ಪೇಟಿಎಂಗೆ ಸೆಡ್ಡು ಹೊಡೆಯಲು ಸಿದ್ಧವಾಯ್ತು ಟ್ರೂಕಾಲರ್‌..!

With Chillr in kitty, Truecaller all set to take on Paytm
Highlights

ಪೇಟಿಎಂಗೆ ಸೆಡ್ಡು ಹೊಡೆಯಲು ಸಿದ್ಧವಾಯ್ತು ಟ್ರೂಕಾಲರ್‌

ಬ್ಯಾಂಕಿಂಗ್‌ ಮತ್ತು ಪೇಮೆಂಟ್‌ ಸೇವಾ ಕ್ಷೇತ್ರಕ್ಕೆ ಲಗ್ಗೆ

ಯುಪಿಐ ಆಧಾರಿತ ಸೇವೆ ಒದಗಿಸಲು ಟ್ರೂ ಕಾಲರ್ ಸಿದ್ದ

ಚಿಲ್ಲರ್ ಅಪ್ಲಿಕೇಶನ್ ಸ್ವಾಧೀನಪಡಿಸಿಕೊಂಡ ಟ್ರೂ ಕಾಲರ್ 
 

ಬೆಂಗಳೂರು(ಜೂ.15): ಕಾಲರ್‌ ಐಡಿ ಅಪ್ಲಿಕೇಶನ್‌ ಟ್ರೂ ಕಾಲರ್‌ ಸ್ಮಾರ್ಟ್‌ ಫೋನ್‌ ಬಳಕೆದಾರರ ಫವರೆಟ್ ಆ್ಯಪ್. ಇದೀಗ ಟ್ರೂ ಕಾಲರ್ ಪೇಮೆಂಟ್‌ ಅಪ್ಲಿಕೇಶನ್‌ ಚಿಲ್ಲರ್‌‌ ಅನ್ನು ಸ್ವಾಧೀನಪಡಿಸಿಕೊಂಡಿರುವುದಾಗಿ ಘೋಷಿಸಿದೆ.

ಇದೇ ವೇಳೆ ಆನ್‌ಲೈನ್‌ ಪೇಮೆಂಟ್‌ನ ಸರ್ವಾಧಿಕಾರಿಯಾದಂತಹ ಪೇಟಿಎಂ ಅನ್ನು ಎದುರಿಸಲು ಸಿದ್ಧವಾಗಿರುವುದಾಗಿ ಟ್ರೂ ಕಾಲರ್‌ ಘೋಷಿಸಿದೆ. ಸದ್ಯದಲ್ಲೇ ಭಾರತದ ಮಾರುಕಟ್ಟೆಯನ್ನು ವಾಟ್ಸ್ಯಾಪ್‌ ಪೇಮೆಂಟ್‌ ಪ್ರವೇಶಿಸಲಿರುವುದರಿಂದ ಟ್ರೂ ಕಾಲರ್‌ ಕೂಡ ಈ ನಿಟ್ಟಿನಲ್ಲಿ ಹೆಜ್ಜೆ ಇರಿಸಿದೆ. ಕಳೆದ ಮಾರ್ಚ್‌ನಲ್ಲಿ ಟ್ರೂ ಕಾಲರ್‌ ಘೋಷಿಸಿದಂತೆ ಆನ್‌ಲೈನ್‌ ಡಿಜಿಟಲ್‌ ಪೇಮೆಂಟ್‌ ಕ್ಷೇತ್ರದಲ್ಲಿ ಚಿಲ್ಲರ್‌ ಅಪ್ಲಿಕೇಷನ್‌ನ್ನು ಸ್ವಾಧೀನಪಡಿಸಿಕೊಂಡಿದೆ. 

ಸ್ವೀಡನ್‌ ಮೂಲದ ಅಪ್ಲಿಕೇಶನ್‌ ಆದ ಟ್ರೂ ಕಾಲರ್‌‌, ಇದೀಗ ತನ್ನಲ್ಲಿ ಯುಪಿಐ ಆಧಾರಿತ ಸೇವೆಗಳನ್ನು ನೀಡಲು ಸಿದ್ಧವಾಗಿದೆ. ಟ್ರೂ ಕಾಲರ್‌ ಪೇ 2.0 ಅಪ್ಲಿಕೇಶನ್‌ನ ಬಿಡುಗಡೆಯೊಂದಿಗೆ ಕಂಪನಿ ಬ್ಯಾಂಕಿಂಗ್‌ ಮತ್ತು ಪೇಮೆಂಟ್‌ಗಳ ಸೌಲಭ್ಯಗಳನ್ನೂ ಸಹ ನೀಡುತ್ತಿದೆ. ಮುಂಬರುವ ದಿನಗಳಲ್ಲಿ ಕ್ರೆಡಿಟ್‌ ಮತ್ತು ಇತರ ಹಣಕಾಸಿನ ಸೌಲಭ್ಯಗಳನ್ನು ಭಾರತದಲ್ಲಿ ಪರಿಚಯಿಸಲು ಟ್ರೂ ಕಾಲರ್‌ ಚಿಂತನೆ ನಡೆಸುತ್ತಿದೆ. 

ಚಿಲ್ಲರ್‌ನ ಸಂಸ್ಥಾಪಕರಾಗಿರುವ ಸೋನಿ ಜಾಯ್‌, ಅನೂಪ್‌ ಶಂಕರ್‌, ಮಹಮ್ಮದ್‌ ಗಲೀಬ್‌ ಮತ್ತು ಭಾಸ್ಕರನ್‌ ಹಾಗೂ ಇನ್ನಿತರರು ಸದ್ಯದಲ್ಲೇ ಟ್ರೂಕಾಲರ್‌ ಸಂಸ್ಥೆಯನ್ನು ಸೇರಲಿದ್ದಾರೆ. ಸೋನಿ ಜಾಯ್‌ ಟ್ರೂ ಕಾಲರ್‌ ಪೇ ಗೆ ಉಪಾಧ್ಯಕ್ಷರಾಗಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

loader