ಜನರಲ್ ಶಿಫ್ಟ್ ಕೆಲಸ ಬಿಟ್ಟು ಕನಸಿನ ಲೋಕದಲ್ಲಿ ಖುಷಿಯಾಗಿದ್ದಾಳೆ ಈಕೆ
ಕೆಲಸ, ಸಂಬಳದ ಜೊತೆ ನೆಮ್ಮದಿ ಮುಖ್ಯ. ಕೆಲ ಕೆಲಸಗಳು ಎಷ್ಟೇ ಹಣ ನೀಡಿದ್ರೂ ನೆಮ್ಮದಿ ನೀಡಲಾರವು. ಇನ್ನು ಕೆಲವಲ್ಲಿ ಪ್ರಯತ್ನ, ನಿರಂತರ ಹೋರಾಟ, ಕಡಿಮೆ ಆದಾಯವಿದ್ರೂ ಖುಷಿ ಇರುತ್ತೆ. ಅದಕ್ಕೆ ಈಕೆ ಉತ್ತಮ ನಿದರ್ಶನ.
ತಿಂಗಳ ಮೊದಲ ದಿನ ಕೈಗೆ ಸಂಬಳ ಬಂದಾಗ ಅದರ ಖುಷಿಯೇ ಬೇರೆ. ಆದ್ರೆ ಈ ತಿಂಗಳ ಸಂಬಳಕ್ಕಾಗಿ ತಿಂಗಳ ಪೂರ್ತಿ ಕೆಲಸ ಮಾಡಬೇಕು. ಪ್ರತಿ ದಿನ ಒತ್ತಡದ, ಓಟದ ಜೀವನ ನಡೆಯುತ್ತಿರುತ್ತದೆ. ಮನೆಯಲ್ಲಿ ಮಕ್ಕಳಿದ್ರೆ ಕೆಲಸ ಮತ್ತಷ್ಟು. ಮಕ್ಕಳು – ಮನೆಯವರಿಗೆ ಆಹಾರ ನೀಡಿ, ಅಗತ್ಯವಿರುವ ಎಲ್ಲ ಕೆಲಸ ಮಾಡಿ ಕಚೇರಿಗೆ ಹೋದ್ರೆ ಅಲ್ಲಿ ಕೆಲಸ ಮಾಡಿ ವಾಪಸ್ ಬರುವವರೆಗೆ ಸುಸ್ತಾಗಿರುತ್ತದೆ. ಮನೆಗೆ ಬಂದು ಕುಳಿತುಕೊಳ್ಳುವ ಅವಕಾಶ ಮಹಿಳೆಯರಿಗೆ ಇರೋದಿಲ್ಲ. ಮತ್ತೆ ಕೆಲಸ ಶುರು ಮಾಡ್ಬೇಕು. ಇಡೀ ದಿನ ಬಿಡುವಿಲ್ಲದ ಕೆಲಸ ಅವರನು ಸುಸ್ತು ಮಾಡುತ್ತದೆ. ಒಂಭತ್ತರಿಂದ ಐದು ಗಂಟೆ ಕಚೇರಿಯಲ್ಲಿ ಕೆಲಸ ಮಾಡುವ ಮಹಿಳೆಯರಿಗೆ ಮನೆಯಲ್ಲಿರುವ ಗೃಹಿಣಿಯನ್ನು ನೋಡಿದ್ರೆ ಖುಷಿಯಾಗುತ್ತೆ. ಅದೇ ಗೃಹಿಣಿಯರಿಗೆ ಕೆಲಸ ಮಾಡುವ ಮಹಿಳೆ ನೋಡಿದ್ರೆ, ನಾವು ಆ ಜಾಗದಲ್ಲಿದ್ರೆ ಎಂಬ ಭಾವನೆ ಬರುತ್ತೆ. ಅದೇನೇ ಇರಲಿ, ಈ ಮಹಿಳೆ ಕೂಡ ಜನರಲ್ ಶಿಫ್ಟ್ ನಲ್ಲಿ ಕೆಲಸ ಮಾಡಿ ಸುಸ್ತಾಗಿದ್ದಳು. ಈಗ ಆಕೆ ಜೀವನವೇ ಬದಲಾಗಿದೆ. ಮೃಗಾಲಯದಲ್ಲಿ ಪ್ರಾಣಿಗಳ ಮಧ್ಯೆ ಸಂತೋಷದಿಂದ ತನ್ನ ಕೆಲಸ ಮಾಡ್ತಿದ್ದಾಳೆ.
