Personal Finance: ಇಎಂಐ ಹೊರೆ ಕಡಿಮೆ ಮಾಡೋದು ಚಾಲಾಕಿತನ

ಇಎಂಐ ಸೌಲಭ್ಯವಿದೆ ಎಂದಾಗ ವಸ್ತುಗಳ ಖರೀದಿ ಹೆಚ್ಚಾಗುತ್ತದೆ. ಕೊನೆಯಲ್ಲಿ ಇದೇ ಭಾರವಾಗಲು ಶುರುವಾಗುತ್ತದೆ. ಮನೆಯಿಂದ ಹಿಡಿದು ಸಣ್ಣ ವಸ್ತುಗಳ ಇಎಂಐ ಪಾವತಿ ಕೂಡ ತಿಂಗಳ ಆರಂಭದಲ್ಲಿಯೇ ಕೈ ಖಾಲಿ ಮಾಡುತ್ತದೆ. ಇದ್ರಿಂದ ತಪ್ಪಿಸಿಕೊಳ್ಳಬೇಕೆಂದ್ರೆ ಕೆಲ ಪ್ಲಾನ್ ಮಾಡಿ.
 

How To Get Rid Of Emi Home Loan Personal Loan

ಟಿವಿ, ಫ್ರಿಜ್, ವಾಷಿಂಗ್ ಮಷಿನ್ ಮಾತ್ರವಲ್ಲ ಸಣ್ಣಪುಟ್ಟ ವಸ್ತುಗಳು ಕೂಡ ಈಗ ಇಎಂಐನಲ್ಲಿ ಲಭ್ಯವಿದೆ. ಆನ್ಲೈನ್ ಹಾಗೂ ಆಫ್ಲೈನ್ ಎರಡರಲ್ಲೂ ನೀವು ಇಎಂಐ ಆಯ್ಕೆಯನ್ನು ತೆಗೆದುಕೊಂಡು ವಸ್ತುಗಳನ್ನು ಖರೀದಿ ಮಾಡ್ಬಹುದು. ಅಗತ್ಯವಿರುವ ವಸ್ತುಗಳ ಖರೀದಿ ವೇಳೆ ಹಣ ಕೈನಲ್ಲಿಲ್ಲ ಎಂದಾಗ ಜನರು ಇಎಂಐ ಸೌಲಭ್ಯಕ್ಕೆ ಮೊರೆ ಹೋಗ್ತಾರೆ. ಮತ್ತೆ ಕೆಲವರಿಗೆ ಒಂದೇ ಬಾರಿ ಅಷ್ಟು ಹಣವನ್ನು ನೀಡುವ ಮನಸ್ಸಿರೋದಿಲ್ಲ. ತುರ್ತು ಪರಿಸ್ಥಿತಿಗೆ ಹಣ ಬೇಕು ಎನ್ನುವ ಕಾರಣಕ್ಕೆ ಜನರು ಇಎಂಐ ಆಯ್ಕೆ ಮಾಡಿಕೊಳ್ತಾರೆ. ಅನಗತ್ಯ ವಸ್ತುಗಳು ನಮ್ಮನ್ನು ಸೆಳೆಯುತ್ತವೆ. ಆಗ ನಮ್ಮ ಆಯ್ಕೆ ಮಾನಸಿಕ ಕಂತುಗಳಾಗಿರುತ್ತವೆ. ವಸ್ತುಗಳನ್ನು ಖರೀದಿ ಮಾಡುವ ವೇಳೆ ಇದ್ದ ಇಎಂಐ ಉತ್ಸಾಹ ತಿಂಗಳ ಆರಂಭದಲ್ಲಿ ಇರೋದಿಲ್ಲ. ಇಎಂಐಗೆ ಹಣ ಹೊಂದಿಸೋದೇ ಕಷ್ಟವಾಗುತ್ತದೆ. ಕೆಲವು ವಿಶೇಷ ವಿಧಾನಗಳನ್ನು ಅಳವಡಿಸಿಕೊಳ್ಳುವ ಮೂಲಕ ನಿಮ್ಮ ತಲೆಯಿಂದ ಇಎಂಐ ಹೊರೆಯನ್ನು ತೆಗೆಯಬಹುದು. 

