2,000ರೂ. ನೋಟು ಹಿಂತೆಗೆತದ ಪರಿಣಾಮ ಠೇವಣಿ, ಬಡ್ಡಿದರಕ್ಕೆ ಹಿತಕಾರಿ: ಎಸ್ ಬಿಐ ಅಧ್ಯಯನ ವರದಿ

2,000ರೂ.ನೋಟು ಹಿಂತೆಗೆತದ ಬಗ್ಗೆ ಈಗಾಗಲೇ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ. ಈ ನಡುವೆ ಈ ನಿರ್ಧಾರದಿಂದ ಠೇವಣಿ, ಬಡ್ಡಿದರದ ಮೇಲೆ ಅನುಕೂಲಕರ ಪರಿಣಾಮ ಉಂಟಾಗಲಿದೆ ಎಂದು ಎಸ್ ಬಿಐ ವರದಿ ತಿಳಿಸಿದೆ. ಹಾಗಾದ್ರೆ ಎಸ್ ಬಿಐ ವರದಿ 2,000ರೂ. ನೋಟು ಹಿಂತೆಗೆತದ ಬಗ್ಗೆ ಏನು ಹೇಳಿದೆ? ಇಲ್ಲಿದೆ ಮಾಹಿತಿ.

 

Withdrawal of Rs 2000 to have favourable impact on deposits interest rates SBI study anu

ನವದೆಹಲಿ (ಮೇ 24): ಭಾರತೀಯ ರಿಸರ್ವ್ ಬ್ಯಾಂಕ್ (ಆರ್ ಬಿಐ) ತನ್ನ ಕರೆನ್ಸಿ ನಿರ್ವಹಣೆ ಭಾಗವಾಗಿ 2000ರೂ. ನೋಟುಗಳನ್ನು ಹಿಂತೆಗೆದುಕೊಳ್ಳುವ ನಿರ್ಧಾರವನ್ನು ಕಳೆದ ಶುಕ್ರವಾರ ಪ್ರಕಟಿಸಿತ್ತು. ಆದರೆ, ಅದರ ಲೀಗಲ್ ಟೆಂಡರ್ ಮುಂದುವರಿಯಲಿದೆ. ಹೀಗಾಗಿ ನೀವು 2,000ರೂ.ನೋಟು ಬಳಸಿ ಶಾಪಿಂಗ್ ಮಾಡಬಹುದು, ಆರ್ಥಿಕ ವಹಿವಾಟಿಗೂ ಇದನ್ನು ಬಳಕೆ ಮಾಡಬಹುದು. ಆದರೆ. ಸೆಪ್ಟೆಂಬರ್ 30ರೊಳಗೆ ಬ್ಯಾಂಕ್ ನಲ್ಲಿ ಠೇವಣಿ ಇಡಬೇಕು ಅಥವಾ ವಿನಿಮಯ ಮಾಡಿಕೊಳ್ಳಬೇಕು. ಅಕ್ಟೋಬರ್ 1 ರಿಂದ 2,000 ರೂಪಾಯಿ ನೋಟುಗಳ ಚಲಾವಣೆ ಸ್ಥಗಿತಗೊಳ್ಳಲಿದೆ. 2000ರೂ. ನೋಟು ಹಿಂತೆಗೆತದ ಕುರಿತು ಈಗಾಗಲೇ ಸಾಕಷ್ಟು ಚರ್ಚೆಗಳು ನಡೆದಿವೆ. ಈ ನಡುವೆ ಮಂಗಳವಾರ ಎಸ್ ಬಿಐ ಬ್ಯಾಂಕ್ ತನ್ನ ಅಧ್ಯಯನ ವರದಿ ಪ್ರಕಟಿಸಿದ್ದು, ಅದರ ಅನ್ವಯ 2,000 ರೂಪಾಯಿ ನೋಟುಗಳ ಹಿಂತೆಗೆತ ಲಿಕ್ವಿಡಿಟಿ, ಬ್ಯಾಂಕ್ ಠೇವಣಿಗಳು ಹಾಗೂ ಬಡ್ಡಿದರದ ಮೇಲೆ ಅನುಕೂಲಕರ ಪರಿಣಾಮ ಬೀರಲಿದೆ. 2000ರೂ. ನೋಟು ವಿನಿಮಯಕ್ಕೆ 131 ದಿನದ ಸಮಯಾವಧಿ ನೀಡಲಾಗಿದ್ದು, ಮಂಗಳವಾರದಿಂದ ಈ ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ. ಕೆಲವು ಬ್ಯಾಂಕ್ ಗಳಲ್ಲಿ ಈಗಾಗಲೇ ಈ ಸಂಬಂಧ ಸಣ್ಣ ಕ್ಯೂ ಹಾಗೂ ಕೆಲವು ಗೊಂದಲಗಳು ಹುಟ್ಟಿಕೊಂಡಿವೆ. ಪ್ಯಾನ್ ಅಥವಾ ಆಧಾರ್ ಕಾರ್ಡ್ ಹಾಗೂ ಅಧಿಕೃತ ಅರ್ಜಿಗಳು ಸೇರಿದಂತೆ ಅಧಿಕೃತ ಅರ್ಹ ಗುರುತು ಚೀಟಿಗಳ ಅಗತ್ಯದ ಬಗ್ಗೆ ಗೊಂದಲ ಹುಟ್ಟಿಕೊಂಡಿವೆ.