ನಿಮ್ಮಿಷ್ಟದ ಕೆಲಸ, ಸ್ವಂತ ವ್ಯವಹಾರ (Business) ಮಾಡೋದ್ರಲ್ಲಿ ಲಾಭ ಕಡಿಮೆ ಇದ್ರು ನೆಮ್ಮದಿ ಇರುತ್ತದೆ ಎನ್ನುವ ಮಹಿಳೆ ಹೆಸರು ಲಿನ್ಸೆ ಮಾರ್ಟಿನ್ (Lynsey Martin) . ಈಕೆಗೆ 35 ವರ್ಷ. 28 ವರ್ಷದ ಸಂಗಾತಿ ರಿಯಾನ್ ಮತ್ತು 11 ತಿಂಗಳ ಮಗನ ಜೊತೆ ಮೃಗಾಲಯ (Zoo) ದಲ್ಲಿ ಇವರು ವಾಸವಾಗಿದ್ದಾರೆ.
ವ್ಯಾಪಾರವಾಗಿ ಬದಲಾದ ಹವ್ಯಾಸ; ಚೆಂದದ ಉತ್ಪನ್ನ ತಯಾರಿಸಿ ಲಕ್ಷಾಂತರ ಗಳಿಕೆ!
ಲಿನ್ಸೆ ಮಾರ್ಟಿನ್ ಹಾಗೂ ರಿಯಾನ್ ಸ್ವಂತ ಝೂ ಇದು. ನಾಲ್ಕು ವರ್ಷಗಳಿಂದ ಈ ಝೂ ಬಂದಾಗಿತ್ತು. ರಿಯಾನ್ ಗೆ ಝೂನಲ್ಲಿ ಕೆಲಸ ಮಾಡಿದ ಅನುಭವ ಇತ್ತು. 2019ರಲ್ಲಿ ಇಬ್ಬರು ಆನ್ಲೈನ್ ನಲ್ಲಿ ಭೇಟಿಯಾಗಿದ್ದರು. 2000ರಲ್ಲಿ ಇಬ್ಬರು ಒಟ್ಟಿಗೆ ವಾಸ ಶುರು ಮಾಡಿದ್ದರು. ಆಗಿನಿಂದಲೂ ರಿಯಾನ್, ಸ್ವಂತ ಝೂ ಕನಸು ಕಂಡಿದ್ದ. ಝೂ ಬಗ್ಗೆ ಸಾಕಷ್ಟು ಸಂಶೋಧನೆ ನಡೆಸುತ್ತಿದ್ದ. 2021ರಲ್ಲಿ ಒಂದು ಹಳೆ ಝೂ ಮಾರಾಟಕ್ಕಿರುವ ಬಗ್ಗೆ ಜಾಹೀರಾತು ಕಾಣಿಸಿತ್ತು. ಇಬ್ಬರು ಅದರ ಖರೀದಿಗೆ ಮುಂದಾದ್ರು. ಲಿನ್ಸೆಗೆ ತಂದೆಯಿಂದ ಬಂದ ಹಣ ಹಾಗೂ ರಿಯಾನ್ ಉಳಿತಾಯದ ಹಣ ಸೇರಿಸಿ ಝೂವನ್ನು ಸರಿಪಡಿಸಿದ್ರು. ರಿಯಾನ್ ಕೆಲಸ ಬಿಟ್ಟು, ಝೂ ಕೆಲಸದಲ್ಲಿ ನಿರತನಾಗಿದ್ದ. ಝೂನಲ್ಲಿರುವ ಮನೆಯಲ್ಲಿಯೇ ವಾಸ ಶುರು ಮಾಡಿದ್ದರು. ಆದ್ರೆ ಅಲ್ಲಿ ಒಂದು ಪ್ರಾಣಿ ಕೂಡ ಇರಲಿಲ್ಲ.