ಮಾಸಿಕ ಕಂತಿನ ಹೊರೆ ಹೀಗೆ ಕಡಿಮೆ ಮಾಡಿ : 

ಇಎಂಐ (EMI) ಮೊತ್ತ ಹೆಚ್ಚಿಸಿ : ದೊಡ್ಡ ವಸ್ತು ಅಥವಾ ಆಸ್ತಿ ಖರೀದಿ ಮಾಡಿದಾಗ ದೀರ್ಘಕಾಲದ ಅವಧಿಗೆ ನಾವು ಇಎಂಐ ಕಟ್ಟಬೇಕು. ಸಣ್ಣ ವಸ್ತುಗಳಾದ್ರೆ ಕನಿಷ್ಠ ಒಂದು ವರ್ಷದವರಗೆ ಪಾವತಿ ಮಾಡಬೇಕಾಗುತ್ತದೆ. ನಮ್ಮ ಆರ್ಥಿಕ ಸ್ಥಿತಿ ಸುಧಾರಿಸಿದ್ರೂ ಇಎಂಐ ಮೊತ್ತದಲ್ಲಿ ಬದಲಾವಣೆ ಮಾಡೋದಿಲ್ಲ. ಸಂಬಳ (salary) ಹೆಚ್ಚಾಗಾದ ಅಥವಾ ಬೋನಸ್ ಸಿಕ್ಕಾಗ ನೀವು ಇಎಂಐ ಮೊತ್ತವನ್ನು ಹೆಚ್ಚಿಸಬೇಕು. ಆಗ ಸಮಯಕ್ಕೆ ಮುಂಚಿತವಾಗಿ ಮಾಸಿಕ ಕಂತಿನ ಹೊರೆಯಿಂದ ಮುಕ್ತಿ ಪಡೆಯಬಹುದು.

MAKE MONEY : ಆರ್ಡರ್ ಹಾಕೋದು ಮಾತ್ರವಲ್ಲ ಹಣ ಸಂಪಾದನೆಗೂ ಅಮೆಜಾನ್ ಬಳಸಿ

ಸಾಲದ ಪೂರ್ವ ಪಾವತಿ (Pre payment of Loan) : ಯಾವುದೇ ಯೋಜನೆಯಿಂದ ಹೆಚ್ಚುವರಿ ಆದಾಯ (Income) ವನ್ನು ಪಡೆದರೆ ಈ ಮೊತ್ತವನ್ನು ನೀವು ಸಾಲದ ಪೂರ್ವಪಾವತಿಗಾಗಿ ಬಳಸಬಹುದು. ಇದು ಸಾಲದ ಅವಧಿಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಹೋಮ್ ಲೋನ್‌ನಂತಹ ದೊಡ್ಡ ಲೋನ್‌ಗಳ ಸಂದರ್ಭದಲ್ಲಿ, ಆರಂಭಿಕ ವರ್ಷಗಳಲ್ಲಿ ಪೂರ್ವಪಾವತಿಯು ನಿಮ್ಮ ಲೋನ್ ಅವಧಿಯನ್ನು ಗಮನಾರ್ಹವಾಗಿ ಕಡಿಮೆ ಮಾಡುತ್ತದೆ. ಸಾಲದ ಹಣವನ್ನು ಪೂರ್ವಪಾವತಿ ಮಾಡುವ ಮೂಲಕ  ನೀವು ಆ ಸಾಲದ ಅವಧಿಯನ್ನು ಕಡಿಮೆ ಮಾಡಬಹುದು. ಇದರಿಂದ ಇಎಂಐ ಮೊತ್ತ ಕಡಿಮೆಯಾಗುತ್ತದೆ. 