2016ರ ನವೆಂಬರ್ ನಲ್ಲಿ ಕೇಂದ್ರ ಸರ್ಕಾರ 500ರೂ. ಹಾಗೂ 1000ರೂ. ಹಳೆಯ ನೋಟುಗಳನ್ನು ಬ್ಯಾನ್ ಮಾಡುವ ನಿರ್ಧಾರವನ್ನು ರಾತ್ರಿ-ಬೆಳಗಾಗುವುದರೊಳಗೆ ಪ್ರಕಟಿಸಿತ್ತು. ಇದು ಚಲಾವಣೆಯಲ್ಲಿರುವ ಶೇ.86ರಷ್ಟು ಕರೆನ್ಸಿ ನೋಟುಗಳನ್ನು ಒಳಗೊಂಡಿತ್ತು. ಇದರಿಂದ ದೇಶಾದ್ಯಂತ ಬ್ಯಾಂಕ್ ಗಳ ಹೊರಗೆ ಪ್ರತಿದಿನ ದೊಡ್ಡ ಸರದಿ ಸಾಲಿನಲ್ಲಿ ಜನರು ಜಮಾಯಿಸಿದ್ದರು. ಇದರಿಂದ ವೃದ್ಧರು, ಅನಾರೋಗ್ಯ ಪೀಡಿತರಿಗೆ ಸಾಕಷ್ಟು ಸಮಸ್ಯೆಗಳು ಕೂಡ ಎದುರಾಗಿದ್ದವು. ಆದರೆ, ಈ ಬಾರಿ ಇಂಥ ಯಾವುದೇ ಸಮಸ್ಯೆ ಸೃಷ್ಟಿಯಾಗೋದಿಲ್ಲ.

2000 ರೂ. ನೋಟು ಬದಲಾವಣೆಗೆ ಬ್ಯಾಂಕ್‌ಗಳಲ್ಲಿ ಐಡಿ ಕಾರ್ಡ್‌, ಗುರುತು ಚೀಟಿ ಕಡ್ಡಾಯ: ಕೆಲವೆಡೆ ನೋಟು ಬದಲಾವಣೆಗೆ ಅವಕಾಶವಿಲ್ಲ

ಎಸ್ ಬಿಐ ಸಂಶೋಧನಾ ವರದಿ 'ಇಕೋ ರ್ಯಾಪ್ ' ಅನ್ವಯ 2,000ರೂ. ರೂಪದಲ್ಲಿ ಸುಮಾರು 3.6ಲಕ್ಷ ಕೋಟಿ ರೂ. ಮೊತ್ತದ ಚಲಾವಣೆಯಲ್ಲಿರುವ ಹಣ ಬ್ಯಾಂಕಿಂಗ್ ವ್ಯವಸ್ಥೆಗೆ ಹಿಂತಿರುಗಲಿದೆ. 'ವಿನಿಮಯ/ಠೇವಣಿ ಪ್ರಕ್ರಿಯೆಯನ್ನು ಡಿಕೋಡ್ ಮಾಡಿದಾಗ ಈಗಾಗಲೇ ಬ್ಯಾಂಕ್ ಗಳು ಈ ನೋಟುಗಳನ್ನು ತಮ್ಮ ಕರೆನ್ಸಿ ಚೆಸ್ಟ್ ನಲ್ಲಿ ಹೊಂದಿವೆ. ಹೀಗಾಗಿ ಠೇವಣಿ ಮೇಲಿನ ಪರಿಣಾಮ ಸೀಮಿತವಾಗಿದೆ' ಎಂದು ಈ ವರದಿ ಹೇಳಿದೆ.