ರಿಯಾನ್, ಬೇರೆ ಝೂಗಳಿಗೆ ಹೋಗಿ ಪ್ರಾಣಿಗಳನ್ನು ದಾನಕ್ಕೆ ನೀಡುವಂತೆ ಕೇಳುತ್ತಿದ್ದ. ಆರಂಭದಲ್ಲಿ ನೀರುನಾಯಿಗಳು, ಮೇಕೆಗಳು, ಮುಂಗುಸಿ ಮತ್ತು ಕೆಲವು ಹಾವು ಸಿಕ್ಕಿದ್ದವು. ಝೂಗೆ ಪ್ರಾಣಿ ಬರ್ತಿದ್ದಂತೆ ಲಿನ್ಸೆ ಕೆಲಸ ಬಿಟ್ಟಿದ್ದಳು. ಝೂ ಅಭಿವೃದ್ಧಿ ಕೆಲಸ ನೋಡಿಕೊಳ್ಳಲು ಶುರು ಮಾಡಿದ್ದಳು. ಮೃಗಾಲಯವು ಫೆಬ್ರವರಿ 2022 ರಲ್ಲಿ ಸಾರ್ವಜನಿಕರಿಗೆ ತೆರೆಯಿತು. ಈಗ ಈ ಮೃಗಾಲಯದಲ್ಲಿ ನಲವತ್ತು ಮಂದಿ ಕೆಲಸ ಮಾಡ್ತಿದ್ದಾರೆ. ಬೇರೆ ಬೇರೆ ಪ್ರಾಣಿಗಳು ಝೂನಲ್ಲಿವೆ. ಮಗನ ಜೊತೆ ಝೂನಲ್ಲಿ ಓಡಾಡುವ ಖುಷಿಯೇ ಬೇರೆ ಎನ್ನುತ್ತಾಳೆ ಲಿನ್ಸೆ.
ಭಾರತದ ನಂಬರ್ ಒನ್ ಇಂಡಿಗೋ ವಿಶ್ವದ ಲೀಸ್ಟಲ್ಲಿ ಎಲ್ಲಿದೆ?
ಈಗ ನಾಲ್ಕು ವರ್ಷದ ಹಿಂದೆ ನನಗೆ ಸ್ವಂತ ಝೂನಲ್ಲಿ ಕೆಲಸ ಮಾಡ್ತಿಯಾ ಅಂತಾ ಯಾರಾದ್ರೂ ಕೇಳಿದ್ರೆ, ನಿಮಗೆ ಹುಚ್ಚಾ ಎಂದು ನಾನು ಪ್ರಶ್ನೆ ಮಾಡುತ್ತಿದ್ದೆ. ನನಗೆ ಝೂನಲ್ಲಿ ವಾಸಮಾಡುತ್ತೇನೆ ಎನ್ನುವ ಕಲ್ಪನೆಯೂ ಇರಲಿಲ್ಲ. ಆದ್ರೆ ಪ್ರಾಣಿಗಳ ಮಧ್ಯೆ ಇರೋದು, ಅವರ ಆರೈಕೆ ಮಾಡೋದು ಸಂತೋಷ, ನೆಮ್ಮದಿ ನೀಡಿದೆ ಎನ್ನುತ್ತಾಳೆ ಲಿನ್ಸೆ.