ ಮಾಡಬಹುದಾಗಿದೆ.

Personal Finance: ಇಎಂಐ ಹೊರೆ ಕಡಿಮೆ ಮಾಡೋದು ಚಾಲಾಕಿತನ

ಹೂಡಿಕೆ ಮತ್ತು ಆದಾಯ ಎಷ್ಟು? : ಪ್ರತಿ ಹೂಡಿಕೆದಾರ 10 ವರ್ಷಗಳ ಗರಿಷ್ಠ ವಿಮಾ ಮೊತ್ತವನ್ನು ಪಡೆಯಬೇಕು. ನೀವು 15 ವರ್ಷಗಳವರೆಗೆ ಪಾಲಿಸಿಯನ್ನು ಖರೀದಿಸಿದರೆ, ನೀವು 6 ವರ್ಷ, 9 ವರ್ಷ ಮತ್ತು 12 ವರ್ಷಗಳಲ್ಲಿ ಪಾಲಿಸಿಯ ಶೇಕಡಾ 20ರಷ್ಟು ಹಣವನ್ನು ಮರಳಿ ಪಡೆಯಬಹುದು. ಉಳಿದ ಶೇಕಡಾ 40ರಷ್ಟು ಮೊತ್ತವನ್ನು ಪಾಲಿಸಿ ಮುಗಿದ ಮೇಲೆ ನೀಡಲಾಗುತ್ತದೆ.  ನೀವು 20 ವರ್ಷಗಳ  ಪಾಲಿಸಿಯನ್ನು ಖರೀದಿಸಿದ್ದರೆ, ನೀವು 8 ನೇ ವರ್ಷ, 12 ನೇ ವರ್ಷ ಮತ್ತು 16 ನೇ ವರ್ಷದಲ್ಲಿ ಶೇಕಡಾ 20ರಷ್ಟು ಹಣವನ್ನು ಪಡೆಯುತ್ತೀರಿ. ಅವಧಿ ಮುಕ್ತಾಯದ 20 ನೇ ವರ್ಷದಲ್ಲಿ ಉಳಿದ ಶೇಕಡಾ 40ರಷ್ಟು ಮೊತ್ತ ನಿಮ್ಮ ಕೈ ಸೇರುತ್ತದೆ. ಉದಾಹರಣೆಗೆ, ನೀವು ಈ ಯೋಜನೆಯನ್ನು 25 ನೇ ವಯಸ್ಸಿನಲ್ಲಿ ಖರೀದಿಸಿದರೆ ಮತ್ತು ನಿಮ್ಮ ವಿಮಾ ಮೊತ್ತವು 1 ಲಕ್ಷ ರೂಪಾಯಿ ಆಗಿದ್ದರೆ ನೀವು 20 ವರ್ಷಗಳವರೆಗೆ ಪ್ರತಿ ತಿಂಗಳು 2,853 ರೂಪಾಯಿಗಳನ್ನು ಹೂಡಿಕೆ ಮಾಡಬೇಕಾಗುತ್ತದೆ. ಅಂದರೆ ಪ್ರತಿದಿನ 95 ರೂಪಾಯಿಗಳನ್ನು ಹೂಡಿಕೆ ಮಾಡುವ ಮೂಲಕ ನೀವು ಮೆಚ್ಯೂರಿಟಿಯಲ್ಲಿ ಸುಮಾರು 14 ಲಕ್ಷ ರೂಪಾಯಿಗಳ ಲಾಭವನ್ನು ಪಡೆಯುತ್ತೀರಿ. 
 

Follow Us:
Download App:
  • android
  • ios