ಡಿಜಿಟಲ್ ಪಾವತಿಯಲ್ಲಿ ಮೌಲ್ಯ ಹಾಗೂ ಗಾತ್ರ ಎರಡರ ಆಧಾರದಲ್ಲೂ ಭಾರತ ಹೊಸ ಮೈಲಿಗಲ್ಲು ಸ್ಥಾಪಿಸಿದೆ ಎಂದು ಇಕೋ ರ್ಯಾಪ್ ವರದಿ ಹೇಳಿದೆ. ಪಾವತಿ ಇಕೋಸಿಸ್ಟಂ ಹಾಗೂ ದೊಡ್ಡ ಪ್ರಮಾಣದಲ್ಲಿ ಗ್ರಾಹಕರ ಸ್ವೀಕೃತಿ ಡಿಜಿಟಲ್ ಪಾವತಿ ಯಶಸ್ಸು ಕಾಣಲು ಕಾರಣವಾಯಿತು ಎಂದು ವರದಿ ಹೇಳಿದೆ.

2000 ರೂ. ನೋಟು ಬದಲಾಯಿಸಿಕೊಳ್ಳೋಕೆ ಪೆಟ್ರೋಲ್‌ ಬಂಕ್‌ಗೆ ಮುಗಿಬಿದ್ದ ಜನ: ಚೇಂಜ್‌ ಇಲ್ಲ ಎಂದು ಹೇಳಿ ಸುಸ್ತಾದ ಸಿಬ್ಬಂದಿ

'ಒಟ್ಟು ಡಿಜಿಟಲ್ ಪಾವತಿಗಳನ್ನು ನಾವು ಗಮನಿಸಿದರೆ ನಾಮಿನಲ್ ಜಿಡಿಪಿ ನೋಡಿದರೆ 2016ನೇ ಹಣಕಾಸು ಸಾಲಿನಲ್ಲಿ ಶೇ.668ರಿಂದ ಶೇ.767ಕ್ಕೆ ಏರಿಕೆಯಾಗಿದೆ' ಎಂದು ವರದಿ ತಿಳಿಸಿದೆ. ರಿಟೇಲ್ ಡಿಜಿಟಲ್ ಪಾವತಿಗಳು (ಆರ್ ಟಿಜಿಎಸ್ ಹೊರತುಪಡಿಸಿ) 2016ನೇ ಹಣಕಾಸು ಸಾಲಿನಲ್ಲಿ ಶೇ.129 ಇದ್ದು, 2023ನೇ ಹಣಕಾಸು ಸಾಲಿನಲ್ಲಿ ಶೇ.249ಕ್ಕೆ ಏರಿಕೆಯಾಗಿದೆ ಎಂದು ವರದಿ ತಿಳಿಸಿದೆ. ಇನ್ನು ಯುಪಿಐ ವಹಿವಾಟಿನ ಪ್ರಮಾಣ 2017ನೇ ಹಣಕಾಸು ಸಾಲಿನಲ್ಲಿ 1.8 ಕೋಟಿ ಇದ್ದು, 2023ನೇ ಹಣಕಾಸು ಸಾಲಿನಲ್ಲಿ 8,375 ಕೋಟಿ ರೂ.ಗೆ ಏರಿಕೆಯಾಗಿದೆ. ಇನ್ನು ಯುಪಿಐ ವಹಿವಾಟುಗಳ ಪ್ರಮಾಣ ಕೂಡ ಏರಿಕೆಯಾಗಿದೆ. ಇದೇ ಅವಧಿಯಲ್ಲಿ ಯುಪಿಐ ವಹಿವಾಟುಗಳ ಮೌಲ್ಯ ಕೂಡ ಏರಿಕೆಯಾಗಿದ್ದು, 6,947 ಕೋಟಿ ರೂ.ನಿಂದ 139 ಲಕ್ಷ ಕೋಟಿ ರೂ.ಗೆ ಏರಿಕೆಯಾಗಿದೆ. ಅಂದರೆ 2004 ಪಟ್ಟು ಹೆಚ್ಚಳವಾಗಿದೆ ಎಂದು ವರದಿ ತಿಳಿಸಿದೆ.

 

Latest Videos
Follow Us:
Download App:
  • android
  • ios