ಇಎಂಐ ಆಯ್ಕೆ ತಪ್ಪಿಸಿ (EMI Selection) : ಸಣ್ಣಪುಟ್ಟ ವಸ್ತುಗಳನ್ನು ಖರೀದಿಸುವ ವೇಳೆ ನಿಮ್ಮ ಬಳಿ ಹಣವಿದ್ರೆ ಪೂರ್ಣ ಹಣ ನೀಡಿ ವಸ್ತುಗಳನ್ನು ಖರೀದಿ ಮಾಡುವುದು ಒಳ್ಳೆಯದು. ಇಎಂಐ ಪಾವತಿ ನಿಮಗೆ ಸುಲಭವೆನ್ನಿಸಿದ್ರೂ ವಸ್ತುವಿನ ಬೆಲೆಗಿಂತ ಹೆಚ್ಚು ಖರ್ಚಾಗುವ ಸಾಧ್ಯತೆಯಿರುತ್ತದೆ. ಉಚಿತ ಇಎಂಐ ಸೌಲಭ್ಯವಿಲ್ಲದೆ ಹೋದ್ರೆ ನೀವು ಬಡ್ಡಿ ಪಾವತಿಸಬೇಕಾಗುತ್ತದೆ. ಇದ್ರಿಂದ ಅನವಶ್ಯಕ ಖರ್ಚು ಹೆಚ್ಚಾಗುತ್ತದೆ.

Personal Finance : ಚೆಕ್‌ನಲ್ಲಿ ಹಣ ಪಾವತಿಸುವ ಮುನ್ನ ಇವೆಲ್ಲ ನೆನಪಿರಲಿ!

ಸಾಲದ ರೀಫೈನಾನ್ಸಿಂಗ್ (Refinancing) : ಹೆಚ್ಚಿನ ಬಡ್ಡಿ ದರದಲ್ಲಿ ಸಾಲ ಪಡೆದಿದ್ದು, ಉಳಿದ ಬ್ಯಾಂಕ್ ಬಡ್ಡಿದರ ಕಡಿಮೆ ಇದೆ ಎಂಬ ಅರಿವು ನಿಮಗಾದ್ರೆ ನೀವು ಸಾಲವನ್ನು ಬೇರೆ ಬ್ಯಾಂಕಿಗೆ ವರ್ಗಾಯಿಸಬಹುದು. ನಿಮ್ಮ ಕ್ರೆಡಿಟ್ ಸ್ಕೋರ್ ಉತ್ತಮವಾಗಿರಬೇಕು. ಹಿಂದಿನ ಸಾಲ ಮತ್ತು ಕ್ರೆಡಿಟ್ ಕಾರ್ಡ್ ಬಿಲ್‌ಗಳನ್ನು ನೀವು ಸಮಯಕ್ಕೆ ಸರಿಯಾಗಿ ಪಾವತಿಸಿದ್ದರೆ ಯಾವುದೇ ಸಮಸ್ಯೆ ಆಗುವುದಿಲ್ಲ. ದೀರ್ಘಕಾಲ ಸಾಲದ ಮೇಲಿನ ಬಡ್ಡಿ ಕಡಿಮೆಯಾದ್ರೆ ನೀವು ಹಣ ಉಳಿಸಬಹುದು. ಈ ಹಣದಲ್ಲಿ ನೀವು ಇನ್ನೊಂದು ಕಡೆ ಹೂಡಿಕೆ ಮಾಡಬಹುದು.

ಮರುಪಾವತಿ ಗುರಿ (Repayment Goal): ಸಮಯಕ್ಕೆ ಮುಂಚಿತವಾಗಿ ಸಾಲವನ್ನು ಮರುಪಾವತಿ ಮಾಡುವ ಗುರಿಯನ್ನು ನೀವು ಹೊಂದಿರಬೇಕು. 20 ವರ್ಷಗಳವರೆಗೆ ಸಾಲವನ್ನು ಪಡೆದಿದ್ದರೂ ಸಾಲದ ಮೊತ್ತವನ್ನು ನೀವು ಬೇಗ ತೀರಿಸುವ ಗುರಿ ಇಟ್ಟುಕೊಳ್ಳಿ. ಮೇಲಿನ ಸ್ಮಾರ್ಟ್ ವಿಧಾನವನ್ನು ಅಳವಡಿಸಿಕೊಳ್ಳುವ ಮೂಲಕ ನಿಗದಿತ ಸಮಯಕ್ಕಿಂತ ಮುಂಚಿತವಾಗಿ ಸಾಲ ಪಾವತಿಸಿ.  
 

Latest Videos
Follow Us:
Download App:
  • android
  • ios